Connect with us

ರಸ್ತೆ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಳಿಸದ ಹಿನ್ನೆಲೆ ಡಿವೈಎಫ್ಐ ಪಕ್ಕಲಡ್ಕ ನೇತೃತ್ವದಲ್ಲಿ ಪ್ರತಿಭಟನೆ

Published

on

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಮಂಗಳೂರು: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಬಜಾಲ್ ಪಕ್ಕಲಡ್ಕ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಗುತ್ತಿಗೆದಾರನ ಜೊತೆ ಸರಿಯಾಗಿ ಸಿಬ್ಬಂದಿಗಳಿಲ್ಲ ಇರುವ ಬೆರಳೆಣಿಕೆಯ ನೌಕರರು ಸರಿಯಾಗಿ ಸಲಕರಣಿಗಳಿಲ್ಲದೆ ಸುತ್ತಮುತ್ತಲಿನ ಜನರಲ್ಲಿ ಕೇಳುವಂತಾಗಿದೆ. ಈ ಬಗ್ಗೆ ಗಮನಹರಿಸ ಬೇಕಾಗಿದ್ದ ಪಾಲಿಕೆ ಇಂಜನೀಯರ್ ಗಳಾಗಲಿ, ಸ್ಥಳೀಯ ಶಾಸಕನಾಗಲಿ ಕಾಮಗಾರಿ ಕೆಲಸಕ್ಕೆ ಸರಿಯಾಗಿ ಮತ್ತುವರ್ಜಿವಹಿಸುತ್ತಿಲ್ಲ ಕಾಮಗಾರಿ ಕೆಲಸ ಇದೇ ರೀತಿ ನಿಧಾನಗತಿಯಲ್ಲಿ ಮುಂದುವರಿದಲ್ಲಿ ಮನಪಾ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಡಿವೈಎಫ್ಐ ಮಂಗಳೂರು ನಗರಾದ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿ ಬಜಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವಂತ ಬಹುತೇಕರು ಬಡವರು, ಮದ್ಯಮವರ್ಗದವರಾಗಿರುತ್ತಾರೆ. ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಂಗಳೂರು ನಗರ ಪಾಲಿಕೆ ನಿರ್ಲಕ್ಷಿಸಿದೆ. ಈ ಭಾಗದ ಎಲ್ಲಾ ಸೌಕರ್ಯಗಳ ಈಡೇರಿಕೆಗೆ ಜನ ಪ್ರತಿ ಬಾರಿ ಬೀದಿಗೆ ಬರುವಂತಾಗಿದೆ. ಈ ರಸ್ತೆ ಹೋರಾಟವೂ ಯಶಸ್ವಿಯಾಗಲಿ ಮನಪಾ ಸ್ಥಳೀಯ ಸಮಸ್ಯೆ ಕೂಡಲೇ ಪರಿಹರಿಸಲು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಸ್ಥಳೀಯ ಮುಖಂಡರಾದ ದೀಪಕ್ ಬೊಲ್ಲ, ಸ್ಥಳೀಯ ವೈದ್ಯರಾದ ಡಾ. ಪ್ಲಾಯಿಡ್ ಡಿಸೋಜ, ವಿಲ್ಪ್ರೇಡ್ ಡಿಸೋಜ, ಉದಯ ಕುಂಟಲ್ ಗುಡ್ಡೆ, ಅಶೋಕ್ ಸಾಲ್ಯಾನ್, ಶಾಂತಾ ಪಕ್ಕಲಡ್ಕ, ಜಗದೀಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

BELTHANGADY

ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್‌..!

Published

on

ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಬೆಳ್ತಂಗಡಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ಪೊಲೀಸರ ಸಹಕಾರ ಪಡೆದು ತಹಶೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ಅದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಗೌಡ ಎಂಬವರಿಗೆ ಸೇರಿದ್ದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದು ತಂದಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಬೆದರಿಕೆ ಕೂಡಾ ಹಾಕಿದ್ದರು.

ಶಾಸಕ ಹರೀಶ್ ಪೂಂಜಾ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾಸಕ ಹರೀಶ್ ಪೂಂಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 353 ,504 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

ವೈರಲ್ ಆಯ್ತು ಮೆಟರ್ನಿಟಿ ಶೂಟ್..! ಮೆಚ್ಚುಗೆ ಪಡೆದ ಫೋಟೋಗ್ರಾಫರ್‌..!

Published

on

ಮಂಗಳೂರು : ಕೇರಳದ ಫೇಮಸ್ ಫೋಟೋಗ್ರಾಫರ್ ಅಥಿರಾ ಜಾಯ್‌ ಅವರು ಮಾಡಿರೋ ಫೋಟೋ ಶೂಟ್‌ ಒಂದು ಈಗ ಸಾಕಷ್ಟು ವೈರಲ್ ಆಗಿದ್ದು, ಜನರ ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ಹಲವಾರು ಮೆಟರ್ನಿಟಿ ಶೂಟ್ ಮಾಡಿರೋ ಅಥಿರಾ ಜಾಯ್‌ ಅವರ ಈ ಫೋಟೋಗ್ರಾಫಿಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಫೋಟೋಗ್ರಾಫಿಯ ಹಿಂದೆ ಇರುವ ಕಥೆಯ ಬಗ್ಗೆಯೂ ಅಥಿರಾ ಹೇಳಿಕೊಂಡಿದ್ದಾರೆ.


ಶರಣ್ಯ ಈಕೆ ವಯನಾಡಿನ ಬುಡಕಟ್ಟು ಸಮುದಾಯವಾದ ‘ಪನಿಯಾ’ ಸಮುದಾಯದ ಬಡ ಹೆಣ್ಣು ಮಗಳು. ಬುಡಕಟ್ಟು ಸಮುದಾಯದ ಆ ಹೆಣ್ಣು ಮಗಳ ಆಸೆಯನ್ನು ಅರಿಯವ ಸಲುವಾಗಿ ಅಥಿರಾ ಜಾಯ್‌ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಕೆಗೆ ಏನು ಬೇಕು ಎಂದು ಕೇಳಿದಾಗ ಆಕೆಯ ಬೇಡಿಕೆ ಕೇಳಿ ಕಣ್ಣೀರು ಬಂತು ಅಂತ ಫೋಟೋಗ್ರಾಫರ್ ಅಥಿರಾ ಜಾಯ್‌ ಹೇಳಿದ್ದಾರೆ.


ಬುಡಕಟ್ಟು ಸಮುದಾಯದ ಶರಣ್ಯ ಪತಿ ಅನೀಶ್ ಕೂಲಿ ಕಾರ್ಮಿಕನಾಗಿದ್ದು, ದಂಪತಿಗೆ ಈಗಾಗಲೇ ಒಂದು ವರ್ಷದ ಮಗುವಿದೆ. ಎರಡನೇ ಪ್ರಸವದ ವೇಳೆಯಲ್ಲಿ ಅಥಿರಾ ಜಾಯ್ ಆಕೆಯ ಫೋಟೋ ಶೂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಆಕೆಯಲ್ಲಿ ನಿನಗೇನು ಬೇಕು ಎಂದು ಕೇಳಿದಾಗ ಶರಣ್ಯ ಅನ್ನ ತಿನ್ನಬೇಕು, ಚಿಕನ್ ಸಾಂಬಾರ್ ಜೊತೆಗೆ ಚಿಕನ್ ಇರಬೇಕು ಎಂದು ಕೇಳಿದ್ದಾಳೆ. ಶ್ರೀಮಂತರ ಮನೆಯ ಮಕ್ಕಳು ಫಾಸ್ಟ್‌ ಫುಡ್‌, ಕೆಎಫ್‌ಸಿ ಹಾಗೂ ಪೌಷ್ಠಿಕ ಆಹಾರ ಬೇಕು ಅನ್ನುವಾಗ ಶರಣ್ಯ ಹಸಿವು ನೀಗಿಸಲು ಅನ್ನ ಬೇಕು ಅಂದಿರುವುದು ಕಣ್ಣೀರು ತರಿಸಿದೆ ಎಂದು ಹೇಳಿದ್ದಾರೆ.


ತಾನು ಮಾಡಿರುವ ಫೋಟೋ ಶೂಟ್ ಶರಣ್ಯ ಬದುಕಿನ ಅತೀ ಸುಂದರ ಕ್ಷಣವಾಗಿದ್ದು, ಅದನ್ನು ನನ್ನ ಕ್ಯಾಮೆರಾಗಳು ಸೆರೆ ಹಿಡಿದಿದೆ. ಈ ಫೋಟೋ ಶೂಟ್‌ಗಾಗಿ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆಯನ್ನು ಪಡೆದು ಸುಂದರ ಕ್ಷಣವನ್ನು ಸೆರೆ ಹಿಡಿಯಲಾಗಿದೆ ಎಂದು ಅಥಿರಾ ಜಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದ್ದು, ಅಥಿರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

DAKSHINA KANNADA

ಶಬರಿಮಲೆ ಯಾತ್ರಾರ್ಥಿ ಹೃದಯಾಘಾ*ತದಿಂದ ಸಾ*ವು

Published

on

ಸುರತ್ಕಲ್: ಕಾಣಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್ ಕಾಟಿಪಳ್ಳ(35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅ*ಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವ ಹೊತ್ತಿನಲ್ಲಿ ಹೃದಯಾಘಾತಕ್ಕೆ ಒಳಗಾದರು.

ಸಂದೀಪ್ ಅವರು ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾ ಟ್ರಸ್ಟ್, ಕೇಸರಿ ಫ್ರೆಂಡ್ಸ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದರು. ಎಂಆರ್‌ಪಿಎಲ್‌ ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Continue Reading

LATEST NEWS

Trending