Connect with us

    LATEST NEWS

    ಉಡುಪಿ : ಪೆಟ್ರೋಲ್ ಲೀಕ್ ಆಗಿ ಸ್ಕೂಟರ್ ಗೆ ಬೆಂಕಿ

    Published

    on

    ಉಡುಪಿ : ಪೆಟ್ರೋಲ್ ಲೀಕ್ ಆಗಿ ಸ್ಕೂಟರ್ ಗೆ ಬೆಂಕಿ ತಗುಲಿದ ಘಟನೆ ಉಡುಪಿಯ ಚಿಟ್ಪಾಡಿಯ ಪೆಟ್ರೋಲ್ ಪಂಪ್ ಒಂದರ ಬಳಿ ನಿನ್ನೆ(ಅ.19) ನಡೆದಿದೆ.


    ಪೆಟ್ರೋಲ್ ಪಂಪ್ ನಿಂದ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಕೊಂಡೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

    ಪೆಟ್ರೋಲ್ ತುಂಬಿದ ಬಾಟಲಿಯನ್ನು ಸ್ಕೂಟರ್ ಡಿಕ್ಕಿಯ ಒಳಗೆ ಇರಿಸಲಾಗಿದ್ದು, ಬಾಟಲಿಯಿಂದ ಪೆಟ್ರೋಲ್ ಲೀಕ್ ಆಗಿ ಎಂಜಿನ್ ಗೆ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯ ಪೆಟ್ರೋಲ್ ಬಂಕ್ ಸಿಬಂದಿ ಮತ್ತು ಸ್ಥಳೀಯರು ಹರ ಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಸಕಾಲದಲ್ಲಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

    ಘಟನೆ ನಡೆದ ಸ್ಥಳದಿಂದ ಕೆಲವೇ ಅಂತರದಲ್ಲಿ ಪೆಟ್ರೋಲ್‌ ಪಂಪ್‌ ಮಾಡುವ ವ್ಯವಸ್ಥೆ, ಕೆಲವು ಬಸ್ ಗಳು ಮತ್ತು ಇತರ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು.

    DAKSHINA KANNADA

    ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಅಪಘಾತಕ್ಕೆ ಬಲಿ.!

    Published

    on

    ಮಂಗಳೂರು : ನಂತೂರು ಸಮೀಪದ ಬಜ್ಜೋಡಿ ಬಳಿ ಸ್ಕೂಟರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಕೋಡಿಕಲ್‌ನ ಕ್ರಿಸ್ಟಿ ಕ್ರಾಸ್ತಾ (27)
    ಮೃತ ಸವಾರೆ.

    ಕ್ರಿಸ್ಟಿ ಕ್ರಾಸ್ತಾ, ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು. ರವಿವಾರ ಸಂಜೆ ಆಸ್ಪತ್ರೆಯತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ನಂತೂರು ಜಂಕ್ಷನ್ ಸಮೀಪದ ಬಜ್ಜೋಡಿ ತಲುಪಿದಾಗ ಸ್ಕೂಟರ್‌ಗೆ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿಯು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನವೆಂಬರ್ ನಲ್ಲಿ ನಡೆಯಬೇಕಿತ್ತು ಮದುವೆ :
    ಕ್ರಿಸ್ಟಿ ಕ್ರಾಸ್ತಾಗೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 23 ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ದೈವೇಚ್ಛೆ ಬೇರೆಯೇ ಆಗಿದ್ದು, ಹೊಸ ಬದುಕಿನ ಕನಸು ಹೊತ್ತ ಹೆಣ್ಣು ಮಗಳು ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.

    Continue Reading

    DAKSHINA KANNADA

    ಇನ್ನೆರಡು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ!

    Published

    on

    ಮಂಗಳೂರು : ಬಂಗಾಳಕೊಲ್ಲಿಯಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ಹಾಗೂ ಪಶ್ವಿಮ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.  ಇದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ಮಳೆ ಸುರಿಯಲಿದ್ದು,  ಅಕ್ಟೋಬರ್ 21 ಮತ್ತು 22 ರಂದು ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಈಗಾಗಲೇ ಬಂಗಾಳಕೊಲ್ಲಿಯ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಸಿತ್ತು. ಇತ್ತ ಅರಬ್ಬೀ ಸಮುದ್ರದಲ್ಲಿನ ವಾಯಭಾರ ಕುಸಿತದಿಂದಲೂ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮೊದಲಾದ ಕಡೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.

    ಇದನ್ನೂ ಓದಿ : WATCH : ಮಳೆಯಿಂದ ಮುಳುಗಿದ ಬೆಂಗಳೂರು; ನೀರಿನಲ್ಲಿ ಸಿಲುಕಿಕೊಂಡ ವಾಹನಗಳ ನಡುವೆ ಗಣಪತಿ ಪ್ರತ್ಯಕ್ಷ

    ಇನ್ನೆರಡು ದಿನಗಳ ಕಾಲ ಮಳೆ ತೀವ್ರತೆ ಪಡೆದುಕೊಳ್ಳಲಿದ್ದು, ಗಾಳಿ ಸಹಿತ ಮಳೆ ಸುರಿಯಲಿದ್ದು ಗುಡುಗು ಸಿಡಿಲಿನ ಅಬ್ಬರವೂ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡದೆ. ಒಟ್ಟಾಗಿ ರಾಜ್ಯದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಎಲ್ಲೆಲ್ಲಿ ಮಳೆ?

    ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 21 ರಿಂದ ಮಳೆ ಚುರುಕು ಪಡೆಯಲಿದೆ ಎಂದು ಹೇಳಿದೆ.

    Continue Reading

    LATEST NEWS

    ಋತುಬಂಧ ಎಂದರೇನು ? ಅದರ ಲಕ್ಷಣಗಳಾವುವು ? ಇಲ್ಲಿದೆ ಸಂಪೂರ್ಣ ಮಾಹಿತಿ

    Published

    on

    ಮಂಗಳೂರು: ಮಹಿಳೆಯು ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯ ಮತ್ತು ಆಕೆಯ ಋತುಚಕ್ರವು ಕೊನೆಗೊಳ್ಳುವ ಸಮಯವೇ ‘ಋತುಬಂಧ’. ಈ ಸಂದರ್ಭ ಮಹಿಳೆಯರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಸರಿಸುಮಾರು 40-50 ನೇ ವಯಸ್ಸಿನಲ್ಲಿ ಸಂಭವಿಸುತ್ತದೆ.

     

    ಹಣ್ಣಿನ ಜೀವದಲ್ಲಿ ಋತುಚಕ್ರ ಬಹು ಮಖ್ಯ ಭಾಗ. ಆಕೆಯಲ್ಲಿ ಹೆಣ್ತನವನ್ನು ಮೂಡಿಸುವುದೇ ಈ ಋತುಚಕ್ರ. ಅದಾದ ಬಳಿಕ ಆಕೆ ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸುಂದರ ಜೀವಿಯ ಸೃಷ್ಠಿಗೆ ಕಾರಣೀಭೂತಳಾಗುತ್ತಾಳೆ. ಆ ಅಮುಲ್ಯ ಕ್ಷಣಗಳೆಲ್ಲಾ ಮುಗಿದ ಬಳಿಕ ಬರುವುದೇ ಋತುಬಂಧ.

     

    ಋತು ಬಂಧದ ಲಕ್ಷಣಗಳು:

    1. ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು:
    ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್‌ ಆಗುವ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಗಳಿಂದ ಏರುಪೇರಾಗಿ ತಿಂಗಳಿಗೆ ಎರಡು ಸಲವೂ ಆಗಬಹುದು. ಕೆಲವರಲ್ಲಿ ಹೆಚ್ಚು ರಕ್ತಸ್ರಾವವಾದರೆ ಇನ್ನೂ ಕೆಲವರಲ್ಲಿ ರಕ್ತಸ್ರಾವದ ಕೊರತೆಯಾಗಬಹುದು.
    2. ರಾತ್ರಿಯಲ್ಲಿ ಅತಿಯಾದ ಬೆವರುವಿಕೆ:
    ರಾತ್ರಿ ಮಲಗಿರುವಾಗ ಅತಿಯಾದ ಬೇವರಿನಿಂದಾಗಿ ಪದೇ ಪದೇ ಎಚ್ಚರವಾಗುವುದು. ದೇಹದಲ್ಲಿ ಶಾಖ ವಿಪರೀತವಾಗುವುದು ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ.
    3. ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ:
    ನಿದ್ರಾಹೀನತೆ ಜೊತೆಗೆ ಮಾನಸಿಕ ಒತ್ತಡ ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಎಚ್ಚರಗೊಳ್ಳುವುದು, ಮಾನಸಿಕ ಖಿನ್ನತೆಗೆ, ಕಾರಣಗಳೇ ಇಲ್ಲದೇ ಸುಮ್ಮ ಸುಮ್ಮನೇ ಯೋಚನೆ, ಬೇಸರ ಮುಂದಾದ ಲಕ್ಷಣಗಳು ಕಂಡುಬರುತ್ತದೆ.
    4. ಒಣಚರ್ಮದ ಸಮಸ್ಯೆ:
    ಋತುಬಂಧದ ಸಮಯದಲ್ಲಿ ದೇಹ ಸಂಪೂರ್ಣ ಶುಷ್ಕವಾಗವ ಲಕ್ಷಣ ಕಂಡುಬರಬಹುದು. ಜೊತೆಗೆ ನಿಮ್ಮ ಖಾಸಗಿ ಅಂಗವು ಸಹ ಶುಷ್ಕವಾಗಿರಲಿದೆ. ಈ ಸಂದಭದಲ್ಲಿ ದೇಹಕ್ಕೆ ಹರಳೆಣ್ಣೆ ಸ್ನಾನ ಒಳ್ಳೆಯದು. ದೇಹ ಒಣಗದಂತೆ ನೋಡಿಕೊಳ್ಳುವುದರಿಂದ ಒಣಚರ್ಮದಿಂದ ಮುಕ್ತಿ ಪಡೆಯಬಹುದು.

    @TheLancet ಎಂಬ ಟ್ವಟರ್​ ಖಾತೆಯಲ್ಲಿ ನೀಡಿರುವ ಫೋಸ್ಟ್​​ ಪ್ರಕಾರ ಮಹಿಳೆಯರಲ್ಲಿ ಋತುಬಂಧದ ನಂತರದ ದಿನಗಳಲ್ಲಿ ಕ್ಯಾನ್ಸರ್‌ ಕಂಡುಬರುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ಹಾಗೂ ಜಾಗೃತೆ ವಹಿಸಬೇಕು.

    ಅಕಾಲಿಕ ಋತುಬಂಧದ ಪರೀಕ್ಷೆ :

    ಋತುಬಂಧವನ್ನು ಆಂಟಿ-ಮುಲರಿಯನ್ ಹಾರ್ಮೋನ್ (AMH) ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈಸ್ಟ್ರೊಜೆನ್ ಮಟ್ಟವನ್ನು ಪರಿಶೀಲಿಸಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಬಹುದು. ಋತುಬಂಧದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಇದಲ್ಲದೇ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಮಟ್ಟವು ಸತತವಾಗಿ 30 mIU/mL ಗಿಂತ ಹೆಚ್ಚಿದ್ದರೆ ಮತ್ತು ಒಂದು ವರ್ಷದಿಂದ ಮುಟ್ಟಾಗದೆ ಹೋದಲ್ಲಿ ಇದು ಋತುಬಂಧದ ಅವಧಿಯನ್ನು ಸೂಚಿಸುತ್ತದೆ.

    Continue Reading

    LATEST NEWS

    Trending