Connect with us

    LATEST NEWS

    ಭಾರತದ ಮನೆ ಒಂದರ ಬಾವಿಯಲ್ಲಿ ಉಕ್ಕಿದ ಪೆಟ್ರೋಲ್; ಕೊಡಪಾನ ಹಿಡಿದು ಸಾಲುಗಟ್ಟಿ ನಿಂತ ಜನ!

    Published

    on

    ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆ ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಮನೆಯೊಂದರ ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್ ಬರುತ್ತಿದೆ! ವಿಷಯ ತಿಳಿದ ಗ್ರಾಮಸ್ಥರು ಪೆಟ್ರೋಲ್ ತುಂಬಿಸಿಕೊಳ್ಳಲು ಬಾವಿ ಬಳಿ ಓಡೋಡಿ ಬಂದಿದ್ದಾರೆ. ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಬಾವಿಯನ್ನು ಬಂದ್ ಮಾಡಿದ್ದಾರೆ.

    ನಂತರ ಬಾವಿಯಿಂದ ಪೆಟ್ರೋಲ್ ಹೇಗೆ ಬರುತ್ತದೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೀಗ ಬಾವಿ ಒಳಗೆ ಪೆಟ್ರೋಲ್ ಬಂದಿರುವ ಅಸಲಿ ಕಾರಣ ರಿವೀಲ್ ಆಗಿದೆ. ಇದು ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದ್ಹಾಗೆ ಇದು ಗೀಡಂ (Geedam) ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.

    ಇಲ್ಲಿ ಭೋಲು ಜೈನ್ ಅನ್ನೋರ ಕುಟುಂಬ ವಾಸವಿದೆ. ಬುಧವಾರ ಬೆಳಗ್ಗೆ ಮನೆಯವರು ನೀರಿಗಾಗಿ ಬಾವಿಗೆ ಬಕೆಟ್ ಇಳಿಸಿದ್ದರು. ಬಾವಿಯಿಂದ ಬಕೆಟ್ ತೆಗೆದಾಗ ನೀರು ವಿಚಿತ್ರವಾಗಿ ಕಂಡಿದೆ. ಸ್ವಲ್ಪ ಹೊತ್ತು ಪರಿಶೀಲಿಸಿದಾಗ ಇದು ಪೆಟ್ರೋಲ್‌ ಅನ್ನೋದು ಗೊತ್ತಾಗಿದೆ. ಈ ವಿಚಾರ ಆ ಭಾಗದ ತುಂಬಾ ಹರಡಿತು.

    ‘ಬಾವಿಯಿಂದ ಪೆಟ್ರೋಲ್ ಬರುತ್ತಿದೆ..’ ಅನ್ನೋ ಮಾತು ಕೇಳಿದ ಜನ ಮನೆಯಿಂದ ಬಕೆಟ್ ಹಿಡಿದು ಬಾವಿಗೆ ಬರತೊಡಗಿದರು. ಭಾರೀ ಸಂಖ್ಯೆಯಲ್ಲಿ ಜನ ಪೆಟ್ರೋಲ್‌ಗಾಗಿ ಮುಗಿಬಿದ್ದರು. ಮನೆ ಬಳಿ ದೊಡ್ಡ ಸರತಿ ಸಾಲುಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯಿತು. ನಂತರ ಪೊಲೀಸರ ಎಂಟ್ರಿಯಾಗಿದೆ.

    ಪೆಟ್ರೋಲ್ ಕಳ್ಳತನ ಪ್ರಕರಣ

    ಕೆಲವು ದಿನಗಳ ಹಿಂದೆ ಪೆಟ್ರೋಲ್ ಪಂಪ್ ಮಾಲೀಕರು ಪೆಟ್ರೋಲ್ ಕಳ್ಳತನದ ಕೇಸ್ ದಾಖಲಿಸಿದ್ದರು. ಬಫ್ನಾ ಪೆಟ್ರೋಲ್ ಪಂಪ್ ಮಾಲೀಕರು, ಪ್ರತಿದಿನ ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂದು ದೂರು ನೀಡಿದ್ದರು. ಈ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಯಾರೋ ದುಷ್ಕರ್ಮಿಗಳು ಪೆಟ್ರೋಲ್ ಕದ್ದು ಬಾವಿಗೆ ಸುರಿದಿದ್ದಾರೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಆದರೆ ಅವರ ಸಂಶಯ ಸುಳ್ಳಾಗಿತ್ತು.

    ನಿಜವಾದ ಕಾರಣ!

    ನಂತರ ಇನ್ನೊಂದು ಆಯಾಮದಲ್ಲಿ ಪೊಲೀಸರು ತನಿಖೆಗೆ ಮುಂದಾಗುತ್ತಾರೆ. ಈ ಮನೆಯಿಂದ 100 ಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ಅಲ್ಲಿನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿದೆ. ಇಲ್ಲಿಂದ ಭೂಮಿಗೆ ನುಗ್ಗಿದ ಪೆಟ್ರೋಲ್, ಈ ಬಾವಿಗೆ ತಲುಪಿದೆ ಅನ್ನೋದನ್ನು ಕಂಡುಕೊಂಡಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನೆಯ ಸುತ್ತ ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಟ್ಯಾಂಕ್ ದುರಸ್ತಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ.

    Click to comment

    Leave a Reply

    Your email address will not be published. Required fields are marked *

    International news

    ಸಿರಿಯಾ ಸಂಘರ್ಷ: ಸಿರಿಯಾದಿಂದ ಹೊರಡುವಂತೆ ಭಾರತೀಯ ಪ್ರಜೆಗಳಿಗೆ ವಿದೇಶಾಂಗ ಇಲಾಖೆ ಸೂಚನೆ

    Published

    on

    ಮಂಗಳೂರು/ಸಿರಿಯಾ: ಸಿರಿಯಾದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದ್ದು, ಅಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷ ತೀವ್ರಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ವಿದೇಶಾಂಗ ಸಚಿವಾಲಯ (ಎಂವಿಎ), ಮುಂದಿನ ಸೂಚನೆ ನೀಡುವವರೆಗೆ ಆ ದೇಶಕ್ಕೆ ಪ್ರಯಾಣ ಕೈಗೊಳ್ಳದಿರಿ ಎಂದು ನಾಗರಿಕರಿಗೆ ಸಲಹೆ ನೀಡಿದೆ.


    ಸಿರಿಯಾ ರಾಜಕೀಯ ಪ್ರಕ್ಷುಬ್ದತೆಯ ಮಧ್ಯ ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್-ಅಲ್-ಅಸ್ಸಾದ್ ಆಡಳಿತವನ್ನು ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಈ ಕಾರಣದಿಂದ ಸಿರಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಸಿರಿಯಾದಲ್ಲಿರುವ ಭಾರತೀಯರನ್ನು ಎಚ್ಚರಿಕೆ ಹಾಗೂ ಜಾಗೃತೆಯಲ್ಲಿ ಇರುವಂತೆ ಭಾರತ ಹೇಳಿದೆ. ಸಿರಿಯಾ ಪರಿಸ್ಥಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸಿದೆ.

    2011ರಲ್ಲಿ ಅಂತರ್ ಯುದ್ದಕ್ಕೆ ಸಾಕ್ಷಿಯಾಗಿದ್ದ ಸಿರಿಯಾ, ಇತ್ತೀಚಿನ ಬೆಳವಣಿಗೆಗಳಿಂದಾಗಿ ವಿಶ್ವದಾದ್ಯಂತ ಕಳವಳ ಉಂಟುಮಾಡಿದೆ. ಬಂಡುಕೋರರು ಅಲೆಪ್ಪೊ ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೆ, ಅಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

    ಇದನ್ನೂ ಓದಿ: ಕಲಬುರಗಿ ಜೈಲಿನಲ್ಲಿ ಕೈದಿಗಳ ಐಶಾರಾಮಿ ಜೀವನ !

    ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಯಾಣ ಅಧಿಸೂಚನೆ ಬಿಡುಗಡೆ ಮಾಡಿರುವ ಎಂವಿಎ, ‘ಸದ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದವರೆಗೆ ಭಾರತದ ಪ್ರಜೆಗಳು ಸಿರಿಯಾಕ್ಕೆ ಪ್ರಯಾಣಿಸದಂತೆ ಸೂಚಿಸಲಾಗುತ್ತಿದೆ’ ಎಂದು ತಿಳಿಸಿದೆ.

    ಇನ್ನೂ ಈ ಬಗ್ಗೆ ಭಾರತ ಸರ್ಕಾರ ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಂಚಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಸಿರಿಯಾದಲ್ಲಿರುವ ಎಲ್ಲಾ ಭಾರತೀಯರಿಗೆ ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸುವಂತೆ ತಿಳಿಸಿದೆ.

    ಭಾರತ ಸರ್ಕಾರ ಸಿರಿಯಾದಲ್ಲಿರುವ ಭಾರತೀಯರನ್ನು ಕರೆತರಲು ಈಗಾಗಲೇ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಸೂಚನೆ ಬರುವವರೆಗೆ ಯಾರು ಕೂಡ ಹೊರಗೆ ಬರಬೇಡಿ. ಸಾಧ್ಯವಿರುವವರು, ಲಭ್ಯವಿರುವ ಆರಂಭಿಕ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾವನ್ನು ತೊರೆಯುವಂತೆ ಸೂಚನೆ ನೀಡಿದೆ.

    ಸಿರಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೊಬೈಲ್​​ ಸಂಖ್ಯೆ +963 993385973 ಹಂಚಿಕೊಂಡಿದೆ. ಹಾಗೂ WhatsApp ಮತ್ತು [email protected] ಮೇಲ್ ಮೂಲಕವೂ ಸಂಪರ್ಕ ಸಾಧಿಸಬಹುದು ಎಂದು ಹೇಳಿದೆ.

     

    Continue Reading

    LATEST NEWS

    ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್

    Published

    on

    ಮಂಗಳೂರು: ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶನಿವಾರ (ಡಿಸೆಂಬರ್​ 07) ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ನಿಯೋಜಿತ ಡೊನಾಲ್ಡ್ ಟ್ರಂಪ್​ ಅವರ ಬಿಸಿನೆಸ್ ಪಾರ್ಟ್ನರ್​​ ಶಶಿಭೂಷಣ್ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ.

    ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.

    ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾತನಾಡಿದ ಶಶಿಭೂಷಣ್, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ‌.

    ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.57ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉಮಾಮಹೇಶ್ವರ ಸ್ವಾಮೀಯ ಬ್ರಹ್ಮರಥೋತ್ಸವ ನಡೆಯಿತು. ಶುಕ್ರವಾರ (ಡಿ.06) ರಾತ್ರಿ ಚಂಪಾಷಷ್ಠಿ ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ತಂದು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸುವುದನ್ನು ನೋಡಲು ಮದ್ಯರಾತ್ರಿ 2 ಗಂಟೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

    Continue Reading

    LATEST NEWS

    9 ವರ್ಷ ಲಿವ್​ಇನ್​ ಟುಗೆದರ್​ ; 102ರ ಅಜ್ಜಿಯೊಡನೆ 100ರ ಅಜ್ಜನ ಮದುವೆ

    Published

    on

    100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿಯುವ ಮುಖಾಂತರ ವಿಶ್ವದ ಅತ್ಯಂತ ಹಳೆಯ ನವವಿವಾಹಿತ  ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಒಂದೇ ವಿಶ್ವವಿದ್ಯಾನಿಲಯದಲ್ಲಿ ಜೊತೆಯಾಗಿ ವ್ಯಾಸಂಗ ಮುಗಿಸಿದರೂ ಪರಸ್ಪರ ಪರಿಚಯವಿರಲಿಲ್ಲ. 9 ವರ್ಷಗಳ ಕಾಲ ಲಿವ್​ಇನ್​ ರಿಲೇಷನ್​ಶಿಪ್​ ​ನಲ್ಲಿದ್ದ ವೃದ್ಧ ಜೋಡಿ ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ​​ ದಾಖಲೆ ಸೃಷ್ಟಿಸಿದ್ದಾರೆ.

    ಈ ‘ಪ್ರೀತಿ’ ಎಂಬುದು ಬರೆಯಲು ಚಿಕ್ಕ ಪದವಾಗಿರಬಹುದು, ಆದರೆ ಆ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಪ್ರೀತಿಗೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ. ಇದೀಗ, ವಯಸ್ಸಾದ ಮುದುಕ – ಮುದುಕಿ ಪ್ರೀತಿಸಿ ಮದುವೆಯಾಗುವ ಮೂಲಕ ಜೀವನಕ್ಕೆ ಹೊಸ ತಿರುವು ನೀಡಿಕೊಂಡಿದ್ದಾರೆ.

    ಈ ಪ್ರೇಮಕಥೆ ಕುಂಟುಂಬಕ್ಕೆ ಬಹಳ ಅಚ್ಚರಿ ಮೂಡಸಿತು. ಆದರೂ ಅವರಿಬ್ಬರು ಹೊಂದಿಕೊಳ್ಳುವ ಗುಣ, ಪರಸ್ಪರ ಹಾಸ್ಯ ಭಾವ ಎಲ್ಲವೂ ಕುಟುಂಬದವರನ್ನು ಮೂಖರನ್ನಾಗಿಸಿತ್ತು. ಎಲ್ಲರ ಸಮ್ಮುಖದಲ್ಲೇ ನಡೆದ, ಅಜ್ಜ – ಅಜ್ಜಿಯ ಮದುವೆಗೆ ನಾಲ್ಕು ತಲೆಮಾರಿನವರು ಆಗಮಿಸಿ ಶುಭ ಹಾರೈಸಿದ್ದಾರೆ. ಈ ಜೋಡಿಹಕ್ಕಿ  60ನೇ ವಯಸ್ಸಿನಲ್ಲಿ ತಮ್ಮ ಬಾಳ ಸಂಗಾತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿತ್ತು. ಇದೀಗ ಪ್ರೀತಿ ಚಿಗುರಿ ಮದುವೆಯಾಗುವ ಮೂಲಕ ಹೊಸ ಜೀವನವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಜೊತೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಗಿನ್ನೆಸ್​​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆ(www.instagram.com/guinnessworldrecords)ಯಲ್ಲಿ ಇವರ ಮದುವೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್​ ಅಂದರೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 36,820 ನೆಟ್ಟಿಗರು ಲೈಕ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    Trending