Connect with us

    ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

    Published

    on

    ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

    ಕಾರ್ಕಳ : ಕಾರ್ಕಳ ಹಿರ್ಗಾನ ಶ್ರೀಕುಂದೇಶ್ವರ ದೇವಸ್ಥಾನ ದಿಂದ ಕೊಡಮಾಡುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಯನ್ನುಜಾತ್ರೆಯ ಸಂದರ್ಭ ಕಲಾವಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಪ್ರದಾನ ಮಾಡಿದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ದಿನಕ್ಕೆ ನಾಲ್ಕು ಯಕ್ಷಗಾನ ಪ್ರದರ್ಶನ ಕ್ಕೆ ಹೋಗುತ್ತೇವೆ. ಆದರೆ ಬಾಲ- ಯುವ ಪ್ರತಿಭೆಗಳು ವೃತ್ತಿಪರ ಕಲಾವಿದರಂತೆ, ಅವರನ್ನು ಮೀರಿಸಿ ಪ್ರದರ್ಶನ ನೀಡಿದಾಗ ನಮಗೆ ಆತ್ಮ ತೃಪ್ತಿ ಯಾಗುತ್ತದೆ.

    ಅಂಥ ಕಾರ್ಯಕ್ರಮ ಗಳಲ್ಲಿ ಇದೂ ಒಂದು ಎಂದರು. ಕಲಾವಿದನಾಗಿ ಕೊಡುಗೆ ನೀಡುವುದು ಒಳ್ಳೆಯ ಕೆಲಸ. ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸಿ, ಒಳ್ಳೆಯ ಕಲಾವಿದರನ್ನು ರೂಪಿಸಿಸುವುದು ಯಕ್ಷಗಾನಕ್ಕೆ ನೀಡುವ ಅತ್ಯುತ್ಯಮ ಕೊಡುಗೆ.

    ಇಂಥ ನಿಸ್ವಾರ್ಥದಿಂದ ಸಮಾಜಕ್ಕೆ ಕೊಡುಗೆ ನೀಡುವ ವರನ್ನು ಪುರಸ್ಕರಿಸುವ, ಎಳೆಯ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ಮಾದರಿ ಎಂದರು. ಸನ್ಮಾನ ಸ್ವೀಕರಿಸಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಮಾತನಾಡಿ, ಶಿಷ್ಯರ ಸಾಧನೆಯಲ್ಲಿಯೇ ನನಗೆ ಸಂತೃಪ್ತಿ ಎಂದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.ಕಲಾವಿದ ಉಜಿರೆ ಅಶೋಕ ಭಟ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಸೌದಿ- ಬೆಹರೈನ್ ಘಟಕ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿದರು.
    ಉದ್ಯಮಿ ಮುನಿಯಾಲ್ ಉದಯಕುಮಾರ್ ಶೆಟ್ಟಿ,ಉದ್ಯಮಿ ಸಚ್ಚಿದಾನಂದ ಎಡಮಲೆ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಮಿಷನರ್ ಶ್ರೀಕಾಂತ್ ರಾವ್, ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಉಪೇಂದ್ರ ರಾವ್, ದೇವಸ್ಥಾನ ಆಡಳಿತ ಪ್ರತಿನಿಧಿ ಗಂಗಾ ರಾಘವೇಂದ್ರ ಭಟ್, ಸುಧೀಂದ್ರ ಭಟ್ ಇದ್ದರು.ಈ ಸಂದರ್ಭದಲ್ಲಿ ಬಲೆ ತೆಲಿಪಾಲೆ, ಮಹಾಭಾರತದಲ್ಲಿ ಭಾಗವಹಿಸಿದ ಕಲಾವಿದ ಪ್ರವೀಣ್ ಆಚಾರ್ಯ ನೆಲ್ಲಿಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಭಾಗವತ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಪ್ರಸಿದ್ಧ ಕಲಾವಿದರಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಿತು. ಕಾರ್ಕಳ ಸಿಂಧೂರ ಕಲಾವಿದರಿಂದ ಪನೊಡಿತ್ತುಂಡು ಸಾರಿ ತುಳು ನಾಟಕ ಪ್ರದರ್ಶನಗೊಂಡಿತು. ಉಪನ್ಯಾಸಕ ಕೆ.ಪಿ.ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ವೇದಮೂರ್ತಿ ಕೃಷ್ಣರಾಜೇಂದ್ರ ಭಟ್ ಸ್ವಾಗತಿಸಿದರು. ವೇದಮೂರ್ತಿ ರವೀಂದ್ರ ಭಟ್ ವಂದಿಸಿದರು. ಜಿತೇಂದ್ರ ಭಟ್ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಗಂಭೀರ ಆರೋಪದ ಸುಳಿಯಲ್ಲಿ ಸಿಕ್ಕ ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

    Published

    on

    ಮಂಗಳೂರು/ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿ*ಕೆ, ಜಾತಿ ನಿಂದನೆ ಹಾಗೂ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಜೈಲು ಪಾಲಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಆದ್ರೆ ಜಾಮೀನು ಪಡೆದು ಹೊರಬರುತ್ತಿದ್ದಂತೆ, ಶಾಸಕ ಹೊರಬರುತ್ತಿದ್ದಂತೆ ಅತ್ಯಾಚಾ*ರ ಪ್ರಕರಣದಲ್ಲಿ ರಾಮನಗರ ಪೊಲೀಸರು ಮುನಿರತ್ನರನ್ನ ಬಂಧಿಸಿದ್ದಾರೆ.

    ಗುತ್ತಿಗೆದಾರನಿಗೆ ಜೀವ* ಬೆದರಿ*ಕೆ ಹಾಕಿದ ಪ್ರಕರಣದಲ್ಲಿ ಮುನಿರತ್ನ ಅಂದರ್ ಆಗುತ್ತಿದ್ದಂತೆ ಹಲವು ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ. ಅತ್ಯಾಚಾ*ರ, ಎದುರಾಳಿಗಳನ್ನು ಮಟ್ಟ ಹಾಕಲು ಅವರ ಖಾಸಗಿ ವಿಡಿಯೋಗಳ ದುರ್ಬಳಕೆ, ಹನಿಟ್ರ್ಯಾಪ್‌ನಲ್ಲಿ ಹೆಚ್‌ಐವಿ ಸೋಂಕಿತರ ಬಳಕೆ ಹೀಗೆ ಅನೇಕ ಆರೋಪಗಳು ಮುನಿರತ್ನ ಮೇಲೆ ಕೇಳಿ ಬಂದಿದೆ. ಅತ್ಯಾಚಾ*ರ ಹಾಗೂ ಬೆದರಿ*ಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು,  ಪೊಲೀಸರು ಮುನಿರತ್ನರನ್ನು ಬಂಧಿಸಿದ್ದಾರೆ.

    ಮುನಿರತ್ನ ಮೇಲೆ ಇರುವ ಗಂಭೀರ ಆರೋಪಗಳು :

    ಅನೇಕ ಮಂದಿಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಮುನಿರತ್ನ ಬ್ಲ್ಯಾಕ್​ಮೇಲ್ ಮಾಡುತ್ತಿದ್ದುದಲ್ಲದೆ, ರಾಜಕೀಯ ಎದುರಾಳಿಗಳನ್ನು ಮಣಿಸಲು ಅವುಗಳನ್ನು ಬಳಕೆ ಮಾಡುತ್ತಿದ್ದರು.  ಅವರು ಈ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿ*ಕೆ ಹಾಕುತ್ತಿದ್ದಾರೆ ಅಂತ ಅತ್ಯಾಚಾ*ರದ ಸಂತ್ರ*ಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೇ ಸಂ*ತ್ರಸ್ತೆಯ ವೀಡಿಯೋ ಇಟ್ಟುಕೊಂಡು ಹಲವರ ಹನಿಟ್ರ್ಯಾಪ್‌ಗೆ ಯತ್ನಿಸಿದ್ದರು ಮಾತ್ರವಲ್ಲದೆ ಹೆಚ್‌ಐವಿ ಸೋಂಕಿತರನ್ನೂ ಇದಕ್ಕಾಗಿ ಬಳಕೆ ಮಾಡಿದ್ದಾಗಿ ಆರೋಪಿಸಿದ್ದಾರೆ.

    ಇದನ್ನೂ ಓದಿ : ಬಸ್ ಚಾಲನೆ ವೇಳೆಯೇ ಚಾಲಕನಿಗೆ ಹೃದಯಘಾತ,; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ !

    ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಅಟ್ರಾಸಿಟಿ ಕೇಸ್​​ಗಳ ದುರ್ಬ*ಳಕೆ ಮಾಡುತ್ತಿದ್ದರು ಎಂಬ ಆರೋಪವೂ ಈಗ ಕೇಳಿಬಂದಿದೆ. ಮುನಿರತ್ನ ಅಟ್ರಾಸಿಟಿ ಕೇಸ್​​ಗಳನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಪ್ರಭಾವ ಬಳಸಿ ಅಟ್ರಾಸಿಟಿ ಕೇಸ್​​ಗಳನ್ನು ದಾಖಲಿಸುತ್ತಿದ್ದರು. ಈ ಹಿಂದೆ ಆರ್​ಆರ್ ನಗರದಲ್ಲಿ ಹಲವರ ವಿರುದ್ಧ ಅಟ್ರಾಸಿಟಿ ಕೇಸ್​ಗಳು ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.

    Continue Reading

    bangalore

    ಬಸ್ ಚಾಲನೆ ವೇಳೆಯೇ ಚಾಲಕನಿಗೆ ಹೃದಯಘಾತ,; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ !

    Published

    on

    ಮಂಗಳೂರು/ಬೆಂಗಳೂರು: ಸರ್ಕಾರಿ ಬಸ್ ಚಾಲಕನಿಗೆ ಬಸ್ ಚಾಲನೆ ವೇಳೆಯೇ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಜನರ ಜೀವ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


    BMTC ಬಸ್ ಡ್ರೈವರ್ ವೀರೇಶ್ ಅವರಿಗೆ ಗುರುವಾರ(ಸೆ.19) ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್ನಲ್ಲಿದ್ದ ವೇಳೆ ಏಕಾಏಕಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗ ತೊಡಗಿದ ವೇಳೆ ಅನುಮಾನಗೊಂಡ ಹಲಸೂರು ಟ್ರಾಫಿಕ್ ಪೊಲೀಸ್ ಎಎಸ್ಐ ಆರ್ . ರಘುಕುಮಾರ್ ಬಸ್ ಬಳಿ ಓಡಿ ಬಂದು ನೋಡಿದಾಗ ಎದೆಗೆ ಕೈ ಹಿಡಿದು ಬಸ್ ಚಾಲಕ ಒಂದು ಕಡೆಗೆ ವಾಲಿದ್ದನು.
    ಹಾರ್ಟ್ ಅಟ್ಯಾಕ್ ಆಗಿರುವುದನ್ನ ಗಮನಕ್ಕೆ ಬಂದಿದ್ದು, ಟ್ರಾಫಿಕ್ ಎಎಸ್ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿ ಆಂಬುಲೆನ್ಸ್ಗೂ ಕಾಯದೆ, ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು.
    ಅದೃಷ್ಟವಶಾತ್, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಪೊಲೀಸರ ಸಮಯಪ್ರಜ್ಞೆ 45 ಜನರ ಪ್ರಾಣವನ್ನೂ ಉಳಿಸಿದೆ.

    Continue Reading

    BELTHANGADY

    ಬೆಳ್ತಂಗಡಿ : ನೇಣು ಬಿಗಿದು ದಂಪತಿ ಆತ್ಮ*ಹತ್ಯೆ

    Published

    on

    ಬೆಳ್ತಂಗಡಿ : ದಂಪತಿ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾಶಿಪಟ್ನ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ. ಉರ್ದುಗುಡ್ಡೆ ನಿವಾಸಿಗಳಾದ ನೋಣಯ್ಯ ಪೂಜಾರಿ (63) ಹಾಗೂ ಬೇಬಿ (46) ಆತ್ಮ*ಹತ್ಯೆ ಮಾಡಿಕೊಂಡವರು.


    ಮನೆ ಸಮೀಪ ಇರುವ ಕಾಡಿನಲ್ಲಿ ದಂಪತಿ ನೇ*ಣಿಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳಿಂದ ನೋಣಯ್ಯ ಪೂಜಾರಿ ತಲೆ ನೋವಿನಿಂದ ಬಳಲುತ್ತಿದ್ದು, ಬೇಬಿ ಅವರಿಗೆ ಮಕ್ಕಳಿಲ್ಲದ ಕೊರಗು ಇತ್ತು ಎಂದು ತಿಳಿದು ಬಂದಿದೆ.
    ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ವಿವಾಹವಾಗಿದ್ದು , ಮೊದಲ ಪತ್ನಿ 10 ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ಮೊದಲ ಪತ್ನಿಗೆ 5 ಜನ ಗಂಡು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ. ಆತ್ಮ*ಹತ್ಯೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending