Connect with us

ರಸ್ತೆ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಳಿಸದ ಹಿನ್ನೆಲೆ ಡಿವೈಎಫ್ಐ ಪಕ್ಕಲಡ್ಕ ನೇತೃತ್ವದಲ್ಲಿ ಪ್ರತಿಭಟನೆ

Published

on

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಮಂಗಳೂರು: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಬಜಾಲ್ ಪಕ್ಕಲಡ್ಕ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಗುತ್ತಿಗೆದಾರನ ಜೊತೆ ಸರಿಯಾಗಿ ಸಿಬ್ಬಂದಿಗಳಿಲ್ಲ ಇರುವ ಬೆರಳೆಣಿಕೆಯ ನೌಕರರು ಸರಿಯಾಗಿ ಸಲಕರಣಿಗಳಿಲ್ಲದೆ ಸುತ್ತಮುತ್ತಲಿನ ಜನರಲ್ಲಿ ಕೇಳುವಂತಾಗಿದೆ. ಈ ಬಗ್ಗೆ ಗಮನಹರಿಸ ಬೇಕಾಗಿದ್ದ ಪಾಲಿಕೆ ಇಂಜನೀಯರ್ ಗಳಾಗಲಿ, ಸ್ಥಳೀಯ ಶಾಸಕನಾಗಲಿ ಕಾಮಗಾರಿ ಕೆಲಸಕ್ಕೆ ಸರಿಯಾಗಿ ಮತ್ತುವರ್ಜಿವಹಿಸುತ್ತಿಲ್ಲ ಕಾಮಗಾರಿ ಕೆಲಸ ಇದೇ ರೀತಿ ನಿಧಾನಗತಿಯಲ್ಲಿ ಮುಂದುವರಿದಲ್ಲಿ ಮನಪಾ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಡಿವೈಎಫ್ಐ ಮಂಗಳೂರು ನಗರಾದ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿ ಬಜಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವಂತ ಬಹುತೇಕರು ಬಡವರು, ಮದ್ಯಮವರ್ಗದವರಾಗಿರುತ್ತಾರೆ. ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಂಗಳೂರು ನಗರ ಪಾಲಿಕೆ ನಿರ್ಲಕ್ಷಿಸಿದೆ. ಈ ಭಾಗದ ಎಲ್ಲಾ ಸೌಕರ್ಯಗಳ ಈಡೇರಿಕೆಗೆ ಜನ ಪ್ರತಿ ಬಾರಿ ಬೀದಿಗೆ ಬರುವಂತಾಗಿದೆ. ಈ ರಸ್ತೆ ಹೋರಾಟವೂ ಯಶಸ್ವಿಯಾಗಲಿ ಮನಪಾ ಸ್ಥಳೀಯ ಸಮಸ್ಯೆ ಕೂಡಲೇ ಪರಿಹರಿಸಲು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಸ್ಥಳೀಯ ಮುಖಂಡರಾದ ದೀಪಕ್ ಬೊಲ್ಲ, ಸ್ಥಳೀಯ ವೈದ್ಯರಾದ ಡಾ. ಪ್ಲಾಯಿಡ್ ಡಿಸೋಜ, ವಿಲ್ಪ್ರೇಡ್ ಡಿಸೋಜ, ಉದಯ ಕುಂಟಲ್ ಗುಡ್ಡೆ, ಅಶೋಕ್ ಸಾಲ್ಯಾನ್, ಶಾಂತಾ ಪಕ್ಕಲಡ್ಕ, ಜಗದೀಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಪ್ರಜ್ವಲ್‌ ಅಶ್ಲೀಲ್ ವಿಡಿಯೋ ಡಿಲೀಟ್ ಮಾಡಿ..! ಎಸ್‌ಐಟಿ ವಾರ್ನಿಂಗ್..!

Published

on

ಮಂಗಳೂರು : ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಕರಣ ಬೆಂಬತ್ತಿರುವ ಎಸ್ ಐ ಟಿ ಖಡಕ್ ವಾರ್ನ್ ಮಾಡಿದೆ. ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡದಂತೆ ಹೇಳಿದೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿದ್ದರೆ, ಒಂದು ವೇಳೆ ಡಿಲೀಟ್‌ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಯಾವುದೇ ಅಶ್ಲೀಲ ವೀಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಇದ್ದರೆ ಅದರ ರಚನಕಾರರು ನೀವು ಎಂದು ಪರಿಗಣಿಸಿ ಕ್ರಿಮಿನಲ್ ಕೇಸ್ ಬೀಳುತ್ತದೆ. ಆದ್ದರಿಂದ, ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

ಸಾಲದ ಶೂಲಕ್ಕೆ ಜೀವಾಂತ್ಯಗೊಳಿಸಿದ ಯುವಕ…!

Published

on

ಮಂಗಳೂರು : ತಾನು ತಂಗಿದ್ದ ಲಾಡ್ಜ್ ನಲ್ಲಿಯೇ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ‌ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ ( 30) ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಮೇ. 5 ರಂದು ಬಿಸಿರೋಡಿನ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಹೋಟೆಲೊಂದರಲ್ಲಿ ರೂಂ ಮಾಡಿದ್ದ. ಈತ ಮೇ.6 ರಂದು ರಾತ್ರಿ ಊಟ ಮುಗಿಸಿ, ಬಾಗಿಲು ಹಾಕಿಕೊಂಡಿದ್ದ. ಮಂಗಖವಾರ ಬೆಳಿಗ್ಗೆ ರೂಂನ ಬಾಗಿಲು ತೆರೆಯದ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕರೆದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಜ್ವಲ್ ಮೃ*ತದೇಹದ ಪತ್ತೆಯಾಗಿದೆ.


ಓನ್ ಲೈನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ. ತಾನು ಕೆಲಸ ಮಾಡಿಕೊಂಡಿದ್ದ ಕಂಪೆನಿಯ ಮಾಲಕರಿಂದ 60 ಸಾವಿರ ಸಾಲ ಪಡೆದು ಬಳಿಕ ಹಣ ಹೊಂದಿಸಲಾಗದೆ, ಸರಿಯಾದ ಸಮಯಕ್ಕೆ ಹಿಂದುರುಗಿಸಲಾಗಿಲ್ಲ ಎಂಬ ಕಾರಣಕ್ಕೆ ಕೊರುಗುತ್ತಿದ್ದ ಎಂದು ಹೇಳಲಾಗಿದೆ. ಸಾಲದ ವಿಚಾರವಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಪ್ರೇಮ ವೈಫಲ್ಯದ ನೋವಿನಲ್ಲೂ ಇದ್ದ ಎಂದು ವರದಿಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

WATCH : ಕೋಳಿಗೂ ಯುವತಿಗೂ ನಡುವೆ ಫೈಟ್; ಗೆದ್ದವರು ಯಾರು? ವೀಡಿಯೋ ವೈರಲ್

Published

on

ಮಂಗಳೂರು : ಇದೊಂತರ ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವೂ ವೈರಲ್ ವೈರಲ್. ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಮನುಷ್ಯರದ್ದೇ ಆಗಿರಲಿ, ಪ್ರಾಣಿ, ಪಕ್ಷಿಗಳದೇ ಆಗಿರಲಿ ಇಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಸದ್ಯ ಅಂತಹುದೇ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕೋಳಿ ಹಾಗೂ ಯುವತಿಯ ನಡುವೆ ಫೈಟ್ ನಡೆದಿದೆ.


ವೀಡಿಯೋದಲ್ಲಿ ಏನಿದೆ?

ವೀಡಿಯೋ ಆರಂಭದಲ್ಲಿ ಯುವತಿಯೊಬ್ಬಳು ತನ್ನಷ್ಟಕ್ಕೆ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ, ಪಕ್ಕದಲ್ಲಿದ್ದ ಕೋಳಿ ಸುಖಾಸುಮ್ಮನೆ ಆಕೆಯ ಕಾಲಿಗೆ ಬಂದು ಕುಕ್ಕುತ್ತದೆ. ಇದರಿಂದ ಕೋಪಗೊಂಡ ಯುವತಿ ಆ ಕೋಳಿಗೆ ಒದೆಯುತ್ತಾಳೆ. ಅದು ಮತ್ತೆ ಅಟ್ಯಾಕ್ ಮಾಡಲು ಬಂದಾಗ, ಕೈಯಿಂದ ಚೆನ್ನಾಗಿ ಬಾರಿಸುತ್ತಾಳೆ. ಆದರೆ, ಆ ಕೋಳಿ ಹೆದರಿ ಓಡುವುದಿಲ್ಲ. ಬದಲಿಗೆ ಅದು ಮತ್ತೆ ದಾಳಿ ನಡೆಸುತ್ತದೆ.

ಆಗ ಕೋಪದಲ್ಲಿ ಯುವತಿ ಅದಕ್ಕೆ ಒಂದೇಟು ಬಾರಿಸುತ್ತಾಳೆ. ಅವಳಿಗೆ ಇದರಿಂದ ಸಿಟ್ಟು ಬರುತ್ತದೆ. ಅದನ್ನು ಎತ್ತಿ ನೆಲಕ್ಕೆ ಕುಕ್ಕುತ್ತಾಳೆ. ಅಯ್ಯೋ ಓಡೋಗ್ಹೋಣ ಅಂತ ಯೋಚಿಸದ ಕೋಳಿ ಮತ್ತೆ ಅಟ್ಯಾಕ್ ಗೆ ಬರುತ್ತದೆ. ಆಗ ಆಕೆ ತಿರುಗಿಸಿ ತಿರುಗಿಸಿ ಎಸೆಯುತ್ತಾಳೆ. ಆದರೆ, ಅದು ಮತ್ತೆ ಎದ್ದು ಬರುತ್ತೆ. ಆಕೆ ಅಲ್ಲೇ ಸಿಕ್ಕಿದ ವಸ್ತುವಿನಿಂದ ಹೊಡೆಯುತ್ತಾಳೆ.

ಇದನ್ನೂ ಓದಿ : ತಾಯಿಯನ್ನು ಕೊಂ*ದ ಮಗನಿಗೆ ವಿಶಿಷ್ಟ ಶಿಕ್ಷೆ; ಅಪರೂಪದ ಆದೇಶ ನೀಡಿದ ಹೈಕೋರ್ಟ್

ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ವೀಡಿಯೋ ನೋಡಿದವರು ಕಮೆಂಟ್ಸ್ ಮಾಡುತ್ತಿದ್ದು, ಚಿಕನ್ ವರ್ಸಸ್ ಚಿಕ್ ಎಂದು ಕಮೆಂಟ್ಸ್ ಮಾಡಿದ್ದಾರೆ. ಸೋಲೊಪ್ಪಿಕೊಳ್ಳಬೇಡ ಕೋಳಿ, ನೀನು ಆಕೆಯನ್ನು ಸೋಲಿಸಬಲ್ಲೆ, ಎಂತಹ ಫೈಟ್ ಇದು, ಚಿಕನ್ ಟಕ್ಕರ್ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

 

 

Continue Reading

LATEST NEWS

Trending