Tuesday, July 5, 2022

ಡ್ರಗ್ ಮಾಫಿಯಾಕ್ಕೆ ಗತಿ ಕಾಣಿಸದೆ ವಿರಮಿಸಲ್ಲ : ಡಿಜಿಪಿ ಪ್ರವೀಣ ಸೂದ್ ಘರ್ಜನೆ..!

ಡ್ರಗ್ ಮಾಫಿಯಾ ಗತಿಕಾಣಿಸದೆ ವಿರಮಿಸಲ್ಲ : ಡಿಜಿಪಿ ಪ್ರವೀಣ ಸೂದ್ ಘರ್ಜನೆ..!

ಉಡುಪಿ : ರಾಜ್ಯದಲ್ಲಿ ಸಮಾಜ ಸ್ವಾಸ್ಥ್ಯವನ್ನು ಮತ್ತು ನೆಮ್ಮದಿಯನ್ನು ಹಾಳು ಮಾಡಿರುವ ಡ್ರಗ್ ಮಾಫಿಯಾ ಕೊನೆಗಾಣಿಸದೇ ವಿರಮಿಸಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಈ ಸಂಬಂಧ ಉಡುಪಿ ಎಸ್​​ಪಿ ಕಚೇರಿಯಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವೀಣ್​ ಸೂದ್​​ ಡ್ರಗ್ಸ್ ವಿಚಾರದಲ್ಲಿ ‌ನಮ್ಮದು ಜೀರೋ‌ ಟಾಲರೆನ್ಸ್. ಸಮುದ್ರಮಾರ್ಗ, ಆಕಾಶಮಾರ್ಗ, ಭೂ ಮಾರ್ಗ ಎಲ್ಲಿಂದ ಬಂದರೂ ಡ್ರಗ್ಗನ್ನು ಪೊಲೀಸ್ ಇಲಾಖೆ ಮಟ್ಟ ಹಾಕುತ್ತೆ ಎಂದು ಎಚ್ಚರಿಕೆ ‌ನೀಡಿದ್ದಾರೆ.

ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ.‌ ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ.

ಜತೆಗೆ ಬೆಳಗಾಂ, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ ಮತ್ತು ಅದು ಮುಂದುವರೆಯಲಿದ್ದು ದಕ್ಷ ಅಧಿಕಾರಿಗಳ ತಂಡ ಇದರ ನೇತೃತ್ವವನ್ನು ಹೊಂದಿದೆ, ಮತ್ತು ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನಯ ನೀಡಲಾಗಿದೆ ಎಂದರು.

ಸದ್ಯ ನಡೆಯುತ್ತಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಾಗಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡ್ತೇವೆ.

ಚಾಕಲೇಟ್ ಡ್ರಿಂಕ್ಸ್​ಗಳಲ್ಲೂ ಡ್ರಗ್ಸ್ ಮಿಕ್ಸ್ ಮಾಡಿ ಕೊಡುವುದು ಕಂಡು ಬಂದಿದೆ. ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ- ಎಸ್‌ ಪಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರ ಬೆಂಗಳೂರು ಕಮಿಷನರ್ ಮಾತಾಡ್ತಾರೆ.‌ ತನಿಖೆ ನಡೆಯುತ್ತಿರುವಾಗ ಪೊಲೀಸ್ ಅಧಿಕಾರಿಯಾಗಿ ಮಾತನಾಡುವುದು ಸರಿಯಲ್ಲ.

ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅಷ್ಟು ಮಾತ್ರವಲ್ಲ ಕಠಿಣ ಸೂಚನೆಯನ್ನು ನೀಡಿದ್ದಾರೆ. ರಾಜ್ಯವನ್ನು ಡ್ರಕ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದಾರೆ.‌

ಇದೀಗ ಬೆಂಗಳೂರು-ಮಂಗಳೂರು ದೊಡ್ಡ ಡ್ರಕ್ಸ್ ಹಬ್ ಆಗಿದೆ ಎಂದ ಅವರು ಈ ಬಾರಿ ಈ ದಂಧೆಗಳಿಗೆ ಪೂರ್ಣ ವಿರಾಮ ಹಾಕಿಯೇ ತೀರುತ್ತೇವೆ ಎಂದು ಖಡಾಖಂಡಿತವಾಗಿ ನುಡಿದರು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಯುವಕನನ್ನು ಇರಿದು ಮುಗಿಸಿದ ಸ್ನೇಹಿತರು…

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ನಡೆಸಿದ ಘಟನೆ ನಿನ್ನೆ ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ನಡೆದಿದೆ.ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.ಆತನ ಸ್ನೇಹಿತ...

ಮಂಗಳೂರು: ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವರ್ಕ್ ಶಾಪ್‌ಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಮಂಗಳೂರು ನಗರ ಹೊರವಲಯದ ಕುಲಶೇಖರದ ಬಜ್ಜೋಡಿ ಎಂಬಲ್ಲಿ ನಡೆದಿದೆ.ಭಾರೀ ಮಳೆ ಹಿನ್ನಲೆ ವರ್ಕ್ ಶಾಪ್...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...