FILM
ಸುಶಾಂತ್ ಸಿಂಗ್ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ..!
ಸುಶಾಂತ್ ಸಿಂಗ್ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ..!
ಮುಂಬೈ : ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇಂದು ಮೂರನೇ ದಿನ ರಿಯಾ ಎಂದಿನಂತೆ ಎನ್‌ಸಿಬಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸುಶಾಂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಿಯಾ ಸೇರಿದಂತೆ ಸಾಕಷ್ಟು ಮಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ರಿಯಾಗೆ ಡ್ರಗ್ ಜಾಲದೊಂದಿಗೆ ಸಂಪರ್ಕವಿದೆ ಎಂದು ಅನುಮಾನಿಸಲಾಗಿತ್ತು. ಅಲ್ಲದೆ ಡ್ರಗ್ಸ್ ಬಗ್ಗೆ ರಿಯಾ ಅವರ ಮೊಬೈಲ್ನಲ್ಲಿ ನಡೆಸಲಾಗಿದ್ದ ಸಂಭಾಷಣೆ ಯ ದಾಖಲೆ ಹೊರ ಬಿದ್ದಿತ್ತು.
ಇದೇ ಕಾರಣದಿಂದ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇಂದು ಮೂರನೇ ದಿನ ರಿಯಾ ಎಂದಿನಂತೆ ಎನ್‌ಸಿಬಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಮೊದಲು ಇದೇ ಪ್ರಕರದಲ್ಲಿ ರಿಯಾ ಅವರ ಸಹೋದರ ಶೋವಿಕ್ , ಸುಶಾಂತ್ ಮನೆಯಲ್ಲಿ ಕೆಲಸಕ್ಕಿದ್ದ ದೀಪೇಶ್ ಸಾವಂತ್ ಹಾಗೂ ಸುಶಾಂತ್ ಅವರ ಮನೆಯ ವ್ಯವಸ್ಥಾಪಕ ಸ್ಯಾಮುಯೆಲ್ ಮಿರಾಂಡ ಅವರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದರು.
ಸದ್ಯಕ್ಕೆ ರಿಯಾ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಗಿದೆ. ರಿಯಾ ಅವರನ್ನು ಭಾನುವಾರ ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ನಂತರ ಸೋಮವಾರ 8 ಗಂಟೆ ಹಾಗೂ ಇಂದು ಅಂದರೆ ಮಂಗಳವಾರ 5 ಗಂಟೆಗಳ ಕಾಲ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದಾದ ನಂತರ ರಿಯಾ ಅವರನ್ನು ಬಂಧಿಸಲಾಗಿದೆ.
ರಿಯಾ, ವಿಚಾರಣೆ ವೇಳೆ ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ ಜೊತೆ ನಂಟು ಹೊಂದಿರುವ ಹಲವಾರು ಸೆಲೆಬ್ರಿಟಿಗಳ ಹೆಸರನ್ನು ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಕುರಿತಾಗಿ ಎನ್‌ಸಿಬಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ರಿಯಾ ಚಕ್ರವರ್ತಿ ವಿರುದ್ಧ ಸಾಕ್ಷಿಗಳು ಸಿಕ್ಕಿರಬಹುದು.
ಡ್ರಗ್ ಪೆಡ್ಲರ್ಗಳ ಜೊತೆ ನಂಟಿರುವ ಬಗ್ಗೆ ಖಾತ್ರಿಯಾಗಿರಬೇಕು ಅದಕ್ಕೆ ರಿಯಾ ಅವರನ್ನು ಬಂಧಿಸಲಾಗಿದೆ ಎಂದು ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೆ ತಿಳಿಸಿದ್ದಾರೆ.
bangalore
ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾನೆ…ಎಂದು ಪಟ್ಟು ಹಿಡಿದ ಸ್ಪರ್ಧಿ ಯಾರು ಗೊತ್ತಾ..?
Bigboss: ಬಿಗ್ ಬಾಸ್ ಮುಕ್ತಾಯಕ್ಕೆ ಇನ್ನು ಅರ್ಧ ಜರ್ನಿ ಬಾಕಿ ಇದೆ. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಫೈಟ್ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾವೇ ಎಂದು ಪಟ್ಟು ಹಿಡಿದ ಸ್ಫರ್ಧಿಗಳು ಗೆಲ್ಲುತ್ತಾರೋ ಅನ್ನೋದು ಕಾದು ನೋಡಬೇಕಿದೆ.
ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಟೀಮ್ ನಲ್ಲಿ ಕಿತ್ತಾಟ ನಡೆದರೂ ವಿನಯ್ ಮಾತ್ರ ತಲೆಕೆಡಿಸದೆ ಈ ಬಾರಿ ಬಿಗ್ ಬಾಸ್ ಟೈಟಲ್ ನಾನೇ ಗೆಲ್ಲೋದು ಎಂದು ಹೇಳಿಕೊಂಡಿದ್ದಾರೆ.
ಈಗಾಗಲೇ ಬಿಗ್ ಬಾಸ್ ಜರ್ನಿ ಅರ್ಧ ಮುಗಿದಿದ್ದು, ಇನ್ನು ಅರ್ಧ ಬಾಕಿ ಇದೆ. ಹಾಗಾಗಿ ಇದರಲ್ಲಿ ಯಾರು ಗೆಲ್ಲೋತ್ತಾರೋ ಅನ್ನೊ ಪ್ರಶ್ನೆ ಮತ್ತೇ ಕಾಡಿದೆ. ವಾರದಿಂದ ವಾರಕ್ಕೆ ಎಲಿಮಿನೇಟ್ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರೆ. ಇತ್ತ ವಿನಯ್ ಯಾರನ್ನೂ ಲೆಕ್ಕಿಸದೇ ತಾವೇ ಈ ಬಾರಿ ಫಿನಾಲೆ ಮೆಟ್ಟಿಲೇರಬೇಕು ಎಂದಾಗ ಸ್ನೇಹಿತ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಗಿ ವಿನಯ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ನಮ್ರತಾ ಮತ ಚಲಾಯಿಸಿದ್ದಾರೆ. ಹಾಗಾಗಿ ನಮ್ರತಾ ಇವರ ಗುಂಪಿನಿಂದ ಹೊರ ನಡೆದಿದ್ದಾರೆ.
ಆ ಬಳಿಕ ವಿನಯ್ ಹಾಗೂ ಸ್ನೇಹಿತ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ.
ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ವಿನಯ್ ನ ಕನಸು ಈಡೇರುತ್ತಾ..? ಅವರೇ ಬಿಗ ಬಾಸ್ ವಿನ್ನರ್ ಆಗುತ್ತಾರ ಎಂದು ಕಾದು ನೋಡಬೇಕಿದೆ.
FILM
ರಶ್ಮಿಕಾ ಮಂದಣ್ಣ ಪರಭಾಷೆ ನಟರಿಗೆ ಲಕ್ಕಿ ಚಾರ್ಮ್
Rashmika mandanna : ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ಅಂದ್ರೆ ಕೆಲವರಿಗೆ ಇಷ್ಟ, ಇನ್ನೂ ಕೆಲವರಿಗೆ ಅಷ್ಟಕಷ್ಟೆ.ಆದ್ರೆ ಬೇರೆ ಭಾಷೆಯ ನಟರಿಗೆ ರಶ್ಮಿಕಾ ಅಂದ್ರೆ ತುಂಬಾನೆ ಇಷ್ಟ ಅಂತೆ.
ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ರಶ್ಮಿಕಾ ಸದ್ಯ ಬೇಡಿಕೆಯ ನಟಿ.ಸೌತ್ ಟು ನಾರ್ತ್ ರಶ್ಮಿಕಾ ಅವರಿಗೆ ಸಿನಿಮಾರಂಗದಲ್ಲಿ ಭಾರೀ ಬೇಡಿಕೆ ಇದೆ.
ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬ್ಲಾಕ್ ಬಸ್ಟರ್ ಹಿಟ್. ಕನ್ನಡದಲ್ಲಿ ಆ ಬಳಿಕ ಮಾಡಿದ ಚಮಕ್, ಅಂಜನಿಪುತ್ರ, ಪೊಗರು ಸಿನೆಮಾ ಬ್ಲಾಕ್ ಬಸ್ಟರ್ ಚಿತ್ರಗಳು ಎನಿಸಿಕೊಂಡಿವೆ.
ತಮಿಳು, ತೆಲುಗು ಬಾಷೆಯಲ್ಲಿ ಸತತ ಫ್ಲಾಪ್ ಕೊಡುತ್ತಿದ್ದ ಸ್ಟಾರ್ ಹೀರೋಗಳ ಜೊತೆ ಒಂದೊಂದು ಸಿನಿಮಾ ಮಾಡಿ ಅವರಿಗೆ ಬಿಗ್ ಸಕ್ಸಸ್ ಕೊಟ್ಟಿದ್ದಾರೆ.
ವಿಜಯ್, ಅಲ್ಲು ಅರ್ಜುನ್, ರಣಬೀರ್ ಕಪೂರ್ನಂತ ಸ್ಟಾರ್ ಹೀರೋಗಳು ಸತತವಾಗಿ ಎವರೇಜ್ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದರು.ಆದ್ರೆ ರಶ್ಮಿಕಾ ಅವರ ಜೊತೆ ನಟಿಸಿ ಅವರಿಗೆ ಗೆಲುವು ತಂದುಕೊಟ್ಟಿದ್ದಾರೆ.
bangalore
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
Film: ತೆಲುಗು ನಟ ನರೇಶ್ ಈಗಾಗಲೇ ಮೂರನೇ ಪತ್ನಿ ರಮ್ಯಾ ರಘುಪತಿಯವರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ರೆ ರಮ್ಯಾ ಡಿವೋರ್ಸ್ ನೀಡಲು ಒಪ್ಪುತ್ತಿಲ್ಲ. ಹೀಗಿರುವಾಗಲೇ ಪವಿತ್ರಾ ಲೋಕೇಶ್ ಜೊತೆ ನರೇಶ್ ಸಹಜೀವನ ನಡೆಸುತ್ತಿದ್ದಾರೆ.
ಬಹುದಿನಗಳ ನಂತರ ನರೇಶ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. “ನಾನು ನನ್ನ ಜೀವನದಲ್ಲಿ ಸಂಕಷ್ಟದಲ್ಲಿದ್ದಾಗ, ಈ ಒಂದು ಹಾಡು ನನಗೆ ಸ್ಫೂರ್ತಿ ನೀಡಿತು. ಆ ಸಮಯದಲ್ಲಿ ನಾನು ನನ್ನ ಕರಿಯರ್ ಕಳೆದುಕೊಂಡೆ. ನಾನು ಆರ್ಥಿಕ ಸಮಸ್ಯೆ ಎದುರಿಸಿದೆ. ನನ್ನ ಆತ್ಮೀಯರು ನನ್ನನ್ನು ಅಗಲಿದ್ದರು. ಕ್ಷುಲ್ಲಕ ಪ್ರಕರಣದಲ್ಲಿ ಸಂಬಂಧಿಕರಿಂದ ಕಿರಿಕಿರಿ, ಜೋಕರ್‌ನಿಂದ ತೊಂದರೆ ಎದುರಾದರೂ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ತಾಯಿ ಮತ್ತು ಸ್ನೇಹಿತ ವಿಜಯ್ ವಾಧ್ವಾ ಮಾತ್ರ.ಈಗ ಈ ರೀತಿ ಬದಲಾಗಿದ್ದೇನೆ. ಈ ಹಾಡು ನನಗೆ ಸ್ಫೂರ್ತಿ ನೀಡಿದ್ದು ಮಾತ್ರವಲ್ಲ. ಮತ್ತೆ ಬಲವಾಗಿ ಎದ್ದು ನಿಲ್ಲುವಂತೆ ಮಾಡಿದೆ. ಈಗಲೂ ಪ್ರೇರೇಪಿಸುತ್ತದೆ. ಈಗ ನಾನು ನನ್ನ ವೃತ್ತಿಜೀವನದ 50ನೇ ವರ್ಷದಲ್ಲಿದ್ದೇನೆ. ಈ ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಲು ನನಗೆ ತುಂಬಾ ಸಹಾಯ ಮಾಡಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ನರೇಶ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.