Connect with us

    chikkamagaluru

    ವೀಕೆಂಡ್ ಮಸ್ತಿಯಲ್ಲಿ ಯುವಕರು..! ದೇವರಮನೆಯಲ್ಲಿ ಯುವಕರ ಡ್ಯಾನ್ಸ್..!!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಇನ್ನು ಮಳೆಗಾಲದಲ್ಲಿ ಹೇಳಲೇಬೇಕಿಲ್ಲ. ಹಚ್ಚ ಹಸಿರ ವಾತಾವರಣ.. ಝಳಝಳಿಸುವ ಪುಟ್ಟ ಪುಟ್ಟ ಜಲಪಾತಗಳು ಕಣ್ಮನ ಸೆಳೆಯುತ್ತದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ದೇವರಮನೆ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಪ್ರವಾಸಿಗರು ಅಂತರ್‌ರಾಜ್ಯದಿಂದಲೂ ಬರುತ್ತಾರೆ.

    ಇದೀಗ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಕ್ಷೇತ್ರ ಮೋಜು ಮಸ್ತಿಯ ಅಡ್ಡವಾಗಿ ಕಂಡುಬರುತ್ತಿದೆ. ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ. ಮೋಜು, ಮಸ್ತಿ, ಡ್ಯಾನ್ಸ್‌ ಮಾಡಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್‌ ಮಾಡಿದ್ದರು. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕುಣಿದು ಕುಪ್ಪಳಿಸಿರವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರ ಭಯ ಹೇಗೂ ಇಲ್ಲ.. ಸ್ಥಳೀಯರ ಮಾತಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ.

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    ಚಾರ್ಮಾಡಿ ಘಾಟಿಯಲ್ಲೂ ಇದೇ ಪರಿಸ್ಥಿತಿ

    ಇನ್ನು ಚಾರ್ಮಾಡಿ ಘಾಟಿಯಲ್ಲೂ ಇಂಥದ್ದೇ ಪರಿಸ್ಥಿತಿ. ಪ್ರವಾಸಿಗರು ಅಲ್ಲಿನ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಜಲಪಾತಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಇನ್ನು ಜಾರುವ ಬಂಡೆಗಳಲ್ಲಿ ನಿಂತು ಮೋಜು, ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    chikkamagaluru

    ಇವೆರಡೂ ತಾಣದಲ್ಲಿ ಟ್ರಕ್ಕಿಂಗ್ ನಿರ್ಬಂಧ..!

    Published

    on

    ಮಂಗಳೂರು : ಮಳೆಗಾಲದಲ್ಲಿ ಮಲೆನಾಡಿಗೆ ಹೋದಾಗ ಸಿಗುವ ಅನುಭವವೇ ಬೇರೆ ಆದ ಕಾರಣ ಮಲೆನಾಡಿನ ಟೂರಿಸ್ಟ್‌ ಹಾಟ್‌ಸ್ಪಾಟ್ ಮಳೆಗಾಲದಲ್ಲಿ ಫುಲ್ ಆಗುತ್ತದೆ. ಇನ್ನು ಹಾಟ್‌ ಫೇವರೇಟ್ ಸ್ಪಾಟ್‌ ಆಗಿರುವ ಮುಳ್ಳಯ್ಯನಗಿರಿ, ಎತ್ತಿನಭುಜ ಸೇರಿದಂತೆ ಹಲವಾರು ಪ್ಲೇಸ್‌ಗಳು ಪ್ರವಾಸಿಗರಿಗೆ ಸ್ವರ್ಗವೇ ಸರಿ. ಹೀಗಾಗಿ ಕಳೆದ ಭಾನುವಾರ ( ಜೂನ್ 16 ) ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಟೂರಿಸ್ಟ್‌ ಸ್ಪಾಟ್‌ಗೆ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ಭಾನುವಾರ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಎತ್ತಿನಭುಜಕ್ಕೆ ಟ್ರಕ್ಕಿಂಗ್ ಮಾಡಿದ್ದರು. ಆದ್ರೆ ಇದೀಗ ಸರ್ಕಾರ ಈ ಎರಡೂ ತಾಣಗಳಿಗೆ ಪ್ರವಾಸಿಗರು ಹೋಗದಂತೆ ನಿಷೇಧ ಹೇರಿದೆ.

    ಚಿಕ್ಕಮಗಳೂರು ಜಿಲ್ಲೆಗೆ ಹೋಗುವ ಪ್ರವಾಸಿಗರಿಗೆ ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿ ಎರಡೂ ಕೂಡಾ ಹಾಟ್ ಫೇವರೇಟ್ ಜಾಗ. ಆದ್ರೆ ಸರ್ಕಾರ ಈ ಎರಡೂ ಪ್ರವಾಸಿತಾಣಕ್ಕೆ ಹೋಗದಂತೆ ತಾತ್ಕಾಲಿಕ ನಿಷೇಧ ಹೇರಿದೆ. ಈ ಹಿಂದೆಯೇ ರಾಜ್ಯದ ಚಾರಣ ಪಥಗಳಿಗೆ ಆನ್‌ಲೈನ್‌ ಬುಕ್ಕಿಂಗ್ ಮಾಡಿ ನಿಯಮಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಹೋಗಲು ಅನುಮತಿ ನೀಡಿತ್ತು. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಪ್ಲಾಸ್ಟಿಕ್‌ , ಸೇರಿದಂತೆ ತ್ಯಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಸಂಗ್ರಹ ಆಗುವ ಕಾರಣ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದ್ದರು.

    ಕಳೆದ ಭಾನುವಾರ ಈ ನಿಯಮ ಉಲ್ಲಂಘಿಸಿ ಸಾವಿರಾರು ಜನರು ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಅಲ್ಲಿನ ಅರಣ್ಯ ಅಧಿಕಾರಿಗಳೇ ಕಾರಣವಾಗಿದ್ದು , ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಅರಣ್ಯ ಸಚಿವರು ನೀಡಿ ಈ ಎರಡೂ ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಪ್ರವಾಸಿಗರು ಪ್ರಕೃತಿಯ ವೀಕ್ಷಣೆ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲವಾದ್ರೂ ಪರಿಸರವನ್ನು ಹಾಳು ಮಾಡುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.


    ಇನ್ನು ಮುಂದೆ ಚಾರಣಿಗರಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಲು ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಚಾರಣಗರಿಂದ ಮುಂಗಡ ಹಣ ಪಡೆದುಕೊಂಡು ಪ್ಲಾಸ್ಟಿಕ್ ಹಾಗೂ ಇತರ ಏಕಬಳಕೆಯ ವಸ್ತುಗಳನ್ನು ವಾಪಾಸು ತಂದಲ್ಲಿ ಮುಂಗಡ ಹಣ ವಾಪಾಸು ನೀಡಲಾಗುತ್ತದೆ. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆಯಾಗಿ ಈ ರೀತಿಯ ಕಠಿಣ ಕ್ರಮದ ಅಗತ್ಯ ಇದೆ ಎಂದು ಈ ಬಗ್ಗೆ ಚಿಂತಿಸಲಾಗಿದೆ.

    Continue Reading

    chikkamagaluru

    ಎಟಿಎಂ ಮೆಷಿನ್‌ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!

    Published

    on

    ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಟಿಎಂ ಮೆಷಿನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  ನಗರದ ಐ.ಜಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನ ಎಟಿಎಂ ಗೆ ಭಾನುವಾರ(ಎ.21) ಮಧ್ಯರಾತ್ರಿ ಬೆಂಕಿ ತಗುಲಿದೆ.

    ಎಟಿಎಂ ಕೊಠಡಿಯಲ್ಲಿ ಅಳವಡಿಸಿದ್ದ ಎಸಿಯಲಲ್ಲಿ ವಿದ್ಯುತ್ ಸರ್ಕ್ಯೂಟ್‌ ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಇದರಿಂದ ಎಟಿಎಂ ಮೆಷಿನ್ ಹಾಗೂ ಹಣ ತುಂಬಿಸುವ ಮೆಷಿನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಮೆಷಿನ್‌ನಲ್ಲಿದ್ದ 5.ಲಕ್ಷ ರೂಪಾಯಿ ಸುಟ್ಟು ಕರಕಲಾಗಿ  ಹೋಗಿದೆ. ಎಟಿಎಂ ಮೆಷಿನ್ ಮೇಲಿನ ಭಾಗದಲ್ಲಿ ಕರ್ನಾಟಕ ಬ್ಯಾಂಕ್ ಇದ್ದು ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದಂತಾಗಿದೆ.

    READ MORE..; ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

    ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

    Continue Reading

    chikkamagaluru

    ರಾಜ್ಯದ ಹಲವೆಡೆ ಮಳೆಯ ಸಿಂಚನ.. ಸಿಡಿಲಿನ ಅಬ್ಬರಕ್ಕೆ ಇಬ್ಬರ ಬ*ಲಿ..!!

    Published

    on

    ಮಂಗಳೂರು : ಬಿಸಿಲಿನ ಬೇಗೆಯಿಂದ ಭೂಮಿಯೇ ಬಾಯಿಬಿಟ್ಟಂತಾಗಿದ್ದು, ನೀರಿಗಾಗಿ ಜನರ ಹಾಹಾಕಾರ ಮುಗಿಲು ಮುಟ್ಟಿತ್ತು. ಜಾನುವಾರುಗಳು ಪ್ರಾಣಿ ಪಕ್ಷಿಗಳದ್ದಂತು ಹೇಳ ತೀರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದೊಂದು ವಾರದಿಂದ ಇದಕ್ಕೆ ಬ್ರೇಕ್ ನೀಡಿ ವರುಣನ ಸಿಂಚನದಿಂದ ಕೆಲವೊಂದೆಡೆ ಜನರು ನೆಮ್ಮದಿ ಕಂಡಿದ್ರು. ಆದ್ರೆ ಗುರುವಾರ (ಎ.11) ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ವಿಜಯಪುರ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಿದೆ.

    rain

    ಸು*ಟ್ಟು ಕರಕಲಾಗುವಂತ ಪರಿಸ್ಥಿತಿಯಲ್ಲಿದ್ದ ಕಲಬುರಗಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ ಇನ್ನು ವಿಜಯಪುರ ತಾಲೂಕಿನಲ್ಲೂ ಧಾರಕಾರ ಮಳೆ ಸುರಿದಿದ್ದು, ಒಂದೇ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಸಿಡಿಲಿನ ಅರ್ಭಟಕ್ಕೆ ಜನ ಮನೆಯಿಂದ ಹೊರ ಬಾರದೆ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ. ಆದ್ರೂ 16 ವರ್ಷ ಬಾಲಕ ಹಾಗೂ ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಜಮೀನು ಕೆಲಸ ಮಾಡುತ್ತಿದ್ದ 45 ವರ್ಷದ ರೈತ ಸೋಮಶೇಖರ್ ಪಟ್ಟಣಶೆಟ್ಟಿ ಸಿಡಿಲು ಬಡಿದು ಮೃ*ತಪಟ್ಟಿದ್ದಾರೆ.

    ಇದನ್ನೂ ಓದಿ..; ‘ಬಿಗ್ ಬಾಸ್‌’ ಮತ್ತೆ ಆರಂಭ.. ಇಲ್ಲಿದೆ ಸ್ಪರ್ಧಿಗಳ ಲಿಸ್ಟ್‌..!

    ಇನ್ನು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಕೆರಮಕ್ಕಿ, ಬೈಗೂರು,ಹಂರವಳ್ಳಿ, ಆವುತಿ ಪರಿಸರದಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.

    Continue Reading

    LATEST NEWS

    Trending