Connect with us

  FILM

  ತಾಯಿಯಾಗುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ..! ಹೊಸ ಅತಿಥಿ ಆಗಮನ ಯಾವ್ಯಾಗ?

  Published

  on

  ಕೊಡಗು/ಮಂಗಳೂರು: ಹರ್ಷಿಕಾ ಪೂಣಚ್ಚ ಕನ್ನಡದ ಕ್ಯೂಟ್ ನಟಿ. ಕಳೆದ ವರ್ಷ ಭುವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಕ್ಯೂಟ್ ಕಪಲ್ ಗುಡ್ ನ್ಯೂಸ್ ನೀಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಫೋಟೋಶೂಟ್ ಮಾಡಿಕೊಂಡಿದ್ದು ಸೋ಼ಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಹರ್ಷಿಕಾ ಪೂಣಚ್ಚ ಹಾಗೂ ಭುವನ್  ಪೊನ್ನಣ್ಣ ಇಬ್ಬರೂ ಪ್ರೀತಿಯಲ್ಲಿದ್ದರು. ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯಲ್ಲಿ ತಮ್ಮದೇ ಕೊಡವ ಶೈಲಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್‌ನ ತಾರೆಯರು ಕೂಡ ಸಾಕ್ಷಿಯಾಗಿದ್ದರು. ಈಗ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಷಯವನ್ನು ಫೋಟೊಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.

  ಒಂದೇ ವರ್ಷದೊಳಗೆ ಸಿಹಿಸುದ್ದಿ ಕೊಟ್ಟ ನಟ-ನಟಿ:

  23 ಆಗಸ್ಟ್ 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ಇದೀಗ ಒಂದೇ ವರ್ಷದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫ್ಯಾಮಿಲಿ ಜೊತೆ ಸಾಂಪ್ರದಾಯವಾಗಿ ಫೊಟೋಶೂಟ್ ಮಾಡಿಕೊಂಡಿದ್ದಾರೆ.  ಈ ಪೋಸ್ಟ್‌ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. ‘ಗೆಳೆಯರೆ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವನದ ಮೇಲೆ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಭುವನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಹರ್ಷಿಕಾ ಪೂಣಚ್ಚ ಕೂಡಾ ಶೇರ್ ಮಾಡಿಕೊಂಡಿದ್ದಾರೆ.

  ‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು

  ಸದ್ಯ ಸಿನೆಮಾ ನಟನೆಗಳಿಂದ ದೂರವಿರುವ ಹರ್ಷಿಕಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬ್ಯುಸಿಯಾಗಿದ್ದರು. ಒಂದಲ್ಲಾ ಒಂದು ಕೊಡಗು ಶೈಲಿಯ ಅಡುಗೆಗಳನ್ನು ಮಾಡಿ ವೀಕ್ಷಕರಿಗೆ ಪರಿಚಯಿಸುತ್ತಿದ್ದರು. ಈ ಗ್ಯಾಪ್‌ನಲ್ಲೇ ತಮ್ಮ ಫ್ಯಾನ್ಸ್‌ಗೆ ಖುಷಿ ವಿಚಾರ ನೀಡಿದ್ದಾರೆ.

  FILM

  ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ಕಿರುತೆರೆ ದಂಪತಿ; ಪ್ರೀತಿ ಕಳೆದುಹೋಗಿಲ್ಲ! ಅಂದಿದ್ದು ಯಾಕೆ?

  Published

  on

  ಮಂಗಳೂರು/ ಮುಂಬೈ : ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ವಿದೇಶದಲ್ಲೂ ಕಳ್ಳರ ಹಾವಳಿ ಇದ್ದು, ಹಿಂದಿ ಕಿರುತೆರೆಯ ಖ್ಯಾತ ದಂಪತಿ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾಗೆ ಕೆಟ್ಟ ಅನುಭವವಾಗಿದೆ. ವಿವೇಕ್ ಮತ್ತು ದಿವ್ಯಾಂಕಾ ಇಬ್ಬರೂ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಯುರೋಪ್​ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರು ಕಳ್ಳರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.


  ಕಳ್ಳರಿಂದ ತೊಂದರೆ ಅನುಭವಿಸಿದ ತಾರಾ ಜೋಡಿ :

  ಇಟಲಿಯಲ್ಲಿ ಪ್ರಯಾಣಿಸುತ್ತಿದ್ದ ವಿವೇಕ್-ದಿವ್ಯಾಂಕಾ ಅವರ ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೀಗಾಗಿ ಇಬ್ಬರೂ ವಿದೇಶದಲ್ಲಿ ಸಂಕಷ್ಟದಲ್ಲಿದ್ದು, ಪೊಲೀಸರೂ ಈ ವಿಚಾರದಲ್ಲಿ ಅಸಹಾಯಕತೆ ತೋರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದರು.
  ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ತಮ್ಮ ಯುರೋಪ್ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರಿಗೆ. ಕೆಟ್ಟ ಅನುಭವವೂ ಆಗಿದೆ. ಅಲ್ಲಿ ದಂಪತಿಯನ್ನು ಕಳ್ಳರು ದರೋಡೆ ಮಾಡಿದ್ದು, ಅವರು ಶಾಪ್ ಮಾಡಿದ ವಸ್ತುಗಳು, ವ್ಯಾಲೆಟ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ.


  ದಿವ್ಯಾಂಕಾ ಅವರ ಪತಿ ಹಾಗೂ ನಟ ವಿವೇಕ್ ದಹಿಯಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ದಂಪತಿಯ ಸಾಮಾನುಗಳನ್ನು ಇಟ್ಟಿದ್ದ ಕಾರಿನ ಗಾಜು ಒಡೆದ ಕಳ್ಳರು ಎಲ್ಲ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
  ಈ ಘಟನೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಅದ್ಭುತವಾಗಿತ್ತು. ನಾವು ನಿನ್ನೆ ಫ್ಲಾರೆನ್ಸ್‌ಗೆ ಬಂದಿದ್ದೆವು. ಅಲ್ಲಿ ಒಂದು ದಿನ ಉಳಿಯಲು ಯೋಚಿಸಿದ್ದೆವು. ನಾವು ನಮ್ಮ ವಾಸ್ತವ್ಯಕ್ಕಾಗಿ ಹೋಟೆಲ್‌ಗೆ ಪರಿಶೀಲಿಸಿದಾಗ, ನಮ್ಮ ಎಲ್ಲಾ ಸಾಮಾನುಗಳನ್ನು ಹೊರಗೆ ನಿಲ್ಲಿಸಿದ ಕಾರಿನಲ್ಲಿ ಇರಿಸಲಾಗಿತ್ತು. ಆದರೆ ನಂತರ ನಾವು ಲಗೇಜ್ ಕೊಂಡೊಯ್ಯಲು ಕಾರಿನ ಬಳಿ ಬಂದಾಗ, ನಮ್ಮ ಕಾರನ್ನು ಒಡೆದು ಹಾಕಿರುವುದು ಕಂಡುಬಂದಿದೆ. ನಮ್ಮಿಬ್ಬರ ಪಾಸ್‌ಪೋರ್ಟ್‌ಗಳು, ಪರ್ಸ್‌ಗಳು, ಆ ಕಾರಿನಲ್ಲಿ ಖರೀದಿಸಿದ್ದ ಬೆಲೆಬಾಳುವ ವಸ್ತುಗಳೆಲ್ಲ ನಾಪತ್ತೆಯಾಗಿದ್ದನ್ನು ಗಮನಿಸಿದಾಗ ಆಘಾ*ತವಾಯಿತು ಎಂದಿದ್ದರು.


  ಭಾರತಕ್ಕೆ ಮರಳಲು ನಮಗೆ ಸಹಾಯ ಬೇಕು ಎಂದೂ ವಿವೇಕ್ ಉಲ್ಲೇಖಿಸಿದ್ದರು. ಈ ಘಟನೆಯ ನಂತರ ನಾವು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಆದರೆ, ಅವರು ನಮ್ಮ ದೂರನ್ನು ದಾಖಲಿಸಲು ನಿರಾಕರಿಸಿದರು. ನಮಗೆ ಅವರಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಾವಳಿ ಇಲ್ಲದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

  ಇದನ್ನೂ ಓದಿ : PHOTOS: ರಾಧಿಕಾ ಮರ್ಚೆಂಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ; ಯಾರೆಲ್ಲ ಭಾಗಿಯಾಗಿದ್ರು ಗೊತ್ತಾ?

  ಸಮಸ್ಯೆ ಬಗೆ ಹರಿಯಿತು ..ಧನ್ಯವಾದ ತಿಳಿಸಿದ ದಂಪತಿ

  ದಂಪತಿ ತೊಂದರೆಯಲ್ಲಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಈ ಸಮಸ್ಯೆ ಬಗೆ ಹರಿದಿದೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ.

  ಪ್ರಿಯರೆ, ನಿಮ್ಮ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ತುಂಬಾ ಕಳೆದುಕೊಂಡ ನಂತರ, ಅದೃಷ್ಟವಶಾತ್, ಪ್ರೀತಿ ಕಳೆದುಹೋಗಿಲ್ಲ! ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸಲು ನಮಗೆ ಸಾಧ್ಯವಾಗದ ಕಾರಣ ನಮ್ಮ ಪ್ರೀತಿಪಾತ್ರರಿಗೆ ಮತ್ತು ಸಂಬಂಧಪಟ್ಟ ಜನರಿಗೆ ಅಪ್‌ಡೇಟ್‌ ನೀಡುತ್ತಿದ್ದೇನೆ. ಪ್ರಸ್ತುತ ನಾವು ಸ್ನೇಹಿತನಿಂದ ಸಹಾಯವನ್ನು ಪಡೆದಿರುವುದರಿಂದ ಹಣದ ಸಮಸ್ಯೆ ಬಗೆ ಹರಿಯಿತು. ನಾವು ವರದಿ ಮಾಡಿದಂತೆ ಎಲ್ಲವನ್ನೂ ಕಳೆದುಕೊಂಡಿಲ್ಲ. ಕಾರಿನ ಬೂಟ್‌ನಲ್ಲಿದ್ದ ಕೆಲವು ವಸ್ತುಗಳು ನಮ್ಮ ಬಳಿ ಉಳಿದಿವೆ ಎಂದು ಹೇಳಿಕೊಂಡಿದ್ದಾರೆ.

  Continue Reading

  FILM

  ಅನಂತ್ ಅಂಬಾನಿ ಮದುವೆಗೆ ನಟ ಅಕ್ಷಯ್ ಕುಮಾರ್ ಗೈರು; ಕಾರಣ ಇಲ್ಲಿದೆ

  Published

  on

  ಬೆಂಗಳೂರು : ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ಇದೀಗ ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದ್ದು, ಅಭಿಮಾನಿಗಳಿಗೆ ಆತಂಕವಾಗಿದೆ. ಹೌದು, ಅಕ್ಷಯ್‌ ಕುಮಾರ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.


  ಸದ್ಯ ನಟ ಇತ್ತೀಚಿಗೆ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾಗಿದ್ದು, ಅವರಿಗೆ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅಕ್ಕಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ.

  ಇದನ್ನೂ ಓದಿ : ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

  ಅಕ್ಷಯ್ ಕುಮಾರ್ ನಟನೆಯ ‘ಸರ್ಫಿರಾ’ ಜುಲೈ 12 ರಂದು ಬಿಡುಗಡೆಯಾಗಿದೆ. ಈ ಚಲನಚಿತ್ರವು 2020 ರ ತಮಿಳು ಚಲನಚಿತ್ರ ‘ಸೂರರೈ ಪೊಟ್ರು’ ನ ರಿಮೇಕ್‌ ಆಗಿದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಕಾಣಿಸಿಕೊಂಡಿದ್ದಾರೆ.

  Continue Reading

  FILM

  ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

  Published

  on

  ರಾಕಿಂಗ್​ ಸ್ಟಾರ್​​ ಯಶ್ ಸಿನಿಮಾದಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಜನಪ್ರಿಯತೆ ಅವರ ಹೇರ್​ ಸ್ಟೈಲ್​ ಮೂಲಕ​ ಪಡೆದಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಯಶ್​ ಲುಕ್​ ಇದ್ದಕ್ಕಿದ್ದಂತೆಯೇ ಬದಲಾಗಿದೆ. ರಾಕಿ ಭಾಯ್​ ಉದ್ದ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.

  ಕೆಜಿಎಫ್​, ಕೆಜಿಎಫ್ 2 ಸಿನಿಮಾದಲ್ಲಿ ಯಶ್​​ ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕೆಜಿಎಫ್​ 3 ಸಿನಿಮಾ ತೆರೆ ಮೇಲೆ ಬರಲು ಬಾಕಿ ಉಳಿದಿದೆ. ಆದರೆ ಇದರ ನಡುವೆ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶೂಟಿಂಗ್​ ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್​ನಲ್ಲಿ ‘ರಾಮಾಯಣ’ ಸಿನಿಮಾಗೂ ಬಂಡವಾಳ ಹಾಕಿದ್ದು, ಅದರಲ್ಲಿ ‘ರಾವಣ’ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್​ ಸಡನ್​ ಆಗಿ ತಮ್ಮ ಕೂದಲಿಗೆ ಕತ್ತರಿ ಪ್ರಯೋಗಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್​​ ‘ಟಾಕ್ಸಿಕ್’ ಅಥವಾ ‘ರಾಮಾಯಣ’ ಸಿನಿಮಾದಲ್ಲಿನ ರಾವಣ ಅವತಾರಕ್ಕೆ ಯಶ್​ ಹೊಸ ಅವತಾರ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿದೆ. ಮತ್ತೊಂದೆಡೆ ರಿಲಯನ್ಸ್​ ಒಡೆತನದ ಮಾಲೀಕ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಮದುವೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇವರ ಜೊತೆಗೆ ರಾಧಿಕಾ ಪಂಡಿತ್​ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಕತ್ತರಿಸಿರುವ ಯಶ್​ ಲುಕ್​ ಮಾತ್ರ ಡಿಫರೆಂಟಾಗಿದೆ. ಅನೇಕರು ಇವರ ಲುಕ್​ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಇನ್ನು ಯಶ್​ ತಮ್ಮ ಹಳೆಯ ಲುಕ್​ನಲ್ಲಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಉದ್ದನೆಯ ಕೂದಲು ಮತ್ತು ಗಡ್ಡ ಬಿಟ್ಟಿದ್ದ ಯಶ್​​ ‘ಬಿಯರ್ಡ್​​ ಆಯಿಲ್​’ ಕಂಪನಿಗೆ ಜಾಹೀರಾತು ನೀಡಿದ್ದರು. ಇದರ ಮೂಲಕ ಕೋಟಿ ಕೋಟಿ ಎಣಿಸಿದ್ದರು. ಮಾತ್ರವಲ್ಲದೆ, ಇವರ ಲುಕ್​ ನೋಡಿ ಅನೇಕರು ಫಾಲೋ ಮಾಡಿದ್ದಿದೆ. ಆದರೀಗ ಹೊಸ ಲುಕ್​ನಲ್ಲಿ ರಾಕಿಂಗ್​ ಸ್ಟಾರ್​ ಕಾಣಿಸಿಕೊಂಡಿದ್ದಾರೆ.

  Continue Reading

  LATEST NEWS

  Trending