LATEST NEWS
ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ
Published
1 hour agoon
By
NEWS DESK2ಆಂಧ್ರಪ್ರದೇಶ: ಚಲಿಸುತ್ತಿರುವ ಆರ್‌ಟಿಸಿ ಬಸ್‌ನಲ್ಲಿ ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಆತಂಕ ಮೂಡಿಸಿದ್ದಾನೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಎರ್ಪೇಡು ಮಂಡಲದ ಅಂಜಿಮೇಡು ಬಳಿ ಯುವಕ ಬೆಳಿಗ್ಗೆ 5:30 ಕ್ಕೆ ಬಸ್ ಹತ್ತಿದ್ದಾನೆ. ಬೆಳಗಿನ ಬಸ್ ಆಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಕೇವಲ ನಾಲ್ವರು ಪ್ರಯಾಣಿಕರಿದ್ದರು. ಆ ವೇಳೆ ಹಾಸಿಗೆಯಂತಹ ಹಗ್ಗದಿಂದ ಬಸ್‌ನ ಮೇಲ್ಬಾಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ನೇತಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಕೂಡಲೇ ಕಂಡಕ್ಟರ್‌ಗೆ ಹೇಳಿದ್ದಾರೆ.
ಚಾಲಕ ಬಸ್ ನಿಲ್ಲಿಸಿ ರೇಣಿಗುಂಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
BIG BOSS
ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?
Published
4 minutes agoon
24/11/2024By
NEWS DESK2ದಿನದಿಂದ ದಿನಕ್ಕೆ ಬಿಗ್‌ಬಾಸ್ ಕನ್ನಡ 11ರ ಆಟದ ಕುತೂಹಲ ಹೆಚ್ಚುತ್ತಿದೆ. ಇದರ ಜೊತೆಗೆ ಮನೆಯಲ್ಲಿ ಜಗಳ, ಕುತಂತ್ರ, ವಾಗ್ವಾದ, ತಂತ್ರಗಾರಿಕೆ ಇದ್ದೇ ಇದೆ. ಈ ವಾರದ ಟಾಸ್ಕ್ ಮುಗಿದಿದ್ದು, ಮಂಜು ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಅವರು ಉತ್ತಮ ಮತ್ತು ರಜತ್ ಕಳಪೆಯಾಗಿದ್ದಾರೆ. ಇದೀಗ ಬಿಗ್‌ಬಾಸ್ ನಲ್ಲಿ ಇರುವ ಸ್ಪರ್ಧಿಗಳ ವಯಸ್ಸೆಷ್ಟು ಎಂಬುದನ್ನು ನೋಡೋಣ.
ಮೋಕ್ಷಿತಾ ವಯಸ್ಸು 29
ಭವ್ಯಾ ಗೌಡ ವಯಸ್ಸು 25
ಗೌತಮಿ ವಯಸ್ಸು 31
ಐಶ್ವರ್ಯ ವಯಸ್ಸು 28
ಚೈತ್ರಾ ವಯಸ್ಸು 29
ರಂಜಿತ್ ವಯಸ್ಸು 30
ಅನುಷಾ ರೈ ವಯಸ್ಸು 28
ಶಿಶಿರ್ ವಯಸ್ಸು 31
ಧನ್‌ರಾಜ್ ವಯಸ್ಸು 33
ಗೋಲ್ಡ್ ಸುರೇಶ್ ವಯಸ್ಸು 41
ಜಗದೀಶ್ ವಯಸ್ಸು 46
ತ್ರಿವಿಕ್ರಮ್ ವಯಸ್ಸು 32
ಹನುಮಂತ ವಯಸ್ಸು 31
ಶೋಭಾ ಶೆಟ್ಟಿ ವಯಸ್ಸು 34
ಧರ್ಮ ವಯಸ್ಸು 40
ಮಂಜು ವಯಸ್ಸು 39
LATEST NEWS
ಮಂಗಳೂರಲ್ಲಿ ಸಮುದ್ರಕ್ಕೆ ಜಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಯತ್ನ
Published
47 minutes agoon
24/11/2024By
NEWS DESK2ಮಂಗಳೂರು : ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಸೋಮೇಶ್ವರದ ರುದ್ರಬಂಡೆಯ ಸಮುದ್ರದ ಬಳಿ ನಡೆದಿದೆ. ಕೂಡಲೇ ತಡಿಯಲಿದ್ದ ಮೇಲುಗಾರರು ಯುವತಿಯನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಮುದ್ರಕ್ಕೆ ಹಾರಿದ ಯುವತಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಮಂಗಳೂರಿನ ಕಾಲೇಜು ಒಂದರಲ್ಲಿ ವಿದ್ಯಾರ್ಥಿನಿಯು ಪದವಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ವಿದ್ಯಾರ್ಥಿಯನ್ನು ಇದೀಗ ರಕ್ಷಣೆ ಮಾಡಲಾಗಿದೆ. ಘಟನೆಯ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಸುರಕ್ಷಿತವಾಗಿದ್ದಾಳೆ ಎಂದು ತಿಳಿದು ಬಂದಿದೆ.
International news
ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
Published
2 hours agoon
24/11/2024By
NEWS DESK3ಮಂಗಳೂರು: ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬ ಮಾತು ಕೇಳಿರಬಹುದು. ಮನುಷ್ಯ ಸರಿಯಾಗಿ ನಿದ್ದೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದಿನ ಪೂರ್ತಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ನಿದ್ದೆ ಮಾಡುವ ಸಮಯ ಕಡಿಮೆಯಾಗುತ್ತಿದ್ದು, ಇದರ ಬದಲು ಮೊಬೈಲ್ ನೋಡುವ ಮೂಲಕ ಸಮಯ ಜಾಸ್ತಿಯಾಗುತ್ತಿದೆ.
ಗ್ಲೋಬಲ್ ಸ್ಲೀಪ್ ಸಮೀಕ್ಷೆಯ ಪ್ರಕಾರ, ನೆದರ್ಲ್ಯಾಂಡ್ ಹೆಚ್ಚು ನಿದ್ರಿಸುವ ಜನರಲ್ಲಿ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್ ಜನರು ಸರಾಸರಿ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. ಎರಡನೇ ಸ್ಥಾನದಲ್ಲಿ ಫಿನ್ಲ್ಯಾಂಡ್ ಸ್ಥಾನ ಪಡೆದಿದೆ. ಅಲ್ಲಿನ ಜನರು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುತ್ತಾರೆ. 7 ಗಂಟೆಗಳ ಕಾಲ ನಿದ್ರಿಸುವ ಮೂಲಕ, ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ದೇಶಗಳು ಪಡೆದಿವೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್
ಇನ್ನೂ ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್ ಡಮ್ ಸ್ಥಾನ ಪಡೆದಿವೆ. ಈ ಎರಡು ದೇಶಗಳ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಐದನೇ ಸ್ಥಾನವನ್ನು ಕೆನಡಾ ಮತ್ತು ಡೆನ್ಮಾರ್ಕ್ ದೇಶಗಳು ಪಡೆದುಕೊಂಡಿದೆ. ಅಲ್ಲಿನ ಜನರು ಸರಾಸರಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಆರನೇ ಸ್ಥಾನದಲ್ಲಿ ಅಮೇರಿಕಾ ಪಡೆದಿದೆ. ಇಲ್ಲಿನ ಜನರು 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇಟಲಿ ಮತ್ತು ಬೆಲ್ಜಿಯಂ ಏಳನೇ ಸ್ಥಾನ ಪಡೆದಿದೆ. ಇಲ್ಲಿನ ಜನರು ಸರಾಸರಿ 7.5 ಗಂಟೆಗಳ ಕಾಲ ನಿದ್ರಿಸುತ್ತಾರೆ ಎಂದು ಗ್ಲೋಬಲ್ ಸ್ಲೀಪ್ ಸಮೀಕ್ಷೆ ವರದಿ ನೀಡಿದೆ.
ಭಾರತಕ್ಕೆ ಎಷ್ಟನೇ ಸ್ಥಾನ?
ಭಾರತಕ್ಕೆ ಎಲ್ಲಾ ವಿಭಾಗದಲ್ಲಿಯೂ ಪ್ರತಿಸ್ಪರ್ಧಿ ದೇಶವೆಂದರೆ ಅದುವೇ ಚೀನಾ. ನಿದ್ದೆ ಮಾಡುವ ವಿಷಯದಲ್ಲೂ ಎರಡು ದೇಶಗಳ ಜನರು ಸರಾಸರಿಯಾಗಿ 7 ಗಂಟೆಗಳ ಕಾಲ ನಿದ್ರಿಸುತ್ತಾರೆ. ಹೀಗಾಗಿ, ಭಾರತ ಮತ್ತು ಚೀನಾ 11ನೇ ಸ್ಥಾನ ಪಡೆದಿದೆ. ವಯಸ್ಕರಿಗಿಂತ ಮಕ್ಕಳಿಗೆ ನಿದ್ದೆ ಅವಶ್ಯಕ. ವಯಸ್ಕರು ಕೂಡ ಕನಿಷ್ಠ 8 ತಾಸು ನಿದ್ದೆ ಮಾಡಬೇಕು ಎಂದು ಆಧ್ಯಯನ ಹೇಳುತ್ತದೆ.
LATEST NEWS
ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
ಅತ್ಯಂತ ಉದ್ದದ ಮಾನವ ಸರಪಳಿ: ದ.ಕ.ಜಿಲ್ಲೆಗೆ ದ್ವಿತೀಯ ಸ್ಥಾನ
ರಜೆಗೆ ಎಂದು ಊರಿಗೆ ಬಂದಿದ್ದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ!
ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ನ.25 ಡೆಡ್‌ಲೈನ್
ಕರ್ನಾಟಕದ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ; ಎಲ್ಲೆಲ್ಲಿ?
ಐಪಿಎಲ್ ಹರಾಜಿನಲ್ಲಿ ಬದಲಾವಣೆ ತಂದ ಬಿಸಿಸಿಐ; ಏನು ಗೊತ್ತಾ!?
Trending
- LATEST NEWS4 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru2 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION3 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS6 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!