Connect with us

DAKSHINA KANNADA

ಚೆರ್ರಿ ಲರ್ನ್ ಎಜ್ಯುಕೇಶನಲ್ ಆ್ಯಪ್‌ ನ ಸ್ಥಾಪಕರಿಗೆ ‘ಯಂಗ್ ಚೇಂಜ್ ಮೇಕರ್- 2023’ಪ್ರಶಸ್ತಿ

Published

on

ದೆಹಲಿ: ಚೆರ್ರಿ ಲರ್ನ್ ಎಜ್ಯುಕೇಶನಲ್ ಆ್ಯಪ್‌ ನ ಸಂಸ್ಥಾಪಕ ಮತ್ತು ಸಿ.ಇ.ಒ. ದಕ್ಷಿಣ ಕನ್ನಡದ ಶ್ರೀನಿಧಿ ಆರ್.ಎಸ್. ಅವರು ದಿ ಹಿಂದೂ ಬ್ಯುಸಿನೆಸ್ ಲೈನ್ ನ ಪ್ರತಿಷ್ಠಿತ ‘ಯಂಗ್ ಚೇಂಜ್ ಮೇಕರ್ – 2023’ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಕೇಂದ್ರ ವಿದ್ಯುತ್ ಮತ್ತು ಇಂಧನ ಸಚಿವ ಆರ್.ಕೆ. ಸಿಂಗ್ ಅವರಿಂದ ಸ್ವೀಕರಿಸಿದರು. ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವಂತಹ ಕೆಲದ ಮಾಡುವ ಅಸಾಧಾರಣ ಚಿಂತಕರು ಮತ್ತು ಸಾಧಕರನ್ನು ಗುರುತಿಸಿ ದಿ ಹಿಂದೂ ಬ್ಯುಸಿನೆಸ್ ಲೈನ್ ಪತ್ರಿಕಾ ಸಂಸ್ಥೆಯು ‘ಚೇಂಜ್ ಮೇಕರ್ ಪ್ರಶಸ್ತಿ’ ಯನ್ನು ನೀಡುತ್ತದೆ.  ಪ್ರಸ್ತುತ ವರ್ಷ ಈ ಪ್ರಶಸ್ತಿಯನ್ನು 6 ವಿಭಾಗದಲ್ಲಿ 7 ಸಾಧಕರಿಗೆ ನೀಡಲಾಗಿದೆ. ಈ ಪೈಕಿ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ ದಾಸ್ ಅವರು ‘ಚೇಂಜ್ ಮೇಕರ್’ ಪ್ರಶಸ್ತಿಗೆ ಹಾಗೂ ಅಮುಲ್ ಸಂಸ್ಥೆಯ ಎಂ.ಡಿ ‘ಐಕಾನಿಕ್ ಚೇಂಜ್ ಮೇಕರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಗೆ ಒಟ್ಟು 745 ನಾಮ ನಿರ್ದೇಶನಗಳು ಬಂದಿದ್ದು, ಸೆಬಿ ಮಾಜಿ ಅಧ್ಯಕ್ಷ ಎಂ. ದಾಮೋದರನ್ ನೇತೃತ್ವದ ತೀರ್ಪುಗಾರರ ತಂಡ ಅಂತಿಮ ಸ್ಪರ್ಧಿಗಳನ್ನು ಆರಿಸಿದೆ. 21 ವರ್ಷದ ಶ್ರೀನಿಧಿ ಆರ್.ಎಸ್. ಅವರ ಚೆರ್ರಿ ಲರ್ನ್ ಎಂಬ ಎಜ್ಯುಕೇಶನ್‌ ಆ್ಯಪ್‌ ಮಕ್ಕಳಿಗೆ ಪಾಠವನ್ನು ಆಟದ ರೀತಿಯಲ್ಲಿ ಕಲಿಯ ಬಹುದಾದ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ. 1 ರಿಂದ 5 ನೇ ತರಗತಿಯ ಮಕ್ಕಳಿಗೆ ಕ್ಲಿಷ್ಠಕರವಾದ ವಿಷಯಗಳನ್ನು ಆಟದ ಮೂಲಕವೇ ಚೆರ್ರಿ ಲರ್ನ್ ಸಹಾಯದಿಂದ ಕಲಿಯ ಬಹುದಾಗಿದೆ. ದಿನಕ್ಕೆ ಕೇವಲ 1 ರೂಪಾಯಿಯಲ್ಲಿ ಇದರ ಪ್ರಯೋಜನವನ್ನು ಮಕ್ಕಳು ಪಡೆದು ಕೊಳ್ಳಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಮೇಲೆ ಈ ಆ್ಯಪ್ ಕೇಂದ್ರೀಕೃತವಾಗಿದೆ. ಪ್ರಸ್ತುತ ಭಾರತದಾದ್ಯಂತ ಸುಮಾರು ಒಂದು ಲಕ್ಷ ಮಕ್ಕಳು ಚೆರ್ರಿ ಲರ್ನ್ ಜತೆಗೆ ತಮ್ಮ ಕಲಿಕೆಯನ್ನು ಆನಂದಿಸುತ್ತಿದ್ದಾರೆ. ಇದರಲ್ಲಿ ಶೇ. 70 ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರು. ಶೇ. 50 ರಷ್ಟು ಅಧ್ಯಯನ ಮಾಧ್ಯಮ ಕನ್ನಡವಾಗಿದೆ. ಪ್ರೌಢ ಶಾಲಾ ಮಕ್ಕಳಿಗೆ ಡಿಜಿಟಲ್ ಕಲಿಕೆಯ ಅವಕಾಶ ಹೇರಳವಾಗಿದ್ದು, ಪ್ರಾಥಮಿಕ ಶಿಕ್ಷಣಕ್ಕೂ ಈ ಅವಕಾಶ ಸಿಗ ಬೇಕೆಂಬುದು ಶ್ರೀನಿಧಿ ಅವರ ಮುಖ್ಯ ಉದ್ದೇಶವಾಗಿದೆ. ಚೆರ್ರಿಲರ್ನ್ ನಲ್ಲಿ ಸಿ.ಬಿ.ಎಸ್.ಇ ಪಠ್ಯಕ್ರಮವನ್ನೂ ಅಳವಡಿಸಲಾಗಿದೆ. 2025 ರ ವೇಳೆಗೆ 5 ದಶ ಲಕ್ಷ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ಚೆರ್ರಿ ಲರ್ನ್ ನ ಗುರಿಯಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಶ್ರೀನಿಧಿ ಆರ್.ಎಸ್, ಮಾತನಾಡಿ ‘ಯಂಗ್ ಚೇಂಜ್ ಮೇಕರ್’ ಪ್ರಶಸ್ತಿ ಸ್ವೀಕರಿಸುವಾಗ ನನ್ನ ಈ ಪಯಣದಲ್ಲಿ ಜತೆಯಾದ, ನನ್ನನ್ನು ಬೆಂಬಲಿಸಿದ ಎಲ್ಲಾ ಜನರನ್ನೂ ನೆನಪಿಸಿಕೊಳ್ಳಲು ಬಯಸುತ್ತೇನೆ. ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಈ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಯುವ ಜನರಿಗೆ ವಿದ್ಯೆ ಹಾಗೂ ವಿವಿಧ ಕೌಶಲ್ಯಗಳನ್ನು ಕಲಿಸುವುದು ಅವಶ್ಯ.ಈ ನಿಟ್ಟಿನಲ್ಲಿ ನಾವು ಸಣ್ಣ ಪ್ರಯತ್ನ ಒಂದರಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!

Published

on

ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.


ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BELTHANGADY

ದ.ಕ ದಲ್ಲಿ ಭಾರಿ ಮಳೆ: ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿದ್ದ ಅಂಗಡಿಗಳಿಗೆ ಹಾನಿ..!!

Published

on

ಧರ್ಮಸ್ಥಳ: ಧರ್ಮಸ್ಥಳದಲ್ಲಿ 3ನೇ ದಿನದ ಲಕ್ಷ ದೀಪೋತ್ಸವದ ವೈಭವ ಒಂದು ಕಡೆಯಾದರೆ, ಇನ್ನೊಂದೆಡೆ ಗುಡುಗು ಸಹಿತ ಬಾರಿ ಮಳೆ ಅವಾಂತರ ತಂದಿದೆ.

ಕೆಲವು ಅಂಗಡಿಗಳಿಗೆ ಬಹಳ ಹಾನಿ ಆಗಿದೆ. ಮಳೆ ಅಂಗಡಿ ಮಾಲೀಕರಿಗೆ ನಷ್ಟವನ್ನುಂಟು ಮಾಡಿದೆ. ಮಳೆಗೆ ಅಂಗಡಿಯೊಳಗಿದ್ದ ಕೆಲವು ವಸ್ತುಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಧರ್ಮಸ್ಥಳ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನಕ್ಕೆ ಬಹಳ ಸಮಸ್ಯೆ ಆಗಿದೆ. ಸಭಾಂಗಣದ ಬಳಿ ಹಾಕಿದ್ದ ಕುರ್ಚಿಗಳು ಒದ್ದೆಯಾಗಿದೆ.

Continue Reading

DAKSHINA KANNADA

Putturu: ಮುಸ್ಲಿಂ ವಿದ್ಯಾರ್ಥಿ ಜೋಡಿಗಳ ಮೇಲೆ ಹಲ್ಲೆ..!!

Published

on

ಪುತ್ತೂರು: ಮುಸ್ಲಿಂ ವಿದ್ಯಾರ್ಥಿಗಳ ಜೋಡಿಯನ್ನು ತಡೆ ಹಿಡಿದು ಹಲ್ಲೆಗೆ ಯತ್ನಿಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಜಾರು ಎಂಬಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆಯು ಕೆಲವು ವಾರಗಳ ಹಿಂದೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ವಿದ್ಯಾರ್ಥಿ ಜೋಡಿಯನ್ನು ತಡೆದ ಮುಸ್ಲಿಂ ಸಮುದಾಯದವರೇ ಅವರ ಮೇಲೆ  ಹಲ್ಲೆ ನಡೆಸಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Continue Reading

LATEST NEWS

Trending