Connect with us

LATEST NEWS

ಅಕ್ರಮ ಗೋಹತ್ಯೆ ತಡೆಗೆ ಕರ್ನಾಟಕದಲ್ಲಿ ಯೋಗಿ ಮಾಡೆಲ್-ಕರ್ನಾಟಕದಲ್ಲಿ ಜಾರಿ

Published

on

ಚಿಕ್ಕಮಗಳೂರು: ಗೋಮಾಂಸ ಮಾರಾಟ ಮಾಡುತ್ತಿದ್ದ ಗೋಹಂತಕರ ಪ್ರದೇಶದಲ್ಲಿ ಯೋಗಿ ಮಾಡೆಲ್‌ ರೀತಿಯಲ್ಲಿ ಮೂಲಭೂತ ಸೌಕರ್ಯಗಳ ಕಟ್ ಮಾಡಿ ಗೋ ಹಂತಕರಿಗೆ ನಡುಕ ಹುಟ್ಟಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.


ಇಲ್ಲಿ ನಗರಸಭೆ ಅಧಿಕಾರಿಗಳು ನಿರಂತರ ದಾಳಿ ನಡೆವೆಯೂ ಗೋ‌ಮಾಂಸ ಮಾರಾಟ ಮುಂದುವರೆದಿದೆ. ಗೋ‌ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ‌ ವಿರುದ್ಧ ಕ್ರಮಕ್ಕೆ ನಗರಸಭೆ ಅಧಿಕಾರಿಗಳು ಹೊಸ‌ ಪ್ಲಾನ್ ಮಾಡಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಮಲೆನಾಡು ಪ್ರದೇಶವಾಗಿದ್ದರಿಂದ ಅಲ್ಲಿ ಬೀಡಾಡಿ ಹಸುಗಳು ಸೇರಿದಂತೆ ಮಲೆನಾಡು ವಿಶೇಷ ತಳಿಯ ಹಸುಗಳು ಹೆಚ್ಚು.

ಇದನ್ನೇ ಬಂಡವಾಳ ಮಾಡಿಕೊಂಡ ಗೋಮಾಂಸ ದಂಧೆಕೋರರು ಸರ್ಕಾರ ಹಾಗೂ ಪೊಲೀಸರಿಗೆ ಸೆಡ್ಡು ಹೊಡೆದಿದ್ದರು. ಆದರೆ ಕಳೆದ ನಾಲ್ಕು ತಿಂಗಳಿಂದ ನಗರಸಭೆ ಹಾಗೂ ಪೊಲೀಸರು ದಂಧೆಕೋರರ ಉಸಿರುಗಟ್ಟಿಸಿದ್ದಾರೆ.

ಎಷ್ಟರ ಮಟ್ಟಿಗೆ ಅಂದರೇ ಗೋಮಾಂಸ ದಂಧೆ ನಡೆಸಿದರೆ ಅವರ ಮನೆ, ಆಸ್ತಿ, ಕರೆಂಟ್ ವಾಟರ್ ಎಲ್ಲವೂ ಜಪ್ತಿ. ಎಸ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ದಂಧೆಕೋರರ ಎದೆಯಲ್ಲಿ ನಡುಕ ಹುಟ್ಟಿಸಿರುವ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡುವ ಮೂಲಕ ಆಸ್ತಿ ಮುಟ್ಟುಗೊಲು ಹಾಕಿದ್ದಾರೆ. ಅಷ್ಟೇ ಅಲ್ಲ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ಅಲ್ಲಿನ ನಗರ ಸಭೆಯು ಈ ಬಗ್ಗೆ ವಿಶೇಷವಾಗಿ ಗಮನವಹಿಸಿದ್ದು ಈ ಹಿಂದೆ ಮೂರಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಕೇಂದ್ರಗಳ ಮೇಲೆ ಬುಲ್ಡೋಜರ್ ಪ್ರಯೋಗ ಕೂಡ ಮಾಡಿದ್ದರು. ಜೊತೆಗೆ 20ಕ್ಕೂ ಹೆಚ್ಚು ಅಕ್ರಮ ಗೋಹತ್ಯೆ ಮನೆಗಳ ಮೇಲೆ ದಾಳಿ ಮಾಡಿ ಮನೆಯ ಗೋಡೆಗಳಿಗೆ ನೋಟೀಸ್ ಕೂಡ ಅಂಟಿಸಿದ್ದರು.

ಆದರೂ, ಗೋಹತ್ಯೆ ನಿಲ್ಲಿಸದ ಹಿನ್ನೆಲೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಪೊಲೀಸರು ನಗರದ ತಮಿಳು ಕಾಲೋನಿಯಲ್ಲಿ ಯಶ್ ಪಾಲ್ ಎಂಬುವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅಕ್ರಮ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ.

ಆದರೆ, ಮನೆಯ ಮಾಲೀಕ ಯಶ್ ಪಾಲ್ ನಾಪತ್ತೆಯಾಗಿರುವ ಹಿನ್ನೆಲೆ ನಗರಸಭೆ ಅಧ್ಯಕ್ಷರ ಸೂಚನೆ ಮೇರೆಗೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಿದ್ದಾರೆ.

ಮನೆಯ ನೀರಿನ ಸಂಪರ್ಕವನ್ನ ಕಡಿತಗೊಳಿಸಲು ನೀರಿನ ಸಂಪರ್ಕ ಇರಲಿಲ್ಲ. ಹಾಗಾಗಿ, ವಿದ್ಯುತ್ ಸಂಪರ್ಕವನ್ನಷ್ಟೆ ಕಡಿತಗೊಳಿಸಿದ್ದಾರೆ. ನಾಪತ್ತೆಯಾಗಿರುವ ಯಶ್ ಪಾಲ್ ಶರಣಾಗದಿದ್ದರೆ ಮನೆಯನ್ನೇ ನಗರಸಭೆ ಆಸ್ತಿ ಎಂದು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ಮದುವೆ ಆಗೋ ಹುಡುಗ ‘VD’ ತರ ಇರ್ಬೇಕು ಎಂದ ರಶ್ಮಿಕಾ ಮಂದಣ್ಣ… vd ಅಂದ್ರೆ ಯಾರು?

Published

on

FILM : ನಟಿ ರಶ್ಮಿಕಾ ಮಂದಣ್ಣ ತಾನೋ ಮದುವೆ ಆಗೋ VD ತರ ಇರ್ಬೇಕು ಎಂದು ಬರೆದುಕೊಂಡಿದ್ದಾರೆ. ಹೌದು VD ಎಂದು ಬರೆದುಕೊಂಡಿರೋ ರಶ್ಮಿಕಾ ಮಂದಣ್ಣ VD ಎಂದರೆ ಯಾರು ಎಂಬುವುದನ್ನು ರಿವೀಲ್ ಮಾಡಿಲ್ಲ. ಆದ್ರೆ ಅಭಿಮಾನಿಗಳು ಮಾತ್ರ ಅದು ‘ವಿಜಯ್ ದೇವರಕೊಂಡ’ ಎಂದು ಹೇಳಿಕೊಂಡಿದ್ದಾರೆ.

ಈ ಬರಹ ನೋಡಿದ ಮೇಲೆ ಅತೀ ಶೀಘ್ರದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗೋದಂತು ಖಚಿತ ಅನ್ನುತ್ತಿದ್ದಾರೆ ರಶ್ಮಿಕಾ, ವಿಜಯ್ ದೇವರಕೊಂಡ ಫ್ಯಾನ್ಸ್.

Continue Reading

DAKSHINA KANNADA

ಹೆಬ್ರಿ ಮಠದ ಬೆಟ್ಟು ಬಳಿ ಸಾರ್ವಜನಿಕರ ಪ್ರತಿಭಟನೆ-ಧರ್ಮಸ್ಥಳ ಕೊಲ್ಲೂರು ರಾಜ್ಯ ಹೆದ್ದಾರಿ ಬಂದ್

Published

on

ಹೆಬ್ರಿ : ಹೆಬ್ರಿ ತಾಲೂಕಿನ ಮಠದ ಬೆಟ್ಟು ಎಂಬಲ್ಲಿ ಹಾದು ಹೋಗುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಅಗಲ ಕಿರಿದಾಗಿರುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ.

ಇತ್ತೀಚಿನ ವರ್ಷದಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ಪದೇ ಪದೇ ಅಪಘಾತಗಳೂ ಕೂಡಾ ಸಂಭವಿಸ್ತಾ ಇದೆ. ಕೆಲ ದಿನಗಳ ಹಿಂದೆಯೂ ಸ್ಥಳೀಯ ದ್ವಿಚಕ್ರವಾಹನಕ್ಕೆ ಪ್ರವಾಸಿ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಯುವಕನೊಬ್ಬ ಗಂಭೀರ ಗೊಂಡಿದ್ದ. ಹೀಗಾಗಿ ಅರಣ್ಯ ಇಲಾಖೆಯೇ ರಸ್ತೆ ಅಭಿವೃದ್ದಿಗೆ ಅಡ್ಡಿ ಪಡಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯ ಇಕ್ಕೆಲೆಯಲ್ಲಿ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಹಾಗೂ ಅರಣ್ಯ ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ.

ಹೀಗಾಗಿ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪೊಲೀಸರು ಪ್ರತಿಭಟನಾಕಾರರ ಮನ ಒಲಿಸುವ ಪ್ರಯತ್ನ ನಡೆಸಿದ್ದರಾದ್ರೂ ಪ್ರಯೋಜನವಾಗಿಲ್ಲ. ಹಿರಿಯ ಅರಣ್ಯ ಅಧಿಕಾರಿಗಳು ಬರುವ ತನಕ ರಸ್ತೆ ತೆರವು ಮಾಡೋದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಕಟ್ಟಡದಿಂದ ಬಿದ್ದು ಕರ್ತವ್ಯ ನಿರತ ಪೈಂಟರ್‌ ಸಾವು

Published

on

ಮಂಗಳೂರು : ಪೈಂಟ್ ಮಾಡುವ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಬಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ಏಣಿಯನ್ನು ಬಳಸಿ ಪೈಂಟಿಂಗ್ ಮಾಡುತ್ತಿದ್ದ 26 ವರ್ಷ ಪ್ರಾಯದ ಮೋಹಿತ್ ಪೂಜಾರಿ ಮೃತ ದುರ್ದೈವಿ.

ಕುಡುಪು ಕೊಂಚಾಡಿ ನಿವಾಸಿಯಾಗಿದ್ದ ಮೋಹಿತ್ ಪೂಜಾರಿ ಶಕ್ತಿನಗರದ ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ದೀಪಕ್ ಎಂಬ ಇನ್ನೊಬ್ಬರ ಜತೆ ಮಹಡಿಯ ಹೊರಭಾಗದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಮೋಹಿತ್ ನಿಂತಿದ್ದ ಏಣಿ ಗೋಡೆಯಿಂದ ಜಾರಿದ್ದು, ಮೋಹಿತ್ ಮನೆಯ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿತ್ತಾದ್ರೂ ಈ ವೇಳೆಗಾಗಲೇ ಮೋಹಿತ್ ಇಹಲೋಕ ತ್ಯಜಿಸಿದ್ದರು. ಈ ಕುರಿತು ಮೋಹಿತ್ ಪೈಂಟಿಂಗ್ ಮಾಡುತ್ತಿದ್ದ  ಶಕ್ತಿನಗರದ ಶಿವ ಡೆಕೊರೇಟರ್ಸ್‌ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

LATEST NEWS

Trending