ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ತನ್ನ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಿದೆ.
ಪ್ರವೀಣ್ ಹತ್ಯೆಗೀಡಾವುದಕ್ಕೂ ಕೆಲವೇ ದಿನಗಳ ಹಿಂದೆ ಬೀದಿಯಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿದ್ದರು. ಈ ಕುರಿತಂತೆ ಅವರೇ ಜಾಲತಾಣದಲ್ಲಿ ಫೋಟೋ ಸಹಿತ ಮಾಹಿತಿ ಪ್ರಕಟಿಸಿದ್ದರು. ಒಂದು ಜೀವ ಉಳಿಸಿದ ಸಾರ್ಥಕತೆ ಎಂದು ಹೇಳಿಕೊಂಡಿದ್ದರು.
ಆದರೆ ಅತ್ಯಂತ ಅಕ್ಕರೆಯಿಂದ ಸಾಕಿದ್ದ ಶ್ವಾನ ಇದೀಗ ಅನ್ನದಾತನ ನೆನೆದು ಕೊರಗಿ ಮೃತಪಟ್ಟಿದೆ.
ಪ್ರವೀಣ್ ನಿಧನದ ಬಳಿಕ ಕಳೆದ ಕೆಲವು ದಿನಗಳಿಂದ ಈ ಶ್ವಾನ ಅನಾರೋಗ್ಯದಿಂದ ನರಳುತ್ತಿತ್ತು ಎನ್ನಲಾಗುತ್ತಿದೆ.
ಇದೀಗ ಆ ಶ್ವಾನ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರವೀಣ್ ನೆಟ್ಟಾರ್ ಪ್ರಾಣಿ ಪ್ರಿಯರಾಗಿದ್ದರು. ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸುವ ಗುಣ ಹೊಂದಿದ್ದರು.