Connect with us

    DAKSHINA KANNADA

    ದ.ಕ.ಜಿಲ್ಲೆಯ ನೂತನ ಎಸ್ ಪಿಯಾಗಿ ಯತೀಶ್. ಎನ್ ಅಧಿಕಾರ ಸ್ವೀಕಾರ‌‌

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಎಸ್‌ಪಿ ಯತೀಶ್ ಎನ್‌ ಅವರಿಗೆ ಗೌರವ ರಕ್ಷೆ ನೀಡುವ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಕಛೇರಿಯಲ್ಲಿ ನಿರ್ಗಮಿತ ಎಸ್‌ಪಿ ರಿಶ್ಯಂತ್ ಅವರಿಂದ ಯತೀಶ್ ಎನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ರಿಶ್ಯಂತ್ ಅವರಿಗೆ ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದು, ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಎನ್‌ ಅವರನ್ನು ದಕ್ಷಿಣ ಕನ್ನಡ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

    DAKSHINA KANNADA

    ಏನಾಶ್ಚರ್ಯ!! ನಾಗರ ಹಾವು ಕಡಿದು ಮಹಿಳೆ ಸಾ*ವು; ಅಂತ್ಯಸಂಸ್ಕಾರದ ವಿಧಿಗೆ ಬಂದು ನೀರು ಕುಡಿದು ಹೋದ ನಾಗರಹಾವು

    Published

    on

    ಮಂಜೇಶ್ವರ : ಜಗತ್ತಿನಲ್ಲಿ ಆಶ್ಚರ್ಯಕರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಮಂಜೇಶ್ವರದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಮಂಜೇಶ್ವರ ತಾಲೂಕಿನ ಕುರುಡುಪದವಿನಲ್ಲಿ ನಾಗರ ಹಾವು ಕಡಿತಕ್ಕೊಳಗಾಗಿ ಮಹಿಳೆಯೋರ್ವರು ಮೃ*ತಪಟ್ಟಿದ್ದರು. ಚೋಮು ಎಂಬವರು ಮೃ*ತಪಟ್ಟ ಮಹಿಳೆ. ಆದ್ರೆ ಇಲ್ಲಿ ಅಚ್ಚರಿಯೊಂದು ನಡೆದಿದೆ.

    ಹೌದು, ಅಂ*ತ್ಯಸಂಸ್ಕಾರದ ವಿಧಿಯ ಕೊನೆಯ ಭಾಗದಲ್ಲಿ ನೀರು ಇಡುವ ಸಂಪ್ರದಾಯ ನಡೆದಿತ್ತು. ವಿಸ್ಮಯವೆಂದರೆ, ಈ ಸಂಪ್ರದಾಯದ ಸಂದರ್ಭದಲ್ಲಿ ಆಗಮಿಸಿದ ನಾಗರ ಹಾವು ಚೊಂಬಿನಲ್ಲಿಟ್ಟಿದ್ದ ನೀರನ್ನು ಕುಡಿದು ತೆರಳಿದೆ. ಮಹಿಳೆಯ ಸಾವಿಗೆ ಕಾರಣವಾದ ನಾಗರ ಹಾವು ಆಕೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

    ಅಂತ್ಯಸಂಸ್ಕಾರದ ವಿಧಿ ಕಳೆದ ಮೇಲೆ ಮನೆ ಚಾವಡಿಯಲ್ಲಿ ನೀರು ಇಡುವ ಸಂಪ್ರದಾಯ ಇದೆ. ಅದರಂತೆ ಮನೆ ಚಾವಡಿಯಲ್ಲಿ ಬೂದಿ ಹರಡಿ ಅದರ ನಡುವಿನಲ್ಲಿ ಚೊಂಬುವೊಂದರಲ್ಲಿ ನೀರು ಇಡಲಾಗಿತ್ತು. ಮನೆ ಹಿಂಬದಿ ಬಾಗಿಲು ಭದ್ರ ಪಡಿಸಲಾಗಿತ್ತು. ಮುಂಬಾಗಿಲಿನಲ್ಲಿ ನಾಲ್ಕು ಮಂದಿ ಜನ ಮಲಗಿದ್ದರು. ಆದರೂ ನಾಗರ ಹಾವು ಬಂದು ಚೊಂಬಿನಲ್ಲಿದ್ದ ನೀರನ್ನು ಕುಡಿದು ತೆರಳಿದೆಯಂತೆ. ಹಾವು ಬಂದಿರುವುದಕ್ಕೆ ಸಾಕ್ಷಿ ಎಂಬಂತೆ ಬೂದಿ ಮೇಲೆ ಹರಡಿರುವ ಹಾವಿನ ಗುರುತನ್ನು ತೋರಿಸುತ್ತಾರೆ ಮನೆಯವರು.

    ಇದನ್ನೂ ಓದಿ :  ಭೂಮಿಗೆ ಕಾದಿದೆ ಅಪಾಯ..! ವಿಜ್ಞಾನಿಗಳಿಂದ ಅಧ್ಯಯನ

    ಇದಕ್ಕೂ ಮಿಗಿಲಾದ ವಿಷಯವೇನೆಂದರೆ, ಚೋಮು ಅವರ ಸಾವಿಗೆ ಕಾರಣವಾದ ನಾಗರ ಹಾವನ್ನು ಹಾವು ಹಿಡಿಯುವವರು ಬಂದು ಹಿಡಿದುಕೊಂಡು ಕೊಂಡೊಯ್ದಿದ್ದರು. ಹಾಗಾದರೆ ನೀರು ಕುಡಿಯಲು ಬಂದ ಹಾವು ಯಾವುದು ಎನ್ನುವುದೇ ದೊಡ್ಡ ಪ್ರಶ್ನೆ. ಅದೇನಿದ್ದರೂ, ಸರಳ ಸಜ್ಜನಿಕೆಯ ಚೋಮು ಅವರ ಸಾವಿಗೆ ಜನರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

    Continue Reading

    DAKSHINA KANNADA

    ನಿರಂತರ ಮಳೆ, ಬಟ್ಟೆ ಒಣಗುತ್ತಿಲ್ಲವೇ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

    Published

    on

    ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಎನ್ನುವಂತೆ ಸೂರ್ಯ ದರ್ಶನ ಕೊಟ್ಟರೂ ಸಹ ಕ್ಷಣಮಾತ್ರದಲ್ಲಿ ಮೋಡ ಸೂರ್ಯನನ್ನು ಆವರಿಸಿಕೊಂಡು ಬಿಡುತ್ತದೆ. ಹೀಗಾಗಿ ಬಟ್ಟೆ ಒಣಗಿಸಬೇಕು ಎನ್ನುವ ಮಹಿಳೆಯರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

     

    ಬಟ್ಟೆ ಅರ್ಧಬರ್ಧ ಒಣಗಿದರೆ ದೇಹಕ್ಕೆ ಕಡಿತ ಆರಂಭ ಆಗುತ್ತದೆ. ಹಾಗಂತ ಬಟ್ಟೆ ತೊಳೆಯದೇ ಬಿಡೋದಕ್ಕೂ ಆಗುವುದಿಲ್ಲ. ಮಳೆ ಬಂತೆಂದರೆ ಸಾಕು ಬಟ್ಟೆಗಳನ್ನು ಒಣಗಿಸಲು ಮಹಿಳೆಯರು ನಾನಾ ಸರ್ಕಸ್ ಮಾಡುತ್ತಲೇ ಇರುತ್ತಾರೆ.ಇಂತಹ ಮಹಿಳೆಯರಿಗೆ ಹೇಗೆ ಮಳೆಗಾಲದಲ್ಲಿಯೂ ಸೂರ್ಯ ಬರದೆ ಇದ್ರು ಬಟ್ಟೆಯನ್ನು ಒಣಗಿಸಬಹುದು ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿವೆ..

    1) ವಾಷಿಂಗ್ ಮಷೀನ್ ನಲ್ಲಿ ಸ್ಪಿನ್ ಮಾಡುವುದು

    ಸೂರ್ಯನ ಕಿರಣಗಳು ತಾಗದಿದ್ದರಂತೂ ಬಟ್ಟೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಮಳೆಗಾಲದಲ್ಲಿ ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಕೂಡ ಕೆಲ ಅಲರ್ಜಿ ಮತ್ತು ರೋಗಗಳು ಉಂಟಾಗುತ್ತದೆ.ಹೀಗಾಗಿ ಶೀಘ್ರ ಬಟ್ಟೆ ಒಣಗಿಸಲು ವಾಷಿಂಗ್ ಮಷೀನ್ ಬಳಕೆ ಮಾಡಬಹುದು.. ವಾಷಿಂಗ್ ಮಷೀನ್ ಗೆ ಬಟ್ಟೆಹಾಕಿ ವೇಗದ ಸ್ಪಿನ್ ಆಪ್ಷನ್ ಸೆಲೆಕ್ಟ್ ಮಾಡಿ, ಬಟ್ಟೆಯನ್ನು ವಾಶ್ ಮಾಡಲು ಹಾಕಬೇಕು..ಹೀಗೆ ಸ್ಪಿನ್ ಮಾಡಲು ಬಟ್ಟೆನ ಹಾಕುವುದರಿಂದ ಆದಷ್ಟು ಬೇಗ ಬಟ್ಟೆ ಒಣಗುವ ಸಾಧ್ಯತೆ ಇದೆ.

    2) ಟಿಶ್ಯು ಪೇಪರ್ ಬಳಕೆ ಹಾಗೂ ಬಟ್ಟೆ ಹಿಂಡುವುದು

    ಡ್ರೈಯರ್ ಇಲ್ಲದೆಯೇ ಬಟ್ಟೆಗಳನ್ನು ಒಣಗಿಸಲು ವೇಗವಾದ ಮಾರ್ಗವೆಂದರೆ ಟವೆಲ್ ಮತ್ತು ಕೆಲವು ಟಿಶ್ಯೂ ಪೇಪರ್. ನಾವು ಯಾವ ಬಟ್ಟೆಯನ್ನು ಬೇಗ ಒಣಗಿಸಬೇಕು ಎಂದು ಬಯಸುತ್ತೇವೋ ಆ ಬಟ್ಟೆಯನ್ನು ಮೊದಲು ಟವಲ್ ಮೇಲೆ ಹರಡಿ ಬಳಿಕ ಅದರ ಮೇಲೆ ಟಿಶ್ಯೂ ಪೇಪರ್ ಗಳನ್ನು ಬಳಸಿದ್ರೆ ಟಿಶ್ಯೂ ಪೇಪರ್ ನೀರನ್ನು ಹಿಂಡಿ ಕೊಳ್ಳುತ್ತೆ. ಬಳಿಕ ಬಟ್ಟೆಯನ್ನ ಸುಮಾರು ಐದು ನಿಮಿಷಗಳ ಕಾಲ ಹಿಂಡಿ ಅದನ್ನ ಒಣಗಳು ಹರಡಿದರೆ ಆದಷ್ಟು ಬೇಗ ನಮ್ಮ ಬಟ್ಟೆಗಳು ಒಣಗಲಿವೆ.

    3) ಹ್ಯಾಂಗರ್ ಬಳಸುವುದು

    ನಮ್ಮ ಬಟ್ಟೆಯನ್ನು ಒಣಗಿಸಲು ಇರುವ ಅತ್ಯಂತ ಸುಲಭವಾದ ಮಾರ್ಗ ಅಂದ್ರೆ ಹ್ಯಾಂಗರ್ ಗಳ ಬಳಕೆ. ಏರ್‌ಲರ್‌ನಲ್ಲಿ ಬಟ್ಟೆಗಳನ್ನ ನೇತು ಹಾಕುವಾಗ ಮೊದಲು ಕೆಳಭಾಗದಲ್ಲಿ ಸಣ್ಣ ಬಟ್ಟೆಗಳನ್ನು ಹಾಕಬೇಕು, ಮೇಲ್ಭಾಗದಲ್ಲಿ ದೊಡ್ಡ ಬಟ್ಟೆಗಳನ್ನು ಹಾಕಿದ್ರೆ ಗಾಳಿ ಹರಿವು ಹೆಚ್ಚಾಗಿ ಬಟ್ಟೆ ಬೇಗ ಒಣಗಲಿದೆ. ಇನ್ನು ಏರ್‌ನಲ್ಲಿ ಪೆಗ್‌ ಅಥವಾ ರಾಕ್‌ಗಳ ಬದಲಿಗೆ ಹ್ಯಾಂಗರ್‌ಗಳನ್ನು ಬಳಸುವುದರಿಂದ ಬಟ್ಟೆ ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.

    4) ಬಟ್ಟೆ ಐರನ್ ಮಾಡುವುದು

    ಬಟ್ಟೆಯನ್ನ ಸಾಮಾನ್ಯವಾಗಿ ನಾವು ಒಣಗಿದ ಮೇಲೆ ಐರನ್ ಮಾಡುತ್ತೇವೆ. ಆದ್ರೆ ಮಳೆಗಾಲದಲ್ಲಿ ಬಿಸಿಲಿಗೆ ಬಟ್ಟೆ ಒಣಗುವ ಯಾವುದೇ ಅವಕಾಶ ಇರುವುದಿಲ್ಲ. ಹಾಗಾಗಿ ನಮಗೆ ಬೇಗ ಬಟ್ಟೆ ಒಣಗಬೇಕು ಎಂದರೆ, ಬಟ್ಟೆ ಹಸಿಯಾಗಿದ್ದಾಗ ಐರನ್ ಮಾಡಿದ್ರೆ ಬಟ್ಟೆ ಬೇಗ ಒಣಗುತ್ತೆ.. ಜೊತೆಗೆ ಹಸಿವಾಸನೆ ಕೂಡ ಕಡಿಮೆಯಾಗಲಿದೆ.

    Continue Reading

    DAKSHINA KANNADA

    ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾ*ವು

    Published

    on

    ಬೆಂಗಳೂರು: ಮೊಬೈಲ್ ಪೋನ್ ಚಾರ್ಜ್ ಹಾಕಲು ಹೋದಾಗ ಕರೆಂಟ್ ಶಾ*ಕ್​​ನಿಂದ ವಿದ್ಯಾರ್ಥಿ ಸಾ*ವನ್ನಪ್ಪಿರುವ ಘಟನೆ ಮಂಜುನಾಥ್ ನಗರದ‌ ವರ್ಷಿಣಿ ಜೆಂಟ್ಸ್​ ಪಿಜಿಯಲ್ಲಿ ನಡೆದಿದೆ.

    ಬೀದರ್ ಮೂಲದ ಶ್ರೀನಿವಾಸ್ (24) ಮೃ*ತಪಟ್ಟ ವಿದ್ಯಾರ್ಥಿ. ಸಾಫ್ಟ್​​ವೇರ್ ಕೋರ್ಸ್​ ಮಾಡಲೆಂದು ಬೆಂಗಳೂರಿಗೆ ಬಂದು ಮಂಜುನಾಥ್ ನಗರದ‌ ಪಿಜಿಯಲ್ಲಿದ್ದ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ತನ್ನ ರೂಮ್​ನಲ್ಲಿ ಮೊಬೈಲ್​ ಚಾರ್ಜ್​ ಹಾಕಲು ಹೋಗಿದ್ದಾಗ ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್​​ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ವಿದ್ಯಾರ್ಥಿ ಸಾ*ವನ್ನಪ್ಪಿದ್ದಾರೆ. ಮೊಬೈಲ್ ಚಾರ್ಜಿಂಗ್ ವೈರ್ ಡ್ಯಾಮೇಜ್ ಆಗಿರುವುದು ಗೊತ್ತಾಗಿದೆ. ಸಾ*ವಿಗೆ ಇದೇ ಕಾರಣವಾಯ್ತಾ ಎನ್ನುವ ಅನುಮಾನ ವ್ಯಕ್ತಪಡಿಸಲಾಗಿದೆ.

    ರಾತ್ರಿ ಊಟದ ಸಮಯವಾಗಿದ್ದರಿಂದ ಊಟಕ್ಕೆ ಬಾ ಎಂದು ಪಕ್ಕದ ಬೆಡ್ ಯುವಕ, ಆ ವಿದ್ಯಾರ್ಥಿಯನ್ನ ಕರೆದಿದ್ದ. ಆದರೆ ಆತ ಯಾವುದೇ ಸನ್ನೆ, ಸೂಚನೆ ಮಾಡಲಿಲ್ಲ. ವಿದ್ಯಾರ್ಥಿ ಅಂಗಾತ ಬಿದ್ದಿರೋದು ನೋಡಿ ಮೈಮುಟ್ಟಿ ಕರೆಯಲು ಯುವಕ ಮುಂದಾಗಿದ್ದಾನೆ. ಆಗ ಯುವಕನಿಗೂ ಕರೆಂಟ್ ಶಾ*ಕ್ ಹೊಡೆದಿದೆ.

    ಅದೃಷ್ಟವಶಾತ್ ಯುವಕ ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ. ನಂತರ ಪಿಜಿ ಸಿಬ್ಬಂದಿ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃ*ತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending