Connect with us

    LATEST NEWS

    ಯಕ್ಷಗಾನ ಕಲಾವಿದರಾದ ಸುಣ್ಣಂಬಳ, ವಾದಿರಾಜರಿಗೆ ಮಸ್ಕತ್‌ನಲ್ಲಿ ಬಿರುದು ಪ್ರದಾನ

    Published

    on

    ಮಸ್ಕತ್/ಮಂಗಳೂರು: ಬಿರುವ ಜವನೆರ್ ಮಸ್ಕತ್ ಹಾಗೂ ಇನ್ಸ್ಪಿರೇಷನ್ ಡಿಸೈನ್ ಇವರು ಮಸ್ಕತ್ ನ ರೂಯಿಯ ಅಫಲಾಜ್ ಹೋಟೆಲ್‌ನಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸುಣ್ಣಂಬಳ ಹಾಗೂ ವಾದಿರಾಜರಿಗೆ ‘ಯಕ್ಷ ನಿಧಿ’  ಹಾಗೂ ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ” ಯಕ್ಷ ನಿಧಿ”

    ಮಸ್ಕತ್ ನಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಖ್ಯಾತ ಯಕ್ಷಗಾನ ವೇಷಧಾರಿ, ಅರ್ಥಧಾರಿ ಹಾಗೂ ಶ್ರೀ ಕಟೀಲು ಮೇಳದ ಪ್ರಭಂದಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ ” ಯಕ್ಷನಿಧಿ” ಹಾಗೂ ಖ್ಯಾತ ನಿರೂಪಕ, ಉಪನ್ಯಾಸಕ, ಯಕ್ಷಕಲಾ ವ್ಯವಸಾಯಿ, ಅರ್ಥಧಾರಿ, ಮಿಮಿಕ್ರಿ ಕಲಾ ಪ್ರವೀಣ, ಕನ್ನಡ ಪದ ಪ್ರವೀರ ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಡಾ. ವಾದಿರಾಜ ಕಲ್ಲುರಾಯ ಅವರಿಗೆ ‘ಯುವ ಸಿರಿ’ ಪ್ರಶಸ್ತಿ

    ರಕ್ತಬೀಜಾಸುರನಾಗಿ ವಿಜೃಂಭಿಸಿದ ತೆಂಕು ತಿಟ್ಟಿನ ಪ್ರಾತಿನಿಧಿಕ ವೇಷಧಾರಿ ಸುಣ್ಣಂಬಳ ಅವರನ್ನು ಆನಂದ ಸನಿಲ್, ಗಂಗಾಧರ ಪೂಜಾರಿ, ಮಿತ್ರ ಹೆರಾಜೆ, ಶಶಿಧರ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಡಾ. ಅಂಚನ್ ಸಿ ಕೆ ಅವರು ಸನ್ಮಾನಿಸಿದರು. ಬ್ರಹ್ಮ ಹಾಗೂ ಸುಗ್ರೀವ ಪಾತ್ರ ನಿರ್ವಹಿಸಿ, ಕಲಾವಿದರ ಸಂಯೋಜಕರಾಗಿ ಯಕ್ಷಯಾನದ ಸಾರಥಿಯಾಗಿ ಸಹಕರಿಸಿದ್ದ ಕಲ್ಲುರಾಯ ಅವರನ್ನು ನರೇಶ್ ಪೈ, ದಿನೇಶ್ ಪೂಜಾರಿ, ಎಸ್. ಡಿ. ಪ್ರಸಾದ್, ಸೂರ್ಯ ಕುಮಾರ್ ಸುವರ್ಣ, ಲೀಲಾಕ್ಷ ಬಿ ಕರ್ಕೇರ ಹಾಗೂ ಸುಚೇತನಾ ಅಂಚನ್ ಅವರು ಸನ್ಮಾನ ಗೈದರು.

    Read More..; ಮಸ್ಕತ್ ನಲ್ಲಿ ಮೇಳೈಸಿದ ದೇವೀ ಮಹಾತ್ಮೆ ಯಕ್ಷಗಾನ

    ನಿತಿನ್ ಹುನ್ಸೆ ಕಟ್ಟೆ ಸನ್ಮಾನ ಪತ್ರ ವಾಚನ ಮಾಡಿದರು. ಕದ್ರಿ ನವನೀತ ಶೆಟ್ಟಿ ಅವರು ಅಭಿನಂದನೆ- ನಿರೂಪಣೆ ಮಾಡಿದರು.
    ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು. ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪರಿಚಯಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

    DAKSHINA KANNADA

    ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದ ಮಂಗಳೂರಿಗರು..! ಬೃಹತ್ ಪ್ರತಿಭಟನೆ..!

    Published

    on

    ಮಂಗಳೂರು :  ಅಕ್ರಮ ಮರಳು ದಂಧೆಯ ವಿರುದ್ಧ ಮಂಗಳೂರಿನ ಜನರ ಆಕ್ರೋಶ ಮುಗಿಲು ಮುಟ್ಟಿದೆ ಅನ್ನೋದಿಕ್ಕೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಾಕ್ಷಿಯಾಗಿದೆ. ಪಾವೂರು ಉಳಿಯ, ಉಳ್ಳಾಲ ಪೊಯ್ಯೆ ಮೊದಲಾದ ದ್ವೀಪ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ.

    ಮರಳು ಮಾಫಿಯಾದಿಂದ ದ್ವೀಪಗಳು ನಾಶವಾಗುತ್ತಿದೆ ಅಂತ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹಲವಾರು ಪ್ರತಿಭಟನೆಗಳನ್ನೂ ಕೂಡಾ ನಡೆಸಲಾಗಿತ್ತು. ಆದ್ರೆ ಇದ್ಯಾವುದಕ್ಕೂ ಜಗ್ಗದ ಅಕ್ರಮ ದಂಧೆಕೋರರು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಸಿದ್ದರು. ಜಿಲ್ಲಾಡಳಿತ , ಗಣಿ ಇಲಾಖೆ ಕೂಡಾ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ರೀತಿ ವರ್ತಿಸಿತ್ತು. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಲು ಜನರೇ ಮುಂದಾಗಿದ್ದು, ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಅಕ್ರಮ ಮರಳುಗಾರಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ.

    ಈ ಹೋರಾಟ ಕೇವಲ ದ್ವೀಪ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಿಸದೆ ಜಿಲ್ಲೆಯ ಎಲ್ಲೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧದ ಹೋರಾಟವಾಗಿದೆ. ಜಿಲ್ಲಾಡಳಿತ, ಹಾಗೂ ಜಿಲ್ಲೆಯ ಎರಡೂ ಪ್ರಭಲ ರಾಜಕೀಯ ಪಕ್ಷಗಳು ಈ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನೂ ಅಕ್ರಮ ಮರಳುಗಾರಿಕೆ ನಡೆದಲ್ಲಿ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಪ್ರತಿಭಟನೆಯಲ್ಲಿ ನೀಡಲಾಗಿದೆ. ಮಂಗಳೂರು ಕ್ಯಾಥೋಲಿಕ್ ಸಭಾ, ಸಮಾನ ಮನಸ್ಕ ಸಂಘಟನೆ ಹಾಗೂ ಜಾತಿ, ಧರ್ಮ, ಪಕ್ಷಾತೀತ ನಿಲುವಿನ ಜನರ ಜೊತೆ ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

    Continue Reading

    DAKSHINA KANNADA

    300 ಕೋಟಿ ವಂಚನೆ..!ಮಥುರಾ ಕೃಷ್ಣ ದೇವಸ್ಥಾನದಲ್ಲಿದ್ದ ಆರೋಪಿಯ ಬಂಧನ..!

    Published

    on

    ಮಂಗಳೂರು/ಮುಂಬೈ : ಮಥುರಾ ಕೃಷ್ಣ ಗೋಪಾಲ ದೇವಸ್ಥಾನದ ವೃಂದಾವನದ ಮಹಾಂತ ಎಂದು ಜನರನ್ನು ವಂಚಿಸಿ 300 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಥುರಾ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಮಂಹಾಂತನ ಸೋಗಿನಲ್ಲಿದ್ದ ಆರೋಪಿ ವಿಶ್ವನಾಥ ಶಿಂಧೆಯನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದ ವಿಶ್ವನಾಥ ಶಿಂಧೆ, ಜಿಜಾವು ಮಾಸಾಹೇಬ್‌ ಮಲ್ಟಿ ಸ್ಟೇಟ್ ಬ್ಯಾಂಕ್‌ ನ ಠೇವಣಿದಾರರಿಗೆ 300 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ. ಈ ನಕಲಿ ಮಹಾಂತ ಶಿಂಧೆಗಾಗಿ ಅನೇಖ ದಿನದಿಂದ ಬೀಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮಥುರಾ ಕೃಷ್ಣ ಗೋಪಾಲ ದೇವಸ್ಥಾನದಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮಥುರಾದ ಶಿವಾಜಿನಗರ ಪೊಲೀಸರ ಸಹಾಯ ಪಡೆದ ಬೀಡ್ ಪೊಲೀಸರು ದೇವಸ್ಥಾನಕ್ಕೆ ದಾಳಿ ನಡೆಸಿದ್ದು ಈ ವೇಳೆ ಕೊಠಡಿಯೊಂದರಲ್ಲಿ ವಿಶ್ವನಾಥ ಶಿಂಧೆ ಅಡಗಿ ಕುಳಿತಿದ್ದ. ಆತ ಬಂಧನದ ಬಳಿಕ ಮಥುರಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯು ಈ ಹಿಂದೆ ಕೂಡಾ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    ಯುರೋಪ್ ದೇಶಕ್ಕೂ ಕಾಲಿಟ್ಟ ಯಕ್ಷಧ್ರುವ ಪಟ್ಲ ಫೌಂಡೇಶನ್

    Published

    on

    ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪಸರಿಸಿ ಅಲ್ಲಿನ ಜನರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾಡಿತ್ತು. ಪಟ್ಲ ಸತೀಶ್ ಸೇರಿದಂತೆ ತಂಡದ 9 ಕಲಾವಿದರು ಸುಮಾರು 75 ದಿನಗಳ ಕಾಲ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನದ ಜೊತೆ ಕಾರ್ಯಾಗಾರ ನಡೆಸಿದ್ದರು.

    ಇದೀಗ ಯಕ್ಷಧ್ರುವ ಪಟ್ಲ ಫೌಂಡೇಶನ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ಯುರೋಪ್ ದೇಶದಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದೆ. ಅಕ್ಟೋಬರ್ 3 ರಂದು ಜರ್ಮನಿಯ ಮ್ಯೂನಿಕ್ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಯೂರೋಪ್ ಘಟಕ ಉದ್ಘಾಟನೆಗೊಳ್ಳಲಿದೆ.

    ಮ್ಯೂನಿಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ರಾಜೀವ್ ಚಿತ್ಕರ್, ನಿವೃತ್ತ ಎಮಿನೆಂಟ್ ಇಂಡೋಲಜಿಯ ಪ್ರೋಫೆಸರ್ ಡಾ.ರೋಬಾರ್ಟ್, ಸನಾತನ ಅಕಾಡೆಮಿಯ ಸಂಸ್ಥಾಪಕರಾದ ಡಾ.ಅನೂಷ್ ನಾಗರಾಜ್ ಶಾಸ್ತ್ರಿ , ಸಿರಿಗನ್ನಡ ಕೂಟ ಮ್ಯೂನಿಕ್ ಇದರ ಅಧ್ಯಕ್ಷರಾದ ಶ್ರೀಧರ್ ಲಕ್ಷ್ಮಾಪುರ್, ಹಾಗೂ ರೈನ್ ಮೈನ್ ಕನ್ನಡ ಸಂಘ ಜರ್ಮನಿ ಇದರ ಅಧ್ಯಕ್ಷರಾದ ವೇದಮೂರ್ತಿ ಕುಮಾರ್ ಅವರು ಈ ಜರ್ಮನಿ ಘಟಕದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಮಕ್ಕಳ ತಂಡದಿಂದ ಮಾಯಾಮೃಗ ಎಂಬ ಕಥಾ ಪ್ರಸಂಗದ ಪ್ರದರ್ಶನ ಕೂಡಾ ಆಯೋಜಿಸಲಾಗಿದೆ. ಜೊತೆಗೆ ಯಕ್ಷಗಾನದ ಬಣ್ಣಗಾರಿಕೆ, ನೃತ್ಯ, ಹಿಮ್ಮೇಳದ ಬಗ್ಗೆ ಪ್ರಾತಿಕ್ಷಿಕೆ ಕೂಡಾ ನಡೆಸಲಾಗುವುದು.

    Continue Reading

    LATEST NEWS

    Trending