Connect with us

  LATEST NEWS

  ಮಸ್ಕತ್ ನಲ್ಲಿ ಮೇಳೈಸಿದ ದೇವೀ ಮಹಾತ್ಮೆ ಯಕ್ಷಗಾನ

  Published

  on

  ಮಸ್ಕತ್/ಮಂಗಳೂರು: 2016 ರಲ್ಲಿ ಸೇವಾ ಮನೋಭಾವದ ಸಮಾನಾಸಕ್ತದಿಂದ ಮೈದಳೆದ ಬಿರುವ ವಾಟ್ಸಾಪ್ ಗ್ರೂಪ್ ನ ಜವನೆರ್ ಸಂಘಟನೆ ಹಾಗೂ ಇವೆಂಟ್ ಸಂಸ್ಥೆ ಇನ್ಸ್ಪಿರೇಷನ್ ಡಿಸೈನ್ ನ ನೆರಳಲ್ಲಿ ಮಸ್ಕತ್ ನಲ್ಲಿ ಶ್ರೀ ಕಟೀಲು 6 ಮೇಳಗಳ ಆಯ್ದ ಕಲಾವಿದರಿಂದ ಮೇ. 31 ರಂದು ಪ್ರದರ್ಶನಗೊಂಡ ” ಶ್ರೀ ದೇವೀ ಮಹಾತ್ಮೆ” ಯಕ್ಷಗಾನವು ಅಪೂರ್ವ ಯಶಸ್ಸನ್ನು ಕಂಡಿತು.

  ಬಯಲಾಟದ ಸಂಪ್ರದಾಯಿಕ ರಂಗಸ್ಥಳ, ಸಂಘಟಕರೇ ಅಣಿಗೊಳಿಸಿದ ರಥ ಪೀಠ, ಉಯ್ಯಾಲೆ, ಪುಷ್ಪ ಅಲಂಕಾರ, ಬ್ಯಾಂಡ್ ಗರ್ನಲ್, ಹಗಲು ಬತ್ತಿ, ಸುಡುಮದ್ದು ಬಳಸದೆ ತಾಂತ್ರಿಕ ನೈಪುಣ್ಯತೆಯಿಂದ ಗೌಜಿಯ ಬಯಲಾಟ ಸಂಪನ್ನಗೊಂಡಿತು.

  ಮೂರು ದೀಪ ಬೆಳಗಿ ಉದ್ಘಾಟನೆ

  ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಪುಷ್ಪ ಅಲಂಕಾರದ ಸುಂದರ ಚಿತ್ರವನ್ನು ಚೌಕಿ ಪೂಜೆಗೆ ಅಣಿಗೊಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ” ಅಬ್ಬರ ತಾಳ ” ದೊಂದಿಗೆ ಸಭಾಂಗಣವನ್ನು ಮುಂಗಡ ಉಚಿತ ಪಾಸ್ ಪಡೆದು, ಪ್ರಸಾದ ಭೋಜನ ಸ್ವೀಕರಿಸಿ ಬರುವ ಯಕ್ಷಗಾನ ಆಸಕ್ತರಿಗೆ ಮುಕ್ತಗೊಳಿಸಲಾಯಿತು. ‘ಕೇಳಿ ಬಡಿಯುವ’ ಸಮಯದಲ್ಲಿ ಮುಕ್ಕಾಲು ಸಭಾಂಗಣ ತುಂಬಿತ್ತು.

  ಸಂಘಟಕ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ಸ್ವಾಗತಿಸಿದರು. ಅಕ್ಷತಾ ರಿಷಿಕೇಶ್ ಪ್ರಸ್ತಾವನೆ ಗೈದರು. ಶಾಂತ ರಾಮ ಅಮೀನ್ ನಾನಿಲ್, ಲೀಲಾ ಶೇಖರ್ ಸಾಲಿಯಾನ್, ಸುಚೇತನಾ ಕೆ. ಅಂಚನ್ ಹಾಗೂ ಅತಿಥಿಗಳು ಮೂರು ದೀಪಗಳನ್ನು ಏಕಕಾಲದಲ್ಲಿ ಪ್ರಜ್ವಲಿಸಿದರು.

  ಬಿರುವ ಜವಾನೆರ್‌ನ ಎಂಟು ವರ್ಷ ಗಳ ಸೇವಾಯಾನ ಹಾಗೂ ಸಂಘಟಿಸಿದ ಕಲಾ ಕಾರ್ಯಕ್ರಮ ಗಳ ಮಾಹಿತಿಯನ್ನು ಒಳಗೊಂಡ ” ಮೆಮರೀಸ್ ” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕಾಗಿ ಭಾರತದಿಂದ ಬಂದ ಮುಂಬೈಯ ಸೂರ್ಯ ಪ್ರಕಾಶ್ ಜಯಸುವರ್ಣ, ಮಿತ್ರ ಹೆರಾಜೆ, ಗಂಗಾಧರ್ ಪೂಜಾರಿ, ಅನಂದ ಸನಿಲ್, ನಮ್ಮ ಕುಡ್ಲ ಲೀಲಾಕ್ಷ ಬಿ ಕರ್ಕೇರ ಇವರನ್ನು ಓಮಾನ್ ಲಾಂಛನ ಪ್ರತಿಕೃತಿ ನೀಡಿ ಗೌರವಿಸಲಾಯಿತು.

  ಮಂಗಳೂರು ಕುದ್ರೋಳಿ ದೇವಸ್ಥಾನ ದ ಸಮೀಪ ನಿರ್ಮಾಣ ಆಗಲಿರುವ ಶ್ರೀನಾಥ್ ಹೆಬ್ಬಾರ್ ಅವರ ಲ್ಯಾಂಡ್ ಟ್ರೇಡರ್ಸ್ ನ 33 ಮಹಡಿಗಳ ” ಮಹಾಲಕ್ಷ್ಮಿ” ವಸತಿ ಸಮುಚ್ಚಯದ ಬಗ್ಗೆ ಮೋಹನ್ ದಾಸ್ ಸಾಲಿಯಾನ್ ಪಚ್ಚನಾಡಿ ಮಾಹಿತಿ ನೀಡಿದರು. ಅರ್ಥ ಶಾಸ್ತ್ರಜ್ಞ ಡಾ. ಅಂಚನ್ ಉದ್ಯಮಿ ಗಳಾದ ಸಿ. ಕೆ, ಉಮೇಶ್ ಬಂಟ್ವಾಳ್, ನರೇಶ್ ಪೈ ಶುಭ ಹಾರೈಕೆ ಮಾಡಿದರು. ಸುರೇಶ ಭಟ್, ವಾಲ್ಟರ್ ಎಮ್ ಪಿರೇರಾ, ಅಚಲ್ ಮಹಾಬಲ ಶೆಟ್ಟಿ, ದಿನೇಶ್ ಲೋಕನಾಥ್ ಪೂಜಾರಿ, ಶಿವಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.

  ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮಾರ್ಪಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.

  ಅಗರಿ ಶ್ರೀನಿವಾಸ ಭಾಗವತ ವಿರಚಿತ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಬಯಲಾಟವು ಬಲಿಪ ಪ್ರಸಾದ ಭಾಗವತ ಹಾಗೂ ದೇವೀ ಪ್ರಸಾದ ಆಳ್ವ ತಲಪಾಡಿ ಇವರು ಭಾಗವತಿಕೆಯಲ್ಲಿ ಜನರನ್ನು ಮನರಂಜಿಸಿದರು.

  ನಿತಿನ್ ಹುನ್ಸೆಕಟ್ಟೆ ಅವರು ಆಯ್ಕೆ ಮಾಡಿದ್ದ ಕಟೀಲು 6 ಮೇಳಗಳ 30 ಕಲಾವಿದರನ್ನು ಒಳಗೊಂಡ ತಂಡದ ಪ್ರಸ್ತುತಿ ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು. ಈ ವರ್ಷದ ತಿರುಗಾಟದಲ್ಲಿ ಶ್ರೀ ದೇವಿಯ ಪಾತ್ರ ನಿರ್ವಹಿಸಿದ್ದ ಮೂವರು, ನಾಲ್ವರು ರಕ್ತ ಬೀಜಾಸುರ ಮತ್ತು ಇಬ್ಬರು ಮಹಿಷಾಸುರ ಹಾಗೂ ಚಂಡ ಮುಂಡ ಪಾತ್ರ ನಿರ್ವಹಿಸುವ ನಾಲ್ವರು ಈ ಪ್ರಸಂಗದಲ್ಲಿ ವೇಷಧಾರಿಗಳಾಗಿ ಮಿಂಚಿದ್ದಾರೆ.

  ಉದ್ಯಮಿಗಳ ಮನದ ಮಾತು:

  ಒಮಾನ್ ನ ಪ್ರಸಿದ್ದ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಮಲ್ಲಾರ್ ಹಾಗೂ ದಿವಾಕರ ಶೆಟ್ಟಿ ಇವರು ಸುಮಾರು 9 ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮನದಾಳದ ಮಾತು ಹಂಚಿಕೊಂಡಿರುವ ಇವರು ಬಿರುವ ಜವನೆರ್ ಸಂಘಟನೆ ಮಸ್ಕತ್ ನಲ್ಲಿ ನಡೆಸಿದ್ದ ಎಲ್ಲಾ ಕಾರ್ಯಕ್ರಮಗಳೂ ಯಶಸ್ಸು ಕಂಡಿದೆ. ಇಂದು ಪ್ರದರ್ಶನಗೊಂಡ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಮಸ್ಕತ್ ನ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ.

  ಒಮಾನ್ ಮಸ್ಕತ್ ನ ರೂಯಿಯ ಆಫಲಾಜ್ ಹೋಟೆಲ್‌ನ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದ ಪ್ರೇಕ್ಷಕರು ಮೂಕ ವಿಸ್ಮಿತ ರಾಗಿ ಕರುನಾಡಿನ ಹೆಮ್ಮೆಯ ತೆಂಕುತಿಟ್ಟು ಯಕ್ಷಗಾನದ ಸವಿಯನ್ನು ಸವಿದಿದ್ದಾರೆ. ಸಭಾ ಕಲಾಪದಿಂದ ತೊಡಗಿ ಮಂಗಳ ಪದ್ಯ ಆದ ನಂತರ ನಡೆದ ಕಲಾವಿದರ ಗೌರವ, ಸನ್ಮಾನವನ್ನೂ ಅಸ್ಥೆಯಿಂದ ವೀಕ್ಷಿಸಿದ ವಿದೇಶದಲ್ಲಿ ನೆಲೆಸಿರುವ ಬಂಧುಗಳ ಕಲಾಸಕ್ತಿ ಕಲಾವಿದರನ್ನೂ ಭಾವುಕರನ್ನಾಗಿಸಿತು.

  LATEST NEWS

  ಏರ್ ಪೋರ್ಟ್ ಗೆ ಪ್ರಿಯಕರ ಡ್ರಾಪ್ ಮಾಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಯುವತಿ!

  Published

  on

  ಮಂಗಳೂರು : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ಅರಳಲು ಹೆಚ್ಚು ಸಮಯ ಪಡೆಯುತ್ತಿಲ್ಲ. ಜೊತೆಗೆ ಮುರಿಯಲೂ ಕೂಡ. ಸಣ್ಣದೊಂದು ಮನಸ್ತಾಪ ಸಂಬಂಧವನ್ನು ದೂರ ಮಾಡುತ್ತದೆ. ಇತ್ತೀಚೆಗೆ ಇಂತಹುದೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಗೆಳತಿಯೊಬ್ಬಳು ತನ್ನ ಪ್ರಿಯಕರನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ.


  ಫ್ಲೈಟ್ ಮಿಸ್​​ ಆಗಲು ಪ್ರಿಯಕರ ಕಾರಣ :

  ವರದಿಗಳ ಪ್ರಕಾರ, ಈ ಘಟನೆ ನಡೆದಿರುವುದು ನ್ಯೂಜಿಲೆಂಡ್ ನಲ್ಲಿ. ಪ್ರಿಯಕರ ತನ್ನನ್ನು ವಿಮಾನ ನಿಲ್ದಾಣಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಯುವತಿಯೊಬ್ಬಳು ಪ್ರಕರಣ ದಾಖಲಿಸಿದ್ದಾಳೆ. ಆತನಿಂದಾಗಿ ತನ್ನ ಫ್ಲೈಟ್ ಮಿಸ್​​ ಆಯ್ತು, ಇದಲ್ಲದೇ ಮರುದಿನ ಬೇರೆ ಫ್ಲೈಟ್ ನಲ್ಲಿ ಹೋಗಲು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಿತ್ತು ಎಂಬುದು ಯುವತಿಯ ದೂರು.

  ಪ್ರಿಯಕರನ ಮೇಲೆ ತೀವ್ರ ಕೋಪಕೊಂಡಿದ್ದ ಯುವತಿ ಆರು ವರ್ಷಗಳ ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾಳೆ. ಅಲ್ಲದೆ, ವಿಮಾನಕ್ಕಾಗಿ ಪಾವತಿಸಿದ ಹಣವನ್ನು ಆತ ನೀಡುವಂತೆ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾಳೆ.

  ಇದನ್ನೂ ಓದಿ :  ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?

  ಕೋರ್ಟ್ ಸಲಹೆ ಏನು?

  ಯುವತಿಯ ವಾದವನ್ನು ಆಲಿಸಿದ ನ್ಯಾಯಾಧೀಶ ರೆಫ್ರಿ ಕ್ರಿಶ್ಯಾ ಕೌವಿ, ಯುವತಿ ಹೇಳಿದ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಾಗ್ದಾನವನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಶಿಕ್ಷಿಸುವುದು ಅಸಾಧ್ಯ ಎಂದು ತೀರ್ಪು ನೀಡಿದ್ದಾರೆ.
  ಅಲ್ಲದೇ, ಇಂತಹ ಸಣ್ಣ ವಿಚಾರಗಳಿಗೆ ಸಂಬಂಧ ಕಡಿದುಕೊಳ್ಳುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

  Continue Reading

  LATEST NEWS

  ಸೂರಜ್ ರೇವಣ್ಣ ಪರ ದೂರು ನೀಡಿದ್ದ ಶಿವಕುಮಾರ್ ನಾಪತ್ತೆ!

  Published

  on

  ಮಂಗಳೂರು/ಹಾಸನ : ಸೂರಜ್ ರೇವಣ್ಣ ಅವರನ್ನು ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜ*ನ್ಯ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ಪ್ರಕರಣವನ್ನೂ ಸಿಐಡಿ ತನಿಖೆಗೂ ವಹಿಸಲಾಗಿದೆ.

  ಆದರೆ, ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದ್ದು, ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್​ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದಾನೆ.


  ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ ನಂತರ ಶಿವಕುಮಾರ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

  ಇದನ್ನೂ ಓದಿ : ನಾಳೆಯಿಂದ ಸಂಸತ್ ಅಧಿವೇಶನ..! ಎನ್‌ಡಿಎ ಮುಂದಿದೆ ಹಲವು ಸವಾಲು..!

  ಸಂತ್ರಸ್ತನ ವಿರುದ್ಧ ಶಿವಕುಮಾರ್​​ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹೋಗಿಯೇ ಸೂರಜ್ ರೇವಣ್ಣ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

  Continue Reading

  LATEST NEWS

  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಐಗೆ ವಹಿಸಿದ ಕೇಂದ್ರ

  Published

  on

  ಮಂಗಳೂರು/ ನವದೆಹಲಿ : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ನಡೆದಿರುವ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ಒಪ್ಪಿಸಿದೆ.


  ಈ ಮಧ್ಯೆ ಭಾನುವಾರ ( ಜೂನ್ 23 ) ದಂದು ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ಆರಂಭವಾಗಬೇಕಾಗಿತ್ತಾದ್ರೂ ಇದೀಗ ಪರೀಕ್ಷೆಯನ್ನು ಮುಂದೂಡಿರುವುದಾಗಿ ತಿಳಿಸಿದೆ. ಇದರಿಂದ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು(ಜೂ.23) ಪರೀಕ್ಷೆ ನಡೆಸಿ ಜೂನ್ 30 ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಲಾಗಿತ್ತಾದ್ರೂ, ಈಗ ಪರೀಕ್ಷೆಯನ್ನೇ ಏಕಾ ಏಕಿ ರದ್ದು ಮಾಡಿದ್ದು ಯಾಕೆ? ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

  ಇದನ್ನೂ ಓದಿ : ಸಂಸದ ಹೆಚ್ ಡಿಕೆ ನಿರ್ಧಾರಕ್ಕೆ ಬ್ರೇಕ್; ದೇವದಾರಿ ಗಣಿಗಾರಿಕೆ ತಡೆಗೆ ರಾಜ್ಯ ಸರ್ಕಾರ ಸೂಚನೆ

  ಆದ್ರೆ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

  Continue Reading

  LATEST NEWS

  Trending