Connect with us

LATEST NEWS

ಸ್ವಂತ ಮನೆಯಿಲ್ಲ…ಅರಮನೆಯಲ್ಲಿ ವಾಸ; ಯದುವೀರ್ ಒಡೆಯರ್ ಆಸ್ತಿ ವಿವರ ವೈರಲ್!

Published

on

ಮೈಸೂರು : ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ‌ ಶ್ರೀವತ್ಸರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಆಸ್ತಿ ವಿವರ:

ಯದುವೀರ್ ಒಡೆಯರ್​ ಚರಾಸ್ತಿ ಮೌಲ್ಯ 4,99,59,303 ರೂಪಾಯಿ ಇದೆ. ಸದ್ಯ ಅವರ ಬಳಿ ಕೈಯಲ್ಲಿ ಒಂದು ಲಕ್ಷ ರೂಪಾಯಿ ನಗದು ಇದೆ.ಅವರ 2 ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ಹಣ ಇದೆ. ಒಂದು ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರ್ ಹೊಂದಿದ್ದಾರೆ. ಇನ್ನು 4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ : ಪಕ್ಷ ಬಿಡಿ ಬಿಲ್ಲವರನ್ನು ಗೆಲ್ಲಿಸಿ ಎಂದ ಸತ್ಯಜಿತ್ ಸುರತ್ಕಲ್!

ಅವರ ಪತ್ನಿ ತ್ರಿಷಿಕಾ ಬಳಿ 75 ಸಾವಿರ ರೂ. ನಗದು ಇದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹೊಂದಿದ್ದಾರೆ. 90 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿಗಳಿದ್ದು, 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 1.04 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.

ಸ್ವಂತ ಮನೆಯಿಲ್ಲ….ಕೃಷಿಭೂಮಿಯಿಲ್ಲ….

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಹಾರಾಜ ಆಗಿದ್ದರೂ ಸಹ ಅವರು ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಹೊಂದಿಲ್ಲ. ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್​ನಿಂದ ಸಾಲ ಸಹ ಪಡೆದಿಲ್ಲ. ಹಾಗೇ ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ಇನ್ನು ಅವರ ವಿರುದ್ಧ ಯಾವ ಪ್ರಕರಣ ದಾಖಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

LATEST NEWS

ಶಾಲೆಗೆ 100% ಫಲಿತಾಂಶ ತಂದುಕೊಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ

Published

on

ಕೊಡಗು : ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ವಿದ್ಯಾರ್ಥಿನಿ ತಲೆ ಕತ್ತರಿಸಿ ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ. ಮೀನಾ ಹ*ತ್ಯೆಯಾದ ವಿದ್ಯಾರ್ಥಿನಿ.

ಶೇ. 100 ಫಲಿತಾಂಶ ತಂದು ಕೊಟ್ಟಿದ್ದ ವಿದ್ಯಾರ್ಥಿನಿ :

ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ತನ್ನ ಶಾಲೆಗೆ ಶೇಕಡಾ 100 ಫಲಿತಾಂಶ ತಂದು ಕೊಟ್ಟಿದ್ದಳು. ಬೆಳಗ್ಗೆಯಿಂದಲೂ ತಾನು ಪಾಸಾದ ಖುಷಿಯಲ್ಲಿ ಇದ್ದ ಮೀನಾ, ಶಾಲೆಯತ್ತ ಬಂದು ತೇರ್ಗಡೆಯಾದ ಖುಷಿಯಲ್ಲಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರಾತಕ ಹ*ತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಅಲ್ಲಿ ಫೇಲ್ ಎಂದು ತಿಳಿದು ಆತ್ಮಹತ್ಯೆ ಮಾಡಿದ ಯುವತಿ

ಮದುವೆ ರದ್ದಾದ ಹಿನ್ನೆಲೆ ಕೃತ್ಯ : 

ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು‌ ಎನ್ನಲಾಗಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ಸೋಮವಾರಪೇಟೆ ಪೊಲೀಸರಿಂದ ಅಪ್ರಾಪ್ತ ಬಾಲಕಿಯ ಎಂಗೆಜ್‌ಮೆಂಟ್ ತಡೆಯಲಾಗಿತ್ತು ಎನ್ನಲಾಗಿದೆ.

ಗುರುವಾರ ಶಾಲೆಗೆ ಹೋಗಿ ಬರುವ ವೇಳೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗಬೇಕಾಗಿದ್ದ ಯುವಕ ಹ*ತ್ಯೆ ಮಾಡಿರುವ‌ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

BELTHANGADY

ಪಂಚಭೂತಗಳಲ್ಲಿ ಲೀನವಾದ ಜನ ಮೆಚ್ಚಿದ ನಾಯಕ…!

Published

on

ಮಂಗಳೂರು : ಮೇಲ್ನೋಟಕ್ಕೆ ಕೋಪಿಷ್ಟನಂತೆ ಕಂಡರೂ ಒಳಗಡೆ ಮಗುವಿನಂತಹ ಮನಸ್ಸು…ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾದ್ರೆ ಬಡವರ ಪಾಲಿಗೆ ಇವರು ಬಂಗಾರದ ವ್ಯಕ್ತಿ. ಇದ್ದಿದ್ದು ಇದ್ದ ಹಾಗೆ ಖಡಕ್ ಆಗಿ ಮಾತನಾಡೋ ಕಾರಣ ಸಾಕಷ್ಟು ಜನರ ವಿರೋಧಿಯಾದ್ರೂ, ಒಳಗೊಳಗೆ ಅವರಿಂದಲೇ ಪ್ರೀತಿಯನ್ನು ಕೂಡಾ ಪಡಿತಾ ಇದ್ದ ಜನಪ್ರೀಯ ಜನನಾಯಕ. ಜನರನ್ನು ತನ್ನವರೆಂದೇ ಒಬ್ಬ ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸ್ತಾ ಇದ್ದ ವಸಂತ ಬಂಗೇರ ಇನ್ನು ನೆನಪು ಮಾತ್ರ…

ಸದಾ ತನ್ನ ಮಾತಿನ ಮೂಲಕವೇ ಸುದ್ದಿಯಾಗುತ್ತಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಶಾಶ್ವತವಾಗಿ ಮಾತು ಮುಗಿಸಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತನ್ನ ಕ್ಷೇತ್ರದ ಜನರ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟ ವಸಂತ ಬಂಗೇರ ನಿಜವಾಗಿಯೂ ಒಬ್ಬ ಜನನಾಯಕರಾಗಿದ್ದರು. ತನ್ನ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದ್ರೂ ಹಿಂದೂ ಮುಂದು ನೋಡದೆ ಸಹಾಯ ಮಾಡ್ತಾ ಇದ್ರು. ತನ್ನ ಕೈ ಖಾಲಿ ಮಾಡಿ ಮತ್ತೊಬ್ಬರಿಗೆ ಕೈ ಎತ್ತಿ ದಾನ ಮಾಡ್ತಾ ಇದ್ದ ವಸಂತ ಬಂಗೇರ ಇದೇ ಕಾರಣಕ್ಕೆ ಜನಾನುರಾಗಿಯಾಗಿದ್ದರು.


ಇದೀಗ ಅವರಿಲ್ಲಾ ಅನ್ನೋ ಸುದ್ದಿ ಅವರ ಅಭಿಮಾನಿಗಳನ್ನ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ತಾಲೂಕು ಕ್ರೀಡಾಂಗಣಕ್ಕೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರಿಗೆ ಅಂತಿನ ನಮನ ಸಲ್ಲಿಸಿದ್ದಾರೆ. ನೇರವಾಗಿ ನಿಷ್ಠೂರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ ತಮ್ಮ ಪರ ಧ್ವನಿಯಾಗಿದ್ದ ನಾಯಕ ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಬಡವರಿಗೆ ಅನ್ಯಾಯ ಆಗ್ತಾ ಇದೆ ಅಂತ ಗೊತ್ತಾದ್ರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ತಾ ಇದ್ದ ವಸಂತ ಬಂಗೇರ ಅವರ ಆ ಸ್ಟೈಲ್‌ ಯಾವತ್ತೂ ಮರೆಯಲು ಸಾದ್ಯವಿಲ್ಲ.


ರಾಜ್ಯ ರಾಜಕಾರಣದಲ್ಲಿ ಸರಿಸುಮಾರು 40 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಹೆಸರು ವಸಂತ ಬಂಗೇರ. ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಶಾಸಕರಾಗಿದ್ದ ವಸಂತ ಬಂಗೇರ ಕೊನೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಬಿಜೆಪಿಯಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಸಂತ ಬಂಗೇರ ಬಳಿಕ ನಡೆದ ರಾಜಕೀಯ ದ್ರುವೀಕರಣದಲ್ಲಿ ಜೆಡಿಎಸ್‌ ಮತ್ತು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಾತ್ಯಾತೀತ ನಾಯಕನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಡನಾಡಿಯಾಗಿ ರಾಜ್ಯದ ಅಪಾರ ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು. ವಿಪರ್ಯಾಸ ಅಂದ್ರೆ ರಾಜಕೀಯದ ಉತ್ತುಂಗಕ್ಕೆ ಏರಿದ್ರೂ ಸಚಿವರಾಗುವ ಅವಕಾಶ ವಸಂತ ಬಂಗೇರ ಅವರಿಗೆ ಸಿಗಲೇ ಇಲ್ಲ ಅನ್ನೋದು. 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ರೂ ವಸಂತ ಬಂಗೇರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಯಾವೊಬ್ಬ ಸಚಿವನಿಗೂ ಸಾದ್ಯವಾಗದ ಕೆಲಸವನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯ ಮೂಲಕ ಮಾಡಿಸೋ ತಾಕತ್ತು ಇದ್ದಿದ್ದು ವಸಂತ ಬಂಗೇರ ಅವರಿಗೆ ಮಾತ್ರ ಅನ್ನೋದನ್ನ ಮರೆಯುವ ಹಾಗಿಲ್ಲ.


ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಇದ್ದಿದ್ದು ಇದ್ದಹಾಗೇ ಹೇಳೋ … ಬಡವರು ಅಂದ್ರೆ ನನ್ನವರು ಎಂದು ಪ್ರೀತಿ ಮಾಡೋ ಜನ ನಾಯಕ ಇಂದು ಎಲ್ಲರ ಪ್ರೀತಿಗೆ ವಿದಾಯ ಹೇಳಿ ಮೌನವಾಗಿದ್ದಾರೆ. ” ನನ್ನನ್ನು ಆರಿಸಿದವರು ನೀವು .. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಮೋಸ ಮಾಡಿಲ್ಲ. ಹಣ ಮಾಡದೆ ಸ್ವಚ್ಚವಾಗಿ ಜನ ಸೇವೆ ಮಾಡಿದ ತೃಪ್ತಿ ಇದೆ” ಅಂತಲೇ ರಾಜಕೀಯಕ್ಕೆ ವಿದಾಯ ಹೇಳಿದ್ದ ವಸಂತ ಬಂಗೇರ ಇಂದು ಎಲ್ಲವನ್ನೂ ಬಿಟ್ಟು ತಮ್ಮ ಅಂತಿಮಯಾತ್ರೆ ಮುಗಿಸಿದ್ದಾರೆ.


ವಸಂತ ಬಂಗೇರ ಅವರ ಅಂತ್ಯಕ್ರೀಯೆ ಅವರ ಕುವೆಟ್ಟು ಕೇದೆ ಮನೆಯಲ್ಲಿ ನಡೆಸಲಾಗಿದೆ. ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತಿಮ ವಿಧಿಯನ್ನು ಪೂರೈಸಿದ್ದಾರೆ. ಪಂಚಭೂತಗಳಲ್ಲಿ ಲೀನವಾಗಿರುವ ಮಾಜಿ ಶಾಸಕ ವಸಂತ ಬಂಗೇರ ಇನ್ನು ನೆನಪು ಮಾತ್ರ. ಆದ್ರೆ ವಸಂತ ಬಂಗೇರ ಅವರು ಅವರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜನನಾಯಕರಾಗಿರುತ್ತಾರೆ.

ವಿಡಿಯೋ ನೋಡಿ : ವಸಂತ ಬಂಗೇರ ಅವರ ರಾಜಕೀಯ ಜೀವನ ಕುರಿತಾದ ಸ್ಟೋರಿ

Continue Reading

LATEST NEWS

8 ಜನರ ಆಹುತಿ ಪಡೆದ ಪಟಾಕಿ ಸ್ಪೋಟ…! 9 ಜನ ಗಂಭೀರ

Published

on

ಮಂಗಳೂರು (ಶಿವಕಾಶಿ) : ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಭೀಕರ ಸ್ಫೋಟದಿಂದ 8 ಜನರು ಇಹಲೋಕ ತ್ಯಜಿಸಿದ್ದು, 9 ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೇ9 ರ ಮದ್ಯಾಹ್ನ ಊಟದ ವಿರಾಮದಲ್ಲಿ ಈ ಸ್ಫೋಟ ನಡೆದಿರುವ ಕಾರಣ ಹಲವು ಕಾರ್ಮಿಕರು ಬದುಕಿ ಉಳಿದಿದ್ದಾರೆ.

ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಈ ಭೀಕರ ಸ್ಪೋಟ ಸಂಭವಿಸಿದೆ. ಶ್ರೀ ಸುಧರ್ಶನ್ ಫೈರ್‌ ವರ್ಕ್ಸ್‌ ಅನ್ನೋ ಫ್ಯಾಕ್ಟರಿ ಇದಾಗಿದ್ದು, ಮದ್ಯಾಹ್ನ ಊಟದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಸುಮಾರು 50 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕರು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಈ ಸ್ಫೋಟ ನಡೆದಿದೆ. ವಿಪರೀತವಾಗಿ ಏರಿದ್ದ ತಾಪಮಾನದಿಂದ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.

ವೃದುನಗರ ಜಿಲ್ಲೆಯಲ್ಲಿರುವ ಶಿವಕಾಶಿಯ ಸೆಂಗಮಲೆಪೆಟ್ಟಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಫ್ಯಾಕ್ಟರಿಯಾಗಿದೆ.  ಸ್ಫೋಟದ ತೀವ್ರತೆಗೆ 7 ಕೊಠಡಿಯ ಕಟ್ಟಡ ಸಂಪೂರ್ಣ ನೆಲಸಮವಾಗಿ ಹೋಗಿದೆ. ಇಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು ಮತ್ತು ಪಕ್ಕದಲ್ಲೇ ಅರ್ಧ ತಯಾರಿಸಿದ್ದ ಪಟಾಕಿಗಳೂ ಕೂಡಾ ಇಡಲಾಗಿತ್ತು. ಪಟಾಕಿ ತಯಾರಿಸಲು ಇಟ್ಟಿದ ಮದ್ದಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿದೆ.  8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂಭತ್ತು ಜನ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ರೆಸ್ಟ್‌ ಇದ್ದ ಕಾರಣ ಇನ್ನಷ್ಟು ಜೀವ ಹಾನಿಯಾಗುವುದು ತಪ್ಪಿದ್ದು , ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಸಮೀಪ ಕೇವಲ 17 ಜನ ಮಾತ್ರ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಪಟಾಕಿ ಸ್ಫೋಟವಾಗುತ್ತಿದ್ದಂತೆ ಸ್ಥಳದಿಂದ ಓಡಿ ರಕ್ಷಿಸಿಕೊಳ್ಳುವ ವೇಳೆ ಕಟ್ಟಡ ಉರುಳಿ ಅದರ ಅಡಿಗೆ ಬಿದ್ದು 8 ಜನ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಉಳಿದ ಕಾರ್ಮಿಕರು ಧಾವಿಸಿದ್ರೂ ಯಾರನ್ನೂ ರಕ್ಷಣೆ ಮಾಡುವ ಪರಿಸ್ಥಿತಿ ಅಲ್ಲಿ ಇರಲಿಲ್ಲ . ಹೀಗಾಗಿ ಸುಮಾರು 1 ಗಂಟೆಯ ಬಳಿಕ ಅಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಆ ವೇಳೆಗಾಗಲೇ 8 ಜನ ಮೃತ ಪಟ್ಟಿದ್ದಾರೆ.

Continue Reading

LATEST NEWS

Trending