Connect with us

    LATEST NEWS

    ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!

    Published

    on

    ಮೈಸೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಕೈ ಸೇರಿದೆ. ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಮೂರನೇ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಹೈಕಮಾಂಡ್ ಯದುವೀರ್ ಒಡೆಯರ್ ಅವರಿಗೆ ಮಣೆ ಹಾಕಿದ್ದಾರೆ.

    ಇದರಿಂದ ಸಹಜವಾಗಿಯೇ ಪ್ರತಾಪ ಸಿಂಹರಿಗೆ ನಿರಾಸೆಯಾಗಿದೆ. ಸದ್ಯ ಅವರು ಡಿವಿಜಿ ಅವರ ಸಾಲೊಂಡನ್ನು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಮಂಕುತಿಮ್ಮನ ಕಗ್ಗದ ಸಾಲನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ನೆಚ್ಚಿನ ಬರಹಗಾರ ಡಿವಿಜಿ ಎಂದು ಬರೆದು ಈ ಸಾಲನ್ನು ಪೋಸ್ಟ್ ಮಾಡಿದ್ದಾರೆ.

    ಸತ್ತೆನೆಂದೆನಬೇಡ, ಸೋತೆನೆಂದನಬೇಡ |
    ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||
    ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು |
    ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ || (592)

    ಬ್ರಹ್ಮವಸ್ತುವು ಆನಂದಪಡುವುದಕ್ಕೋಸ್ಕರ ಪ್ರಕೃತಿಯ ಮೂಲಕವಾಗಿ ಆಟವನ್ನು ನಡೆಸುತ್ತಿದೆ. ತ್ರಿಗುಣಗಳ ವ್ಯತ್ಯಾಸದಿಂದ ಸೋಲು, ಗೆಲವು ಸ್ವಾಭಾವಿಕವೇ. ಈ ಲೀಲೆ ಸತತವಾಗಿ ಕೊನೆಯಿಲ್ಲದೆ ನಡೆಯುತ್ತಿರುವುದರಿಂದ ಇಲ್ಲಿ ಒಂದು ಸಲ ಸೋಲಾಗಬಹುದು, ಇನ್ನೊಂದು ಸಲ ಗೆಲುವಾಗಬಹುದು. ಆದದ್ದರಿಂದ ಈ ತತ್ತ್ವವನ್ನು ಮನದಟ್ಟು ಮಾಡಿಕೊಂಡು, ನನ್ನ ಜೀವನ ಕೆಟ್ಟಿತು, ನಾನು ಸಾಧಿಸಬೇಕಾದದ್ದನ್ನು ಸಾಧಿಸದೆಯೇ ಸಾಯುತ್ತಿದ್ದೇನೆ, ನಾನು ಸೋತೆ. ನನ್ನ ಒಳಸತ್ಯ ಬತ್ತಿಹೋಗಿದೆ, ನಾನು ಕೆಲಸಕ್ಕೆ ಬಾರದವನಾದೆ ಎಂದು – ನಿರಾಸೆಯ ಮನೋಭಾವವನ್ನು ತಳೆಯುವುದು ತಪ್ಪು ಎನ್ನುತ್ತಾರೆ ತಿಮ್ಮಗುರು.

    ಮೃತ್ಯು ಎಂಬುದು ಒಂದು ಅಲೆಯಂತೆ, ಅಲೆ ಮೇಲೇಳುತ್ತದೆ ಮತ್ತೆ ಬೀಳುತ್ತದೆ, ಇನ್ನೊಂದು ಸಲ ಏಳುತ್ತದೆ. ಹೀಗೆ ನಮ್ಮ ಜೀವನ ಒಂದೇ ಜನ್ಮದಲ್ಲಿ ಮುಗಿದುಹೋಗುವುದಿಲ್ಲ. ಇಂದು ಬಿದ್ದ ಅಲೆ ನಾಳೆ ಏಳುತ್ತದೆ. ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
    2020ರಲ್ಲಿ ಸಿ.ಟಿ. ರವಿ ಅವರು ಕೂಡ ಇದೇ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

    4 Comments

    4 Comments

    1. ವರ್ಗೀಸ್

      17/03/2024 at 1:13 PM

      ಬಿಜೆಪಿಯವರು ಒಳ್ಳೆ ಕೆಲಸ ಮಾಡಿದ್ದಾರೆ. ಮುಂದೆ ಎಲ್ಲಾರಿಗೂ ಗೊತ್ತಾಗುತ್ತೆ

    2. Niranjan KT

      17/03/2024 at 5:35 PM

      ಕಾರ್ಯಕರ್ತ ಕಾರ್ಯಕರ್ತನಾಗಿಯೇ ಇರಬೇಕಾ???ಪ್ರತಾಪಸಿಂಹ ತಾವಾಗಿಯೇ ಕಾರ್ಯಕರ್ತರಿಗೆ ಸೀಟು ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದರೆ ತೂಕ ಜಾಸ್ತಿ ಆಗುತ್ತಿತ್ತು.ಇಷ್ಟೆಲ್ಲಾ ಅವಾಂತರ ಸೃಷ್ಟಿಸುವ ಅವಶ್ಯಕತೆ ಏನಿದೆ?
      ರಾಜ್ಯ ಮತ್ತು ದಿಲ್ಲಿ ವರಿಷ್ಠರು ಕ್ಷೇತ್ರದ ಸಮೀಕ್ಷೆ ನೆಡೆಸಿ ಪ್ರತಾಪರವರಿಗೆ ಟಿಕೇಟ್ ನಿರಾಕರಿಸಿದ್ದಾರೆ.ಪ್ರತಾಪರು ಈ ರೀತಿಯಾಗಿ ನಾಯಕರುಗಳನ್ನು ನಿಂದಿಸುವುದನ್ನು ನಿಲ್ಲಿಸಿ ವರಿಷ್ಠರ ನಿರ್ಧಾರಕ್ಕೆ ಗೌರವ ಕೊಟ್ಟರೆ ಮುಂದೆ ಅವಕಾಶ ಸಿಗಬಹುದು.ಹತ್ತು ವರ್ಷಗಳ ಕಾಲ ತಮಗೆ ಅನುವು ಮಾಡಿಕೊಟ್ಟಿದ್ದರಲ್ಲ!

    3. venkat Avanti

      17/03/2024 at 5:42 PM

      He will become CM of Karnataka in comming days

    4. Subramnya

      18/03/2024 at 11:50 AM

      Yes that is why ticket not given by yeddi He thinks CT Ravi Prathap Sinha and Kantharaj may become compitiors for his son’s

    Leave a Reply

    Your email address will not be published. Required fields are marked *

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    LATEST NEWS

    WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?

    Published

    on

    ಮಂಗಳೂರು/ಮಹಾರಾಷ್ಟ್ರ : ಬಸ್ಸಿನಲ್ಲಿ ಸೀಟಿಗಾಗಿ ಹಂಬಲಿಸೋರು ಅನೇಕ ಮಂದಿ ಇದ್ದಾರೆ. ಅದೂ ಸಿಎಂ ಕುರ್ಚಿಗಾಗಿ ನಡೆಯೋ ರಾಜಕೀಯ ಗುದ್ದಾಟಕ್ಕಿಂತಲೂ ಮಿಗಿಲು. ಬಸ್ ಬಂದು ನಿಂತಾಗ ಪರಸ್ಪರ ತಳ್ಳಾಡಿ ಸೀಟು ಹಿಡಿಯುವ ದೃಶ್ಯ ಸಾಮಾನ್ಯ. ಕೆಲವೊಮ್ಮೆ ಬಸ್ ಹತ್ತಿದವರು ತಮ್ಮರಿಗಾಗಿ ಕರ್ಚೀಫ್ ಹಾಕಿಡೋದೂ ಇದೆ. ಇನ್ನೂ ಕೆಲವರು ಸೀಟ್ ಹಿಡಿಯಲು ಕಿಟಕಿಯಿಂದಲೂ ಕರ್ಚೀಫ್ ಹಾಕೋದು, ಬ್ಯಾಗ್ ಇಡುವ ದೃಶ್ಯ ಕಾಣಲು ಸಿಗುತ್ತದೆ.
    ಆದರೆ, ಇಲ್ಲೊಬ್ಬ ಸೀಟಿಗಾಗಿ ಕಿಟಕಿಯಿಂದ ಬಸ್ ಏರಲು ಹೋಗಿ ಅವಾಂತರವಾಗಿದೆ. ಸದ್ಯ ಆ ವಿದ್ಯಾರ್ಥಿಯ ಎಡವಟ್ಟಿನ ವೀಡಿಯೋ ವೈರಲ್ ಆಗುತ್ತಿದೆ.

    ಸೀಟ್ ಗಾಗಿ ಎಡವಟ್ಟು :
    ಈ ವೈರಲ್ ದೃಶ್ಯ ನಡೆದಿರೋದು ಮಹಾರಾಷ್ಟ್ರದಲ್ಲಿ. ಅವನು ಮಾಮೂಲಿನಂತೆ ಬಾಗಿಲಿನಿಂದ ಬಸ್ ಏರಬಹುದಿತ್ತು. ಆದರೆ, ಸರ್ಕಸ್ ಮಾಡಲು ಹೋಗಿ ಎಡವಟ್ಟಾಗಿದೆ.

    ಇದನ್ನೂ ಓದಿ : ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಮಲೆನಾಡು: ಮೊಬೈಲ್ ಫುಲ್ ಚಾರ್ಜ್‌ಗೆ 60 ರೂ., ಹಾಲ್ಫ್‌ಗೆ 40 ರೂ.
    ಆ ವಿದ್ಯಾರ್ಥಿ ಕಿಟಕಿಯ ಮೂಲಕ ಬಸ್ ಏರಿದ್ದಾನೆ. ಆದರೆ, ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ.

    ರೋಹಿತ್‌ (avaliyapravasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಸೀಟ್ ಗಾಗಿ ವಿದ್ಯಾರ್ಥಿ ಕಿಟಕಿ ಏರುವ ಸರ್ಕಸ್ ಮಾಡಿದ್ದಾನೆ. ಕಿಟಕಿ ಗ್ಲಾಸ್ ಸರಿಸಿ ಒಳ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕಿಟಕಿ ಸಹಿತ ಕೆಳಗೆ ಬಿದ್ದಿದ್ದಾನೆ. ಈ ವೀಡಿಯೋವನ್ನು ಅಲ್ಲೇ ಇದ್ದ ಇನ್ನೊಂದು ಬಸ್ ನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಜುಲೈ 22 ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

    Continue Reading

    LATEST NEWS

    Trending