Connect with us

    LATEST NEWS

    Yadagiri: 10 ತಿಂಗಳ ಮಗುವಿನ ಮೇಲೆ ಕುಸಿದು ಬಿದ್ದ ಅಂಗನವಾಡಿ ಮೇಲ್ಛಾವಣಿ..!

    Published

    on

    ಅಂಗನವಾಡಿಯ ಛಾವಣಿ ಕುಸಿದು ಬಿದ್ದು, 10 ತಿಂಗಳ ಮಗುವಿಗೆ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ನಲ್ಲಿ ನಡೆದಿದೆ.

    ಯಾದಗಿರಿ: ಅಂಗನವಾಡಿಯ ಛಾವಣಿ ಕುಸಿದು ಬಿದ್ದು, 10 ತಿಂಗಳ ಮಗುವಿಗೆ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ನಲ್ಲಿ ನಡೆದಿದೆ.

    ಕೀರ್ತಿ ಎಂಬ 10 ತಿಂಗಳ ಮಗುವಿಗೆ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದ ಸಂದರ್ಭ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿದು ಬಿದ್ದಿದೆ.

    ಈ ವೇಳೆ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದಿದ್ದು, ಇದರಿಂದ ಮಗುವಿನ ತಲೆಗೆ ಗಾಯವಾಗಿದೆ.

    ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್‍ ಹಾಕಲಾಗಿದೆ.

    ಬಳಿಕ ಗಾಯಾಳು ಮಗುವನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ನೋವಿನಲ್ಲೂ ಮಗುವಿನ ಮುಗ್ಧತೆ ಕಂಡು ಬಂದಿದೆ.

    ಅಂಗನವಾಡಿಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿರುವುದು ನಿಜಕ್ಕೂ ದುರದೃಷ್ಟಕರ.

    ಅಂಗನವಾಡಿಯಲ್ಲಿ ಇದ್ದ ಉಳಿದ ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕಳಪೆ ಕಟ್ಟಡ ನಿರ್ಮಾಣವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

     

    BANTWAL

    ಬಂಟ್ವಾಳ : ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯದಂತೆ ವಧುವನ್ನು ವರಿಸಿದ ಪಂಜಾಬಿ ವರ

    Published

    on

    ಬಂಟ್ವಾಳ: ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು. ತುಳುನಾಡಿನಲ್ಲಿ ನಡೆಯುವ ಅಳಿಯ ಕಟ್ಟಿನ ಮದುವೆಯನ್ನು ಪಂಜಾಬ್ ರಾಜ್ಯದ ಕುಟುಂಬವೊಂದು ಅಪ್ಪಿಕೊಂಡು ಒಪ್ಪಿಕೊಂಡಿರುವುದು ನಿಜಕ್ಕೂ ತುಳುನಾಡಿಗೆ ಹೆಮ್ಮೆ. ಬಡಗಬೆಳ್ಳೂರು ಗ್ರಾಮದ ಪರಿಮೊಗರು ನಿವಾಸಿ ಪ್ರಕಾಶ್ ಶೆಟ್ಟಿ ಅವರ ಪ್ರಥಮ ಪುತ್ರಿ ಪುಣ್ಯ ಅವರ ವಿವಾಹವು ಪಂಜಾಬ್ ರಾಜ್ಯದ ಸಂಜೀವ ಶರ್ಮ ಎಂಬವರ ಮಗ ಉತ್ಕರ್ಷ ಅವರ ಜೊತೆ ನ.27 ರಂದು ಪಂಜಾಬ್ ಲುದಿನಾದ ಅಂಬ್ರೋಸಿಯಾ ಗ್ರ್ಯಾಂಡ್ ರೆಸಾರ್ಟ್ ನಲ್ಲಿ ಸಂಭ್ರಮದಿಂದ ನಡೆಯಿತು.

    ಉನ್ನತ ವಿದ್ಯಾಭ್ಯಾಸ ಉದ್ದೇಶದಿಂದ ಅಮೇರಿಕಾದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಪರಿಚಯವಾದ ಇವರಿಬ್ಬರ ಸ್ನೇಹ ಮುಂದೆ ಸಾಗಿ ಮದುವೆ ಎಂಬ ಮೂರಕ್ಷರದ ಗಂಟು ಕಟ್ಟುವರೆಗೂ ತಲುಪಿತು. ಅಮೇರಿಕಾದ ವರನಿಗೆ ಅಥವಾ ವಧುವಿಗೆ ತುಳುನಾಡಿನ ವರ ಅಥವಾ ವಧು ಎಂಬ ಸಂಬಂಧಗಳು ಅನೇಕ ನಡೆದಿವೆ. ಅದು ದೊಡ್ಡ ಸಂಗತಿಯಾಗದೆ ಇರಬಹುದು. ಆದರೆ ಹೊರರಾಜ್ಯವಾದ ಪಂಜಾಬ್ ನ ವರ ಬಂಟ್ವಾಳದ ಬಂಟ ಸಮುದಾಯದ ವಧುವನ್ನು ತುಳುನಾಡಿನ ಅಳಿಯ ಕಟ್ಟು ಪ್ರಕಾರದ ಮದುವೆ ಮೂಲಕ ವರಿಸಿದ್ದಾನೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.

    ಅತ್ಯಂತ ಪುರಾತನವಾದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಗೆ ಸಾಕ್ಷಿಯಾಗಿ, ಭೂಮಿ ಸಾಕ್ಷಿಯಾದ ಮದುವೆಯನ್ನು ಪಿ.ಕಿಶೋರ್ ಭಂಡಾರಿ ಬಡಗಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಕೇಶ್ ಸಾಲಿಯಾನ್ ಪಚ್ಚನಾಡಿ ಅವರು ನೆರವೇರಸಿಕೊಟ್ಟರು.

    Continue Reading

    LATEST NEWS

    ಮವ್ವಾರು ಬಾಲಕೃಷ್ಣ ಮಣಿಯಾಣಿ ಸರ್ವ ಸಮರ್ಥ ಹಾಸ್ಯಗಾರರು – ಪಟ್ಲ

    Published

    on

    “ಕಳೆದ 46 ವರ್ಷಗಳಿಂದ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ ಕಲಾ ವ್ಯವಸಾಯ ನಡೆಸುತ್ತಿರುವ ನಿಷ್ಠಾವಂತ ಯಕ್ಷಕಲೋಪಾಸಕ ಕಟೀಲು, ಆದಿ ಸುಬ್ರಮಣ್ಯ, ಪುತ್ತೂರು, ಕಾಂತಾವರ, ಮಧೂರು, ಕದ್ರಿ, ಮಂಗಳಾದೇವಿ, ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿರುವ ಶ್ರೀ ಪಾವಂಜೆ ಮೇಳದ ಪ್ರಧಾನ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರು ಸಂಘಟಕರಿಗೆ, ಸಂಚಾಲಕರಿಗೆ, ಸಹ ಕಲಾವಿದರಿಗೆ ಹೊಂದಿಕೆ ಆಗುವ ಸರ್ವಸಮರ್ಥ ಹಾಸ್ಯ ಗಾರರು ” ಎಂದು ಪಟ್ಲ ಸತೀಶ್ ಶೆಟ್ಟಿ ಭಾಗವತರು ಅಭಿನಂದಿಸಿದರು.

    ಡಿಸೆಂಬರ್ 2 ರಂದು ಕದ್ರಿ ಯಕ್ಷ ಬಳಗವು “ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ” ಪ್ರದಾನ ಕಾರ್ಯಕ್ರಮವನ್ನು ಕದ್ರಿ ದೇವಸ್ಥಾನದ ರಾಜಾoಗಣದಲ್ಲಿ, ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಸಂಯೋಜಿಸಿತ್ತು.

    ಕಾಶೀ ಮಾಣಿ, ಕುಚೇಲ,ಬಾಹುಕ, ಪಾಪಣ್ಣ, ವಿಜಯ, ಮಾಲಿನಿ ದೂತ, ಕೇಳು ಪಂಡಿತ ಮೊದಲಾದ ಪಾತ್ರ ಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಹೊಂದಿರುವ ಮವ್ವಾರು ಅವರು ಕ್ರಿಯಾಶೀಲ ರಾಜ ಹಾಸ್ಯಗಾರ ಎಂದು ಗುರುತಿಸಲ್ಪಟ್ಟಿದ್ದಾರೆ.

    ಸುಧಾಕರ ರಾವ್ ಪೇಜಾವರ ಅವರು ಹಲವು ದಶಕಗಳ ಕಾಲ ಇತಿಹಾಸ ಪ್ರಸಿದ್ದ ಕದ್ರಿ ಕಂಬಳ ಸಂಯೋಜಕರಾಗಿ, ಕದ್ರಿ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದ ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸಂಸ್ಮರಣೆಯನ್ನು ಮಾಡಿದರು.

    ಸುದೇಶ್ ಕುಮಾರ್ ರೈ, ಜಯಶೀಲ ಅಡ್ಯoತಾಯ, ತಾರಾನಾಥ್ ಶೆಟ್ಟಿ ಬೋಳಾರ, ಶಿವಪ್ರಸಾದ್ ಪ್ರಭು, ರಾಮಚಂದ್ರ ಭಟ್ ಎಲ್ಲೂರು, ನಿವೇದಿತಾ ಶೆಟ್ಟಿ, ಹರೀಶ್ ಕುಮಾರ್ ಚಿತ್ರಾಪುರ, ಕೆ.ಎಸ್. ಭಟ್ ಉಪಸ್ಥಿತರಿದ್ದರು.

    ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು.ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಸಂಯೋಜಿಸಿದರು. ನಂತರ ಪಟ್ಲ ಸತೀಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಶ್ರೀ ಪಾವಂಜೆ ಮೇಳದವರಿಂದ “ಶ್ರೀ ಶಬರಿಮಲೆ ಅಯ್ಯಪ್ಪ ” ಯಕ್ಷಗಾನ ಪ್ರದರ್ಶನ ಜರಗಿತು.

    Continue Reading

    FILM

    ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ ಅನೌನ್ಸ್; ಶಿವಾಜಿ ಮಹಾರಾಜ್ ಆಗಿ ಡಿವೈನ್ ಸ್ಟಾರ್

    Published

    on

    ಮಂಗಳೂರು/ ಬೆಂಗಳೂರು : ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರ ಮುಂದಿನ ಚಿತ್ರಗಳ ಬಗ್ಗೆ ಸಹಜವಾಗೇ ಕುತೂಹಲ ಹುಟ್ಟಿಕೊಂಡಿದೆ.  ಅಲ್ಲದೇ, ಕಾಂತಾರ ಫ್ರೀಕ್ವೆಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಟಾಲಿವುಡ್ ಅಂಗಳಕ್ಕೂ ಕಾಲಿಡುತ್ತಿರೋದು ಗೊತ್ತಿರೋ ವಿಚಾರ. ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಇದೀಗ ರಿಷಬ್ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಅವರು ಬಾಲಿವುಡ್ ಅಂಗಳಕ್ಕೆ ಹಾರಿದ್ದಾರೆ.

    ಶಿವಾಜಿ ಕಥೆಯಲ್ಲಿ ರಿಷಬ್ :

    ಡಿವೈನ್ ಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್‌ನಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಈ  ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ, ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನ ಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆ ಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

    ಇನ್ನು ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಶುಭಹಾರೈಸಿದರೆ, ಇನ್ನು ಕೆಲವರು ಬೇಸರ ವ್ಯಕ್ತ ಪಡಿಸಿದ್ದಾರೆ.  ಶಿವಾಜಿ ಬಗ್ಗೆ ಸಿನಿಮಾ ಮಾಡಿದರೆ ನಾವು ಕನ್ನಡಿಗರು ನೋಡಲ್ಲ ಎಂದು ಒಬ್ಬರು ಕಮೆಂಟ್ಸ್ ಮಾಡಿದ್ದು,  ಮತ್ತೆ ಕೆಲವರು ನಿಮ್ಮ ಮೇಲೆ ನಿರೀಕ್ಷೆ ಇಡುವುದು ತಪ್ಪು ಎಂದಿದ್ದಾರೆ.

    ಇದನ್ನೂ ಓದಿ : Hair care: ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

    ಸಿನಿಮಾ ರಿಲೀಸ್ ಯಾವಾಗ?

    ಅಂದಹಾಗೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಸಂದೀಪ್ ಸಿಂಗ್ ‘ಶಿವಾಜಿ ಮಹಾರಾಜ್’ ಸಿನಿಮಾ ಮಾಡುತ್ತಿದ್ದು, 2027ರ ಜನವರಿ 21 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿದಂತೆ ಒಟ್ಟು 6 ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಇನ್ನು ಈ ಚಿತ್ರದಲ್ಲಿ ಶಿವಾಜಿ ಮಹಾರಾಜ್ ಪತ್ನಿಯ ಪಾತ್ರದಲ್ಲಿ ಆಶಾ ಭೋಂಸ್ಲೆ ಮೊಮ್ಮಗಳು ಝಾನೈ ಭೋಂಸ್ಲೆ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

     

    Continue Reading

    LATEST NEWS

    Trending