LATEST NEWS
ಕುಸ್ತಿಪಟು ಬಜರಂಗ್ ಪೂನಿಯಾಗೆ 4 ವರ್ಷಗಳ ನಿಷೇಧ !
Published
3 hours agoon
By
NEWS DESK3ಮಂಗಳೂರು/ನವದೆಹಲಿ : 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದ ಖ್ಯಾತ ಕುಸ್ತಿ ಪಟು ಬಜರಂಗ್ ಪೂನಿಯಾ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ತನ್ನ ನಿಯಮ 2.3 ಅನ್ನು ಉಲ್ಲಂಘಿಸಿದ ನಂತರ ಉದ್ದೀಪನ ಮದ್ದು ತಡೆ ಸಂಸ್ಥೆ ಪೂನಿಯಾ ಮೇಲೆ ನಿಷೇಧ ಹೇರಿದೆ. ಇವರು ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಮಾನತ್ತಿನಿಂದಾಗಿ ಬಜರಂಗ್ ಪೂನಿಯಾ ಸ್ಪರ್ಧಾತ್ಮಕ ಕುಸ್ತಿಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ.
ಇದನ್ನೂ ಓದಿ: ಸಾವಿರ ಕೋಟಿ ಆಸ್ತಿ ಒಡೆಯನ ಮಗ ಸನ್ಯಾಸತ್ವ ಸ್ವೀಕಾರ; ಕಾರಣ ಗೊತ್ತಾ ?
ಮಾರ್ಚ್ 10ರಂದು, ಡೋಪಿಂಗ್ ವಿರೋಧಿ ಸಂಸ್ಥೆಗೆ ಡೋಪಿಂಗ್ ಪರೀಕ್ಷೆ ಮಾದರಿಯನ್ನು ನೀಡಲು ಪುನಿಯಾ ನಿರಾಕರಿಸಿದ್ದಕ್ಕಾಗಿ ಪೂನಿಯಾ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23 ರಂದು ಅಮಾನತುಗೊಳಿಸಿದ ಬಳಿಕ ಪೂನಿಯಾ ಅವರ ಮೇಲೆ ಈ ನಿರ್ಧಾರ ಪ್ರಕಟವಾಗಿದೆ. ಇದನ್ನು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಅಂಗೀಕರಿಸಿತ್ತು.
ಬಜರಂಗ್ ಪೂನಿಯಾ ತಮ್ಮ ಮೇಲೆ ಮಂಡಳಿ ಹೇರಿದ್ದ ಅಮಾನತ್ತಿನ ವಿರುದ್ದ ನಾಡಾಕ್ಕೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಕಳೆದ ಸಪ್ಟೆಂಬರ್ 20 ಹಾಗೂ ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನವೆಂಬರ್ 26 ರಂದು ಬಜರಂಗ್ ಪೂನಿಯಾ ಅವರನ್ನು 4 ವರ್ಷ ಕುಸ್ತಿಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ.
ಬಜರಂಗ್ ಪೂನಿಯಾ ಸಾಧನೆ :
ಬಜರಂಗ್ ಪೂನಿಯಾ ಅವರು 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 1 ಬೆಳ್ಳಿ, 3 ಕಂಚು ಗೆದ್ದಿದ್ದಾರೆ. ಇನ್ನು ಏಷ್ಯನ್ ಗೇಮ್ಸ್ ನಲ್ಲಿ 1 ಬಂಗಾರ ಹಾಗೂ 1 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪುನಿಯಾ 2 ಬಂಗಾರ, 1 ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ.
LATEST NEWS
ನಿಮ್ಮ ನಾಯಿಗಳನ್ನು ಪಾರ್ಕ್‌ಗೆ ಕೊಂಡೊಯ್ಯುತ್ತೀರಾ? ಹೈಕೋರ್ಟ್ ಹೊಸಮಾರ್ಗಸೂಚಿ ಗಮನಿಸಿ!
Published
18 minutes agoon
27/11/2024By
NEWS DESK4ಮಂಗಳೂರು/ಬೆಂಗಳೂರು : ನಗರ ಪ್ರದೇಶಗಳಲ್ಲಿ ಜನರು ತಮ್ಮ ಸಾಕು ನಾಯಿಗಳನ್ನು ಉದ್ಯಾನವನಗಳಿಗೆ ಕೊಂಡೊಯ್ಯೋದು ಸಾಮಾನ್ಯ ಸಂಗತಿ. ಆದರೆ, ಈಗ ಹೈಕೋರ್ಟ್ ಹೊಸಮಾರ್ಗಸೂಚಿ ಹೊರಡಿಸಿದೆ. ನಗರ ಪ್ರದೇಶಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಮಾರ್ಗ ಸೂಚಿಗಳನ್ನು ಹೈಕೋರ್ಟ್ ರಚಿಸಿದ್ದು, ಉದ್ಯಾನವನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವ ನಾಯಿಗಳ ಮಾಲಕರಿಗೆ ಹೆಚ್ಚಿನ ದಂಡ ವಿಧಿಸುವಂತೆ ಸೂಚನೆ ನೀಡಿದೆ. ಉದ್ಯಾನವನಗಳಲ್ಲಿ ಸಾಕು ನಾಯಿಗಳಿಂದ ಆಗುತ್ತಿರುವ ಮಲ ವಿಸರ್ಜನೆಗೆ ಕಡಿವಾಣ ಹಾಕುವಂತೆ ಸರಕಾರಕ್ಕೆ ಸೂಚನೆ ನೀಡ ಬೇಕೆಂದು ಕೋರಿ ಕ್ಯೂಪ ಸಂಘಟನೆ ಅಂದರೆ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಅಕ್ಷನ್ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಉದ್ಯಾನವನಗಳ ಸ್ವಚ್ಛತೆ ಕುರಿತಂತೆ ಕೆಲವು ಮಾರ್ಗಸೂಚಿಗಳನ್ನು ರಚಿಸಿ ಆದೇಶಿಸಿದೆ.
ಉದ್ಯಾನವನ ಪ್ರದೇಶ ಮತ್ತು ಅದರ ಆವರಣದಲ್ಲಿ ಉಗುಳುವುದು, ಕಸ ಬಿಸಾಕುವುದು, ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವವರನ್ನು ನಿಯಂತ್ರಿಸಿ ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದು ಮತ್ತು ಅದನ್ನು ಉಲ್ಲಂಘಿಸುವವರ ವಿರುದ್ಧ ದಂಡವನ್ನು ವಿಧಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜವಾಬ್ದಾರಿಯಾಗಿರಲಿದೆ ಎಂದು ಹೈಕೋರ್ಟ್ ಹೇಳಿದೆ. ಸಾರ್ವಜನಿಕ ಉದ್ಯಾನವನಗಳಿಗೆ ಸಾಕು ನಾಯಿಗಳನ್ನು ಕರೆತರುವ ಪೋಷಕರು ಅದು ವಿಸರ್ಜನೆ ಮಾಡುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೈ ಚೀಲಗಳನ್ನು ತೆಗೆದುಕೊಂಡು ಬರಬೇಕು ಎಂಬ ಜಾಗೃತಿ ಮೂಡಿಸ ಬೇಕಾದ ಅಗತ್ಯವಿದ್ದು, ನಾಯಿಗಳ ವಿಕೃತ ನಡೆಯಿಂದ ಉದ್ಯಾನವಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಾಗಿದೆ. ಅಲ್ಲದೆ, ಸಾರ್ವಜನಿಕ ಉದ್ಯಾನವನಗಳಲ್ಲಿ ಎಲ್ಲ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಬೇಕಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ : ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
ತೋಟಗಾರಿಕೆ ಇಲಾಖೆಯ ಒಬ್ಬ ಅಧಿಕಾರಿ ಮತ್ತು ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ತಂಡವನ್ನು ರಚಿಸಿ, ಕಾಲ ಕಾಲಕ್ಕೆ ನಗರದ ಎಲ್ಲ ಪ್ರಮುಖ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ವಚ್ಛತೆಗೆ ಸಂಬಂಧಿಸಿದಂತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಸಂಬಂಧದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.
LATEST NEWS
ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
Published
1 hour agoon
27/11/2024By
NEWS DESK3ಮಂಗಳೂರು/ಮುಂಬೈ : 2025ರ ಐಪಿಎಲ್ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ಇಡೀ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆದಿದ್ದು ಮಾತ್ರ, ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಈ ಮಹಿಳೆ.
ಇಂಡಿಯನ್ ಪ್ರೀಮಿಯರ್ ಲೀಗ್-2025ರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದಿದ್ದು, ಬಹಳ ಕುತೂಹಲ ಕೆರಳಿಸಿತ್ತು. ಕೆಲವು ಆಟಗಾರರನ್ನು ಕೋಟಿ ಬೆಲೆಯಲ್ಲಿ ತಂಡಗಳು ಖರೀದಿಸಿದರೆ, ಇನ್ನೂ ಕೆಲವು ಆಟಗಾರರು ಅನ್ ಸೋಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಈ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮಹಿಳೆ ಹೆಚ್ಚು ಗಮನ ಸಳೆದಿದ್ದಾರೆ.
ಆ ಮಹಿಳೆಯ ಹೆಸರು ಮಲ್ಲಿಕಾ ಸಾಗರ್. ಮೂಲತಃಹ ಮುಂಬೈ ಮೂಲದವರು. ಇವರು ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯು ಆಗಿದ್ದಾರೆ. ಜಗತ್ತಿನಲ್ಲೇ ಶ್ರೇಷ್ಟ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಇವರು ಸತತ ಎರಡನೇ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ಮುನ್ನಡೆಸುತ್ತಿದ್ದಾರೆ
2001ರಲ್ಲಿ ಅಂತಾರಾಷ್ಟ್ರೀಯ ಹರಾಜು ಸಂಸ್ಥೆಗಳಲ್ಲಿ ಒಂದಾದ ಕ್ರಿಸ್ಟಿಸ್ ನಲ್ಲಿ ಮಲ್ಲಿಕಾ ಸಾಗರ್ ತಮ್ಮ ವೃತ್ತಿಜೀವವನ್ನು ಪ್ರಾರಂಭಿಸಿದರು. ಭಾರತೀಯ ಮೂಲದ ಮೊದಲ ಹರಾಜುಗಾರ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಕ್ರಿಕೆಟ್ ಆಟಗಾರ ಸೂರ್ಯಕುಮಾರ್ ಯಾದವ್ ಲವ್ ಸ್ಟೋರಿ ಗೊತ್ತಾ ??
ಹಲವಾರು ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆಸಿದ ಅನುಭವವನ್ನು ಹೊಂದಿದ್ದಾರೆ. 2021ರ ಪ್ರೊ ಕಬ್ಬಡಿ ಲೀಗ್ ಆಟಗಾರರ ಹರಾಜಿಗೆ ಮಲ್ಲಿಕಾ ಸಾಗರ್ ಹರಾಜು ವ್ಯವಸ್ಥಾಪಕರಾಗಿದ್ದರು.
ರಿಚರ್ಡ್ ಮ್ಯಾಡ್ಲಿ ಮತ್ತು ಎಡ್ಮೀಡ್ಸ್ ಐಪಿಎಲ್ ಹರಾಜುಗಳಲ್ಲಿ ಹೆಸರುಗಳಿಸಿದ್ದಾರೆ. 2023ರ ಟಿ-20 ಲೀಗ್ ಹರಾಜನ್ನು ನಡೆಸಿಕೊಡುವ ಮೂಲಕ ಈ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮೊದಲ ಭಾರತೀಯ ಹರಾಜುಗಾರ್ತಿ ಎಂಬ ಇತಿಹಾಸವನ್ನು ಮಲ್ಲಿಕಾ ಸಾಗರ್ ನಿರ್ಮಿಸಿದ್ದಾರೆ.
LATEST NEWS
ಎಟಿಎಂ ಹೊತ್ತೊಯ್ದರೂ ಸಿಗದ ಹಣ; ನೀಲಗಿರಿ ತೋಪಿನಲ್ಲಿ ಯಂತ್ರ ಬಿಟ್ಟು ಪರಾರಿಯಾದ ಖದೀಮರು
Published
2 hours agoon
27/11/2024By
NEWS DESK4ಮಂಗಳೂರು/ಬೆಂಗಳೂರು : ಎಟಿಎಂನಿಂದ ಹಣ ದೋಚಲು ಯತ್ನಿಸಿ ವಿಫಲವಾದ ಖದೀಮರು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಘಟನೆ ಬೆಂಗಳೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ. ಬ್ಯಾಂಕಿನ ಎಟಿಎಂಗೆ ಬಂದಿದ್ದ ಇಬ್ಬರು ಕಳ್ಳರು, ಎಟಿಎಂನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದೆ ಹೋದಾಗ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿದ್ದಾರೆ. ಇದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಯಂತ್ರ ಬಿಟ್ಟು ಪರಾರಿ:
ಯಂತ್ರ ಹೊತ್ತೊಯ್ದಿದ್ದ ಕಳ್ಳರು ಜನ ಸಂಚಾರ ಕಡಿಮೆಯಿದ್ದ ಮಂಚನಹಳ್ಳಿ ಸಮೀಪದ ನೀಲಗಿರಿ ತೋಪಿಗೆ ಬಂದಿದ್ದಾರೆ. ಆಕ್ಸಲ್ ಬ್ಲೇಡ್ ಬಳಸಿ ಯಂತ್ರ ತುಂಡರಿಸಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ, ಅದು ವಿಫಲವಾಗಿದೆ.
ಇದನ್ನೂ ಓದಿ : 15 ವರ್ಷದ ಲವ್; ಬಾಯ್‌ಫ್ರೆಂಡ್ ಜೊತೆ ಕೀರ್ತಿ ಸುರೇಶ್ ಫೋಟೋ ವೈರಲ್ !!
ಜನಸಂಚಾರ ಆರಂಭವಾಗುತ್ತಿದ್ದ ಭಯಗೊಂಡ ದುಷ್ಕರ್ಮಿಗಳು ಯಂತ್ರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಎಟಿಎಂ ಯಂತ್ರದಲ್ಲಿ 10 ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ ಅತ್ತಿಬೆಲೆ ಪೊಲೀಸರು.
LATEST NEWS
ಬೆಚ್ಚಿ ಬೀಳಿಸಿದ ಯುವತಿ ಕೊ*ಲೆ ಪ್ರಕರಣ; ಪ್ರೇಯಸಿಯ ಶ*ವದೊಂದಿಗೆ ಒಂದು ದಿನ ಕಳೆದಿದ್ದ ಯುವಕ!
ಟ್ರಕ್ಗೆ ಸ್ಕಾರ್ಪಿಯೊ ಡಿ*ಕ್ಕಿ – ಭೀಕರ ಅಪಘಾ*ತಕ್ಕೆ ಐವರು ವೈದ್ಯರ ದುರ್ಮ*ರಣ
ಕುಸ್ತಿಪಟು ಬಜರಂಗ್ ಪೂನಿಯಾಗೆ 4 ವರ್ಷಗಳ ನಿಷೇಧ !
ರೈತನ ಸೋಗಿನಲ್ಲಿ ಬಂದು ದಾಳಿಂಬೆ ಖರೀದಿ – 6.5 ಲಕ್ಷ ಪಂಗನಾಮ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಸೀತಾರಾಮ ಸೀರಿಯಲ್ ವೀಕ್ಷಕರಿಗೆ ಶಾಕಿಂಗ್ ನ್ಯೂಸ್; ಎಲ್ಲ ಸರಿ ಅನ್ನುವಷ್ಟರಲ್ಲೇ ಮತ್ತೊಂದು ಆಘಾತ
Trending
- LATEST NEWS7 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru5 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION6 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS4 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!