ಪ್ರಯಾಣಿಕನ ಚಪ್ಪಲಿಯಲ್ಲಿ ಪತ್ತೆಯಾಯಿತು 12ಲ ಮೌಲ್ಯದ ಚಿನ್ನ:ಚೆನ್ನೈಕಸ್ಟಮ್ಸ್ ನಿಂದ ಕಾರ್ಯಾಚರಣೆ..!
ಚೆನ್ನೈ:ಅಕ್ರಮ ವಸ್ತುಗಳನ್ನ ಸಾಗಾಟ ಮಾಡುವ ಕಳ್ಳರು ಹೊಸ ಹೊಸ ಐಡಿಯಾಗಳನ್ನ ಹುಡುಕುತ್ತಿದ್ದಾರೆ.ಅದರಂತೆ ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು ಚಪ್ಪಲಿಯಲ್ಲಿ ಚಿನ್ನವನ್ನ ಇಟ್ಟು ಸಾಗಾಟ ಮಾಡ್ತಿದ್ದ ಪ್ರಯಾಣಿಕನನ್ನ ಬಂಧಿಸಿದ್ದಾರೆ.
ಮೊಹಮ್ಮದ್ ಹಸನ್ ಅಲಿ ಅನ್ನೋ ವ್ಯಕ್ತಿಯನ್ನ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ದುಬೈನಿಂದ ಚಿನ್ನವನ್ನ ತನ್ನ ಚಪ್ಪಲಿಯಲ್ಲಿ ಮರೆಮಾಚಿಕೊಂಡು ಬಂದಿರೋದು ತಪಾಸಣೆಯಲ್ಲಿ ಗೊತ್ತಾಗಿದೆ.ತಪಾಸಣೆ ವೇಳೆ ಆತ ಧರಿಸಿದ್ದ ಲೆದರ್ ಚಪ್ಪಲಿಗಳು ತುಂಬಾ ಭಾರವಾಗಿದ್ದವು. ಅಲ್ಲದೇ ವಿಶೇಷವಾಗಿ ಡಿಸೈನ್ ಮಾಡಿರೋದು ಕೂಡ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ.
ಚಪ್ಪಲಿಯ ಮೇಲ್ಭಾಗದ ಬಾರಿನಲ್ಲಿ ಜಿಪ್ ಹೊಂದಿದ್ದ ಖಾನೆಗಳು ಇದ್ದವು. ಅದರೊಳಗೆ ತಪಾಸಣೆ ನಡೆಸಿದಾಗ ಬಂಗಾರದ ಪೆಸ್ಟ್ಗಳು ಇದ್ದವು.
ಎರಡೂ ಚಪ್ಪಲಿಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಗೋಲ್ಡ್ ಪೇಸ್ಟ್ ಪ್ಯಾಕೆಟ್ಗಳು ಇದ್ದವು. ಅವುಗಳ ತೂಕ 292 ಗ್ರಾಮ ಇವೆ. ಅವುಗಳ ಮೌಲ್ಯ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.