ವಿಟ್ಲ ಸುಳ್ಳು ಗಡಿಗುರುತು ಜೆಸಿಬಿ ಮೂಲಕ ಬೇಲಿ ನಾಶ:ಸರ್ವೇಯರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು:!
ಬಂಟ್ವಾಳ: ಬರಿಮಾರು ಗ್ರಾಮದಲ್ಲಿ ತನ್ನ ಸುಪರ್ದಿಗೆ ಸೇರಿದ ವ್ಯಾಪ್ತಿಯಲ್ಲಿ ಬೇರೊಂದು ವ್ಯಕ್ತಿಗೆ ಸೇರಿದ್ದ ಜಾಗದ ಬೇಲಿಯ ಆವರಣನಾಶಕ್ಕೆ ಸರ್ವೇಯರೊಬ್ಬರು ಕಾರಣರಾಗಿದ್ದಾರೆ.
.
ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಜಾಗದ ಮಾಲಕ ಎವರೆಸ್ಟ್ ಪಿಂಟೋ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಬಂಟ್ವಾಳ ತಹಶಿಲ್ದಾರ್ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಸರ್ವೇಯರ್ ಮಂಜೇಗೌಡ ಎಲ್.ಪಿ ಅವರು ತನಗೆ ಸಂಬಂಧಿಸಿದ ಸರ್ವೇ ನಂಬರ್ ನಮೂದಿಸಿ ಡಿಸೆಂಬರ್ 1ರಂದು ಸರ್ವೇ ಮಾಡುವುದಾಗಿ ಅರ್ಜಿದಾರರಿಂದ ಹಣ ಪಡೆದು ತನಗೆ ನೋಟೀಸ್ ನೀಡಿದ್ದರು.
ಬಳಿಕ ಸರ್ವೆ ಮಾಡದೆ ತನ್ನಜಾಗದಲ್ಲಿ ಅರ್ಜಿದಾರ ವಾಲ್ಟರ್ ಮಸ್ಕರೇನ್ಹಸ್ ರಿಗೆ ಜಾಗವಿದೆ ಎಂದು ಗಡಿಗುರುತು ಹಾಕಿದ್ದಾರೆ. ನಂತರ ತನ್ನ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಡಿಸೆಂಬರ್ ಒಂದರಂದು ಸರ್ವೇ ಮಾಡುವುದಾಗಿ ಅರ್ಜಿದಾರರಿಂದ ಹಣ ಪಡೆದು ತನ್ನ ಜಾಗದ ಬೇಲಿಯನ್ನು ನಾಶಪಡಿಸಿದ್ದಾರೆ.ಇದರಿಂದ ತನಗೆ ಸುಮಾರು 1ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ. ಎವರೆಸ್ಟ್ ಪಿಂಟೋ ಸರ್ವೇಯರ್ ವಿರುದ್ದ ದೂರು ನೀಡಿದ್ದಾರೆ.