Connect with us

     ಕಾಣದ ಕೈ ಗಳ ಕೆಲಸ :ವರ್ಗಾವಣೆಯಾದರೂ ಸೋಮೇಶ್ವರ ಪುರಸಭೆ ಬಿಡಲು ಒಲ್ಲದ ಮುಖ್ಯಾಧಿಕಾರಿ ವಾಣಿ ಆಳ್ವ..!

    Published

    on

     ಕಾಣದ ಕೈ ಗಳ ಕೆಲಸ :ವರ್ಗಾವಣೆಯಾದರೂ ಸೋಮೇಶ್ವರ ಪುರಸಭೆ ಬಿಡಲು ಒಲ್ಲದ ಮುಖ್ಯಾಧಿಕಾರಿ ವಾಣಿ ಆಳ್ವ..!

    ಮಂಗಳೂರು: ಮಂಗಳೂರಿನ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿರುವ ವಾಣಿ ಆಳ್ವ ರವರಿಗೆ ಸೋಮೇಶ್ವರ ಪುರಸಭೆಯಿಂದ ಹುಣಸೂರಿಗೆ ವರ್ಗಾವಣೆಯಾಗಲು ಸರಕಾರದ ಆದೇಶ ಪ್ರತಿ ಬಂದು ತಿಂಗಳಾಗಿದೆ, ಆದರೆ ವಾಣಿ ಆಳ್ವ ರವರು ಸರಕಾರದ ಆದೇಶ ಧಿಕ್ಕರಿಸಿ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. 

    ಕೆ.ಎ.ಎಸ್ ಅಧಿಕಾರಿಯಲ್ಲದಿದ್ದರೂ ಸಮುದಾಯ ಸಂಘಟಾನಾಧಿಕಾರಿಯಾಗಿದ್ದ ವಾಣಿ ವಿ ಆಳ್ವ ಅವರು ಈ ಹಿಂದೆ ಉಳ್ಳಾಲ ನಗರಸಭೆಯ ಪೌರಾಯುಕ್ತೆಯಾಗಿ ಸುಮಾರು ಎರಡೂವರೆ ವರುಷ ಅಧಿಕಾರ ನಡೆಸಿದ್ದರು.

    ನಂತರ ಸೋಮೇಶ್ವರ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

    ಇದೀಗ ಸೋಮೇಶ್ವರದಿಂದ ಮೈಸೂರಿನ ಹುಣಸೂರು ನಗರಸಭೆಗೆ ವರ್ಗಾವಣೆಯ ಆದೇಶವಾಗಿದೆ. ಆದರೆ ವಾಣಿ ಆಳ್ವ ಮಾತ್ರ ಸೋಮೇಶ್ವರ ಪುರಸಭೆ ಬಿಟ್ಟು ಹೋಗಲು ಮನಸ್ಸೇ ಒಪ್ಪುತ್ತಿಲ್ಲವಂತೆ..!

    ಇದರ ಹಿಂದೆ ಕೆಲ ಕಾಣುವ ಮತ್ತು ಕಾಣದ ಕೈ ಗಳು ಕೆಲಸ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ವರ್ಗಾವಣೆಗೊಂಡಿರುವ ವಾಣಿ ಅವರು ಸೋಮೇಶ್ವರ ಪುರಸಭೆಯ ಮುಂದಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ತರಾತುರಿಯಲ್ಲಿ ತಯಾರಿಸಿ ಕೆಲವು ಕಡತ ವಿಲೇವಾರಿ ಮಾಡುತ್ತಿದ್ದಾರೆ. ಈ ವಿದ್ಯಮಾನಗಳ ಬೆನ್ನಲೇ ಇವರಿಗೆ ಮುಲ್ಕಿ ಸಮುದಾಯ ಸಂಘಟಕರಾಗಿ ಸ್ಥಾನ ಏರಲು ಸರಕಾರದ ಆದೇಶ ಬಂದಿರುತ್ತದೆ.

    ಆದರೆ ಸಮುದಾಯ ಸಂಘಟಕರಾಗಿ ಅಧಿಕಾರ ವಹಿಸುವುದಕ್ಕೆ ವಾಣಿ ಅವರು ನ್ಯಾಯಾಲಯದ ತಡೆ ತಂದಿದ್ದು, ಸರಕಾರದ ಈ ಹಿಂದಿನ(ಹುಣಸೂರು ) ವರ್ಗಾವಣೆ ಆದೇಶವನ್ನೂ ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಈ ನಡೆ ಸೋಮೇಶ್ವರ ಪುರಸಭಾ ಸದಸ್ಯರು ಮತ್ತು ಗ್ರಾಮಸ್ಥರಲ್ಲಿ ಅಸಮಾಧಾನ ಉಂಟುಮಾಡಿದೆ.ಈ ಬಗ್ಗೆ ಪರಿಶೀಲನೆ ನಡೆಸಿ ವಾಣಿ ಅವರನ್ನು ಸರಕಾರದ ಆದೇಶದಂತೆ ವರ್ಗಾವಣೆ ನಡೆಸಲು ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ದಸರಾ ಆನೆಗಳ ಕಾದಾಟ..! ಬೆಚ್ಚಿಬಿದ್ದ ಜನರು, ಅಧಿಕಾರಿಗಳು..!!

    Published

    on

    ಮೈಸೂರು/ಮಂಗಳೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಆನೆಗಳು ಶುಕ್ರವಾರ(ಸೆ.20) ರಾತ್ರಿ ದಿಢೀರ್ ಕಾದಾಟಕ್ಕೆ ಇಳಿದಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

    ದಸರಾ ಹಬ್ಬದ ಪ್ರಯುಕ್ತ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಮಳೆಯಿರುವ ಕಾರಣ ಅರಮನೆ ಮೈದಾನದಲ್ಲೇ ಆನೆಗಳಿಗೆ ತಾಲೀಮನ್ನು ಕೈಗೊಳ್ಳಲಾಗಿತ್ತು. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಧನುಂಜಯ್ ಹಾಗೂ ಕಂಜನ್ ಆನೆಗಳ ಮಧ್ಯೆ ಗುದ್ದಾಟ ಆಋಂಭವಾಗಿದೆ. ಊಟದ ಸಮಯದಲ್ಲಿ  ಈ ಜಗಳ ಶುರುವಾಗಿದ್ದು ಧನುಂಜಯ್ ಆನೆ ಕಂಜನ್‌ನನ್ನು ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ. ಈ ವೇಳೆ ಕಜನ್ ತನನ್ ಮಾವುತನನನ್ಉ ಕೆಳಗೆ ಬೀಳಿಸಿದೆ. ಧನುಂಜಯ್ ಆನೆ ಕಂಜನ್‌ನನ್ನು ಓಡಿಸಿಕೊಂಡು ಹೋಗಿದ್ದು  ಜಯಮಾರ್ತಾಂಡ ದ್ವಾರದಿಂದ ಹೊರಗೆ ಬಂದಿದೆ.  ಇದರಿಂದ‌ ಕೆಲಕಾಲ ಜನ, ಮಾವುತರು, ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.

    ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ : ಸಿಎಂ ಸಿದ್ಧರಾಮಯ್ಯ

    ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತಿತು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ.  ಕಾವಾಡಿಗಳ ಚಾಣಾಕ್ಷತದಿಂದ ಆನೆಗಳ ಆಟೋಟಕ್ಕೆ ಬ್ರೇಕ್ ಬಿದ್ದಿದೆ. ಬಳಿಕ ಅರಮನೆಗೆ ಆನೆಗಳನ್ನು ಸಿಬ್ಬಂದಿ ಕರೆತಂದಿದ್ದಾರೆ. ಸದ್ಯ ಕೋಡಿಸೋಮೇಶ್ವರ ದೇವಸ್ಥಾನ ಸಮೀಪ ಇರುವ ಆನೆಗಳು ಬಿಡಾರ ಬಿಟ್ಟಿವೆ.

    Continue Reading

    DAKSHINA KANNADA

    ಮಂಗಳೂರು : ಬೈಕ್‌ಗೆ ಲಾರಿ ಡಿ*ಕ್ಕಿ; ವಿದ್ಯಾರ್ಥಿ ಸಾ*ವು

    Published

    on

    ಮಂಗಳೂರು : ಲಾರಿಯೊಂದು ಬೈಕ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃ*ತಪಟ್ಟ ಘಟನೆ ಕುಂಟಿಕಾನ ಪ್ಲೈಓವರ್‌ನ ಮೇಲೆ ಶುಕ್ರವಾರ(ಸೆ.21) ನಡೆದಿದೆ.

    ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಿವಾಸಿ ಜಾಸಿಮ್ (18) ಮೃ*ತಪಟ್ಟ ವಿದ್ಯಾರ್ಥಿ.  ನಗರ ಹೊರಲವಲಯದ ಕೂಳೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಎ ಓದುತ್ತಿದ್ದ ಜಾಸಿಮ್ ಶುಕ್ರವಾರ ಸಂಜೆ ಕೂಳೂರಿನಿಂದ ಕೆಪಿಟಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿ*ಕ್ಕಿ ಹೊಡೆಯಿತು ಎನ್ನಲಾಗಿದೆ.

    ಇದನ್ನೂ ಓದಿ : ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ

    ಪರಿಣಾಮ ನಿಯಂತ್ರಣ ತಪ್ಪಿದ ಜಾಸಿಮ್ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀ*ರ ಗಾ*ಯಗೊಂಡ ಅವರು ಮೃ*ತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!

    Published

    on

    ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್‌ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

    ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.

    ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್‌ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದಾರೆ.

    Continue Reading

    LATEST NEWS

    Trending