Connect with us

    LATEST NEWS

    ಇಂದು ಅಥವಾ ನಾಳೆ ಜಮೆಯಾಗಲಿದೆ ಗೃಹಲಕ್ಷ್ಮಿ ಹಣ

    Published

    on

    ಬೆಳಗಾವಿ: ಇಂದು ಅಥವಾ ನಾಳೆ ‘ಗೃಹಲಕ್ಷ್ಮಿ’ ಹಣ ಖಾತೆಗೆ ಕ್ರೆಡಿಟ್ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಅವರು, “ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕೊಟ್ಟಾಗ ನಲವತ್ತು ಪರ್ಸಂಟ್ ಕಮಿಷನ್ ತೆಗೆದುಕೊಂಡು ಮನೆಯಲ್ಲಿ ಕುಳಿತರು” ಎಂದು ಟೀಕಿಸಿದ್ದಾರೆ.

    ಇನ್ನೂ ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಕೊಟ್ಟಿದ್ದೆವು. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

    ಮೇ ತಿಂಗಳಲ್ಲಿ ಎಲ್ಲರ ಅಕೌಂಟ್‌ಗೆ ಗೃಹಲಕ್ಷ್ಮಿ ಹಣ ಹೋಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಐದು ವರ್ಷ ಕಾರ್ಯಭಾರ ಮಾಡುತ್ತದೆ. ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ಹೋಗುತ್ತಾಳೆ. ಗೃಹಲಕ್ಷ್ಮಿ ಮುಂದುವರೆಯುತ್ತದೆ. ಯಾರು ಕೂಡ ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    WATCH VIDEO : ಅಂ*ತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪತ್ತೆ!

    Published

    on

    ಮಂಗಳೂರು/ಬೀದರ್ : ಅಂ*ತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಜೋಕಾಲಿಯಲ್ಲಿ ಪ್ರತ್ಯಕ್ಷವಾದ ಆಶ್ಚರ್ಯಕರ ಘಟನೆ ಬೀದರ್‌ನಲ್ಲಿ ನಡೆದಿದೆ.

    ಅ*ನಾರೋಗ್ಯದಿಂದ ಮೃ*ತಪಟ್ಟಿದ್ದ ಮಗುವನ್ನ ಅಂ*ತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಮರುದಿನ ಅಂ*ತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃ*ತದೇಹ ಮರದ ಮೇಲೆ ಪತ್ತೆಯಾಗಿದೆ.

    ಏನಿದು ಘಟನೆ?

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬವರ ಒಂದೂವರೆ ವರ್ಷದ ಮಗು ಮೃ*ತಪಟ್ಟಿತ್ತು. ಹೀಗಾಗಿ ಮಗುವನ್ನು ಹೂಳಲಾಗಿತ್ತು. ಮಗುವನ್ನ ಹೊರ ತೆಗೆದು ಕಪ್ಪು ಬಟ್ಟೆಯಲ್ಲಿ ಮರಕ್ಕೆ ಕಟ್ಟಿ ಜೋಳಿಗೆಯಲ್ಲಿ ನೇತು ಹಾಕಲಾಗಿತ್ತು. ಮಾಟ ಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ : WATCH VIDEO : ಕಣ್ಣಿಗೆ ಬಿತ್ತು ಹಲಸಿನ ಮರ…ಗಜರಾಜ ಹಲಸಿನ ಹಣ್ಣನ್ನು ಹೇಗೆ ಕೊಯ್ದ ಗೊತ್ತಾ!?

    ದಫನ ಮಾಡಿದ ಮಗುವನ್ನು ಮತ್ತೆ ತೆಗೆದು ಮಾಟ, ಮಂತ್ರ ಪ್ರಯೋಗಗಳಿಗೆ ಬಳಸುವ ಸಲುವಾಗಿ ಈ ರೀತಿ ಮಾಡಲಾಗಿದೆ ಎಂದು ಜನರು ಊಹಿಸಿದ್ದಾರೆ. ಸದ್ಯ ಮರಕ್ಕೆ ಕಟ್ಟಿದ್ದ ಮಗುವಿನ ಮೃ*ತದೇಹವನ್ನು ಮತ್ತೆ ಅದೇ ಸ್ಥಳದಲ್ಲಿ ಗ್ರಾಮಸ್ಥರು ಅಂ*ತ್ಯಸಂಸ್ಕಾರ ಮಾಡಿದ್ದಾರೆ.

    Continue Reading

    LATEST NEWS

    WATCH VIDEO : ಕಣ್ಣಿಗೆ ಬಿತ್ತು ಹಲಸಿನ ಮರ…ಗಜರಾಜ ಹಲಸಿನ ಹಣ್ಣನ್ನು ಹೇಗೆ ಕೊಯ್ದ ಗೊತ್ತಾ!?

    Published

    on

    ಮಂಗಳೂರು : ಆನೆಗಳು ಬುದ್ಧಿವಂತ ಪ್ರಾಣಿಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಆನೆಗಳ ಬುದ್ಧಿವಂತಿಕೆ ಪ್ರದರ್ಶನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ದೃಶ್ಯಗಳನ್ನು ನೋಡಿ ಅನೇಕ ಮಂದಿ ಖುಷಿ ಪಡೋದು ಸಹಜ. ಇದೀಗ ಅಂತಹುದೇ ವೀಡಿಯೋವೊಂದು ವೈರಲ್ ಆಗಿದೆ.


    ಆನೆಗಳು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಿಂಡಿ – ತಿನಿಸುಗಳನ್ನು ತಿನ್ನುವ ವೀಡಿಯೋಗಳನ್ನು ಕಾಣುತ್ತೇವೆ. ಕಬ್ಬು ತುಂಬಿದ ಲಾರಿಯ ಅಡ್ಡಗಟ್ಟಿ ದರ್ಬಾರ್ ಮಾಡೋದನ್ನೂ ನೋಡುತ್ತೇವೆ. ಆದ್ರೆ, ಈ ವೀಡಿಯೋದಲ್ಲಿರೋ ಆನೆ ಮಾತ್ರ ಪಾಪ! ಹಾಗಲ್ಲಪ್ಪ…ತನಿಗೇನು ಬೇಕೋ ಅದನ್ನು ತಾನೇ ಪಡೆದಿದೆ.

    ಹೌದು, ಆನೆಗಳಿಗೆ ಬಾಳೆ ಹಣ್ಣು, ಹಲಸು…ಹೀಗೆ ಹಣ್ಣು ಹಂಪಲು ಅಂದ್ರೆ ಇಷ್ಟ. ಈ ವೈರಲ್ ವೀಡಿಯೋದಲ್ಲಿ ಆನೆ ಹಲಸಿಗಾಗಿ ಆಸೆ ಪಟ್ಟಿದೆ. ಹಾಗಂತ ಆ ಆನೆ ಜನರಿಂದ ಕಸಿದಿಲ್ಲ. ಬದಲಿಗೆ ತಾನೇ ಹಲಸನ್ನು ಕಿತ್ತಿದೆ. ಅಯ್ಯೋ ಅದ್ರಲ್ಲೇನು ವಿಶೇಷ ಅವು ಹಣ್ಣನ್ನು ಗಿಡ-ಮರಗಳಿಂದ ಕಿತ್ತು ತಿನ್ನುತ್ತೆ ಅಲ್ವೇ ಅಂತೀರಾ…ಆದ್ರೆ, ಇಲ್ಲಿ ಆನೆ ಏನೋ ಹಲಸನ್ನು ಕಿತ್ತಿರೋದು ನಿಜ…ಆದ್ರೆ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದು ಗಜರಾಜ ಹಲಸು ಕಿತ್ತಿರೋದು ವಿಶೇಷ.

    ಜನವಸತಿ ಇರೋ ಪ್ರದೇಶದಲ್ಲಿ ಆನೆ ಸಾಗುತ್ತಿರುತ್ತದೆ. ಹೀಗೆ ಸಾಗುತ್ತಿರೋ ಆನೆಗೆ ಹಲಸಿನ ಮರವೊಂದು ಕಾಣಿಸುತ್ತೆ. ಇನ್ನು ಬಿಡುತ್ಯೇ…ತಕ್ಷಣ ಕಾರ್ಯಕ್ಕಿಳಿದ ಆನೆ ಅಲ್ಲೇ ಇದ್ದ ಕಟ್ಟಡದ ಮುಂಗಾಲಿನಲ್ಲಿ ಬಲ ಕೊಟ್ಟು, ಎರಡು ಕಾಲಿನಲ್ಲಿ ನಿಂತು, ಸೊಂಡಿಲನ್ನು ಎತ್ತರಿಸಿ ಕಾಯನ್ನು ಕೆಳಕ್ಕೆ ಬೀಳಿಸುತ್ತೆ. ಈ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

    ಇದನ್ನೂ ಓದಿ : ‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು

    ಸದ್ಯ ಈ ವೀಡಿಯೋವನ್ನು ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

    Continue Reading

    FILM

    ‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು

    Published

    on

    ಮಂಗಳೂರು : ಪೋಸ್ಟರ್, ಟೀಸರ್ ಮೂಲಕ ಕುತೂಹಲ ಹುಟ್ಟು ಹಾಕಿದ್ದ ಸಿನಿಮಾ ‘ಸಾಂಕೇತ್’. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದನ್ನು ಟ್ರೈಲರ್ ಕೂಡ ಕನ್ಫಮ್ ಮಾಡಿದೆ. ಯಾರು ಈ ಸಾಂಕೇತ್ ಅನ್ನೋ ಕೌತುಕತೆ ಟ್ರೈಲರ್ ನೋಡಿದವರಲ್ಲೂ ಹುಟ್ಟುವಂತೆ ಮಾಡಿದೆ.

    ಟ್ರೈಲರ್ ನೋಡಿದ್ರೆ, ಇದೊಂದು ಹಾರರ್ ಸಿನಿಮಾನಾ? ಅಥವಾ ಮಾಟ, ಮಂತ್ರ ಇತ್ಯಾದಿ ಅಂಶಗಳನ್ನೊಳಗೊಂಡ ಸಿನಿಮಾನಾ? ಅಥವಾ ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾನಾ? ಎಂಬ ಪ್ರಶ್ನೆ ಮೂಡೋದು ಸಹಜ. ಚಿತ್ರದ ನಿರ್ದೇಶನ, ಸೌಂಡ್ ಡಿಸೈನಿಂಗ್, ಸಂಕಲನ ಜ್ಯೋತ್ಸ್ನಾ ಕೆ. ರಾಜ್ ಮಾಡಿದ್ದಾರೆ.

    ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ರಾಜ್ ಕಾರ್ತಿಕ್ ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸನತ್ ಕುಮಾರ್ ಕೆಲಸ ಮಾಡಿದ್ದಾರೆ. ಪ್ರಕಾಶ್ ರಾವ್ ಸಾಹಿತ್ಯ ಚಿತ್ರಕ್ಕಿದೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.

    ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಬಿಡುಗಡೆಯಾಗಿರುವ ಟ್ರೈಲರ್ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ವ್ಹಾವ್…ಥ್ರಿಲ್ಲಿಂಗ್ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವರು ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.

    Continue Reading

    LATEST NEWS

    Trending