ಉಡುಪಿ: ಪೂಜೆಗೆ ಹೋಗಿ ಹಿಂತಿರುಗುವ ವೇಳೆ ದಿಢೀರನೆ ಕುಸಿದು ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಉಡುಪಿ ಸಮೀಪದ ಮಣಿಪುರ ದೆಂದೂರುಕಟ್ಟೆಯಲ್ಲಿ ನಡೆದಿದೆ.
ಮಣಿಪುರ ದೆಂದೂರುಕಟ್ಟೆ, ಇಂದ್ರಾಳಿ ತೋಟದ ಗೌರಿ ಪೂಜಾರ್ತಿ (54) ಮೃತ ದುರ್ದೈವಿ.
ಮಣಿಪಾಲದ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇವರು ಅನೇಕ ಸಮಯದಿಂದ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದರು.
ನಿನ್ನೆ ಸಂಜೆ ಸಂಬಂಧಿಕರ ಮನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.