‘5,600ರೂ. ನೀಡಿ.. 16 ಜನರನ್ನ ಕಿತ್ತು ಹಾಕಿದ್ರು’ – ಸರ್ಕಾರಕ್ಕೆ ಮಹಿಳಾ ಟೆಕ್ಕಿಯ ನೋವಿನ ಪತ್ರ….
5,600ರೂ. ನೀಡಿ.. 16 ಜನರನ್ನ ಕಿತ್ತು ಹಾಕಿದ್ರು – ಸರ್ಕಾರಕ್ಕೆ ಮಹಿಳಾ ಟೆಕ್ಕಿಯ ನೋವಿನ ಪತ್ರ….
ಬೆಂಗಳೂರು: ರಾಷ್ಟ್ರದ ಐಟಿ ರಾಜಧಾನಿಯಂದೇ ಪ್ರಸಿದ್ಧಿ ಗಳಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ.
ಈ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿರುವ ಪರಿಣಾಮ ಐಟಿ ಕಂಪನಿಗಳು ತನ್ನ ಸಿಬ್ಬಂದಿಗೆ ‘ವರ್ಕ್ ಫ್ರಂ ಹೋಮ್ ‘ ಮಾಡಲು ಸೂಚಿಸಿದೆ.
ಆದರೆ ಇತ್ತೀಚೆಗೆ ‘ವರ್ಕ್ ಫ್ರಂ ಹೋಮ್ ‘ ಮಾಡುತ್ತಿದ್ದ ಟೆಕ್ಕಿಗಳಿಗೆ ಕಂಪನಿಯೊಂದು ಶಾಕ್ ನೀಡಿದ್ದು, ಯಾವುದೇ ಕಾರಣ ನೀಡದೇ ಟೆಕ್ಕಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಹೀಗೆ ಕೆಲಸ ಕಳೆದುಕೊಂಡು ಕಂಗೆಟ್ಟಿದ್ದ ಮಹಿಳಾ ಟೆಕ್ಕಿಯೊಬ್ಬರು ಪತ್ರವನ್ನು ಟ್ವೀಟ್ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡು, ಕಾರ್ಮಿಕ ಇಲಾಖೆಯ ಸಹಾಯವನ್ನು ಕೋರಿದ್ದಾರೆ.
ಕಾಡುಗೋಡಿ ನಿವಾಸಿ ದೀಪಾ ವೆಂಕಟೇಶ್ ರೆಡ್ಡಿ ಎಂಬವರು ಪತ್ರವನ್ನು ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ನಮ್ಮನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಉದ್ಯೋಗ, ಸಂಬಳವಿಲ್ಲದೆ ನಾವು ಹೇಗೆ ಬದುಕಬೇಕು.?.
ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ಟ್ಯಾಗ್ ಮಾಡಿ ಟೆಕ್ಕಿ ಟ್ವೀಟ್ ಮಾಡಿದ್ದಾರೆ.
ಟೆಕ್ಕಿ ಬರೆದ ಪತ್ರದಲ್ಲೇನಿದೆ.?
“ಸಾಂಕ್ರಾಮಿಕ ಪಿಡುಗು ಕಾಡುತ್ತಿರುವ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ನಾನು ಬೆಳ್ಳಂದೂರು ರಸ್ತೆ ಎಕೋಸ್ಪೇಸ್ನಲ್ಲಿರುವ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮತ್ತು ನನ್ನ ಬ್ಯಾಚ್ನಲ್ಲಿದ್ದ 15 ಮಂದಿಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ.
ಸಾಂಕ್ರಾಮಿಕ ಪಿಡುಗು ಇರುವ ಸಂಕಷ್ಟ ಸ್ಥಿತಿಯಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮವನ್ನು ಕಂಪನಿ ಅನುಸರಿಸಿಲ್ಲ.
ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಿದ್ದಲ್ಲದೇ, ಎಲ್ಲಾ ಟೆಕ್ಕಿಗಳಿಗೂ ಕಂಪನಿ ಒಂದೇ ರೀತಿ ಮಾನದಂಡ ಅನುಸರಿಸಿದೆ.
ಎಲ್ಲರಿಗೂ 5,600 ರೂ. ಫೈನಲ್ ಸೆಟ್ಲ್ಮೆಂಟ್ ಮೊತ್ತವನ್ನು ನೀಡಿ, ರಿಲೀವಿಂಗ್ ಲೆಟರ್, ಫುಲ್ ಅಂಡ್ ಫೈನಲ್ ಸೆಟ್ಲ್ಮೆಂಟ್ ಲೆಟರ್ ಅನ್ನು ಕಂಪನಿ ಇ-ಮೇಲ್ ಮಾಡಿದ್ದಲ್ಲದೇ, ಎಲ್ಲಾ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕಷ್ಟದ ವೇಳೆ ಆಹಾರ, ವಸತಿ ನೋಡಿಕೊಂಡು ಬದುಕುವುದು ಕಷ್ಟ. ನಮ್ಮ ಬ್ಯಾಚ್ನಲ್ಲಿದ್ದ 16 ಮಂದಿ ಮಾತ್ರ ಕೆಲಸ ಕಳೆದುಕೊಂಡಿದ್ದೇವೆ.
ಉಳಿದ 5 ಮಂದಿ ಇನ್ನೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸಹಾಯ ಮಾಡಿ ನ್ಯಾಯ ಕೊಡಿಸಿ ಎಂದು ಟೆಕ್ಕಿ ಪತ್ರದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
DAKSHINA KANNADA
ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.
ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.
ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ; ಓರ್ವ ಬಂಧನ
ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.
LATEST NEWS
11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ
ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
FILM
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.
ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.
ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!
ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್ಮೆಂಟ್ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್ಮೆಂಟ್ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.