LATEST NEWS
ಮೆದುಳಿನ ಖಾಯಿಲೆಯಿಂದ ಬಳಲುತ್ತಿದ್ದ ಬೆಳ್ತಂಗಡಿ ಮೂಲದ ಮಹಿಳೆ ಬೆಂಗಳೂರಿನಲ್ಲಿ ನಿಧನ
ಬೆಂಗಳೂರು: ಮೆದುಳಿನ ನರ ದೌರ್ಬಲ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಒಟ್ಲ ನಿವಾಸಿ ದೇವರಾಜ್ ಹಾಗೂ ಜಾನಕಿ ದಂಪತಿಗಳ ಪುತ್ರಿ 33 ವರ್ಷದ ಶಿಲ್ಪಾ ಮೆದುಳಿನ ನರ ದೌರ್ಬಲ್ಯದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಶಿಲ್ಪಾ ಅವರು ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದೇವರಾಜ್ ದಂಪತಿಗಳ ಐವರ ಪುತ್ರಿಯರಲ್ಲಿ ಕೊನೆಯವಳಾದ ಶಿಲ್ಪಾ ಮನೆಗೆ ಆಧಾರವಾಗಿದ್ದರು. ಕಳೆದ 9 ತಿಂಗಳಿನಿಂದ ಮೆದುಳಿನ ನರ ದೌರ್ಬಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರ ಚಿಕಿತ್ಸೆಗಾಗಿ ಹಲವು ಸಂಘ-ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿದ್ದರು.ಮೃತರಿಗೆ ತಂದೆ ದೇವರಾಜ್, ತಾಯಿ ಜಾನಕಿ ಹಾಗೂ ನಾಲ್ವರು ಸಹೋದರಿಯರಾದ ಸುನಂದ, ಸುಮಿತ್ರ, ಅನಿತಾ, ಗಾಯತ್ರಿ ಇದ್ದಾರೆ.
LATEST NEWS
ಈಜಲು ಹೋದ ಅಣ್ಣ ನೀರು*ಪಾಲು.! ತಂಗಿಯ ವೀಡಿಯೋದಲ್ಲಿ ಸೆರೆಯಾಯ್ತು ಅಣ್ಣನ ಸಾ*ವಿನ ಕೊನೆ ಕ್ಷಣ..!
ಕೋಲಾರ: ಕೃಷಿ ಹೊಂಡದಲ್ಲಿ ಈಜುತ್ತಿರುವುದನ್ನು ತಂಗಿ ವೀಡಿಯೋ ಮಾಡುತ್ತಿದ್ದಾಗಲೇ ಸಹೋದರ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನಾಗವಾಳ ಗ್ರಾಮದಲ್ಲಿಈ ಘಟನೆ ನಡೆದಿದೆ.
ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?
ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್(26 ವ) ಮೃತ ದುರ್ದೈವಿ. ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗಾವಾಳಕ್ಕೆ ಬಂದಿದ್ದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ತಂಗಿಯ ಜೊತೆ ಕೃಷಿ ಹೊಂಡದ ಬಳಿ ಹೋಗಿದ್ದಾರೆ. ಅಲ್ಲಿ ತಂಗಿಯ ಬಳಿ ವೀಡಿಯೋ ಮಾಡಲು ಮೊಬೈಲ್ ಕೊಟ್ಟು ಹೊಂಡಕ್ಕೆ ಈಜಲು ಧುಮುಕಿದ್ದಾರೆ. ಸರಿಯಾಗಿ ಈಜಲು ಗೊತ್ತಿರದ ಗೌತಮ್ ನೀರಿಗೆ ಧುಮುಕಿದ್ದು, ಇತ್ತ ತಂಗಿ ಈಚೆ ಬಾ ಎಂದು ಕೂಗುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ನೋಡು ನೋಡುತ್ತಿದ್ದಂತೆ ಗೌತಮ್ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಗೌತಮ್ ನೀರಿನಲ್ಲಿ ಮುಳುಗುವ ದೃಶ್ಯ ಸೆರಯಾಗಿದೆ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
FILM
ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ‘ಗಬ್ಬರ್ ಸಿಂಗ್’ ತುಳು ಚಲನಚಿತ್ರ ಬಿಡುಗಡೆ
ಉಡುಪಿ : ಬಹು ನಿರೀಕ್ಷಿತ ತುಳು ಚಿತ್ರ “ಗಬ್ಬರ್ ಸಿಂಗ್” ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆ ಸಮಾರಂಭವೂ ನಡೆಯಿತು.
ತೊಟ್ಟಂ ಚರ್ಚ್ ನ ಧರ್ಮಗುರು ಫಾದರ್ ಡೆನಿಸ್ ಡೆಸಾ, ಶಂಕರಪುರದ ಸಾಯಿ ಈಶ್ವರ ಗುರೂಜಿ, ಮಿಯಾರ್ ಮಸೀದಿಯ ಮೌಲ್ವಿ ಅಬುಲ್ ಹಸನ್, ರಾಜಕೀಯ ಮುಖಂಡರಾದ ಗೀತಾಂಜಲಿ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಸರಳಾ ಕಾಂಚನ್, ಶಿಲ್ಪಾ ಭಟ್, ಉಡುಪಿ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಚಿತ್ರದ ಕಲಾವಿದರಾದ ವೀಣಾ ಎಸ್ ಶೆಟ್ಟಿ, ಸಂದೀಪ್ ಭಕ್ತ, ಆದ್ಯ, ಚಂದ್ರಹಾಸ್ ಕಪ್ಪೆಟ್ಟು, ಕಿಶೂ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಗೊನ್ಸಾಲ್ವಿಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದನ್ನೂ ಓದಿ : ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು
‘ಗಬ್ಬರ್ ಸಿಂಗ್’ ಚಿತ್ರವು ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಕಥೆ ಮತ್ತು ಚಿತ್ರಕಥೆಯನ್ನು ಸತೀಶ್ ಪೂಜಾರಿ ಬಾರ್ಕೂರು ರಚಿಸಿದ್ದು, ಪ್ರದೀಪ್ ನಿರ್ದೇಶನವಿದೆ. ತುಳು ಚಿತ್ರರಂಗದ ಹೆಸರಾಂತ ನಟರುಗಳು ಈ ಚಿತ್ರದಲ್ಲಿ ಪಾತ್ರವಾಗಿದ್ದಾರೆ.
LATEST NEWS
ಆಭರಣ ಮಳಿಗೆಯಲ್ಲಿ ಎಸಿ ಸ್ಫೋಟ; ಮೂವರಿಗೆ ಗಂ*ಭೀರ ಗಾಯ
ಬಳ್ಳಾರಿ :ಎಸಿ ಸ್ಫೋ*ಟಗೊಂಡ ಪರಿಣಾಮ ಮೂವರು ಗಂ*ಭೀರವಾಗಿ ಗಾ*ಯಗೊಂಡಿರುವ ಘಟನೆ ಬಳ್ಳಾರಿಯ ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ನಡೆದಿದೆ. ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಬಳ್ಳಾರಿ ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯಲ್ಲಿ ಈ ಅವಘ*ಡ ಸಂಭವಿಸಿದೆ. ಏಕಾಏಕಿ ಎಸಿ ಬ್ಲಾ*ಸ್ಟ್ ಆದ ಪರಿಣಾಮ ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
ಇದನ್ನೂ ಓದಿ : ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!
ಸ್ಫೋ*ಟದ ತೀವ್ರತೆಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಘಟನೆಯಿಂದಾಗಿ ಮಳಿಗೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋ*ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
- FILM6 days ago
PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!
- LATEST NEWS7 days ago
ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!
- DAKSHINA KANNADA6 days ago
ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!
- BANTWAL7 days ago
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!