Connect with us

    LATEST NEWS

    ನಾಡಿನಲ್ಲಿ ಕಾಡಾನೆ ಹಾವಳಿ: ಸಿಡಿಮದ್ದಿಗೂ ಜಗ್ಗದ ಹಿಂಡು

    Published

    on

    ಮಂಗಳೂರು/ಹುಣಸೂರು: ನಾಗರಹೊಳೆ ಉದ್ಯಾನವನದಿಂದ ಹೊರಬಂದಿರುವ 5 ಕಾಡಾನೆಗಳು ಸಾಕಷ್ಟು ಬೆಳೆ ನಷ್ಟ ಮಾಡಿ, ಕೆರೆ ನೀರಿನಲ್ಲಿ ಆಟವಾಡಿ, ಗ್ರಾಮಸ್ಥರನ್ನು ಹಾಗೂ ಅರಣ್ಯ ಇಲಾಖೆಯವರನ್ನು ಕಾಡಿ ಕೊನೆಗೂ ಉಡ್‌ಲಾಟ್‌ನೊಳಗೆ ಬೀಡು ಬಿಟ್ಟಿರುವ ಘಟನೆ ವೀರನಹೊಸಹಳ್ಳಿಗೆ ಸಮೀಪದ ಭರತವಾಡಿಯಲ್ಲಿ ನಡೆದಿದೆ.

     

     

    ಕಳೆದ ಮೂರು ದಿನಗಳಿಂದ ನಾಗಪುರ, ಭರತವಾಡಿ ಗ್ರಾಮದ ಭಾಗದ ತೋಟದಲ್ಲಿ ಆಶ್ರಯ ಪಡೆದಿದ್ದ ಕಾಡಾನೆಗಳು ಭರತವಾಡಿಯ ವೆಂಕಟೇಶ್, ಇಂದ್ರೇಶ್ ಹಾಗೂ ಕೇರಳ ಮೂಲದವರ ಜಮೀನಿನ ಮುಸುಕಿನ ಜೋಳದ ಬೆಳೆಯನ್ನು ತಿಂದು ತುಳಿದು ಹಾಳು ಮಾಡಿದೆ. ಶುಂಠಿ ಬೆಳೆಯನ್ನು ನಾಶ ಮಾಡಿದೆಯಲ್ಲದೆ ತೆಂಗಿನ ಮರಗಳನ್ನು ಉರುಳಿಸಿವೆ. ವೆಂಕಟೇಶ್‌ರ ಟ್ರ್ಯಾಕ್ಟರ್‌ಗಳನ್ನುಹಾನಿಗಿಒಳಿಸಿ, ನೀರಾವರಿ ಪೈಪನ್ನು ಹುಡಿ ಮಾಡಿದೆ. ಮುದಗನೂರು, ವೀರನಹೊಸಹಳ್ಳಿ, ಭರತವಾಡಿಯಲ್ಲಿ ಭತ್ತದ ಪೈರರುಗಳನ್ನೇ ನಾಶ ಮಾಡಿದೆ. ತೋಟಕ್ಕೆ ಹಾಹಿದ್ದ ಬೇಲಿಯನ್ನು ಪುಡಿಗಟ್ಟಿಯಲ್ಲದೆ ತೋಟದ ಎರಡು ಕೆರೆಗಳಲ್ಲಿ ಈಜಾಡಿ ಸಂಭ್ರಮಿಸಿದೆ.

    ಸಿಡಿಮದ್ದಿಗೂ ಜಗ್ಗದ ಕಾಡಾನೆಗಳು:

    ಗುರುವಾರ ಬೆಳಗ್ಗೆ 5 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದ ಸ್ಥಳಗಳಿಗೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಹಾಗೂ ಸುತ್ತಮುತ್ತಲ ಸಾವಿರಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಜಮಾಯಿಸಿದ್ದರು. ಒಂದಷ್ಟು ಸಿಡಿಮದ್ದು ಸಿಡಿಸಿದ್ದರೂ ಆನೆಗಳು ಜಗ್ಗದೆ ಘೀಳಿಟ್ಟು ಜನರನ್ನೇ ಬೆದರಿಸಿದ್ದವು. ಕೊನೆಗೆ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಓಡಿಸುತ್ತಿದ್ದ ವೆಂಕಟೇಶ್ ಗಾಯಗೊಂಡರು. ಜನರ ಶಬ್ಧ ಕೇಳಿ ಕಾಡಾನೆ ಅಟ್ಟಿಸಲು ಹೋದ ಅರಣ್ಯ ಅಧಿಕಾರಿ ಚಂದ್ರೇಶ್ ಮತ್ತು ತಂಡದವರ ಮೇಲೆ ದಾಳಿ ಇಡಲು ಮುಂದಾಯಿತು.

    ಜನರ ತಡೆ :

    ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಮಂದಿಯನ್ನು ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಮುನಿಯಪ್ಪ, ಸಂತೋಷ್‌ಕಶ್ಯಪ್ ನೇತೃತ್ವದ ಪೊಲೀಸರ ತಂಡ ಜನರನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಎಷ್ಟೆ ಹೇಳಿದರೂ ಜನರು ಪಟಾಕಿ ಹೊಡೆಯುವುದು, ಕೂಗಾಟ ನಡೆಸುವುದು, ಅತ್ತಿಂದಿತ್ತ ಓಡಾಡಿಸುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಕೆಲವರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕಾಯಾಚರಣೆಗೆ ಸೈ ಎನಿಸಿರುವ ಬಲ ಭೀಮ ಆನೆ ಬಂದರೂ ಜನರ ಕಾಡದಿಂದಾಗಿ ಕಾರ್ಯಾಚರಣೆಗಿಳಿಸಲಾಗಲಿಲ್ಲಾ. ಇದರಿಂದ ಕೆರಳಿದ ಜನರು ಅರಣ್ಯ ಇಲಾಖೆ ವಿರುದ್ದ ಆಕ್ರೋಶಗೊಂಡರು. ಜನರ ಅಡೆತಡೆಯಿಂದಾಗಿ ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

    ತಡರಾತ್ರಿ ಕಾರ್ಯಾಚರಣೆ :

    ಕಾಡಾನೆಗಳೀಗ ಎರಡು ತಂಡಗಳಾಗಿದ್ದು, ಜನರ ಸಹಕಾರ ಅತ್ಯಗತ್ಯ, ಆದರೆ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದ್ದು, ಇದೀಗ ಗಣೇಶ ಆನೆಯನ್ನು ಸಹ ಕರೆಸಲಾಗಿದ್ದು, ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ. ರಾತ್ರಿ ವೇಳೆಗೆ ನಾಗರಹೊಳೆ ಉದ್ಯಾನಕ್ಕೆ ಅಟ್ಟಲಾಗುವುದೆಂದು ಎಸಿಎಫ್ ಲಕ್ಷ್ಮಿಕಾಂತ್ ಉದಯವಾಣಿಗೆ ತಿಳಿಸಿದರು.

    ದೀರ್ಘಾವಧಿಯ ಸಮಸ್ಯೆ :

    ಜೋಳ ತೆನೆ ಒಡೆಯುತ್ತಿದ್ದಾಗ, ಭತ್ತದ ಬೆಳೆಯ ಘಮಕ್ಕೆ ಈ ಬಾಗದಲ್ಲಿ ಕಾಡಾನೆಗಳು ನಿತ್ಯ ಹೊರಬಂದು ಫಸಲು ನಾಶ ಮಾಡಿ ಕಾಡು ಸೇರುವುದು ನಡೆದುಕೊಂಡು ಬಂದಿದ್ದು, ಜನರು ಕೂಗಾಟ ನಡೆಸಿದ ವೇಳೆ ಅತ್ತಿಂದಿತ್ತ ಚದುರಿ ಮತ್ತಷ್ಟು ಹಾನಿಯಾಗುತ್ತಿದೆ. ಜನರು ಸಂಯಮದಿಂದ ವರ್ತಿಸಿದಲ್ಲಿ ಕಾರ್ಯಾಚರಣೆ ಸುಗಮವಾಗಲಿದೆ. ಆದರೆ ಹೆಚ್ಚಾಗಿ ಜನರು ತಮ್ಮ ಜಮೀನಿನಲ್ಲಿ ಫಸಲು ನಾಶವಾಗುವುದೆಂಬ ಭೀತಿಯಲ್ಲಿ ಕೂಗಾಟ ನಡೆಸಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸುವುದರಿಂದ ಕಾರ್ಯಾಚರಣೆಗೂ ಅಡ್ಡಿಯಾಗಲಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ನಾರಾಯಣಗುರು ವೃತ್ತದ ಕಡೆಗಣನೆ; ಸಿಡಿದೆದ್ದ ಬಿರುವೆರ್ ಕುಡ್ಲದ ನಾಯಕ..!

    Published

    on

    ಮಂಗಳೂರು: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಮುನ್ನಲೆಗೆ ಬಂದಿದ್ದ ನಾರಾಯಣಗುರು ವೃತ್ತ ಈಗ ಚರ್ಚೆಗೆ ಕಾರಣವಾಗಿದೆ. ಕೇವಲ ರಾಜಕೀಯವಾಗಿ ಮಾತ್ರ ನಾರಾಯಣಗುರುಗಳನ್ನು ಬಳಕೆ ಮಾಡಿಕೊಳ್ಳಲಾಯಿತಾ ಎಂಬ ಚರ್ಚೆಗಳು ನಡಿತಾ ಇದೆ.


    ಇದಕ್ಕೆ ಕಾರಣ ಸದ್ಯ ನಾರಾಯಣಗುರು ವೃತ್ತದಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲ ಅದರ ನಿರ್ವಹಣೆಯೂ ನಡಿತಾ ಇಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ವಾಹನಗಳು ವೃತ್ತಕ್ಕೆ ಡಿಕ್ಕಿಯಾಗಿ ವೃತ್ತ ಕೂಡಾ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು. ಈ ವಿಚಾರವಾಗಿ ಬಿರುವೆರ ಕುಡ್ಲದ ನಾಯಕ ಹಾಗೂ ನಾರಾಯಣಗುರು ವೃತ್ತದ ರೂವಾರಿ ಉದಯ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುಗಳಿಗೆ ಮಾಲಾರ್ಪಣೆ ಮಾಡಿ ಇಲ್ಲಿಂದಲೇ ರೋಡ್ ಶೋ ಆರಂಭಿಸಿದ್ದರು. ಈ ವೇಳೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತಾದರೂ ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಉದಯ ಪೂಜಾರಿಯವರನ್ನು ಹಾಗೂ ಕುದ್ರೋಳಿ ಕ್ಷೇತ್ರದವರನ್ನು ಕಡೆಗಣಿಸಲಾಗಿತ್ತು. ಸ್ವತಃ ಉದಯ ಪೂಜಾರಿ ಈ ವಿಚಾರವಾಗಿ ಮಾದ್ಯಮಗಳ ಮುಂದೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಬಿಲ್ಲವ ಯುವಕರು ಯೋಚಿಸಿ ಮತ ಹಾಕಿ ಎಂದು ಕರೆ ಕೂಡಾ ನೀಡಿದ್ದರು.

    ಉದಯ ಪೂಜಾರಿಯವರ ನೇತೃತ್ವದಲ್ಲಿ ಹಲವು ಹೋರಾಟಗಳ ಬಳಿಕ ನಾರಾಯಣಗುರು ವೃತ್ತ ನಿರ್ಮಾಣವಾಗಿತ್ತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತನಾಗಿರುವ ಉದಯ ಪೂಜಾರಿಯನ್ನು ಕೇವಲ ರಾಜಕೀಯ ಕಾರಣಕ್ಕಾಗಿ ದೂರ ಇಡಲಾಗಿತ್ತು. ಅಷ್ಟು ಮಾತ್ರವಲ್ಲದೆ ನಾರಾಯಣಗುರು ವೃತ್ತ ನಿರ್ಮಾಣದಲ್ಲಿ ಉದಯ ಪೂಜಾರಿ ಪಾಲು ಏನು ಇಲ್ಲಾ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿಕೆ ಕೂಡಾ ನೀಡಿದ್ದರು. ಇದೆಲ್ಲವೂ ಅಂದು ರಾಜ್ಯ ಮಟ್ಟದ ಸುದ್ದಿಯಾಗಿತ್ತು. ಇಷ್ಟೆಲ್ಲಾ ಮಾಡಿದವರು ಇಂದು ನಾರಾಯಣಗುರು ವೃತ್ತವನ್ನು ಕಡೆಗಣಿಸಿದ್ದಾರೆ ಎಂಬ ಆರೋಪವನ್ನು ಉದಯ ಪೂಜಾರಿ ಮಾಡಿದ್ದಾರೆ.

    ನಾರಾಯಣಗುರುಗಳ ಬಗ್ಗೆ ಭಕ್ತಿ ಗೌರವ ಇರುವುದಾಗಿ ಬಿಂಬಿಸಿಕೊಂಡ ನಾಯಕರು ಈಗ ಗುರುಗಳನ್ನು ಮರೆತಿದ್ದಾರೆ ಎಂದು ಉದಯ ಪೂಜಾರಿ ಮತ್ತೆ ಅಸಮಾಧನ ಹೊರಹಾಕಿದ್ದಾರೆ. ಚುನಾವಣಾ ಸಮಯದಲ್ಲಿ ಗುರುಗಳನ್ನು ಹಾಡಿ ಹೊಗಳಿದವರು ಈಗ ಕನಿಷ್ಠ ಗುರುಗಳ ವೃತ್ತದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಎಲ್ಲಾ ಬಿಟ್ಟು ನಾರಾಯಣಗುರು ವೃತ್ತದ ನಿರ್ವಹಣೆಯನ್ನೇ ಮರೆತು ಬಿಟ್ಟಿದ್ದು, ಕನಿಷ್ಠ ಲೈಟ್ ಕೂಡಾ ಇಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Continue Reading

    FILM

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಸ್ ವೈರಲ್..! ಅಸಲಿಯತ್ತೇನು ಗೊತ್ತಾ.?

    Published

    on

    ಮಂಗಳೂರು/ಮುಂಬೈ : ಡೀಪ್ ಫೇಕ್‌ ಭೂತ ಬೆನ್ನು ಬಿಡದೆ ಸಿನಿಮಾ ನಟಿಯರನ್ನು ಕಾಡುತ್ತಲೇ ಇದೆ. ಪದೇ ಪದೆ ನಟಿಯರ ಡೀಪ್ ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ.

    ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಗೆ ತೀವ್ರವಾಗಿ ಗುರಿಯಾದದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಸೀತಾರಾಮಂ ಸಿನಿಮಾದ ನಟಿ ಮೃಣಾಲ್ ಠಾಕೂರ್ ಕೂಡ ಡೀಪ್ ಫೇಕ್‌ ಗೆ ಬ*ಲಿಯಾಗಿದ್ದಾರೆ. ಬಿಕಿನಿಯಲ್ಲಿ ಬಾತ್ ಟಬ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊಗಳು ಹರಿದಾಡುತ್ತಿದೆ.

    ಸೀತಾರಾಮಂ ಸಿನಿಮಾದ ಮೂಲಕ ಸೌತ್‌ ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ಸಾಲು ಸಾಲು ಸಿನಿಮಾಗಳ ಮೂಲಕ ತಮ್ಮ ಫ್ಯಾನ್ ಬೇಸ್ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ಸೀತಾರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಎದುರು ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದು ಇವರ ಅಭಿಮಾನಿಗಳಲ್ಲಿ ಈ ಚಿತ್ರವೂ ಫೆವರೇಟ್ ಚಿತ್ರವಾಗಿ ಉಳಿದಿದೆ. ಸದ್ಯ ಮೃಣಾಲ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

    ಇತ್ತೀಚೆಗೆ ಮೃಣಾಲ್ ಠಾಕೂರ್ ಬಾತ್ ಟಬ್‌ನಲ್ಲಿ ಕುಳಿತು ಫೋಟೋಸ್‌ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ವೈರಲ್ ಫೋಟೋಗಳಲ್ಲಿ ಮೃಣಾಲ್ ತುಂಬಾ ಹಾಟ್ ಆಗಿದ್ದಾರೆ. ಬಾತ್ ರೂಂನ ಟಬ್ ನಲ್ಲಿ ಬಿಕಿನಿಯಲ್ಲಿ ಕುಳಿತು ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

    ಫೋಟೋಗಳ ಹಿಂದಿನ ಅಸಲಿಯತ್ತು ಏನು.?

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಗಳು ವೈರಲ್ ಆಗುತಿದ್ದು ಆ ಚಿತ್ರಗಳು ಮೃಣಾಲ್ ಠಾಕೂರ್ ಅವರದ್ದಲ್ಲ ಬದಲಾಗಿ ಅವುಗಳನ್ನು ಡೀಪ್‌ ಫೇಕ್‌ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಾಗಿದೆ. ಈ ವಿಷಯ ಬಹಳಷ್ಟು ಚರ್ಚೆ ಸೃಷ್ಟಿ ಮಾಡಿದ್ದು ಡೀಪ್ ಫೇಕ್ ವಿಚಾರ ತಿಳಿದು ಮೃಣಾಲ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಚಿತ್ರಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    Continue Reading

    DAKSHINA KANNADA

    ಸಿದ್ಧಕಟ್ಟೆ: ಕರಾವಳಿಯ ಇತಿಹಾಸ ಸೃಷ್ಟಿಸಿದ ರೋಟರಿ ಕಂಬಳ ಕೂಟ

    Published

    on

    ಸಿದ್ಧಕಟ್ಟೆ: ಕರಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮರಿ ಕೋಣಗಳ ವಿಭಾಗದ ಕಂಬಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಲೋರೆಟ್ಟೋ ಹಿಲ್ಸ್‌ ರೋಟರಿ ಕ್ಲಬ್‌ ವತಿಯಿಂದ ಆಯೋಜಿಸಲಾಗಿತ್ತು.

    ಸಬ್‌ ಜ್ಯೂನಿಯರ್ ವಿಭಾಗದ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಈ ಕಂಬಳ ಓಟ ನಡೆದಿದ್ದು, ಸುಮಾರು 85 ಜೋಡಿ ಕೋಣಗಳು ಈ ಕಂಬಳ ಕೂಟದಲ್ಲಿ ಭಾಗವಹಿಸಿದೆ. ಕೊಡಂಗೆ ವೀರ ವಿಕ್ರಮ ಜೋಡುಕರೆಯಲ್ಲಿ ಈ ಹೊಸ ಪ್ರಯೋಗ ನಡೆಸಲಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.


    ರೋಟರಿಕ್ಲಬ್‌ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಳದ ಮುಕ್ತೇಸರರಾದ ಎಂ ಪದ್ಮರಾಜ್ ಬಳ್ಳಾಲ್‌ ಅವರು ಕರೆಯನ್ನು ಉದ್ಘಾಟಿದರು.

    ಈ ವೇಳೆ ಮಾತನಾಡಿದ ರೋಟರು ಅಧ್ಯಕ್ಷ ಸುರೇಶ್ ಶೆಟ್ಟಿ ಇದು ಎಲ್ಲಾ ಸಂಘಟನೆಗಳಿಗೂ ಹೊಸ ದಿಕ್ಕು ತೋರಿಸಿದ ಕೂಟವಾಗಿದ್ದು, ಈ ಹೊಸ ಪ್ರಯೋಗಕ್ಕೆ ಎಲ್ಲರಿಂದಲೂ ಉತ್ತಮ ಬೆಂಬಲ ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಸಬ್‌ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಹಾಗೂ ಹಗ್ಗ ವಿಭಾಗದಲ್ಲಿ 6 ಜೊತೆಗಳು ಭಾಗವಹಿಸುವ ಮೂಲಕ ಕಂಬಳ ಕೂಟ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

     

    ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್, ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಡಾ.ಮುರಳಿಕೃಷ್ಣ, ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಮೂಡುಬಿದ್ರೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಜೈನ್, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸ್ಯಾಂಕ್ಟಿಸ್ ಶುಭ ಹಾರೈಸಿದರು.

     

    ಕಂಬಳದಲ್ಲಿ ಭಾಗವಹಿಸಿದ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ 79 ಜೊತೆ ಮತ್ತು ಹಗ್ಗ ವಿಭಾಗದಲ್ಲಿ 6 ಜೊತೆ ಸೇರಿದಂತೆ ಒಟ್ಟು 85 ಜೋಡಿ ಮರಿ ಕೋಣಗಳು ಪಾಲ್ಗೊಂಡು ಗಮನ ಸೆಳೆಯಿತು.

    Continue Reading

    LATEST NEWS

    Trending