Connect with us

SERIAL

ಶೂಟಿಂಗ್ ಗೆ ಚಕ್ಕರ್ ಹಾಕಿ ಎಲ್ಲಿಗೆ ಹೋಗಿದ್ದಾರೆ ಗೊತ್ತಾ ‘ಪುಟ್ಟಕ್ಕನ ಮಗಳು’ ಸ್ನೇಹಾ!?

Published

on

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸಂಜನಾ ಬುರ್ಲಿ ಯಾರಿಗೆ ತಾನೆ ಗೊತ್ತಿಲ್ಲ. ಅವರು ‘ಸ್ನೇಹಾ’ ಹೆಸರಿಂದಲೇ ಖ್ಯಾತಿ ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಗಟ್ಟಿಗಿತ್ತಿ ಹೆಣ್ಣುಮಗಳಾಗಿ ಅವರು ಹೆಣ್ಮಕ್ಕಳ ಮನಸ್ಸು ಗೆದ್ದಿದ್ದರೆ, ತನ್ನ ಸಹಜ ಸೌಂದರ್ಯದಿಂದ ಪಡ್ಡೆಗಳ ಮನ ಗೆದ್ದಿದ್ದರು.


ಪುಟ್ಟಕ್ಕನ ಮಕ್ಕಳು ಮೂಲಕ ನಟಿ ಸಂಜನಾ ಬುರ್ಲಿ ಎಲ್ಲರಿಗೂ ಪರಿಚಯ ಆದವರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಅವರು ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ‘ಪುಟ್ಟಕ್ಕನ ಮಗಳು’ ಧಾರಾವಾಹಿಯ ಮೂಲಕ ಮನೆಮಗಳಂತಾಗಿರುವ ಅವರು ಅವರ ಪಾತ್ರದಿಂದ, ನಟನೆಯಿಂದ ವೀಕ್ಷಕರ ಮನಸ್ಸನ್ನು ಈಗಾಗಲೇ ಗೆದ್ದು ಬಿಟ್ಟಿದ್ದಾರೆ.

ಸ್ನೇಹಾಳ, ಗಟ್ಟಿತನ, ದಿಟ್ಟತನ ಮಾತ್ರವಲ್ಲದೇ ಟ್ರೆಡಿಷನಲ್ ಲುಕ್ ಕೂಡಾ ವೀಕ್ಷರಿಗೆ ಇಷ್ಟ. ಅಭಿಮಾನಿಗಳ ಮನ ಗೆದ್ದಿರುವ ಸಂಜನಾ ಬುರ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸ್ನೇಹಾ ಪಾತ್ರದಿಂದಾಗಿ ಸಂಜನಾ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಇನ್ನು ಸಫಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರೋ ಸಂಜನಾ ಬುರ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅವರು ಹಾಕುವ ಒಂದೊಂದು ಫೋಟೋಗೂ ಸಿಕ್ಕಾಪಟ್ಟೆ ಲೈಕ್ಸ್ , ಕಮೆಂಟ್‌ಗಳು ಹರಿದು ಬರುತ್ತಿರುತ್ತವೆ. ಸಂಜನಾಗೆ 314 ಸಾವಿರ ಫಾಲೋವರ್ಸ್ ಇದ್ದಾರೆ. ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಧಾರಾವಾಹಿಯಲ್ಲಿ ಬ್ರೇಕ್ ಸಿಗುವುದೇ ಹೆಚ್ಚು. ಬ್ರೇಕ್ ಸಿಕ್ಕಿದರು ಫ್ಯಾಮಿಲಿ, ಫ್ರೆಂಡ್ಸ್ ಅಂತ ಕಳೆದೇ ಹೋಗುತ್ತೆ. ಆದರೆ, ಸಂಜನಾ ಬುರ್ಲಿ ಶೂಟಿಂಗ್‌ನಲ್ಲಿ ಗ್ಯಾಪ್ ಸಿಕ್ಕಿದ್ದೆ ತಡ ಟ್ರಿಪ್ ಹೊರಟು ಬಿಟ್ಟಿದ್ದಾರೆ. ಸಂಜನಾ ಅವರು ಹಲವು ಕಡೆಗಳಲ್ಲಿ ಟ್ರಿಪ್ ಹೋಗಿದ್ದಾರೆ.

ಕೂರ್ಗ್, ರಾಜಸ್ಥಾನ, ಜಮ್ಮು-ಕಾಶ್ಮೀರ ಹೀಗೆ ಅಲ್ಲಲ್ಲಿ ಟ್ರಿಪ್ ಹೋಗುತ್ತಿರುತ್ತಾರೆ. ಇನ್ನು ಸಂಜನಾಗೆ ಟ್ರಕ್ಕಿಂಗ್ ಮಾಡುವುದು ಎಂದರೆ ಬಹಳ ಇಷ್ಟ.
‘ಪುಟ್ಟಕ್ಕನ ಮಕ್ಕಳು’ ಸೆಟ್‌ನಲ್ಲಿ ನಡೆಯುವ ವಿಚಾರ, ತಮ್ಮ ಪರ್ಸನಲ್ ಫೋಟೋಶೂಟ್ ಸೇರಿದಂತೆ ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅಲ್ಲದೇ, ಕಂಠಿ ಹಾಗೂ ಸ್ನೇಹಾ ಫ್ಯಾನ್ಸ್ ಪೇಜ್ ಕೂಡ ಹುಟ್ಟಿಕೊಂಡಿವೆ. ಸಂಜನಾ ಬುರ್ಲಿ ಅವರು ತಮ್ಮ ಅಭಿಮಾನಿಗಳ ಕೆಲ ಕಮೆಂಟ್‌ಗಳಿಗೆ ಪ್ರತಿಕ್ರಿಯೆ ಕೂಡ ನೀಡುತ್ತಾರೆ. ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅಭಿನಯ ಮಾಡುತ್ತಿರುವ ಸಂಜನಾ ಬುರ್ಲಿ ಜಾಲಿ ಮೂಡ್‌ನಲ್ಲಿ ಇದ್ದಾರೆ.

ಬಾಬಾ ಬುಡನ್‌ಗಿರಿಯಲ್ಲಿ ಸಂಜನಾ ತುಂಬಾ ಕಡೆಗಳಿಗೆ ಟ್ರೆಕ್ಕಿಂಗ್ ಹೋಗಿದ್ದಾರೆ ಸಂಜನಾ. ಬಾಬಾ ಬುಡನ್‌ಗಿರಿಗೆ ಹೋಗಿರುವ ಸಂಜನಾ ವೀಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

FILM

23- 24 ವರ್ಷಕ್ಕೆ ಇದೆಲ್ಲಾ ಬೇಕಿತ್ತಾ…ಸೆರೆಮನೆ ವಾಸದ ಬಗ್ಗೆ ಅನುಭವ ಬಿಚ್ಚಿಟ್ಟ ಸೋನು ಗೌಡ

Published

on

ಬೆಂಗಳೂರು : ಬಾಲಕಿಯನ್ನು ದತ್ತು ಪಡೆದ ಆರೋಪದಡಿ ಜೈಲು ಸೇರಿದ್ದ ಸೋನು ಶ್ರೀನಿವಾಸ್‌ ಗೌಡ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದೀಗ ಯೂಟ್ಯೂಬ್‌ ವಿಡಿಯೋ ಮೂಲಕ ತಾನು ಜೈಲಿನಲ್ಲಿ ಕಳೆದ ಕರಾಳ ದಿನಗಳ ಅನುಭವನ್ನು ಹೊರ ಹಾಕಿದ್ದಾರೆ.

ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೈಲು ಪಾಲಾಗಿದ್ದ ಸೋನು ಗೌಡ, ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಏಪ್ರಿಲ್‌ 6ರಂದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಸದ್ಯ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಜೈಲು ವಾಸದ ಅನುಭವ ಹಂಚಿಕೊಂಡಿದ್ದಾರೆ.

23- 24 ವರ್ಷಕ್ಕೆ ಇದೆಲ್ಲಾ ಬೇಕಿತ್ತಾ…

ಮೊದಲಿಗೆ ನನ್ನನ್ನು ಲೀಗಲ್ ವಿಚಾರಣೆ ನಡೆಸುತ್ತಿದ್ದರು. ನಾನು ಅದನ್ನು ಫಾಲೋ ಮಾಡುತ್ತಿದೆ. ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ರು. ಅಲ್ಲಿ ಹೋದ ತಕ್ಷಣ ನಂಗೆ ತುಂಬಾ ಬೇಜಾರ್ ಆಯಿತು. ಅಲ್ಲಿನ ವಾತಾವರಣ, ಜನ ಎಲ್ಲರನ್ನು ನೋಡಿ, ಈ 23- 24 ವರ್ಷಕ್ಕೆ ಇದೇಲ್ಲಾ ಬೇಕಿತ್ತಾ ಅನಿಸಿತು ಎಂದಿದ್ದಾರೆ.

ಅನೇಕ ವಿಚಾರ ಕಲಿತೆ :

ಅಲ್ಲಿ ಇದ್ದವರು ಬೇರೆ ಬೇರೆ ಕೇಸ್‌ಗಳಲ್ಲಿ ಇದ್ದವರು. ಮರ್ಡರ್, ಫುಲ್ ಮರ್ಡರ್ ಮಾಡಿದವರೆಲ್ಲಾ ಇದ್ದರು. ಅವರ ಜೊತೆಗೆಲ್ಲಾ ನಾನು ಇರಬೇಕಾಯಿತು. ಆ ಕ್ಷಣನ ಹೇಗೆ ಹೇಳೋದು ನಂಗೆ ಅರ್ಥ ಆಗುತ್ತಿಲ್ಲ. ಇನ್ನು, ಮುಖ್ಯವಾಗಿ ಅಲ್ಲಿ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ರು. 3 ರಿಂದ 4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು. ಇಲ್ಲಿ ನನ್ನ ಬಳಿ ಫೋನ್ ಇತ್ತು, ಅನ್‌ಲಿಮಿಟೆಡ್ ಕಾಲ್ ಇತ್ತು. ಮಾತಾಡಬೇಕಿದ್ದವರು ಪಕ್ಕದಲ್ಲೇ ಇದ್ದರು, ಆದರೂ ನಾನು ಮಾತಾಡುತ್ತಿರಲಿಲ್ಲ. ಅಲ್ಲಿ ಅವರ ಬೆಲೆ ಗೊತ್ತಾಯಿತು. 4 ಗೋಡೆ ಮಧ್ಯೆ ಇದ್ದು ಅನೇಕ ವಿಚಾರ ಕಲಿತೆ ಎಂದಿದ್ದಾರೆ.

ಜೈಲಿನಲ್ಲಿ ತುಂಬಾ ಸೊಳ್ಳೆ ಇರುತ್ತಿತ್ತು. ಈ ಜೀವನ ಬೇರೆ ಅಲ್ಲಿನ ಜೀವನವೇ ಬೇರೆ. ಆದರೆ, ಮನಸ್ಸಿಗೆ ತುಂಬಾ ನೋವಾಗುವುದೇ ಈ 23- 24 ವರ್ಷಕ್ಕೆ ಜೈಲು, ನ್ಯಾಯಾಂಗ ಬಂಧನ ಎಲ್ಲಾ ನೋಡಿಬಿಟ್ಟೆನಲ್ಲಾ ಎಂದು. ನಿಮ್ಮ ಮತ್ತು ಕುಟುಂಬದವರ ಬೆಂಬಲದಿಂದ ಬೇಗ ಹೊರಗೆ ಬಂದಿದ್ದೇನೆ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Continue Reading

FILM

ಇರಲಾರದೆ ಇರುವೆ ಬಿಟ್ಟುಕೊಂಡ ನಿರಂಜನ್ ದೇಶಪಾಂಡೆ; ಕನ್ನಡ ಪರ ಹೋರಾಟಗಾರರ ಕ್ಷಮೆಯಾಚಿಸಿದ ನಿರೂಪಕ

Published

on

ಚಂದನವನ : ನಟ, ನಿರೂಪಕ ನಿರಂಜನ್ ದೇಶಪಾಂಡೆ ಕನ್ನಡ ಪರ ಹೋರಾಟಗಾರರ ಬಳಿ ಕ್ಷಮೆ ಕೇಳಿದ್ದಾರೆ. ಇನ್ಟಾಗ್ರಾಂನಲ್ಲಿ ಫೋಸ್ಟ್ ಮೂಲಕ ಕ್ಷಮೆ ಕೇಳಿದ್ದಾರೆ. ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಅವರು ಶುಕ್ರವಾರ ಭೇಟಿ ನೀಡಿದ್ದರು. ಚಾಮುಂಡಿ ತಾಯಿ ದರ್ಶನ ಪಡೆದ ಅವರು, ಬಳಿಕ ಇನ್ಟಾಗ್ರಾಂ ಲೈವ್ ಗೆ ಬಂದಿದ್ದಾರೆ. ಈ ಸಂದರ್ಭ ಅವರು ಕ್ಷಮೆಯಾಚಿಸಿದ್ದಾರೆ.

ನನ್ನ ಮಾತಿಗೆ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಜನ ತಿಳಿ ಹೇಳಿದ್ದಾರೆ. ನಿಮ್ಮಿಂದ ಮಾತು ಬರಬಾರದಿತ್ತು ಎಂದು ಕೆಲವರು ಪ್ರೀತಿಯಿಂದ ಹೇಳಿದ್ದಾರೆ. ಇರಲಾರದೇ ಇರುವೆ ಬಿಟ್ಟುಕೊಂಡೆ ಎನ್ನುವಂತೆ ಏನೋ ಮಾತನಾಡಲು ಹೋಗಿ ತಪ್ಪಾಯಿತು ಎಂದಿದ್ದಾರೆ.


ಮಂಡ್ಯದ ಕನ್ನಡ ಪರ ಹೋರಾಟಗಾರ ಲೋಕೇಶ್ ಅವರು ಕರೆ ಮಾಡಿದ್ದರು. ಚೆನ್ನಾಗಿ ತಿಳಿ ಹೇಳಿದರು. ಕನ್ನಡ ಹೋರಾಟಗಾರರ ಬಗ್ಗೆ ಅಪಾರ ಗೌರವವಿದೆ. ಮಾತಿನ ಭರದಲ್ಲಿ ಹಾಗೇ ಮಾತನಾಡಿದ್ದೆ ಎಂದು ಅವರು ಹೇಳಿದ್ದಾರೆ.

ಏನಂದಿದ್ರು ನಿರಂಜನ್ ?

ಇತ್ತೀಚೆಗೆ ನಿರಂಜನ್ ದೇಶಪಾಂಡೆ ಸಂದರ್ಶನವೊಂದರಲ್ಲಿ, “ಕನ್ನಡ ಹೋರಾಟಗಾರರು ಮಾತೆತ್ತಿದರೆ ಸಾಕು ಹೋರಾಟ ಎಂದು ಬಂದುಬಿಡ್ತಾರೆ. ಕೆಲವರು ಕನ್ನಡ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಒಳ್ಳೆ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಾರೆ. ಇನ್ನು ಕೆಲವರು ಹೋರಾಟಕ್ಕೆ ಬರ್ತಾರೆ, ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಕೆಲವರಿಗೆ ಉಗ್ರ ಹೋರಾಟ ಎಂದು ಸರಿಯಾಗಿ ಹೇಳೋಕೆ ಬರಲ್ಲ, ಹೋರಾಟ ಮಾಡುವ ಮುನ್ನ ಕನ್ನಡದ ಬಗ್ಗೆ ಜ್ಞಾನ ತುಂಬಿಕೊಳ್ಳಿ” ಎಂದಿದ್ದರು.

ಇದಕ್ಕೆ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ನಿರಂಜನ್ ಗೆ ಹಲವರು ಕರೆ ಮಾಡಿ, ಮೆಸೇಜ್ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವರು ಇನ್ಟಾಗ್ರಾಂ ಮೂಲಕ ಲೈವ್ ಬಂದು ಕ್ಷಮೆಯಾಚಿಸಿದ್ದಾರೆ. ‘ನಾನು ಮಾತಿನ ಭರದಲ್ಲಿ ಏನೋ ಅಂದುಬಿಟ್ಟಿದ್ದೆ. ಕೆಲವ್ರು ಕನ್ನಡದ ಬಗ್ಗೆ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಹೋರಾಟ ಮಾಡುತ್ತಾರೆ. ಇನ್ನು ಕೆಲವ್ರು ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡ್ತಾರೆ ಎಂದಿದ್ದೆ. ಕನ್ನಡ ಉಚ್ಛಾರಣೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳುವಾಗ ಆ ರೀತಿ ಮಾತನಾಡಿದೆ. ನನಗೆ ಕನ್ನಡ ಅಂದ್ರೆ ಉಸಿರು, ತಾಯಿ. ಹಾಗಾಗಿ ಮಾತನಾಡುವಾಗ ತಪ್ಪಾಯಿತು ಕ್ಷಮಿಸಿ” ಎಂದಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಿರುವ ನಿರಂಜನ್ ದೇಶಪಾಂಡೆ, ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಸದ್ಯ ‘ಗಿಚ್ಚಿ ಗಿಲಿ ಗಿಲಿ ಸೀಸನ್ 3’ ರ ನಿರೂಪಕರಾಗಿ ಮನರಂಜಿಸುತ್ತಿದ್ದಾರೆ.

Continue Reading

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

LATEST NEWS

Trending