Connect with us

  DAKSHINA KANNADA

  ‘ನಾವು ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗೇ ಹೋಗ್ತೀವಿ’-ಮೊಹಮ್ಮದ್ ಮಸೂದ್‌

  Published

  on

  ಮಂಗಳೂರು: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ ತೀರ್ಪು ಖಂಡಿಸಿ ನಾವು ಸುಪ್ರೀಂ ಕೋರ್ಟ್‌ ಮೆಟ್ಟಲೇರಲಿದ್ದೇವೆ ಎಂದು ಮುಸ್ಲಿ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ ಎಸ್ ಮೊಹಮ್ಮದ್ ಮಸೂದ್‌ ಹೇಳಿದ್ದಾರೆ.


  ಹೈಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು ‘ದೇವರು ಎಲ್ಲರಿಗೂ ಒಂದೇ. ಅವರವರ ಧರ್ಮ ಅವರಿಗೆ ದೊಡ್ಡದು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಮಾಡಿ.

  ಆದರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಲೆಗೆ ಹಾಕುವ ಸ್ಕಾರ್ಫ್‌ ತೆಗೆದು ಹಾಕಲು ಸಾಧ್ಯವೇ ಇಲ್ಲ.

  ಹಿಜಾಬ್‌ ಕುರಿತಂತೆ ದೇವರು ನಮ್ಮ ಕೈಬಿಡುವುದಿಲ್ಲ. ದೇವರು ಎಲ್ಲರಿಗೂ ಒಂದೇ ಅಲ್ವಾ. ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಅದರದ್ದೇ ಆದ ಡ್ರೆಸ್ ಕೋಡ್ ಮಾಡುತ್ತಿದೆ.

  ಇಲ್ಲಿ ಎಲ್ಲಾ ರಾಜಕೀಯ ನಡೆದಿದೆ. ನಿಮ್ಮ ರಾಜಕೀಯಕ್ಕೆ ನಮ್ಮ ಮಕ್ಕಳಿಗೆ ಅನ್ಯಾಯ ಮಾಡಬೇಡಿರಿ. ನಾವೆಲ್ಲರೂ ಶಾಂತಿ ಕಾಪಾಡುವ ಕೆಲಸ ಮಾಡಬೇಕು ಎಂದರು.

  ನಾವು ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗೇ ಹೋಗ್ತೀವಿ ಎಂದರು.

   

  DAKSHINA KANNADA

  ಮನೆಯಲ್ಲಿ ಸೊಳ್ಳೆ ಕಾಟವೇ? ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

  Published

  on

  ಮಂಗಳೂರು: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ರಾತ್ರಿಯಾದರೆ ಸಾಕು, ಕಿವಿ ಬಳಿ ಗುಯಿಂಗುಟ್ಟುತ್ತ ನಿದ್ದೆ ಮಾಡಲು ಕೂಡ ಬಿಡುವುದಿಲ್ಲ. ಸೊಳ್ಳೆಗಳ ಸಂತತಿಯು ವಿಪರೀತವಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ, ಚಿಕನ್‌ ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ.

  ಸೊಳ್ಳೆ ಏನಾದರೂ ಕಚ್ಚಿ ಬಿಟ್ಟರೆ ಆ ಜಾಗವು ಊದಿಕೊಂಡು ತುರಿಕೆ ಆರಂಭವಾಗಿ ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನವರು ಸೊಳ್ಳೆ ಪರದೆ, ಕಾಯಿಲ್, ಕ್ರೀಮ್ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮನೆಯ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.

  ಸೊಳ್ಳೆಗಳಿಂದ ರಕ್ಷಿಸಲು ಹೀಗೆ ಮಾಡಿ:

  • ಸೊಳ್ಳೆಗಳನ್ನು ಓಡಿಸಲು ಸುಲಭ ಉಪಾಯವೆಂದರೆ ಮನೆಯ ಸುತ್ತ ಮುತ್ತ ತುಳಸಿ ಮತ್ತು ಪುದೀನ ಸಸ್ಯವನ್ನು ನೆಡುವುದು. ಈ ಸಸ್ಯದ ಎಲೆಯಲ್ಲಿರುವ ಪರಿಮಳದಿಂದ ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಬರುವುದಿಲ್ಲ.
  • ರೋಸರಿ ಸಸ್ಯವನ್ನು ಮನೆಯ ಹಾಸುಮಾಸಿನಲ್ಲಿ ನೆಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಇದರ ಪರಿಮಳಯುಕ್ತವಾದ ಸುವಾಸನೆಗೆ ಈ ಸೊಳ್ಳೆಗಳು ಹಾಗೂ ಕೀಟಗಳು ದೂರ ಓಡುತ್ತವೆ.
  • ಲ್ಯಾವೆಂಡರ್ ಸಸ್ಯವು ಕೂಡ ಸೊಳ್ಳೆಗಳ ಕಾಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಪರಿಮಳದಿಂದ ಸೊಳ್ಳೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.
  • ಮನೆಯ ಮುಂದೆ ಚೆಂಡು ಹೂವಿನ ಸಸ್ಯವನ್ನು ನೆಡುವುದರಿಂದ ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೇ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡಿ ಅವುಗಳನ್ನು ಓಡಿಸುತ್ತವೆ.
  Continue Reading

  DAKSHINA KANNADA

  ಇನ್ನು ಡ್ರೈವಿಂಗ್‌ ಟೆಸ್ಟ್‌ಗಾಗಿ ಆರ್‌ಟಿಒಗೆ ಹೋಗಬೇಕಿಲ್ಲ; ಡ್ರೈವಿಂಗ್ ಸ್ಕೂಲಲ್ಲೇ ಪರೀಕ್ಷೆ

  Published

  on

  ನವದೆಹಲಿ: ವಾಹನ ಚಾಲನಾ ಪರವಾನಿಗೆ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ನಿಯಮಾವಳಿ ರೂಪಿಸಿದ್ದು, ಜೂನ್ 1 ರಿಂದ ಜಾರಿಗೆ ಬರಲಿವೆ.

  ಹೊಸ ನಿಯಮಗಳ ಪ್ರಕಾರ, ವಾಹನ ಚಾಲನಾ ಪರವಾನಿಗೆ ಪಡೆಯಲು ಇಚ್ಛಿಸುವವರು ಆರ್‌ಟಿಒ ಕಚೇರಿಗೆ ಹೋಗಿ ವಾಹನ ಚಾಲನೆ ಮಾಡಿ ತೋರಿಸುವ ಅವಶ್ಯಕತೆ ಇಲ್ಲ. ಈ ಟೆಸ್ಟ್ ನಡೆಸುವ ಹೊಣೆಯನ್ನು ಸರಕಾರ ಇನ್ನು ಮುಂದೆ ಖಾಸಗಿ ಡ್ರೈವಿಂಗ್‌ ಸ್ಕೂಲ್‌ಗಳಿಗೆ ನೀಡಲಿದೆ.

  ಸರಕಾರದಿಂದ ಅಧಿಕೃತ ಪರವಾನಿಗೆ ಪಡೆದ ಖಾಸಗಿ ತರಬೇತಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನಗಳ ಚಾಲನೆಯನ್ನು ಕಲಿತು ಅದೇ ಸಂಸ್ಥೆಯ ಅಧಿಕಾರಿಗಳ ಮುಂದೆ ಟೆಸ್ಟ್ ನೀಡಬೇಕು. ಅದರಲ್ಲಿ ಪಾಸಾದರೆ ಆ ಖಾಸಗಿ ಸಂಸ್ಥೆಯವರೇ ಡ್ರೈವಿಂಗ್‌ ಲೈಸನ್ಸ್ ನೀಡಲಿದ್ದಾರೆ.

  ದಂಡ ಶುಲ್ಕದಲ್ಲಿ ಬದಲಾವಣೆ:

  ಇದರ ಜತೆಗೆ ಟ್ರಾಫಿಕ್‌ ನಿಯಮ ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣದಲ್ಲೂ ಬದಲಾವಣೆ ಮಾಡಲಾಗಿದೆ. ಅತಿ ವೇಗದ ಚಾಲನೆಗೆ 1000 ರೂ. ನಿಂದ 2000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು ಕಾರು ಚಲಾಯಿಸಿದರೆ 25,000 ರೂ. ದಂಡ ವಿಧಿಸುವುದಲ್ಲದೆ ಆ ಕಾರು ಮಾಲಕರ ರಿಜಿಸ್ಟ್ರೇಶನ್‌ ರದ್ದಾಗಲಿದೆ. ತಪ್ಪಿತಸ್ಥ ಅಪ್ರಾಪ್ರ ವಯಸ್ಕನಿಗೆ 25 ವರ್ಷಗಳ ವರೆಗೆ ಲೈಸನ್ಸ್‌ ನೀಡಲಾಗುವುದಿಲ್ಲ.

  ಡ್ರೈವಿಂಗ್ ಸ್ಕೂಲ್‌ಗಳಿಗೂ ಹೊಸ ನಿಯಮ:

  ಇದೇ ವೇಳೆ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಿಗೂ ಹೊಸ ಮಾನದಂಡ ರೂಪಿಸಲಾಗಿದೆ. ಡ್ರೈವಿಂಗ್‌ ಸ್ಕೂಲ್‌ ಗಳು ಕನಿಷ್ಠ 1 ಎಕರೆ ಭೂಮಿಯನ್ನು ಹೊಂದಿರಬೇಕು. ನಾಲ್ಕು ಚಕ್ರಗಳ ತರಬೇತಿಗೆ 2 ಎಕರೆ ಭೂಮಿ ಬೇಕು. ತರಬೇತುದಾರರು ಹೈಸ್ಕೂಲ್, ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ, ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಐಟಿ ವ್ಯವಸ್ಥೆ ತಿಳಿದಿರಬೇಕು.

  ತರಬೇತಿ ಅವಧಿಯನ್ನೂ ಬದಲಾಯಿಸಲಾಗಿದೆ. ಲಘು ಮೋಟಾರು ವಾಹನಕ್ಕೆ 4 ವಾರಗಳಲ್ಲಿ 29 ಗಂಟೆಗಳು, 8 ಗಂಟೆಗಳ ಥಿಯರಿ ಮತ್ತು 21 ಗಂಟೆಗಳ ಪ್ರಾಕ್ಟಿಕಲ್‌ ಎಂದು ವಿಂಗಡಿಸಲಾಗಿದೆ. ಘನ ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ಮತ್ತು 31 ಗಂಟೆಗಳ ಪ್ರಾಕ್ಟಿಕಲ್‌ ತರಬೇತಿ ಇರುತ್ತದೆ.

  ಲೈಸನ್ಸ್‌ ಸಂಬಂಧಿತ ಶುಲ್ಕಗಳು:

  ಲೈಸನ್ಸ್‌ ಸಂಬಂಧಿತ ಶುಲ್ಕಗಳನ್ನು ಕೂಡಾ ಪರಿಷ್ಕರಿಸಲಾಗಿದೆ. ಲರ್ನರ್ಸ್‌ ಲೈಸನ್ಸ್‌ ಗೆ 150 ರೂ., ಲರ್ನರ್ಸ್‌ ಲೈಸನ್ಸ್‌ ಟೆಸ್ಟ್‌ ಶುಲ್ಕ 50 ರೂ., ಡ್ರೈವಿಂಗ್‌ ಟೆಸ್ಟ್‌ ಶುಲ್ಕ 300 ರೂ., ಡ್ರೈವಿಂಗ್‌ ಲೈಸನ್ಸ್‌ ನೀಡಿಕೆ 200 ರೂ., ಇಂಟರ್‌ ನ್ಯಾಶನಲ್ ಡ್ರೈವಿಂಗ್ ಪರ್ಮಿಟ್‌ 1000 ರೂ., ಲೈಸನ್ಸ್‌ ನವೀಕರಣ 200 ರೂ., ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸ ಅಥವಾ ಇತರ ವಿವರಗಳ ಬದಲಾವಣೆಗೆ 200 ರೂ. ನಿಗದಿ ಪಡಿಸಲಾಗಿದೆ.

  Continue Reading

  BELTHANGADY

  ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಎಫ್‌ಐಆರ್

  Published

  on

  ಬೆಳ್ತಂಗಡಿ: ಪೊಲೀಸ್ ಇಲಾಖೆ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿರುವ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

  ಕಲ್ಲಿನ ಆಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಬೆಳ್ತಂಗಡಿಯ ವಿಕಾಸಸೌಧ ಎದುರು ಸೋಮವಾರ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಇಲಾಖೆಯಿಂದ ಯಾವೂದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಲಾಗಿತ್ತು.

  ಈ ಸಂದರ್ಭ ಶಾಸಕ ಹರೀಶ್ ಪೂಂಜ ಹಾಗೂ ಇತರರು ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿರುವ ಬಗ್ಗೆ ಹಾಗೂ ಈ ಪ್ರತಿಭಟನಾ ಸಭೆಯಲ್ಲಿ ಹರೀಶ್ ಪೂಂಜ ಅವರು ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧ ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗಳಿಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ.

  ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. 58/2024 ಕಲಂ 143, 147, 34 , 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

  Continue Reading

  LATEST NEWS

  Trending