Thursday, August 11, 2022

ಬೆಳ್ತಂಗಡಿಯಲ್ಲಿ ದಾರಿ ಮಧ್ಯೆ ಓಡಾಡಿದ ಚಿರತೆ: ಚಿತ್ರ ಸೆರೆ-ಸ್ಥಳೀಯರಲ್ಲಿ ಭೀತಿ

ಬೆಳ್ತಂಗಡಿ: ಹುಲಿ ಗಣತಿ ಯೋಜನೆಯ ಉದ್ದೇಶವನ್ನಿಟ್ಟುಕೊಂಡು ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್​ನಲ್ಲಿ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆಯ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆಯು ಓಡಾಡಿರುವ ಚಿತ್ರ ಸೆರೆಯಾಗಿದೆ.


ಹುಲಿ ಸಂಕುಲವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಏನಾದರೊಂದು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುತ್ತದೆ. ಅದೇ ರೀತಿ 5 ದಿನಗಳಿಗೊಮ್ಮೆ ಈ ಯೋಜನೆಯ ಚಿತ್ರಗಳನ್ನು ಸಂಗ್ರಹಿಸಲಾಗುತ್ತಿದ್ದು, ಚಿರತೆ ಓಡಾಟದ ಚಿತ್ರ ಕಂಡು ಬಂದಿದೆ.

ಮಾ.7ರ ಮುಂಜಾನೆ 4ರ ಸುಮಾರಿಗೆ ಇಲ್ಲಿ ಚಿರತೆ ಓಡಾಟ ನಡೆಸಿದೆ. ಈ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದು, ಹೆದ್ದಾರಿಯಲ್ಲಿ ಆಗಾಗ ಚಿರತೆ ಓಡಾಡುವ ಕುರಿತು ವಾಹನ ಸವಾರರು ತಿಳಿಸಿದ್ದರು.

ಸದ್ಯ ಕ್ಯಾಮೆರಾ ಟ್ರ್ಯಾಪಿಂಗ್​ನಲ್ಲಿ ಚಿರತೆ ಚಿತ್ರ ಸೆರೆಯಾಗಿದೆ.
ಹುಲಿ ಗಣತಿ ಯೋಜನೆ ನಿಮಿತ್ತ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್​ನಲ್ಲಿ ಪರ್ನಾಲೆ ಎಂಬಲ್ಲಿ ಇಡಲಾಗಿರುವ ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆಯಾಗಿದೆ.

ಇದು ಇಲ್ಲಿನ ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್...

ಸ್ಥಳೀಯರೇ ಪ್ರವೀಣ್‌ನನ್ನು ಹತ್ಯೆಗೈದಿದ್ದು, ಆರೋಪಿಗಳಿಗೆ ಎಸ್‌ಡಿಪಿಐ ಲಿಂಕ್‌ ಎಂದ ಎಡಿಜಿಪಿ

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯರೇ ಆಗಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.ಈ ಬಗ್ಗೆ ಮಂಗಳೂರಿನ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...