ಮಂಗಳೂರು: ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಬಾಂಬ್ ಸ್ಪೋಟದ ರೂವಾರಿ ಶಾರಿಕ್ ಹಿನ್ನೆಲೆ, ಫಂಡಿಂಗ್ ಹಾಗೂ ಯಾರು ಬೆನ್ನ ಹಿಂದೆ ಇದಾರೆ ಎಂಬುವುದನ್ನು ಸಂಪೂರ್ಣ ತನಿಖೆ ಮಾಡಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಸ್ಥಳಕ್ಕೆ ರಾಜ್ಯ ಡಿಜಿಪಿ ಮತ್ತಿತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಘಟನೆ ನೋಡುವಾದ ಭಯಾನಕ ರೀತಿಯಲ್ಲಿ ಆಗುವಂತಹ ಕೃತ್ಯಕ್ಕೆ ಕೈ ಹಾಕಿದ್ದರು. ಆದರೆ ಆಗಬಹುದಾಗಿದ್ದ ದುರಂತ ಸಣ್ಣದ್ರಲ್ಲೇ ಆಗಿ ಹೋಗಿದೆ.
ಸ್ಥಳೀಯವಾಗಿ ಸಿಗೋ ವಸ್ತು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಶಾರಿಕ್ ಮತ್ತು ತಂಡ ಪರಿಣಿತರಾಗಿದ್ದಾರೆ. ಇಂತಹ ಕೃತ್ಯಗಳನ್ನು ಎಸಗಿ ಭಯೋತ್ಪಾದನೆಗೆ ದೊಡ್ಡ ಶಕ್ತಿ ಕೊಡುವ ಪ್ಲಾನ್ ಇದೆ.ಈ ಪ್ರಕರಣದ ಆರೋಪಿ ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕೊಯಮತ್ತೂರು, ಕನ್ಯಾಕುಮಾರಿ ಸೇರಿ ಹಲವಡೆ ಸುತ್ತಾಡಿದ್ದಾನೆ.
ದೇಶದ ಭದ್ರತೆ, ಏಕತೆಗೆ ಭಂಗ ತಂದು ರಕ್ತ ಚೆಲ್ಲಿ ಕುಕೃತ್ಯ ಎಸಗುವ ಯಾರೇ ವ್ಯಕ್ತಿಗಳಾದರೂ ಕೂಡಾ ಅವರ ಸಂಪೂರ್ಣ ನಿರ್ಮೂಲನೆ ಮಾಡುವ ಕೆಲಸವನ್ನು ಗೃಹ ಇಲಾಖೆ ಮಾಡುತ್ತದೆ ಎಂದು ನುಡಿದರು.
ಆಟೋ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ.
ಶಾರಿಕ್ ಮೂಲ ತೀರ್ಥಹಳ್ಳಿಯಾಗಿದ್ದು ಅತ್ಯಂತ ಸುಸಂಸ್ಕೃತ ತಾಲ್ಲೂಕಾಗಿದೆ. ಅತ್ಯಂತ ಒಳ್ಳೆಯ ಸಾಹಿತಿಗಳನ್ನು, ರಾಜಕೀಯ ವ್ಯಕ್ತಿಗಳನ್ನು ನಾಡಿಗೆ ನೀಡಿದ ಕೀರ್ತಿ ತೀರ್ಥಹಳ್ಳಿಗಿದೆ. ಆದರೆ ಇಂಥವರು ಕೂಡಾ ಅಲ್ಲಿ ಇದ್ದಾರೆ. ಇಂತಹ ಯುವಕರಿಗೆ ಮತಾಂಧ ಶಕ್ತಿಗಳು ಕನೆಕ್ಟ್ ಆಗಿ ಇಂತಹ ದುಷ್ಕೃತ್ಯ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕೂಡಾ ಅದರ ಲಿಂಕ್ ಇರುವುದು ಸ್ಪಷ್ಟವಾಗಿದೆ.
ಇದನ್ನ ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡ್ತಾರೆ. ಗೋಡೆ ಬರಹ ಕೇಸ್ ನಲ್ಲಿ ಹೈ ಕೋರ್ಟ್ ಎಂಟು ತಿಂಗಳಲ್ಲಿ ಬೇಲ್ ಕೊಟ್ಟಿದೆ. ನಂತರ ಕೂಡಾ ಇವರ ಮೇಲೆ ಕಣ್ಣಿಡಲಾಗಿತ್ತು. ಆಮೇಲೆ ತೀರ್ಥಹಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದವನು ಏಕಾಏಕಿ ನಾಪತ್ತೆಯಾದ.
ಇವರಿಗೆ ಜಾಮೀನು ಕೊಟ್ಟು ಅವರ ಮೇಲೆ ಕಣ್ಣು ಇಟ್ಟಿದ್ರೂ ಕೂಡಾ ನಾಪತ್ತೆಯಾಗಿದ್ದರು. ವಿಚಿತ್ರ ಅಂದ್ರೆ ಈತ ಹಿಂದೂ ಹೆಸರಿನಲ್ಲಿ, ಹಿಂದೂ ಹೆಸರಿನ ದಾಖಲೆಯಲ್ಲಿ ಓಡಾಡುತ್ತಿದ್ದ. ಆದ್ದರಿಂದ ಈ ಎಲ್ಲಾ ವಿಚಾರಗಳ ಬಗ್ಗೆ ಕೂಲಂಕುಷವಾಗಿ ನೋಡಿ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ.
ಮಧುರೈ, ನಾಗರಕೋಯಿಲ್, ತಮಿಳುನಾಡು ಎಲ್ಲಾ ಕಡೆ ಹೋಗಿದ್ದಾನೆ. ಇವರು ಫೋನ್ ನಲ್ಲಿ ಮಾತನಾಡಲ್ಲ, ಬೇರೆ ತರದ ಸಂಪರ್ಕ ಸಾಧಿಸ್ತಾರೆ. ಅವನು ಹೊರ ರಾಜ್ಯದಲ್ಲಿ ಆಗಾಗ್ಗೆ ಜಾಗ ಬದಲಿಸೋ ಕೆಲಸ ಮಾಡ್ತಾ ಇದ್ದ.
ಇಂತಹ ಅನೇಕ ವಿಷಯಗಳು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇವನಿಗೆ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನ ನಾವು ತಡೆಗಟ್ಟುತ್ತೇವೆ.
ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದಾರೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನ ನಾವು ಬಂಧಿಸ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ ಸಚಿವರು ಈ ಪ್ರಕರಣ ಎನ್.ಐ.ಎಗೆ ವಹಿಸೋ ಬಗ್ಗೆ ಒಂದೆರೆಡು ದಿನಗಳಲ್ಲಿ ನಿರ್ಧಾರ ಮಾಡ್ತೇವೆ ಎಂದು ಹೇಳಿದರು.
ಆಸ್ಪತ್ರೆಗೆ ತೆರಳಿ ಆಟೋ ಚಾಲಕನ ಜೊತೆ ಮಾತನಾಡಿದ್ದೇನೆ. ಪೊಲೀಸರ ಜೊತೆ ಸಭೆ ಮಾಡಿ ದೀರ್ಘ ಸಮಾಲೋಚನೆ ಮಾಡಿದ್ದೇವೆ. ಆಟೋ ಡ್ರೈವರ್ ನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸುತ್ತೆ. ಉಳಿದ ಆರ್ಥಿಕ ಸಹಾಯ ನೀಡುವುದರ ಬಗ್ಗೆ ನಾನು ಬೆಂಗಳೂರಿಗೆ ಹೋದ ನಂತರ ಸಿಎಂ ಜೊತೆ ಮಾತನಾಡ್ತೇನೆ ಎಂದರು.