Thursday, January 27, 2022

“ಡಿಸಿ ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರಲ್ಲ” : ಹಿಂಜಾವೇ

ಮಂಗಳೂರು: ಡಿಸಿ ಕಾಲರ್‌ ಪಟ್ಟಿ ಹಿಡಿಯುವುದು ಎಂದರೆ ಆಗ್ರಹ ಪೂರ್ವಕವಾಗಿ ನಾವು ಕೇಳಿದ್ದೆವು. ಅಕ್ಷರರಕ್ಷಕ್ಕೆ ಅರ್ಥ ಕಲ್ಪಿಸಬೇಡಿ. ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಿ. ಜಿಲ್ಲಾಧಿಕಾರಿಯ ಕಾಲರ್‌ ಪಟ್ಟಿ ಹಿಡಿಯಲಾಗುತ್ತದೆಯೇ ಎಂದು ಹಿಂ.ಜಾ.ವೆ. ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಪ್ರಶ್ನಿಸಿದರು.


ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಸನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಲು ಪತ್ರಿಕಾಗೋಷ್ಠಿ ಕರೆದಿಲ್ಲ. ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಯನ್ನು ಅಪಮಾನ ಮಾಡಿಲ್ಲ. ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರಲ್ಲ.

ಜನರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ. ಇಂತಹ ನೂರು ಸಾವಿರ ಕೇಸ್‌ ಎದುರಿಸಲು ಹಿಂದೂ ಸಮಾಜ ಎದುರಿಸಲು ಸಿದ್ದ. ನಮ್ಮ ಭಾವನೆಗೆ ಬೆಲೆ ಇಲ್ವಾ, ಹಿಂದೂ ಸಮಾಜದ ಭಾವನೆಗೆ ಬೆಲೆ ಇಲ್ಲವೇ ಎಂದರು.
ಕಾರಿಂಜದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಹಿಂದೂ ಸಮಾಜದ ಭಾವನೆ ಜೊತೆ ಚೆಲ್ಲಾಟವಾಡಬೇಡಿ. ಡಿಸಿ ಎಲ್ಲಿ ದೂರು ದಾಖಲಿಸಿದ್ದಾರೋ ಅಲ್ಲಿಯ ಸಬ್‌ಇನ್ಸ್‌ಪೆಕ್ಟರ್‌ ಸೌಮ್ಯ ದೇವಸ್ಥಾನದ ಭಗವಾಧ್ವಜ ತೆಗೆಯಲು ಹೇಳುತ್ತಾರೆ.

ಇದೇನು ಘೋರಿ ಮಹಮ್ಮದ್‌, ಟಿಪ್ಪು ಕಾಲವೇ. ಒಂದೇ ವಾರದಲ್ಲಿ 1000 ಧ್ವಜ ಹಾಕುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ಪ್ರಶ್ನಿಸಿದರು.
ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್, ರತ್ನಾಕರ್ ಶೆಟ್ಟಿ ಹಾಗೂ ಜಗದೀಶ್ ನೆತ್ತರಕೆರೆ ಇದ್ದರು.

Hot Topics