Wednesday, December 1, 2021

ಅಕ್ರಮ ಮರಳು ದಂಧೆಗೆ ಹೊಸ ಉಪಾಯ ಕಂಡುಕೊಂಡ ಮರಳು ಮಾಫಿಯಾ

ಉಡುಪಿ: ಎರಡು ನಂಬರ್ ಪ್ಲೇಟ್ ಹೊಂದಿದ್ದ ಒಂದೇ ಲಾರಿಯೊಂದು ಟ್ರಿಪ್ ಶೀಟ್ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದವರು ಉಡುಪಿಯ ಕೊರಂಗ್ರಪಾಡಿ ಪತ್ತೆ ಹಚ್ಚಿ ದೂರು ನೀಡಿದ ಘಟನೆ ನಡೆದಿದೆ.


ಮರಳು ಸಾಗಾಟ ಮಾಡುತ್ತಿದ್ದ ಈ ಟಿಪ್ಪರ್‌ನಲ್ಲಿ ಎರಡು ನಂಬರ್ ಪ್ಲೇಟ್‌ಗಳಿದ್ದವು. ಜೊತೆಗೆ ಟಿಪ್ಪರ್‌ಗೆ ಜಿಪಿಎಸ್ ಸಹ ಅಳವಡಿಸಿರಲಿಲ್ಲ.

ಟ್ರಿಪ್ ಶೀಟ್ ಕೂಡ ಇರಲಿಲ್ಲ. ಹಿಂಬದಿ ಒಂದು ನಂಬರ್ ಮತ್ತು ಮುಂಭಾಗ ಇನ್ನೊಂದು ನಂಬರ್ ಇದ್ದುದನ್ನು ಗಮನಿಸಿದ ಸ್ಥಳೀಯ ಟೆಂಪೋ ಚಾಲಕ ಮಾಲಕ ಸಂಘದವರಿಗೆ ಅನುಮಾನ ಬಂದಿದೆ.


ಈ ವೇಳೆ ಟಿಪ್ಪರ್‌ ಅನ್ನು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭ ಎರಡೂ ಕಡೆಯವರು ಕೆಲ ಹೊತ್ತು ಮಾತಿನ ಚಕಮಕಿ ನಡೆದಿದೆ. ಸುದ್ದಿ ತಿಳಿದ ಪೊಲೀಸರು ಮತ್ತು ಗಣಿ ಇಲಾಖೆಯವರು ಸ್ಥಳಕ್ಕೆ ಬಂದಿದ್ದಾರೆ.

ಟಿಪ್ಪರ್ ನ್ನು ಠಾಣೆಗೆ ತರುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಹೋಗುತ್ತೇನೆ ಎಂದು ಹೇಳಿದ ಚಾಲಕ ಟಿಪ್ಪರ್ ನೊಂದಿಗೆ ಪರಾರಿಯಾಗಿದ್ದಾನೆ

ಈ ಇಡೀ ಹೈಡ್ರಾಮಾದ ಹಿಂದೆ ಅಕ್ರಮ ಮರಳುಗಾರಿಕೆ ಲಾಬಿ ಇದೆ ಎನ್ನಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...