LATEST NEWS
ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರಾರಂಭವಾಗಲಿದೆ ವಾಟರ್ ಮೆಟ್ರೋ
ಮಂಗಳೂರು: ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್ ಮೆಟ್ರೋ ಯೋಜನೆಯನ್ನು ಏಪ್ರಿಲ್ 25ರಂದು ಉದ್ಘಾಟಿಸಿದ್ದರು. ಅದರಂತೆ ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರ ಮಂಗಳೂರಿನಲ್ಲೂ ವಾಟರ್ ಮೆಟ್ರೋ ಸೇವೆ ಸಿಗುವ ಸಾಧ್ಯತೆಯಿದೆ. ಕರ್ನಾಟಕ ಮಾರಿಟೈಮ್ ಬೋರ್ಡ್ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು ತಯಾರಿಸಲು ನಿರ್ಧರಿಸಿದ್ದು ಟೆಂಡರ್ ಆಹ್ವಾನಿಸಿದೆ. ಈ ಸಾರಿಗೆ ಜಾಲ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್‌ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸಲಿದೆ.
ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್ ದೂರದವರೆಗೆ ಬೋಟ್ ಸಂಚರಿಸಲಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಕೊಚ್ಚಿಯ ನಂತರ ಮಂಗಳೂರು ವಾಟರ್ ಮೆಟ್ರೋ ಯೋಜನೆ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಿದೆ. ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಸಂಪರ್ಕಿತ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ರಚಿಸುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಿಂದ ಜೀವನೋಪಾಯದ ಅವಕಾಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
2024-2025ರ ಬಜೆಟ್ ಮಂಡನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ವಾಟರ್ ಮೆಟ್ರೋ ಸೇವೆಯನ್ನು ಆರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಘೋಷಿಸಿದ್ದರು.
ದೇಶದ ಮೊದಲ ಜಲ ಮೆಟ್ರೋ ಸೇವೆ ಕೇರಳದಲ್ಲಿ ಕಳೆದ ವರ್ಷ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಾಟರ್ ಮೆಟ್ರೋ ಯೋಜನೆಯನ್ನು ಏಪ್ರಿಲ್ 25ರಂದು ಉದ್ಘಾಟಿಸಿದ್ದರು. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳಲ್ಲಿ ಈ ಮೆಟ್ರೋ ಸಂಚಾರ ಮಾಡುತ್ತಿದ್ದು, 8 ಎಲೆಕ್ಟ್ರಿಕ್ ಬೋಟ್‌ಗಳು, 38 ಟರ್ಮಿನಲ್‌ಗಳ ಮೂಲಕ ವಾಟರ್ ಮೆಟ್ರೋ ಸೇವೆ ನೀಡುತ್ತಿದೆ.
LATEST NEWS
ಇನ್ಶೂರೆನ್ಸ್ ಹಣಕ್ಕಾಗಿ ಸೋದರ ಅಳಿಯನಿಂದ ಮಾವನ ಹ*ತ್ಯೆ: ಆರೋಪಿಗಳಿಗೆ ಪ್ರೇರಣೆ ಯಾವುದು ಗೊತ್ತಾ ?
ಮಂಗಳೂರು/ದಾವಣಗೆರೆ: ತೆಲುಗು ಸಿನೆಮಾ ವೀಕ್ಷಿಸಿ, ಅದರಲ್ಲಿನ ಕಥೆಯಂತೆ ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನನ್ನು ಹ*ತ್ಯೆ ಮಾಡಿರುವಂತಹ ಘಟನೆ ದಾವಣಗೆರೆಯ ಇಮಾಮ್ ನಗರದಲ್ಲಿ ನಡೆದಿದೆ.
ಇನ್ಶೂರೆನ್ಸ್ ಹಣಕ್ಕಾಗಿ ಸೋದರ ಅಳಿಯ ಗಣೇಶ ಮತ್ತು ಸ್ನೇಹಿತರು ಸೇರಿ ದುರ್ಗೇಶ್ (32) ಎಂಬಾತನನ್ನು ಕೊ*ಲೆ ಮಾಡಿದ್ದಾರೆ. ಗಣೇಶ (24), ಅನಿಲ(18), ಶಿವಕುಮಾರ್ (25) ಮತ್ತು ಮಾರುತಿ (24) ಬಂಧಿತ ಆರೋಪಿಗಳು.
ಮೃತ ದುರ್ಗೇಶ್ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡಿದ್ದ. ಜೊತೆಗೆ ಸಾಕಷ್ಟು ಮಧ್ಯವ್ಯಸನಿ ಕೂಡ ಆಗಿದ್ದು, ಕುಡಿದು ತಿವ್ರ ಅಶಕ್ತನಾಗಿದ್ದ. ಹೀಗಾಗಿ ಒಂದು ವರ್ಷದಲ್ಲಿ ಆತ ಸಾ*ಯುತ್ತಾನೆ ಎಂದು ದುರ್ಗೇಶ್ ಹೆಸರಲ್ಲಿ ಗಣೇಶ್ 2 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ದುರ್ಗೇಶ್ ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗುತ್ತಿತ್ತು. ಆದರೆ, ಒಂದು ವರ್ಷವಾದರೂ ಅವನು ಸಾ*ಯದಿದ್ದಾಗ ಕಂಗಲಾದ ಗಣೇಶ್ ದುರಾಸೆಯಿಂದ ಈ ಕೃ*ತ್ಯ ಎಸಗಿದ್ದಾರೆ.
ಜನವರಿಗೆ ಮತ್ತೆ ಇನ್ಶೂರೆನ್ಸ್ ರಿನಿವಲ್ ಮಾಡಬೇಕಿತ್ತು. ಸುಮ್ಮನೆ ಇನ್ಶೂರೆನ್ಸ್ ಕಟ್ಟಿದ ಎರಡು ಲಕ್ಷ ರೂ. ಹಾಳಾಗುತ್ತದೆ ಎಂದು, ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುರ್ಗೇಶ್‌ನನ್ನು ಟವೆಲ್ನಿಂದ ಉಸಿರು ಬಿಗಿದು ಹ*ತ್ಯೆ ಮಾಡಿದ್ದಾರೆ.
ಇದನ್ನೂ ಓದಿ : ಮಂಗಳೂರನ್ನೇ ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಹ*ತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಆರೋಪಿಗಳು ಶ*ವ ಎಸೆದು ಹೋಗಿದ್ದರು. ಬಳಿಕ ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರ್ಗೇಶ್ ಮೃ*ತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕಥೆ ಕಟ್ಟಿದ್ದಾರೆ. ಯಾರೋ ಹೊಡೆದು ಬಿಸಾಕಿ ಹೋಗಿದ್ದರು ಎಂದಿದ್ದಾರೆ.
ಅನುಮಾನಗೊಂಡ ಪೊಲೀಸರು ತೀವ್ರ ತನಿಖೆ ನಡೆಸಿದ್ದು, ಕೊನೆಗೆ ಆರೋಪಿ ಗಣೇಶ್ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಘಟನೆ ಕುರಿತು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BELTHANGADY
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ
ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಸೇವೆಯಾಟವು ಶ್ರೀ ಮಂಜುನಾಥ ಸ್ವಾಮಿ ಹಾಗೂ ಛತ್ರ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಹರ್ಷೇಂದ್ರ ಕುಮಾರ್ ಅವರ ಶುಭಾಶೀರ್ವಾದಗಳೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಅವರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಶುಭಾರಂಭಗೊಂಡಿತು.
ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಮತ್ತು ಸಿಬಂದಿ ಉಪಸ್ಥಿತರಿದ್ದರು. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ತಿರುಗಾಟದ ಪ್ರಥಮ ಸೇವೆಯಾಟ ನಡೆಯಿತು.
LATEST NEWS
ಅಬ್ಬಬ್ಬಾ !!! 100 ಕಿ.ಮಿ ಪ್ರಯಾಣದ ಸ್ಕೂಟರ್ ಕೇವಲ 8 ರೂಪಾಯಿಗೆ…
ಮಂಗಳೂರು/ತೆಲಂಗಾಣ: ಫ್ರಾಂಕ್ಲಿನ್ EV ಕಂಪನಿಗೆ ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳಿವೆ. ಈ ಕಂಪನಿಯು ವೇಗವಾಗಿ ಬೆಳೆಯುತ್ತಿದೆ. ಫ್ರಾಂಕ್ಲಿನ್ EV ಸ್ಕೂಟರ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯ. ದುಬಾರಿ ಪೆಟ್ರೋಲ್ ಹಾಗೂ ಅತೀ ಹೆಚ್ಚಿನ ನಿರ್ವಹಣೆ ವೆಚ್ಚದಿಂದ ಸ್ಕೂಟರ್, ಬೈಕ್ ಜನರ ಜೇಬು ಸುಡುತ್ತಿದೆ. ಇದರ ನಡುವೆ ಅತೀ ಕಡಿಮೆ ಖರ್ಚಿನಲ್ಲಿ ದೈನಂದಿನ ಚಟುವಟಿಕೆಗೆ ನೆರವಾಗಬಲ್ಲ ಸ್ಕೂಟರ್ ಜನರನ್ನು ಆಕರ್ಷಿಸುತ್ತಿದೆ.
ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನರು ಕಡಿಮೆ ಖರ್ಚಿನ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ. ಹಬ್ಬಗಳ ಸಂದರ್ಭದಲ್ಲಿ ಕಂಪನಿಗಳು ಭಾರಿ ರಿಯಾಯಿತಿ ನೀಡುತ್ತಿವೆ. ಓಲಾ, ಟಿವಿಎಸ್, ಬಜಾಜ್ ಕಂಪನಿಗಳು ಈಗಾಗಲೇ ಆಫರ್‌ಗಳನ್ನು ನೀಡಿ ಮಾರಾಟ ಹೆಚ್ಚಿಸಿಕೊಂಡಿವೆ. ಈಗ ಫ್ರಾಂಕ್ಲಿನ್ EV ಕೂಡ ಕಡಿಮೆ ಬೆಲೆಯ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಕೇವಲ 1.5 ಯೂನಿಟ್ ವಿದ್ಯುತ್‌ನಲ್ಲಿ 100 ಕಿ.ಮೀ. ಓಡುವ ಸ್ಕೂಟರ್ ಬಿಡುಗಡೆ ಮಾಡಿದೆ. ನಿರ್ವಹಣೆ ವೆಚ್ಚ ಮಾತ್ರವಲ್ಲ, ಇದರ ಬೆಲೆಯೂ ಕಡಿಮೆ ಇದೆ.
KORO, NIX-DLX, ಪವರ್-ಪ್ಲಸ್ ಮಾದರಿಗಳು ರೂ. 49,999, ರೂ. 64,999, ಮತ್ತು ರೂ. 74,999 ಬೆಲೆಯಲ್ಲಿ ಲಭ್ಯ. ಎಲ್ಲಾ ಮಾದರಿಗಳು ಒಂದೇ ವಿನ್ಯಾಸ ಮತ್ತು ಬಣ್ಣಗಳಲ್ಲಿ ಬರುತ್ತವೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ. ಓಡುತ್ತದೆ. ಕೇವಲ 8 ರೂ. ಖರ್ಚಲ್ಲಿ 100 ಕಿ.ಮೀ. ಪ್ರಯಾಣಿಸಬಹುದು. ಗರಿಷ್ಠ 60 ಕಿ.ಮೀ. ವೇಗ. ಕ್ರೂಸ್ ಕಂಟ್ರೋಲ್ ಇದೆ. ಅಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ ಈ ಸ್ಕೂಟರ್ ಇದೀಗ ಮಾರಾಟದಲ್ಲೂ ಏರಿಕೆ ಕಾಣುತ್ತಿದೆ.
60V32Ah ಬ್ಯಾಟರಿಯ KORO ರೂ. 49,999, 60V26Ah ಬ್ಯಾಟರಿಯ NIX-DLX ರೂ. 64,999, ಮತ್ತು 65V35Ah ಬ್ಯಾಟರಿಯ ಪವರ್-ಪ್ಲಸ್ ರೂ. 74,999 ಬೆಲೆಯಲ್ಲಿ ಲಭ್ಯ. BLDC ಮೋಟಾರ್, ಮೂರು ರೈಡಿಂಗ್ ಮೋಡ್‌ಗಳು, ರಿವರ್ಸ್ ಗೇರ್, ಮತ್ತು ಸೆಕ್ಯುರಿಟಿ ಸೆನ್ಸರ್‌ಗಳಿವೆ. ದುಬಾರಿ ಸ್ಕೂಟರ್‌ಗಳ ನಡುವೆ ಕಡಿಮೆ ಬೆಲೆ, ಕಡಿಮೆ ನಿರ್ವಹಣೆ ಮೂಲಕ ಪ್ರತಿ ದಿನ ಉಪಯೋಗಿಸಬಲ್ಲ ಸ್ಕೂಟರ್ ಇದಾಗಿದೆ.
ಕಡಿಮೆ ಬೆಲೆ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಬೇಡಿಕೆಗಳು ಹೆಚ್ಚಾಗಿದೆ. ಪ್ರತಿ ದಿನ ಬಳಕೆಗೆ ಜನರು ಇದೀಗ ಇವಿ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಈ ರೀತಿಯ ಕಡಿಮೆ ನಿರ್ವಹಣೆ ವೆಚ್ಚದ ಹಾಗೂ ಕಡಿಮೆ ಬೆಲೆಯ ಇವಿಗೆ ಹೆಚ್ಚು ಬೇಡಿಕೆ. ಇತ್ತ ದೇಶದೆಲ್ಲೆಡೆ ಚಾರ್ಜಿಂಗ್ ಕೇಂದ್ರಗಳ ವ್ಯವಸ್ಥೆಗಳು ಆಗುತ್ತಿದೆ. ಹೀಗಾಗಿ ಇವಿ ಖರೀದಿಸಿದ ಗ್ರಾಹಕನಿಗೆ ಸುಲಭವಾಗಿ ಚಾರ್ಜಿಂಗ್ ಮಾಡಲು ಅನುಕೂಲತೆಗಳನ್ನು ಮಾಡಿಕೊಡಲಾಗುತ್ತಿದೆ.
- DAKSHINA KANNADA4 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- DAKSHINA KANNADA2 days ago
ದಕ್ಷಿಣ ಕನ್ನಡ : ಹೆಬ್ಬಾವಿನ ಬಾಯಿಂದ ಬೆಕ್ಕಿನ ರಕ್ಷಣೆಗಾಗಿ ಶೋಭಕ್ಕನ ಹರಸಾಹಸ; ವೀಡಿಯೋ ವೈರಲ್
- LATEST NEWS4 days ago
ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?