Connect with us

bengaluru

WATCH : Rameshwaram Cafe : ಸಿಸಿಟಿವಿಯಲ್ಲಿ ಸೆರೆಯಾಯ್ತು ಬ್ಲಾಸ್ಟ್ ರೂವಾರಿ ಶಂಕಿತ ವ್ಯಕ್ತಿಯ ಚಹರೆ

Published

on

ಬೆಂಗಳೂರು : ರಾಜ್ಯವನ್ನೇ ನಡುಗಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಹಿಂದಿನ ರೂವಾರಿ ಶಂಕಿತ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಬಾಂಬ್ ಇದ್ದ ಬ್ಯಾಗನ್ನು ಈತ ಕೆಫೆಯೊಳಗೆ ಇಟ್ಟು ಆತ ಹೊರ ನಡೆದಿದ್ದಾನೆ.

ಮಾಸ್ಕ್, ಕನ್ನಡಕ ಮತ್ತು ಕನ್ನಡಕ ಧರಿಸಿ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನ ಚಲನವಲನ ಸಿಸಿಟಿವಿಯ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ಗ್ರಾಹಕನಂತೆ ಆತ ಹೊಟೇಲ್ ಗೆ ಆಗಮಿಸಿ ಆತ ಉಪಹಾರ ಖರೀದಿಸಿದ್ದ ಎಂದು ಹೇಳಲಾಗಿದೆ.

ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಬೆಂಗಳೂರಿನ ಪ್ರಸಿದ್ಧ ಹೊಟೇಲ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹತ್ತು ಸೆಕೆಂಡ್ ಅಂತರದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಪರಿಣಾಮ ಹತ್ತು ಮಂದಿ ಗಾಯಗೊಂಡಿದ್ದರು. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ಸದ್ಯ ಘಟನೆಯ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

bengaluru

ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣ : ಪ.ಬಂಗಾಳದಲ್ಲಿ ಮಾಸ್ಟರ್ ಮೈಂಡ್ ಅರೆಸ್ಟ್

Published

on

ಬೆಂಗಳೂರು : ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಶಂಕಿತ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹಮದ್ ತಾಹಾರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಬಂಧಿಸಲಾಗಿದೆ.

ಮುಸಾವೀರ್ ಐಇಡಿ ತಂದಿದ್ದ ಹಾಗೂ ಅಬ್ದುಲ್ ಮತೀನ್ ತಾಹ ಸ್ಫೋ*ಟಕ್ಕೆ ರೂಪುರೇಷೆ ಸಿದ್ಧಪಡಿಸಿದ್ದ ಎನ್ನಲಾಗಿದೆ. ಇಬ್ಬರು ತೀರ್ಥಹಳ್ಳಿಯವರು ಎಂದು ಹೇಳಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಇವರಿಗೆ ಸಹಾಯ ಮಾಡಿದ್ದ ಮುಜಾಮೀಲ್ ಷರೀಫ್ ಎಂಬಾತನನ್ನು ಕೂಡ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಎನ್ ಐ ಎ :

ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದ ಎನ್‍ಐಎ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್‍ಐಎ ಶೋಧ ನಡೆಸಿತ್ತು. ರಾಮೇಶ್ವರಂ ಕೆಫೆ ಬಾಂ*ಬ್ ಸ್ಫೋ*ಟ ಪ್ರಕರಣ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಹಾಗೂ ಮಸಾವೀರ್ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಇಬ್ಬರ ಫೋಟೋ ರಿಲೀಸ್ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಈ ಇಬ್ಬರ ಬಗ್ಗೆಯೂ ಸುಳಿವು ನೀಡುವಂತೆ ಮನವಿ ಮಾಡಿದ್ದರು. ಅಲ್ಲದೇ,  ಇವರಿಬ್ಬರ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಇಬ್ಬರೂ ಶಂಕಿತ ಉ*ಗ್ರರು ಅಸ್ಸಾಂ ಮತ್ತು ಬಂಗಾಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಎನ್ಐಎ ತಂಡ ಇದೀಗ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮಾರ್ಚ್ 1 ರಂದು ವೈಟ್‍ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂ*ಬ್ ಸ್ಫೋ*ಟಗೊಂಡಿತ್ತು. ಇದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯಲ್ಲಿ ಕೆಲವರು ಗಾ*ಯಗೊಂಡಿದ್ದರು. ಬಳಿಕ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಲಾಗಿತ್ತು.

Continue Reading

bengaluru

ಸಿಎಂಗೆ ಹಾರ ಹಾಕಲು ಸೊಂಟದಲ್ಲಿ ಗನ್ ಸಿಕ್ಕಿಸಿಕೊಂಡು ಬಂದಿದ್ದ ಯುವಕ! ಒಳ್ಳೆ ಹುಡುಗ ಅಂದ ಮಾಜಿ ಶಾಸಕ

Published

on

ಬೆಂಗಳೂರು : ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಭದ್ರತಾ ಲೋಪ ಕಂಡು ಬಂದಿತ್ತು. ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ಸಿಎಂಗೆ ಮಾಲಾರ್ಪಣೆ ಮಾಡಿದ್ದ. ಈ ಸಂದರ್ಭ ಆತನ ಸೊಂಟದಲ್ಲಿ ಗನ್ ಇದ್ದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಯುವಕನನ್ನು ವಶಪಡಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಒಳ್ಳೆ ಹುಡುಗ ಎಂದ ಮಾಜಿ ಶಾಸಕ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಲಾರ್ಪಣೆ ಮಾಡಿದ ರಿಯಾಜ್ ಸಿದ್ದಾಪುರ ರ್ಯಾಲಿ ಉಸ್ತುವಾರಿ ವಹಿಸಿಕೊಂಡಿದ್ದ. ಆತ ತುಂಬಾ ಒಳ್ಳೇ ಹುಡುಗ, ಅವನಿಗೆ ಗನ್ ಲೈಸೆನ್ಸ್ ಇದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರು ಹೇಳಿದ್ದಾರೆ.

ಭದ್ರತಾ ವೈಫಲ್ಯ ಆಗಿಲ್ಲ ಎಂದ ಡಿಕೆಶಿ
ಇಲ್ಲಿ ಭದ್ರತಾ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಅವರು ಗನ್​ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್​ಗಳು ಇದ್ದಾರೆ. ವಿಪಕ್ಷಗಳು ಒಳ್ಳೆಯ ವಿಷಯ ಇದ್ದರೆ ಮಾತನಾಡಬೇಕು ಎಂದು ಡಿಕೆಶಿ ಕಾರ್ಯಕರ್ತನ ಪರ ಬ್ಯಾಟ್ ಬೀಸಿದ್ದಾರೆ.

ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ
ಇನ್ನು ಘಟನೆಯನ್ನು ಬಿಜೆಪಿ ಟೀಕಿಸಿದೆ. ಅಲ್ಲದೇ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಾರ ಹಾಕುವವರು ಸನ್ಮಾನ ಮಾಡುವವರು ಗೂಂಡಾಗಳು, ರೌಡಿಗಳು, ಬೀದಿ ಪುಂಡರು ಎನ್ನುವುದು ಸಾಬೀತಾಗಿದೆ. ಇಷ್ಟುದಿನ ಹುಟ್ಟುಹಬ್ಬದ ಫ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿದ್ದ ಗನ್ ಹಿಡಿದ ರೌಡಿಗಳು, ಇದೀಗ ಸಿಎಂ, ಡಿಸಿಎಂ ಅವರ ರ್‍ಯಾಲಿಗಳಲ್ಲಿ ರಾಜಾರೋಷವಾಗಿ ಗನ್ ಹಿಡಿದು ಹಾರ ಹಾಕಿ ಸಮಾಜದ ಮುಂದೆ ಪೋಸ್ ಕೊಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗನ್ ಹಿಡಿದು ಈ ರೀತಿ ಪ್ರದರ್ಶನ ಮಾಡುತ್ತಿರುವುದು ಮತದಾರರನ್ನು ಏರಿಯಾದಲ್ಲಿ ಬೆದರಿಸುವುದಕ್ಕೆ. ಕೂಡಲೇ ECISVEEP ಆಯೋಗವು ಸಿಎಂ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಟ್ವೀಟ್ ಮಾಡಿದೆ.

ಗನ್ ಜಮೆ ಮಾಡಿಲ್ವ ಯಾಕೆ?

ಈಗಾಗಲೇ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ನಾಗರೀಕರು, ರಾಜಕಾರಣಿಗಳು, ಪ್ರಭಾವಿಗಳು, ರೌಡಿಶೀಟರ್ ಗಳು ತಮ್ಮ ಬಳಿ ಇರುವ ಗನ್ ಗಳನ್ನು , ರೈಫಲ್ , ಪಿಸ್ತೂಲ್ ಇತರೆ ಶಸ್ತ್ರಾಸ್ತ್ರಗಳನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಜಮೆ ಮಾಡಬೇಕು. ಆದ್ರೆ, ಇಲ್ಲಿ ಕಾರ್ಯಕರ್ತ ಮಾತ್ರ ಯಾಕೆ ತನ್ನ ಬಳಿ ಇರುವ ಗನ್ ಜಮೆ ಮಾಡಿಲ್ಲ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಸಾರ್ವಜನಿಕರಿಗೊಂದು ನ್ಯಾಯ..ಪ್ರಭಾವಿಗಳಿಗೆ ಒಂದು ನ್ಯಾಯನಾ? ಎಂಬ ಅನುಮಾನವೂ ಹುಟ್ಟಿಕೊಂಡಿದೆ.

Continue Reading

bengaluru

ಐದು ವರ್ಷದಲ್ಲಿ ಬೆಳಗಿದ ಸೂರ್ಯ…13 ಲಕ್ಷದಿಂದ 4 ಕೋಟಿಗೇರಿದ ಆಸ್ತಿ!!

Published

on

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ. ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅದರ ಜೊತೆಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಅವರ ಆಸ್ತಿ 13 ಲಕ್ಷದಿಂದ 4 ಕೋಟಿಗೆ ಏರಿಕೆಯಾಗಿದೆ.

Thejasvi surya

ತೇಜಸ್ವಿ ಸೂರ್ಯ ತಮ್ಮ ಬಳಿ ಯಾವುದೇ ಸ್ವಂತ ಮನೆ, ಕಾರು ಅಥವಾ ಬೈಕ್ ಇಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. 2019 ರಲ್ಲಿ 13.46 ರೂ. ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ತೇಜಸ್ವಿ ಸೂರ್ಯ, ಈ ಬಾರಿ 4.10 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ಕೋಟಿ ಹೂಡಿಕೆ ಮಾಡಿದ್ದಾರೆ. 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದು, ವಿವಿಧ ವಿಮಾ ಕಂಪನಿಗಳಲ್ಲಿನ 25,28,446 ಲಕ್ಷ ವಿಮೆ ಮಾಡಿಸಿದ್ದಾರೆ. 80 ಸಾವಿರ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ ಇಟ್ಟಿದ್ದಾರೆ. ತೇಜಸ್ವಿ ತಮ್ಮ ಹೆಚ್ಚಿನ ಹಣವನ್ನು ಮ್ಯೂಚುವಲ್ ಫಂಡ್‌ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಹೆಚ್ಚಾಗುತ್ತಿರುವುದೇ ಅವರ ಆಸ್ತಿ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.

Continue Reading

LATEST NEWS

Trending