Connect with us

    LATEST NEWS

    ವಿನೇಶ್ ಫೋಗಟ್ ಅನರ್ಹ : ಅಧಿಕೃತ ಹೇಳಿಕೆ ಬಿಡುಗಡೆ

    Published

    on

    ಪ್ಯಾರಿಸ್ ಒಲಿಂಪಿಕ್ಸ್: ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್​ನ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಗೆ ಲಗ್ಗೆ ಇಟ್ಟಿದ್ದರು. ಭಾರತಕ್ಕೆ ಚಿನ್ನ ಬರಲಿದೆ. ಫೋಗಟ್ ಇತಿಹಾಸ ಬರೆಯಲಿದ್ದಾರೆ ಎಂದು ಭಾರತೀಯರು ಸಂಭ್ರಮಿಸಿದ್ದರು. ಆದರೆ, ಸ್ಪರ್ಧೆಗೂ ಮುನ್ನ ನಡೆದ ತೂಕ ಪರೀಕ್ಷೆ ಶಾಕ್ ನೀಡಿತ್ತು.

    ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಆ ಬಳಿಕ ಈ ನಿರ್ಧಾರದ ವಿರುದ್ಧ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

    ಇದೀಗ ವಿನೇಶ್ ಅವರ ಮನವಿಯ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ, ‘ಒಲಿಂಪಿಕ್ಸ್ ಅಂತ್ಯದ ವೇಳೆಗೆ ಅಂದರೆ ಆಗಸ್ಟ್ 11 ಕ್ಕೂ ಮುನ್ನ ತೀರ್ಪು ನೀಡಲಾಗುವುದು’ ಎಂದು ಹೇಳಿದೆ.
    ವಿನೇಶ್ ಫೋಗಟ್ ತಾನು ಸಲ್ಲಿಸಿದ ಮನವಿಯಲ್ಲಿ, ತನಗೆ ಫೈನಲ್ ಪಂದ್ಯವನ್ನು ಆಡಲು ಅನುಮತಿ ನೀಡಬೇಕೆಂದು ಕೋರಿದ್ದರು. ಆದರೆ, ವಿನೇಶ್ ಅವರ ಮನವಿಯ ಮೇರೆಗೆ ಫೈನಲ್ ಪಂದ್ಯವನ್ನು ತಡಮಾಡಲು ಸಾಧ್ಯವಿಲ್ಲ ಎಂದು ಸಿಎಎಸ್ ಹೇಳಿತ್ತು. ಆ ನಂತರ ಫೋಗಟ್ ಜಂಟಿ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು ಕೋರಿದ್ದರು.

    ಇದನ್ನೂ ಓದಿ : ಕಸ ಎಸೆಯಬೇಡ, ಗುಟ್ಕಾ ಉಗಿಬೇಡ ಅಂದಿದ್ದೇ ತಪ್ಪಾಯ್ತ! ವೃದ್ಧನನ್ನು ಕೊಂ*ದ ಯುವಕ
    ಇದೀಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವಿನೇಶ್ ಫೋಗಟ್ ಅವರ ಅನರ್ಹತೆಯ ವಿರುದ್ಧದ ಅರ್ಜಿಯ ಬಗ್ಗೆ ಒಲಿಂಪಿಕ್ ಕ್ರೀಡಾಕೂಟ ಮುಗಿಯುವ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

    ಏನಿದು ಸಿಎಎಸ್?
    ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (CAS) ಪ್ರಪಂಚದಾದ್ಯಂತ ಕ್ರೀಡೆಗಳಿಗಾಗಿ ರಚಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಕಾನೂನು ವಿವಾದಗಳನ್ನು ಬಗೆಹರಿಸುವುದು ಇದರ ಕೆಲಸ.

    1984 ರಲ್ಲಿ ಸ್ಥಾಪಿತವಾದ ಈ ಅಂತಾರಾಷ್ಟ್ರೀಯ ಸಂಸ್ಥೆಯು ಕ್ರೀಡಾ ಸಂಬಂಧಿತ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ಕೆಲಸ ಮಾಡುತ್ತದೆ. ಇದು ಸ್ವಿಟ್ಜರ್ಲೆಂಡ್‌ನ ಲೋಗೆನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ನ್ಯೂಯಾರ್ಕ್, ಸಿಡ್ನಿ ಮತ್ತು ಲೋಗೆನ್‌ನಲ್ಲಿ ನ್ಯಾಯಾಲಯಗಳನ್ನು ಹೊಂದಿದೆ. ಒಲಿಂಪಿಕ್ ಆತಿಥೇಯ ನಗರಗಳಲ್ಲಿ ತಾತ್ಕಾಲಿಕ ನ್ಯಾಯಾಲಯಗಳನ್ನು ಸಹ ಸ್ಥಾಪಿಸಲಾಗಿದೆ

    DAKSHINA KANNADA

    ಕೋಟಿ ಗಾಯತ್ರಿ ಯಾಗ: ಸೆ. 29ರಂದು ಚಿತ್ರಾಪುರ ಮಠದಲ್ಲಿ ಸಂಕಲ್ಪ ದಿನ

    Published

    on

    ಮಂಗಳೂರು : ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವತಿಯಿಂದ ಅಕ್ಟೋಬರ್ 26 ಮತ್ತು 27ರಂದು ನಡೆಯಲಿರುವ ಕೋಟಿ ಗಾಯತ್ರಿ ಯಾಗದ ಪೂರ್ವಭಾವಿಯಾಗಿ ಸೆ. 29ರ ಭಾನುವಾರ ಮುಂಜಾನೆ ಸಂಕಲ್ಪ ದಿನವನ್ನು ಮಂಗಳೂರಿನ ಚಿತ್ರಾಪುರ ಮಠದಲ್ಲಿ ನಡೆಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದರು. ಚಿತ್ರಾಪುರ ಮಠದಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಸ್ತರ ಸಭೆಯಲ್ಲಿ ಕೋಟಿ ಗಾಯತ್ರಿ ಯಾಗದ ಯಶಸ್ವಿಗಾಗಿ ನಾನಾ ಸಮಿತಿಗಳನ್ನು ರಚನೆಯ ಬಗ್ಗೆ ಚರ್ಚಿಸಿ ನಿರ್ಣಯಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮುದಾಯವು ಈಗಾಗಲೇ ಗಾಯತ್ರಿ ಯಜ್ಞದ ಪೂರ್ವಭಾವಿಯಾಗಿ ಜಪದ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೊರಭಾಗದಲ್ಲಿರುವ ಜಿಲ್ಲೆಯ ಬ್ರಾಹ್ಮಣರು ಕೂಡಾ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಹೆಸರು ನೋಂದಾಯಿಸುವ ನಿಟ್ಟಿನಲ್ಲಿ ಪ್ರೇರೇಪಿಸುವ ಕೆಲಸವಾಗಬೇಕು ಎಂದರು. ಬ್ರಾಹ್ಮಣ ಸಮಾಜದ ಎಲ್ಲಾ ಬಾಂಧವರು ಒಂದೇ ಸೂರಿನಡಿ ಸೇರಿಸಿ, ಹೊರ ಜಗತ್ತಿಗೆ ಬ್ರಾಹ್ಮಣ ಎಂಬ ಸಂದೇಶ ಮುಟ್ಟಿಸುವಂತಾಗಬೇಕು. ಇದೊಂದು ವಿಶೇಷ ಕಾರ್ಯಕ್ರಮ ಈ ಕಾರ್ಯಕ್ರಮವು ಗಾಯತ್ರಿ ಸಂಗಮವಾಗಿದೆ. ’ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಶೀರ್ಷಿಕೆಯಡಿ ಜರಗಲಿದೆ. ಆದುದರಿಂದ ರಚನೆಯಾದ ಸಮಿತಿಯ ಸದಸ್ಯರು ಎಲ್ಲರೂ ಒಂದಾಗಿ ತಮ್ಮ ಮನೆ ಕಾರ್ಯಕ್ರಮ ಎಂಬ ರೀತಿಯಲ್ಲಿ ದುಡಿಯಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಒಗ್ಗಟ್ಟನ್ನು ತೋರಿಸಿಕೊಡಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಮಹೇಶ್ ಕಜೆ ಹೇಳಿದರು.

    ನಾನಾ ಸಮಿತಿಗಳ ಜವಾಬ್ದಾರಿ, ಹೋಮದ ರೂಪು ರೇಶೆ, ಹೋಮದ ಉದ್ದೇಶ, ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದ ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್ ಸಾಂದರ್ಭಿಕವಾಗಿ ಮಾತನಾಡಿದರು. ಅ. 26ರಂದು ಮಹಿಳೆಯರಿಗಾಗಿ ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಾತೆಯರು ಈ ಸಂಗಮದಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಈ ವೇದಿಕೆಯೇ ಇಡೀ ಸಮಾಜದ ಮುಖವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿಂದೆ ಗಾಯತ್ರಿ ಯಾಗ ಮಾಡಿ ಅನುಭವ ಇರುವ ವಿದ್ವಾನ್ ಬಂದಗದ್ದೆ ನಾಗರಾಜ್ ಮಾತನಾಡಿ, ಗಾಯತ್ರಿ ಮಂತ್ರ ಅನುಷ್ಠಾನ ಮಾಡುವುದರಿಂದ ಸಿಗುವ ಲಾಭ, ಮಾನಸಿಕ ವಿಕಸನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

    ವಿದ್ವಾನ್ ಕಟೀಲಿನ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, ಎಲ್ಲಾ ವಿಪ್ರ ಸಮಾಜ ಬಾಂಧವರು ಒಟ್ಟು ಸೇರಿ ಈ ಯಜ್ಞ ಕಾರ್ಯದಲ್ಲಿ ಭಾಗಿಗಳಾಗೋಣ, ಪ್ರತಿಯೊಬ್ಬ ಬ್ರಾಹ್ಮಣನು ಸಹ ಕುಟುಂಬ ಸಹಿತ ಪಾಲ್ಗೊಳ್ಳಬೇಕು ಹಾಗೂ ಸೆ.೨೯ರ ಸಂಕಲ್ಪ ಕಾರ್ಯದಲ್ಲಿ ಕನಿಷ್ಠ ೫೦೦ ಜನ ಬಾಂಧವರು ಸೇರಬೇಕು ಎಂದರು. ಬ್ರಾಹ್ಮಣ ಮಹಾಸಭಾ ಸುರತ್ಕಲ್‌ನ ಗೌರವಾಧ್ಯಕ್ಷ ಪಿ. ಪುರುಷೋತ್ತಮ ರಾವ್ ಇದು ನಮ್ಮೆಲ್ಲರ ಕಾರ್ಯಕ್ರಮ ಪ್ರತಿಯೊಬ್ಬರು ತಾನು ಮನ ಧನಗಳಿಂದ ಸಾಹಕರಿಸೋಣ ಎಂದರು.

    ವಿವಿಧ ಬ್ರಾಹ್ಮಣ ಸಮಾಜದ ಪ್ರಮುಖರಾದ ಕರ್ಗಿ ಶ್ರೀನಿವಾಸ ಅಚಾರ್, ಶ್ರೀನಿವಾಸ್ ಚಿತ್ರಾಪುರ, ಸುರೇಶ್ ರಾವ್ ಚಿತ್ರಾಪುರ, ಶ್ರೀಕರ ದಾಮ್ಲೆ, ಎಂ.ಟಿ. ಭಟ್, ಉದಯ ಕುಮಾರ್, ಉದಯ ಕುಮಾರ್ ಸುರತ್ಕಲ್, ಕಾತ್ಯಾಯಿನಿ ರಾವ್, ಶೋಭಾ ಚಿತ್ರಾಪುರ, ಸಾವಿತ್ರಿ ಹೆಚ್ ಭಟ್, ಹೊಸಬೆಟ್ಟು, ರಮಾ.ವಿ ರಾವ್, ಯಮುನಾ ಪಿ ರಾವ್, ಎಂ ಸದಾಶಿವ ಕುಳಾಯಿ, ಪ್ರಕಾಶ್ ಕೋಟೆಕಾರ್, ಜಯಪ್ರಕಾಶ್ ಹೆಬ್ಬಾರ್, ಜಯರಾಮ್ ಭಟ್, ಸುಬ್ರಹ್ಮಣ್ಯ ವಿ ಭಟ್, ಗೋಪಾಲಕೃಷ್ಣ ಮಯ್ಯ, ಜ್ಯೋತಿಷಿ ರಂಗ ಐತಾಳ್ ಕದ್ರಿ, ವಿದ್ವಾನ್ ಸತ್ಯಕೃಷ್ಣ ಭಟ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

    Continue Reading

    LATEST NEWS

    ಪೋಕ್ಸೋ ಪ್ರಕರಣ: ಖ್ಯಾತ ಜ್ಯೋತಿಷಿ ಬಂಧನ

    Published

    on

    ಸುಳ್ಯ: ತಾಲೂಕಿನ ಬೆಳ್ಳಾರೆಯ ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿಯೊಬ್ಬನನ್ನು ಬಂಧಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಯಲ್ಲಿ ಧಾರ್ಮಿಕ ಉಪನ್ಯಾಸದ ಜೊತೆಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಫೇಮಸ್ ಆಗಿದ್ದ ನರಸಿಂಹ ಪ್ರಸಾದ್ ಪಾಂಗಣೇಯ ಬಂಧಿತ ಆರೋಪಿ.

    ಕಾಣಿಯೂರಿನ ಬೆಳಂದೂರು ನಿವಾಸಿಯಾಗಿರುವ ಈತನ ಮನೆಗೆ ಮುಂಜಾನೆಯ ವೇಳೆ ದಾಳಿ ಮಾಡಿದ ಪೊಲೀಸರು ಪ್ರಸಾದ್ ಪಾಂಗಣೇಯನನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಾಲಕಿಯೊಬ್ಬಳ ಕೌನ್ಸಿಲಿಂಗ್ ವೇಳೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಈ ಬಂಧನ ಆಗಿದೆ ಎಂಬ ಮಾಹಿತಿ ದೊರೆತಿದೆ.

    Continue Reading

    LATEST NEWS

    ಗೌರವಧನ ಸರಿಯಾಗಿ ನೀಡದೇ ಇದ್ದಲ್ಲಿ ಕೆಲಸ ಸ್ಥಗಿತ: ಅಂಗನವಾಡಿ ಕಾರ್ಯಕರ್ತೆಯರಿಂದ ಎಚ್ಚರಿಕೆ

    Published

    on

    ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸಿ ಅಂತ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದ್ದಾರೆ.

    ಉಡುಪಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರೆಯರು ಹಾಗೂ ಸಹಾಯಕಿಯರು ಈ ಪ್ರತಿಭಟನೆ ನಡೆಸಿದ್ದಾರೆ. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

    ಪ್ರಮುಖವಾಗಿ ಗೌರವಧನವನ್ನು ಪ್ರತಿ ತಿಂಗಳ ಸರಿಯಾಗಿ ಪಾವತಿ ಮಾಡಬೇಕು ಹಾಗೂ ಮೊಟ್ಟೆ ವಿತರಣೆಗೆ ತಗಲುವ ಖರ್ಚನ್ನು ಮುಂಚಿತವಾಗಿ ನೀಡಬೇಕು ಮತ್ತು ಮಾರುಕಟ್ಟೆ ದರದಲ್ಲಿ ಏರಿಳಿತಕ್ಕೆ ತಕ್ಕಂತೆ ಮೊಟ್ಟದರವನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ನಮ್ಮನ್ನು ದುಡಿಸಿಕೊಳ್ಳೂತ್ತಿರುವ ಸರ್ಕಾರ ನಮಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ನೀಡದೆ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಸರ್ಕಾರ ಸೂಕ್ತವಾಗಿ ಸ್ಪಂಧಿಸದೇ ಇದ್ದಲ್ಲಿ ಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.

    Continue Reading

    LATEST NEWS

    Trending