FILM
ದೊಡ್ಮನೆ ‘ಆನೆ’ಗೆ ಪಟ್ಟಾಭಿಷೇಕ…ಕ್ಯಾಪ್ಟೆನ್ಸಿ ಅಬ್ಬರ ಹೇಗಿರ್ಬೋದು?
bangalore : ಬಿಗ್ ಬಾಸ್ ಮನೆಯ ‘ಆನೆ’ ಎನಿಸಿಕೊಂಡಿರುವ ವಿನಯ್ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಬಿಗ್ ಬಾಸ್’ ಮನೆಯ ‘ಆನೆ’ ಎನಿಸಿಕೊಂಡಿರುವ ವಿನಯ್ ಗೌಡ ಮನೆಯ ಕ್ಯಾಪ್ಟನ್ ಆಗಿದ್ದಾರೆ.ಹಿಂದಿನ ಎಪೀಸೋಡ್‌ನಲ್ಲಿ ಏಕವಚನದಲ್ಲಿ ಮಾತನಾಡಿಸಬೇಡ ಅಂತ ವಿನಯ್‌ಗೆ ಸಂಗೀತಾ ವಾರ್ನಿಂಗ್ ಕೊಟ್ಟಿದ್ದಾರೆ.
ಇದಲ್ಲದೇ ತನಿಷಾ ಕುಪ್ಪಂಡ ಅವರಿಗೂ ಸಹ ‘ಏನೇ..’ ಅಂತ ಏಕವಚನದಲ್ಲಿಯೇ ಮಾತನಾಡಿಸಿ ವೀಕ್ಷಕರ ಬೇಸರಕ್ಕೆ ಕಾರಣವಾಗಿದ್ದಾರೆ.
ಬಿಗ್‌ಬಾಸ್ ಈ ಸೀಸನ್‌ನ ಪ್ರಾರಂಭದ ದಿನಂದಿಗಲೂ ಸಂಗೀತಾ ವರ್ಸಸ್ ವಿನಯ್ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು.
ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ.
ಹಾಗಾಗಿ ಸಂಗೀತಾ ಶೃಂಗೇರಿ ಅವರನ್ನು ವಿನಯ್ ಟಾರ್ಗೆಟ್ ಮಾಡಬಹುದು.ಅಲ್ಲದೇ, ಇತ್ತೀಚೆಗಿನ ಹಳ್ಳಿ ಟಾಸ್ಕ್ ವೇಳೆ ನಟಿ ತನಿಷಾ ಕುಪ್ಪಂಡ ಕೂಡ ವಿನಯ್ ಜೊತೆ ಜಗಳ ಮಾಡಿದ್ದಾರೆ.
ತನಿಶಾ ಕುಪ್ಪಂಡ ವಿಚಾರದಲ್ಲಿ ವಿನಯ್ ಅವರು ಕಟ್ಟುನಿಟ್ಟಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ.ಇನ್ನು ವಿನಯ್ ಕ್ಯಾಪ್ಟೆನ್ಸಿಯಲ್ಲಿ ಡ್ರೋನ್ ಪ್ರತಾಪ್ ಗೂ ಕಷ್ಟ ಆಗುವ ಸಾಧ್ಯತೆ ಇದೆ.
bangalore
ಆಸ್ಟ್ರೇಲಿಯಾ ಬೀಚ್ ನಲ್ಲಿ ಮಂಗ್ಳೂರು ಬೆಡಗಿ ಅನುಶ್ರೀ…
Film: ಕನ್ನಡ ರಿಯಾಲಿಟಿ ಶೋನಲ್ಲಿ ಹೆಸರುವಾಸಿಯಾಗಿರುವ ಮಂಗ್ಳೂರು ಬೆಡಗಿ ಆಂಕರ್ ಅನುಶ್ರಿ ಇದೀಗ ಆಸ್ಟ್ರೇಲಿಯಾದತ್ತ ಟ್ರಿಪ್ ಹೋಗಿರುವ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರಾವಳಿ ಬೆಡಗಿ ಆಗಿರುವ ಅನುಶ್ರೀ ಕನ್ನಡ ಕಿರುತೆರೆಯಲ್ಲಿ ಉತ್ತಮ ಆಂಕರ್ ಆಗಿ ಅವರ್ಡ್ ಪಡೆದುಕೊಂಡ ಅನುಶ್ರೀಯ ಮಾತು ಕೇಳೊಕೆ ಎಲ್ಲರಿಗೆ ಅಚ್ಚು ಮೆಚ್ಚು. ಬಾಯಿ ತೆರೆದರೆ ಪಟಪಟನೇ ಮಾತನಾಡುವ ಆಂಕರ್ ಇದೀಗ ಆಸ್ಟ್ರೇಲಿಯಾದತ್ತ ಕಾಲಿಟ್ಟಿದ್ದಾರೆ.
ಪ್ರತಿದಿನ ಆಂಕರ್ ಮಾಡೋದು ಅಲ್ಲ ಸೊಲ್ಪ ಹೊರಗಿನ ಪ್ರಪಂಚಕ್ಕೆ ಕಾಲಿಡಬೇಕು. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬೇಕು. ಅದೇ ರೀತಿ ಆಸ್ಟ್ರೇಲಿಯಾಕ್ಕೆ ತೆರಳಿದ ಅನುಶ್ರೀ ಆಸ್ಟ್ರೇಲಿಯಾ ಬೀಚ್ ನಲ್ಲಿ ಅಪ್ಪು ಎಂದು ಬರೆದುಕೊಂಡಿದ್ದಾರೆ.
ಅಲ್ಲಿರುವ ಆಸ್ಟ್ರೇಲಿಯಾ ಸ್ಕೈ ಪಾಯಿಂಟ್, ಬೀಚ್‌ಗಳು ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ಹಾಗೂ ಹಲವು ಕಡೆ ಭೆಟಿ ನೀಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ ಮಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್ ಆ್ಯಂಕರ್ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್ ಅನುಶ್ರೀ ಈಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.
ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್ ತೀರದತ್ತ ಸಂಚಾರ ನಡೆಸಿದ ಅವರು ಸ್ಯಾಂಡಲ್ ವುಡ್ ನ ನಟ ನಗು ಮೊಗದ ಅಪ್ಪು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
bangalore
“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.
ಈ ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸದರು.
ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ‘ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು’ ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು.
ಈ ಸಂದರ್ಭ ರಚಿತರಾಮ್ ಜೊತೆ ಹಾಡಲು ಹೇಳಿದಾಗ ಅವರು ಕೂಡ “ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು” ಎಂದು ನಗ್ತಾ ನಗ್ತಾ ಹಾಡಿದರು.
ಬಳಿಕ ಮಾತನಾಡಿದ ನಟಿ ವಿದ್ಯಾರ್ಥಿಗಳು ಇಂತಹ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಮತ್ತೇ ಇಂತಹ ವೇದಿಕೆ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶನ ಮಾಡಬೇಕು. ಬೇರೆ ಯಾರೂ ಕೂಡ ನಮಗೆ ಹೇಳಲು ಬರುವುದಿಲ್ಲ.
ಯಾರೂ ಕೂಡ ಸಪೋರ್ಟ್ ಮಾಡುವುದಿಲ್ಲ. ಸ್ವಾಯತ್ತತೆಯಿಂದ ನಾವು ಗೆಲ್ಲಬೇಕು. ಒಳ್ಳೆ ಒಳ್ಳೆ ವೇದಿಕೆ ಸಿಕ್ಕಾಗ ಬಿಡಬಾರದು. ಅದರ ಜೊತೆಗೆ ನಮ್ಮ ಗುರುಗುಳಿಗೆ ಹಾಗೂ ತಮ್ಮ ಪೋಷಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ ಜೊತೆಗೆ ಅವರನ್ನು ಪ್ರೀತಿಸಿ ಎಂದರು.
ಈ ವೇಳೆ ರಚಿತರಾಮ್ ಕನ್ನಡದಲ್ಲಿ ಮಾತನಾಡಿದಾಗ ವಿದ್ಯಾರ್ಥಿಗಳು ತುಳುವಿನಲ್ಲಿ ಮಾತನಾಡಿ ಎಂದು ಕೂಗಾಡಿದರು. ಆಗ ಅವರು ಎಂಚ ವುಲ್ಲರ್ ಮರ್ರೆ…ಹುಷಾರ್ ವುಲ್ಲರಾ…ಎಂದು ತುಳುವಿನಲ್ಲಿ ಮಾತನಾಡಿದರು.
bangalore
ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾನೆ…ಎಂದು ಪಟ್ಟು ಹಿಡಿದ ಸ್ಪರ್ಧಿ ಯಾರು ಗೊತ್ತಾ..?
Bigboss: ಬಿಗ್ ಬಾಸ್ ಮುಕ್ತಾಯಕ್ಕೆ ಇನ್ನು ಅರ್ಧ ಜರ್ನಿ ಬಾಕಿ ಇದೆ. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಫೈಟ್ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾವೇ ಎಂದು ಪಟ್ಟು ಹಿಡಿದ ಸ್ಫರ್ಧಿಗಳು ಗೆಲ್ಲುತ್ತಾರೋ ಅನ್ನೋದು ಕಾದು ನೋಡಬೇಕಿದೆ.
ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಟೀಮ್ ನಲ್ಲಿ ಕಿತ್ತಾಟ ನಡೆದರೂ ವಿನಯ್ ಮಾತ್ರ ತಲೆಕೆಡಿಸದೆ ಈ ಬಾರಿ ಬಿಗ್ ಬಾಸ್ ಟೈಟಲ್ ನಾನೇ ಗೆಲ್ಲೋದು ಎಂದು ಹೇಳಿಕೊಂಡಿದ್ದಾರೆ.
ಈಗಾಗಲೇ ಬಿಗ್ ಬಾಸ್ ಜರ್ನಿ ಅರ್ಧ ಮುಗಿದಿದ್ದು, ಇನ್ನು ಅರ್ಧ ಬಾಕಿ ಇದೆ. ಹಾಗಾಗಿ ಇದರಲ್ಲಿ ಯಾರು ಗೆಲ್ಲೋತ್ತಾರೋ ಅನ್ನೊ ಪ್ರಶ್ನೆ ಮತ್ತೇ ಕಾಡಿದೆ. ವಾರದಿಂದ ವಾರಕ್ಕೆ ಎಲಿಮಿನೇಟ್ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರೆ. ಇತ್ತ ವಿನಯ್ ಯಾರನ್ನೂ ಲೆಕ್ಕಿಸದೇ ತಾವೇ ಈ ಬಾರಿ ಫಿನಾಲೆ ಮೆಟ್ಟಿಲೇರಬೇಕು ಎಂದಾಗ ಸ್ನೇಹಿತ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಗಿ ವಿನಯ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ನಮ್ರತಾ ಮತ ಚಲಾಯಿಸಿದ್ದಾರೆ. ಹಾಗಾಗಿ ನಮ್ರತಾ ಇವರ ಗುಂಪಿನಿಂದ ಹೊರ ನಡೆದಿದ್ದಾರೆ.
ಆ ಬಳಿಕ ವಿನಯ್ ಹಾಗೂ ಸ್ನೇಹಿತ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ.
ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ವಿನಯ್ ನ ಕನಸು ಈಡೇರುತ್ತಾ..? ಅವರೇ ಬಿಗ ಬಾಸ್ ವಿನ್ನರ್ ಆಗುತ್ತಾರ ಎಂದು ಕಾದು ನೋಡಬೇಕಿದೆ.