Connect with us

    FILM

    ದರ್ಶನ್ ಭೇಟಿ ಮಾಡಲು ಸ್ಟೇಷನ್‌ಗೆ ಬಂದ ಪತ್ನಿ..!

    Published

    on

    ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ತೂಗುದೀಪ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್ ಬಂಧನವಾಗಿ ಇಂದಿಗೆ 8 ದಿನವಾಗಿದೆ. ಇಂದು (ಜೂನ್ 19) ದರ್ಶನ್ ಪತ್ನಿ ವಿಜಯಲಕ್ಷ್ಮಿ ಠಾಣೆಗೆ ಬಂದಿದ್ದು, ಪ್ರಕರಣದ ಬಗ್ಗೆ ಹೇಳಿಕೆ ನೀಡಲಿದ್ದಾರೆ.

    ಕಳೆದ ಮಂಗಳವಾರ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿತ್ತು, ಕೊಲೆ ಪ್ರಕರಣವಾದ ಮರುದಿನ ನಟಿ ವಿಜಯಲಕ್ಷ್ಮಿ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದರು. ವಿಜಯಲಕ್ಷ್ಮಿ, ಕೊಲೆ ಆರೋಪಿ ಪತಿಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ವಿಜಯಲಕ್ಷ್ಮಿ ಅವರು, ದರ್ಶನ್ ಪರವಾಗಿ ವಕೀಲರನ್ನು ನೇಮಿಸಿ, ಪತಿಗಾಗಿ ಹೊರಗಿನಿಂದ ಹೋರಾಟ ಆರಂಭಿಸಿದ್ದರು. ಅಂತಿಮವಾಗಿ ಇಂದು ಪೊಲೀಸರ ಮುಂದೆ ಹೇಳಿಕೆ ನೀಡಲಿದ್ದಾರೆ.

    ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್​ಮೆಂಟ್​ಗೆ ದರ್ಶನ್ ಹೋಗಿದ್ದರು. ಅಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿದ್ದರು. ಶೂಗಳನ್ನು ಸಹ ಅಲ್ಲಿಯೇ ಬಿಟ್ಟಿದ್ದರು. ಅದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆದಿದ್ದರು. ವಿಜಯಲಕ್ಷ್ಮಿ ಮಾತ್ರವೇ ಠಾಣೆಗೆ ಆಗಮಿಸಿದ್ದಾರೆ, ಪುತ್ರ ವಿನೀಶ್ ಬಂದಿಲ್ಲ ಎನ್ನಲಾಗುತ್ತಿದೆ. ದರ್ಶನ್​ಗೆ ಬಟ್ಟೆ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಸಹ ವಿಜಯಲಕ್ಷ್ಮಿ ತಂದಿದ್ದಾರೆ ಎಂಬ ಮಾಹಿತಿಯೂ ಇದೆ. ದರ್ಶನ್ ಬಂಧನ ಆದಾಗಿನಿಂದಲೂ ವಿಜಯಲಕ್ಷ್ಮಿ ಅವರು ಬೇರೊಬ್ಬರಿಂದ ದರ್ಶನ್​ಗೆ ಬೇಕಾದ ಬಟ್ಟೆ ಮತ್ತು ಕೆಲ ಅಗತ್ಯ ವಸ್ತುಗಳನ್ನು ಕಳಿಸುತ್ತಿದ್ದರು.

    ಘಟನೆ ನಡೆದ ದಿನ ದರ್ಶನ್ ಮನೆಗೆ ಬಂದಾಗ ನಡೆದ ಘಟನೆಗಳು, ಆಡಿದ ಮಾತು, ನಡೆದುಕೊಂಡ ರೀತಿ ಸೇರಿದಂತೆ ದರ್ಶನ್​ರ ಇತರೆ ಕೆಲವು ವಿಷಯಗಳ ಬಗ್ಗೆಯೂ ಪೊಲೀಸರು ವಿಜಯಲಕ್ಷ್ಮಿ ಅವರನ್ನು ಪ್ರಶ್ನಿಸಿ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

    ಪವಿತ್ರಾ ಜೊತೆಗಿನ ದರ್ಶನ್​ ಸಂಬಂಧವನ್ನು ಕಠುವಾಗಿ ವಿರೋಧಿಸುತ್ತಲೇ ಬಂದಿದ್ದರು ವಿಜಯಲಕ್ಷ್ಮಿ. ಆದರೆ ದರ್ಶನ್ ಈಗ ಪವಿತ್ರಾ ಗೌಡಗೆ ಸಂಬಂಧಿಸಿದ ಪ್ರಕರಣದಲ್ಲಿಯೇ ಕೊಲೆ ಆರೋಪ ಹೊತ್ತುಕೊಂಡಿದ್ದಾರೆ. ಆದರೂ ಸಹ ವಿಜಯಲಕ್ಷ್ಮಿ ಮತ್ತೊಮ್ಮೆ ದರ್ಶನ್ ಮಾಡಿರುವ ತಪ್ಪನ್ನು ಮನ್ನಿಸಿ, ಪತಿಗಾಗಿ ಠಾಣೆ ಮೆಟ್ಟಿಲೇರಿದ್ದಾರೆ.

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    FILM

    ಖ್ಯಾತ ನಟ ಜಯಂ ರವಿ – ಆರತಿ ದಾಂಪತ್ಯ ಜೀವನದಲ್ಲಿ ಬಿರುಕು!?

    Published

    on

    ಸಿನಿಮಾ ಲೋಕದಲ್ಲಿ ವಿಚ್ಛೇದನ ಎಂಬುದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಹಿಂದಿ, ತಮಿಳು, ತೆಲುಗು, ಚಂದನವನ ಎಲ್ಲೆಡೆಯೂ ವಿಚ್ಛೇದನದ್ದೇ ಸುದ್ದಿ.

    ಕಾಲಿವುಡ್‌ನಲ್ಲಿ ನಟ ಧನುಷ್ ಹಾಗೂ ಐಶ್ವರ್ಯ ವಿಚ್ಛೇದನದ ಸುದ್ದಿ ಈಗಾಗಲೇ ಸುದ್ದಿಯಾಗಿತ್ತು. ಇತ್ತೀಚೆಗೆ ಸಂಗೀತ ನಿರ್ದೇಶಕ, ನಟ ಜಿ. ವಿ ಪ್ರಕಾಶ್ ವಿಚ್ಛೇದನ ಪಡೆಯುವ ಬಗ್ಗೆ ಘೋಷಿಸಿದ್ದರು. ಇದೀಗ ಮತ್ತೊಬ್ಬ ನಟನ ಬಗ್ಗೆ ವಿಚ್ಛೇದನದ ಗಾಸಿಪ್ ಹರಿದಾಡಿದೆ.

    ಹೌದು, ನಟ ಜಯಂ ರವಿ – ಆರತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬುದಾಗಿ ಗುಸುಗುಸು ಶುರುವಾಗಿದೆ.

    ಇಬ್ಬರ ನಡುವೆ ಭಿನ್ನಾಭಿಪ್ರಾಯ?

    ತಮಿಳು ಸಿನಿಮಾ ಸಂಕಲನಕಾರ ಮೋಹನ್ ಪುತ್ರ ರವಿ ಬಾಲನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಬಳಿಕ ಅವರು 2003ರಲ್ಲಿ ‘ಜಯಂ’ ಚಿತ್ರದ ಮೂಲಕ ನಾಯಕ ನಟನಾಗಿ ಪಾದರ್ಪಣೆ ಮಾಡಿದ್ದರು. ಅಲ್ಲಿಂದ ‘ಜಯಂ ರವಿ’ ಎಂದೇ ಜನಪ್ರಿಯರಾದರು. ಬಳಿಕ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಬಂದ ಪೊನ್ನಿಯಿನ್ ಸೆಲ್ವನ್ ಚಿತ್ರದ ಟೈಟಲ್‌ ರೋಲ್‌ನಲ್ಲಿ ಮಿಂಚಿ ಮೆಚ್ಚುಗೆ ಗಳಿಸಿದ್ದರು.

    ಇದನ್ನೂ ಓದಿ : ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?

    2009 ರಲ್ಲಿ ಕಿರುತೆರೆ ನಿರ್ಮಾಪಕ ಸುಜಾತಾ ವಿಜಯಕುಮಾರ್ ಮಗಳು ಆರತಿ ಎಂಬುವವರ ಜೊತೆ ಜಯಂ ರವಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ರವಿ – ಆರತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಗಾಸಿಪ್ ಹರಿದಾಡುತ್ತಿದೆ. ಇದೇ ವೇಳರ ಆರತಿ ಇನ್‌ಸ್ಟಾಗ್ರಾಮ್‌ನಿಂದ ಪತಿ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡಿದ್ದು, ಅನುಮಾನ ಇನ್ನಷ್ಟು ಬಲವಾಗಿದೆ.

    Continue Reading

    FILM

    ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ

    Published

    on

    ಬೆಂಗಳೂರು : ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಆರೋಪ ಹೊತ್ತಿರುವ ದರ್ಶನ್ ಜೈಲು ಪಾಲಾಗಿದ್ದಾರೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಂಧನದಿಂದ ಆಘಾ*ತಕ್ಕೊಳಗಾಗಿದ್ದಾರೆ. ಅಲ್ಲದೇ, ಕೆಲವರು ಟೀಕಾಪ್ರಹಾರಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ಓರ್ವ ದರ್ಶನ್ ಅಭಿಮಾನಿಯನ್ನು ಬಂಧಿಸಲಾಗಿದೆ.


    ಚೇತನ್ ಬಂಧಿತ ಆರೋಪಿ. ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

    ಚೇತನ್ ಬಹಿರಂಗವಾಗಿ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋಗಳನ್ನು ನೋಡಿದ ನಿರ್ಮಾಪಕ ಉಮಾಪತಿ ಗೌಡ ಬೆದರಿಕೆ ಹಾಕಿದ್ದ ಯುವಕನ ಬಗ್ಗೆ ದೂರು ನೀಡಿದ್ದರು.

    ಇದನ್ನೂ ಓದಿ : ದರ್ಶನ್ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು

    ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಅಭಿಮಾನಿ ಚೇತನ್ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 504,506 ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.

    Continue Reading

    LATEST NEWS

    Trending