Connect with us

  kerala

  ಹಗ್ಗ ಬಿಚ್ಚಿಸಿಕೊಂಡ ಕೋಣದಿಂದ ರೌದ್ರಾವತಾರ..! ಕಬ್ಬಿಣ ಗೇಟ್, ಕಾರು, ಬೈಕ್ ಪುಡಿಗೈದ ಕೋಣ.!

  Published

  on

  ಕಾಸರಗೋಡು: ಮನೆಯೊಂದರ ಬಳಿ ಕೋಣವೊಂದು ನಡೆಸಿದ ದಾಂದಲೆಯಿಂದ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌, ಸೇರಿ ಹಲವಾರು ವಸ್ತುಗಳು ಜಖಂಗೊಂಡಿದೆ. ಕಾಸರಗೋಡು ಜಿಲ್ಲೆಯ ಅಣಂಗೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಕೋಣದ ದಾಂದಲೆಗೆ ಜನರು ಹೈರಾಣಾಗಿದ್ದಾರೆ. ಯಾವ ಕಾರಣದಿಂದ ಕಾರಣದಿಂದ ಕೋಣ ಈ ರೀತಿ ವರ್ತಿಸಿದೆ ಅನ್ನೋದು ಗೊತ್ತಾಗಿಲ್ಲವಾದ್ರೂ ಕಟ್ಟಿ ಹಾಕಿದ್ದ ಕೋಣ ಏಕಾ ಏಕಿ ರಾಂಗ್ ಆಗಿ ವರ್ತಿಸಿದೆ.

  Read More..; ದರ್ಶನ್ ಭೇಟಿ ಮಾಡಲು ಸ್ಟೇಷನ್‌ಗೆ ಬಂದ ಪತ್ನಿ..!

  ಹಗ್ಗ ಕಡಿದುಕೊಂಡು ಗೇಟ್ ಕಡೆಗೆ ಓಡಿ ಕಬ್ಬಿಣದ ಗೇಟನ್ನೇ ಪುಡಿಗೈದಿದೆ. ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಮುಂಬಾಗವನ್ನು ಸಂಪೂರ್ಣ ಜಖಂ ಗೊಳಿಸಿದೆ. ಕೋಣವನ್ನು ಹಿಡಿಯಲು ಸ್ಥಳೀಯರು ಪ್ರಯತ್ನ ಪಟ್ಟರಾದ್ರೂ ಇನ್ನಷ್ಟು ಕೋಪಗೊಂಡ ಕೋಣ ಅಡ್ಡಾದಿಡ್ಡಿಯಾಗಿ ಓಡಿ ಅಕ್ಕಪಕ್ಕದ ಮನೆಗಳಿಗೂ ಹಾನಿ ಮಾಡಿದೆ. ಪಕ್ಕದ ಮನೆಯಲ್ಲಿದ್ದ ಸ್ಕೂಟರ್ ಉರುಳಿಸಿ ಜಖಂಗೊಳಿಸಿದೆ. ಕೋಣವನ್ನು ನಿಯಂತ್ರಿಸಲು ಪ್ರಯತ್ನಿಸಿದಷ್ಟೂ ಅದು ಮತ್ತಷ್ಟು ಹೆಚ್ಚು ದಾಂದಲೆ ನಡೆಸಿದೆ. ಆದ್ರೆ ಕೋಣ ಈ ಕೋಪಕ್ಕೆ ಕಾರಣ ಏನು ಅನ್ನೋದು ಗೊತ್ತಾಗಿಲ್ಲ. ಓಡಿ ಓಡಿ ಸುಸ್ತಾದ ಕೋಣ ಕೊನೆಗೂ ಜನರು ಹಾಕಿದ ಹಗ್ಗಕ್ಕೆ ಸಿಕ್ಕಿದೆ.

  kerala

  ಕಣ್ಣೂರು: ರಬ್ಬರ್ ತೋಟದಲ್ಲಿ ಪುರಾತನ ನಿಧಿ ಪತ್ತೆ..!!

  Published

  on

  ಕೇರಳ: ಕೇರಳದ ಕಣ್ಣೂರಿನಲ್ಲಿ ಕಾರ್ಮಿಕರು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿಧಿ ಪತ್ತೆಯಾಗಿದೆ. ಕಣ್ಣೂರು ಜಿಲ್ಲೆಯ ಚೆಲಂಗಾಯಿಯಲ್ಲಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಮಿಕರು ರಬ್ಬರ್ ತೋಟದಲ್ಲಿ ಇಂಗು ಗುಂಡಿ ತೆಗೆಯುತ್ತಿದ್ದರು. ಈ ವೇಳೆ ನಿಧಿಯನ್ನು ಹೋಲುವ ಐತಿಹಾಸಿಕ ಕಲಾಕೃತಿಗಳು ಪತ್ತೆಯಾಗಿದೆ. ಸರಕಾರಿ ಶಾಲೆಯ ಆವರಣದಲ್ಲಿದ್ದ ರಬ್ಬರ್ ತೋಟದಲ್ಲಿ ಇಂಗು ಗುಂಡಿಯನ್ನು ತೆಗೆಯುತ್ತಿದ್ದ ವೇಳೆ ಈ ಅಪರೂಪದ ನಿಧಿ ಕಾರ್ಮಿಕರಿಗೆ ಸಿಕ್ಕಿದೆ.

  ಆರಂಭದಲ್ಲಿ ಹೊಳೆಯುತ್ತಿದ್ದ ಈ ನಿಧಿಯನ್ನು ನೋಡಿದ ಕಾರ್ಮಿಕರು ಅದು ಬಾಂಬ್ ಆಗಿರಬಹುದೆಂದು ಆತಂಕ ಪಟ್ಟಿದ್ದರು. ಬಳಿಕ ನಿಧಿ ಇದ್ದ ಪೆಟ್ಟಿಗೆಯನ್ನು ಒಡೆದು ನೋಡಿದಾಗ ಅದರಲ್ಲಿ ಪುರಾತನ ಕಾಲದ ಚಿನ್ನದ ನಾಣ್ಯಗಳು, ಬೆಳ್ಳಿ ನಾಣ್ಯಗಳು, ಮುತ್ತು ರತ್ನಗಳು ಪತ್ತೆಯಾಗಿದೆ. ಇದರಲ್ಲಿ ಒಟ್ಟು 177 ಮುತ್ತಿನ ಮಣಿಗಳು, 13 ಚಿನ್ನದ ಪದಕಗಳು, ಹಿಂದಿನ ಕಾಶಿ ಮಾಲಾ ಹಾಗೂ ಸಾಂಪ್ರದಾಯಿಕ ಆಭರಣದ ಭಾಗವೆಂದು ನಂಬಲಾಗಿರುವ ನಾಲ್ಕು ಪದಕಗಳು, ಕಿವಿಯೋಲೆ, ಉಂಗುರ ಹಾಗೂ ಬೆಳ್ಳಿ ನಾಣ್ಯಗಳ ಸೆಟ್ ಪತ್ತೆಯಾಗಿದೆ.

  ನರೇಗಾ ಕಾರ್ಮಿಕೆ ಆಯೇಷಾರವರಿಗೆ ಮೊದಲು ಈ ಪೆಟ್ಟಿಗೆ ಕಾಣಸಿಕ್ಕಿದೆ. ಜೊತೆಯಲ್ಲಿದ್ದವರು ಅದು ಮಾಟ ಮಂತ್ರ ಮಾಡಿರಬಹುದು ಎಂದು ಹೇಳಿದ್ದು ಇದರಿಂದ ಭಯಗೊಂಡಿದ್ದರು. ಇನ್ನೋರ್ವ ಕೆಲಸಗಾರ್ತಿ ಸುಲೋಚನಾ ಮಾತನಾಡಿ ಪೆಟ್ಟಿಗೆಯ ಪಕ್ಕದಲ್ಲೇ ಹೊಳೆಯುವ ವಸ್ತುಗಳನ್ನು ಕಾಣಸಿಕ್ಕಿದೆ. ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿ ನಿಜವಾದ ಆಭರಣಗಳು ಹಾಗೂ ಪದಕಗಳು ಇದ್ದವು. ಪಂಚಾಯತ್‌ ನವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆವು. ನಾವು ಬರುವ ತನಕ ಅದನ್ನು ಮುಟ್ಟಬೇಡಿ ಎಂದು ಸೂಚನೆ ನೀಡಿದರು ಎಂದರು.

  ಸ್ಥಳಕ್ಕೆ ಶ್ರೀಕಂದಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಿಧಿಗೆ ಸಂಬಂಧಪಟ್ಟಂತೆ ರಾಜ್ಯ ಪುರಾತತ್ವ ಇಲಾಖೆಗೆ ನಿಧಿಯನ್ನು ಸುಪರ್ದಿಗೆ ಪಡೆಯುವಂತೆ ಪತ್ರದ ಮೂಲಕ ಸೂಚನೆ ನೀಡಿದ್ದೇವೆ. ಅವರ ಸೂಚನೆಯ ಮೇರೆಗ ನಿಧಿಯನ್ನು ತಲಿಪರಂಭಾ ಆರ್‌ಡಿಒ ಕೋರ್ಟ್‌ ಮುಂದೆ ಹಾಜರುಪಡಿಸಿದ್ದೇವೆ ಎಂದು ಹೇಳಿದ್ದಾರೆ.

  ಕಾಸರಗೋಡು: ಶಾಲಾ ವರಾಂಡದಲ್ಲಿ ನವಜಾತ ಶಿಶು ಪತ್ತೆ..!

  ಇಲ್ಲಿ ಲಭ್ಯವಾಗಿರುವ ನಿಧಿ 200 ವರ್ಷಗಳ ಹಿಂದಿನ ಕಾಲಘಟಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಪುರಾತತ್ವದ ಇಲಾಖೆಯು ನಾಣ್ಯಗಳಲ್ಲಿರುವ ಗುರುತುಗಳನ್ನು ಗಮನಿಸಿ ಇದು 18ನೇ ಶತಮಾನಕ್ಕಿಂತಲೂ ಹಳೆಯದಾಗಿದೆ ಎಂದು ಹೇಳಿದೆ. ಸಿಕ್ಕಿರುವ ನಿಧಿಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಕೋಜಿಕ್ಕೋಡ್‌ನ ಪಝಸ್ಸಿ ರಾಜಾ ಪುರಾತತ್ವ ಇಲಾಖೆಯ ಮ್ಯೂಸಿಯಂನ ಕೆ ಕೃಷ್ಣರಾಜ ಎಂಬುವವರು ಹೇಳಿದ್ದಾರೆ.

  Continue Reading

  kerala

  ಕಾಸರಗೋಡು: ಶಾಲಾ ವರಾಂಡದಲ್ಲಿ ನವಜಾತ ಶಿಶು ಪತ್ತೆ..!

  Published

  on

  ಕಾಸರಗೋಡು: ಶಾಲಾ ಪರಿಸರದಲ್ಲಿ ನವಜಾತ ಹೆಣ್ಣು ಶಿಶುವೊಂದು ಅನಾಥ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ಕಾಸರಗೋಡಿನ ಪಂಜಿಕಲ್ಲಿನಲ್ಲಿ ನಡೆದಿದೆ. ಇಲ್ಲಿನ ಎಸ್‌.ವಿ.ಎ.ಯು.ಪಿ. ಶಾಲಾ ಪರಿಸರದಲ್ಲಿ ಒಂದು ದಿನ ಪ್ರಾಯದ ಹೆಣ್ಣು ಶಿಶುವೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಆದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶಿಶುವಿನ ರಕ್ಷಣೆ ಮಾಡಿದ್ದಾರೆ. ಶಾಲಾ ಪರಿಸರದಲ್ಲಿದ್ದ ಶಿಶುವನ್ನು ರಕ್ಷಣೆ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಕಾಸರಗೋಡಿನ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಶಿಶು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

  1-10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದಲೇ ವಾರವಿಡೀ ʻಮೊಟ್ಟೆʼ ವಿತರಣೆ!

  ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಗುವಿನ ಹೆತ್ತವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜನ್ಮ ನೀಡಿದ ಬಳಿಕ ಶಾಲಾ ಪರಿಸರದಲ್ಲಿ ಮಗುವನ್ನು ಬಿಟ್ಟಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

  Continue Reading

  kerala

  ಕೇರಳದಲ್ಲಿ ಅಮೀಬಾ ಕಾಯಿಲೆಗೆ 3 ಮಕ್ಕಳ ಬಲಿ..!

  Published

  on

  ಮಂಗಳೂರು ( ಕೇರಳ ) : ಕೇರಳದಲ್ಲಿ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುವ ಮೆದಳು ಸಂಬಂಧಿ ಕಾಯಿಲೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇಂದು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷ ಪ್ರಾಯದ ಮೃದುಲ್ ಎಂಬ ಬಾಲಕನ ಸಾವಿನೊಂದಿಗೆ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

  ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) 

  ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದು ಕರೆಯಲಾಗುವ ಮೆದುಳು ತಿನ್ನುವ ಅಮೀಬಾದಿಂದ ಈ ಕಾಯಿಲೆ ಹರಡುತ್ತದೆ. ವಿಶೇಷ ಅಂದ್ರೆ ಈ ಕಾಯಿಲೆ ನಿಂತ ನೀರಿನ ಕೆರೆ, ಈಜುಕೊಳ ಮೊದಲಾದ ಕಡೆಯಲ್ಲಿ ಸ್ನಾನ ಮಾಡಿದವರಿಗೆ ಹರಡಿದ್ದು ಮೃತ ಮೂವರೂ ಈ ರೀತಿ ಸ್ನಾನ ಮಾಡಿದವರಾಗಿದ್ದಾರೆ. ಇಲ್ಲಿಂದಲೇ ಈ ಅಮಿಬಾ ಮಕ್ಕಳ ದೇಹ ಪ್ರವೇಶ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಜೂನ್ 16 ರಂದು ಕೋಯಿಕ್ಕೋಡ್‌ನ ಅಚಂಕುಲಂ ಫಾರೂಕ್ ಕಾಲೇಜು ಬಳಿಯ ಕೆರೆಯಲ್ಲಿ ಮೃದುಲ್ ಈಜಾಡಿದ್ದಾನೆ . ಬಳಿಕ ಮೃದುಲ್‌ಗೆ ರೋಗ ಲಕ್ಷಣ ಕಾಣಿಸಿದ ತಕ್ಷಣ ಪಾಲಿಕೆ ಅಧಿಕಾರಿಗಳು ಕೆರೆಯನ್ನು ಮುಚ್ಚಿದ್ದಾರೆ. ಕಣ್ಣೂರಿನ 13 ವರ್ಷದ ದಕ್ಷಿಣಾ ಎಂಬ ಬಾಲಕಿ ಜೂನ್ 12 ರಂದು ಇದೇ ಕಾಯಿಲೆಯಿಂದ ಮೃತ ಪಟ್ಟಿದ್ದಳು. ಜನವರಿಯಲ್ಲಿ ಶಾಲೆಯಿಂದ ಮುನ್ನಾರ್‌ಗೆ ಅಧ್ಯಯನ ಪ್ರವಾಸ ಹೋಗಿದ್ದಾಗ ಈಜುಕೊಳದಲ್ಲಿ ಸ್ನಾನ ಮಾಡಿದ ಬಳಿಕ ಈ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಇನ್ನು ಮಲ್ಲಪುರಂ ಜಿಲ್ಲೆಯ ಮುನ್ನಿಯೂರ್ ಕಲಿಯತ್ತಮುಕ್ ಮೂಲದ ಫದ್ವಾ ಎಂಬ 5 ವರ್ಷದ ಮಗು ಕೂಡಾ ಇದೇ ರೋಗ ಲಕ್ಷಣದಿಂದ ಮೃತ ಪಟ್ಟಿದ್ದು, ಮಗು ಮನೆಯ ಸಮೀಪದ ಕಾಡುಂಡಿಪುಳ ಎಂಬಲ್ಲಿ ಸ್ನಾನ ಮಾಡಿದ ಬಳಿಕ ಜ್ವರ ಕಾಣಿಸಿಕೊಂಡಿತ್ತು.

  ರೋಗದ ಗುಣ ಲಕ್ಷಣ

  ನಾಗ್ಲೇರಿಯಾ ಫೌಲೆರಿ ಅಮೀಬಾ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸುವ ನರಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ. ಮೆದುಳು ಮತ್ತು ಮೆನಿಂಜಸ್ ಎಂಬ ಭಾಗವನ್ನು ಆವರಿಸಿಕೊಳ್ಳುವ ಮೂಲಕ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ರೋಗಾಣುಗಳು ಮೆದುಳಿಗೆ ಪ್ರವೇಶಿಸಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಾಮಾನ್ಯ ರೋಗಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ವಾಂತಿ, ಅರೆನಿದ್ರಾವಸ್ಥೆ ಹಾಗೂ ನಿತ್ರಾಣ ಉಂಟಾಗುತ್ತದೆ. ಮೆದುಳನ್ನು ಅಮೀಬಾ ತಿನ್ನುವುದರಿಂದ ಮೆದುಳಿನ ಕೋಶಗಳು ನಾಶವಾಗಿ ಜೀವಹಾನಿ ಸಂಭವಿಸುತ್ತಿದೆ. 10,000 ಜನರಲ್ಲಿ ಒಬ್ಬರಿಗೆ ಬರುವ ಈ ಅಪರೂಪದ ಕಾಯಿಲೆಯಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ 3% ಮಾತ್ರ.

  Continue Reading

  LATEST NEWS

  Trending