Connect with us

    LATEST NEWS

    ಗಂಡನಿದ್ದರೂ ಬಾಯ್‌ಫ್ರೆಂಡ್ ಜೊತೆ ವಿಡಿಯೋ ಕಾಲ್​: ಅಕ್ಕನಿಂದಲೇ ತಂಗಿಗೆ ಬ್ಲ್ಯಾಕ್​ಮೇಲ್

    Published

    on

    ಮಂಗಳುರು/ ಬೆಂಗಳೂರು: ಅಕ್ಕನೇ ತನ್ನ ಬಾಯ್ ಫ್ರೆಂಡ್ ಹಾಗೂ ಅವಳ ಬಾಯ್‌ಫ್ರೆಂಡ್ ಜೊತೆ ಸೇರಿ ತಂಗಿಯನ್ನು ಬ್ಲ್ಯಾಕ್​ಮೇಲ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

    37 ವರ್ಷದ ನೊಂದ ಮಹಿಳೆನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

    ದೂರುದಾರ ಮಹಿಳೆ ವಿವಾಹಿತಳಾಗಿದ್ದು, ತನ್ನ ಬಾಲ್ಯ ಸ್ನೇಹಿತನ ಜೊತೆ ಪ್ರೀತಿ ಮುಂದುವರೆಸುತ್ತಿದ್ದಳು. 2022 – 23ರವರೆಗಿನ ಅವಧಿಯಲ್ಲಿ ಕೆಂಗೇರಿಯಲ್ಲಿರುವ ತನ್ನ ಅಕ್ಕ‌ನ ಮನೆಗೆ ಹೋಗಿದ್ದ ದೂರುದಾರೆ, ತನ್ನ ಬಾಯ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು. ಆರೋಪಿ ಬಾಯ್‌ಫ್ರೆಂಡ್ ಎಲ್ಲವನ್ನೂ ರೆಕಾರ್ಡ್ ಮಾಡಿದ್ದ.

    ಆ ಕಾಲ್ ರೆಕಾರ್ಡ್ ಎಲ್ಲವನ್ನೂ ದೂರುದಾರೆಯ ಅಕ್ಕ ಹಾಗೂ ಆಕೆಯ ಬಾಯ್ ಫ್ರೆಂಡ್​ಗೆ ತೋರಿಸಿದ್ದಾನೆ. ನಂತರ ಮೂವರೂ ಸೇರಿ ದೂರುದಾರ ಮಹಿಳೆಯನ್ನು ಬೆದರಿಸಲಾರಂಭಿಸಿದ್ದಾರೆ. 80 ಸಾವಿರ ಹಣ ನೀಡದಿದ್ದರೆ ವಿಡಿಯೋಗಳನ್ನು ಗಂಡನಿಗೆ ತೋರಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ದೂರಿನನ್ವಯ ಮೂವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    health

    ಬಾಯ್ಸ್.. ನಿಮಗೆ ಈ ಅಭ್ಯಾಸ ಇದೆಯಾ ?? ಹಾಗಾದ್ರೆ ಮಕ್ಕಳಾಗೋದು ಡೌಟ್ !!!

    Published

    on

    ಮಂಗಳೂರು: ಪುರುಷರ ಫಲವತ್ತತೆಯು ಪ್ರಸ್ತುತ ದಿನಗಳಲ್ಲಿ ಗಂಭೀರ ವಿಷಯವಾಗಿದ್ದು ನಿರ್ಲಕ್ಷ ಮಾಡದೆಯೇ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಹೆಣ್ಣಿಗೆ ಗರ್ಭ ಧರಿಸುವುದಕ್ಕೆ ವೀರ್ಯದ ಸಂಖ್ಯೆ ಪ್ರತಿ ಮಿಲಿಲೀಟರ್ ನಲ್ಲಿ 15 ಮಿಲಿಯನ್ ಗಿಂತ ಹೆಚ್ಚಿರಬೇಕು. ಇದು ಇದಕ್ಕಿಂತ ಕಡಿಮೆಯಿದ್ದರೆ, ಅದನ್ನು ಕಡಿಮೆ ವೀರ್ಯಾಣುಗಳ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಬಂಜೆತನದ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವೀರ್ಯಾಣುಗಳ ಸಂಖ್ಯೆಯಲ್ಲಿನ ಇಳಿಕೆ. ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು. ಸಾಮಾನ್ಯವಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ತಡವಾಗಿ ಮದುವೆಯಾಗುವುದು, ಒತ್ತಡ, ಅನಾರೋಗ್ಯಕರ ಜೀವನಶೈಲಿಯು ವೀರ್ಯಾಣುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.

    ಇಂತಹ ಸಮಯದಲ್ಲಿ ಲೈಂಗಿಕ ಸಮಸ್ಯೆಗಳು, ಕಡಿಮೆ ಶಕ್ತಿ, ವೃಷಣ ಸಮಸ್ಯೆಗಳು, ದೇಹ – ಮುಖ – ಕೂದಲಿನ ಬೆಳವಣಿಗೆಯಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಿದ್ದರೆ, ಅದು ಕಡಿಮೆ ವೀರ್ಯಾಣುಗಳ ಸಂಖ್ಯೆಯ ಸಂಕೇತವಾಗಿರಬಹುದು. ಈ ಕಾರಣಗಳಿಂದ ಬಂಜೆತನದ ಸಮಸ್ಯೆಯ ಜೊತೆಗೆ ಇತರ ಸಮಸ್ಯೆಗಳು ಕೂಡ ಸಾಮಾನ್ಯವಾಗಿ ಸಂಭವಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಪುರುಷರು ಪ್ರತಿದಿನ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಹಳ ಜಾಗರೂಕರಾಗಿರುವುದು ಒಳ್ಳೆಯದು.

    ನಿರ್ದಿಷ್ಟವಾಗಿ ಕೆಲವು ರೀತಿಯ ಅಭ್ಯಾಸಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು. ಇದಲ್ಲದೆ, ಬಂಜೆತನದ ಸಮಸ್ಯೆಗೂ ಕಾರಣವಾಗಬಹುದು. ಅದರಲ್ಲಿಯೂ ಕಡಿಮೆ ವೀರ್ಯಾಣುಗಳ ಸಂಖ್ಯೆಯು ಹೆಣ್ಣಿಗೆ ಗರ್ಭಿಣಿಯಾಗಲು ತುಂಬಾ ಕಷ್ಟಕರವಾಗಿಸುತ್ತದೆ. ಹಾಗಾಗಿ ತಂದೆಯಾಗಲು ಬಯಸುವ ಮೊದಲು ಈ 5 ಅಭ್ಯಾಸಗಳಿಂದ ದೂರವಿರಬೇಕಾಗುತ್ತದೆ. ಹಾಗಾದರೆ ಅವು ಯಾವುವು? ಯಾಕಾಗಿ ಅವುಗಳಿಂದ ದೂರವಿರಬೇಕು? ಎಂಬೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

     

    ಮುಖ್ಯವಾಗಿ ದೂರವಿಡಬೇಕಾದ 5 ಅಭ್ಯಾಸಗಳು :

    ಧೂಮಪಾನ: ಸಿಗರೇಟು ಸೇದುವುದು ಕೆಲವು ಪುರುಷರಲ್ಲಿ ಸಾಮಾನ್ಯವಾಗಿದೆ. ಆದರೆ, ಧೂಮಪಾನವು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ್ದಲ್ಲ. ಇದು ಲೈಂಗಿಕ ಆರೋಗ್ಯಕ್ಕೂ ಹಾನಿಕಾರಕ. ಧೂಮಪಾನ ಮಾಡುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

    ಮದ್ಯಪಾನ: ಕೆಲವು ಹುಡುಗರು ಚಿಕ್ಕ ವಯಸ್ಸಿನಿಂದಲೇ ಮದ್ಯಪಾನ ಮಾಡಲು ಪ್ರಾರಂಭಿಸುತ್ತಾರೆ. ಇದು ಒಳ್ಳೆಯದಲ್ಲ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ಅಲ್ಲದೆ ಅತಿಯಾಗಿ ಆಲ್ಕೋಹಾಲ್ ಸೇವನೆಯು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಸಾಕಷ್ಟು ವೀರ್ಯಾಣು ಉತ್ಪತ್ತಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

    ಉದ್ವೇಗ (ಒತ್ತಡ): ಅಧಿಕ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಯೋಗ, ಧ್ಯಾನ, ದೈಹಿಕ ವ್ಯಾಯಾಮ ಮುಂತಾದ ಒತ್ತಡ ನಿರ್ವಹಣಾ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯ.

    ಅನಾರೋಗ್ಯಕರ ಆಹಾರಗಳು: ಆಹಾರ ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ. ಫಾಸ್ಟ್ ಫುಡ್, ಸಕ್ಕರೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಊತ ಮತ್ತು ತೂಕ ಹೆಚ್ಚಾಗಬಹುದು, ಇದು ವೀರ್ಯಾಣು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಜೀವಸತ್ವಗಳು ಮತ್ತು ಖನಿಜಗಳ ಕೊರತೆಗಳು, ವಿಶೇಷವಾಗಿ ಸತು, ಸೆಲೆನಿಯಂ, ಫೋಲಿಕ್ ಆಮ್ಲ, ವೀರ್ಯಾಣುಗಳ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಸೇವನೆ ಮಾಡುವ ಆಹಾರದ ಬಗ್ಗೆ ಗಮನವಹಿಸಬೇಕು.

    ವಿಪರೀತ ಶಾಖ: ಪುರುಷರಿಗೆ, ದೇಹದ ಕೆಳಭಾಗದಲ್ಲಿ ಅತಿಯಾದ ಶಾಖ ಅಥವಾ ಬಿಸಿಯ ಅನುಭವ ಆಗುವುದು ವೀರ್ಯಾಣುಗಳ ಸಂಖ್ಯೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ, ನೀವು ಬಿಸಿ ನೀರಿನ ಸ್ನಾನ, ಬಿಗಿಯಾದ ಒಳ ಉಡುಪುಗಳು, ಲ್ಯಾಪ್ಟಾಪ್ ಅನ್ನು ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಇರಿಸಿಕೊಂಡು ಕೆಲಸ ಮಾಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇಲ್ಲದಿದ್ದರೆ, ವೃಷಣಗಳ ತಾಪಮಾನದ ಹೆಚ್ಚಳದಿಂದಾಗಿ ವೀರ್ಯಾಣು ಹಾನಿಯಾಗುವ ಅಪಾಯವೂ ಇರುತ್ತದೆ.

    Continue Reading

    DAKSHINA KANNADA

    ‘ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಯುವತಿಗೆ ಬೆದರಿಕೆ; ಆರೋಪಿ ವಶಕ್ಕೆ

    Published

    on

    ಸುರತ್ಕಲ್: ‘ನನ್ನ ಜತೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಸುರತ್ಕಲ್ ಇಡ್ಯಾ ಅನ್ಯ ಸಮುದಾಯದ ನಿವಾಸಿ ಸಮೀಪದಲ್ಲೇ ವಾಸಿಸುವ ಯುವತಿಯೊಬ್ಬಳಿಗೆ ವಾಟ್ಸಪ್ ಮೆಸೇಜ್ ಮಾಡಿ ಸಂಚಲನ ಸೃಷ್ಟಿಸಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಅನೇಕ ಕೋಮು ಗಲಭೆಗಳು ನಡೆಯುತ್ತಿದ್ದು ಇದೀಗ ಅಂತಹದ್ದೇ ಮತ್ತೊಂದು ಘಟನೆ ಕೋಮು ಸಂಘರ್ಷಕ್ಕೆ ಕಿಡಿ ಕಾರಿದೆ.

    ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್‌ ನೂರ್ಜಹಾನ್‌ ಮೆಸೆಜ್‌ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.

    ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮಕಿ ಹಾಕಿದ್ದಾನೆ. ಯುವತಿಯ ಕುಟುಂಬ ಆತಂಕಗೊಂಡು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    Continue Reading

    BIG BOSS

    ‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ

    Published

    on

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಬಾರಿ ರಾಜಕೀಯ ಮಾಡೋಕೆ ಓಪನ್ ಆಗಿ ಅವಕಾಶ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

    ಬಿಗ್ ಬಾಸ್’ ಮನೆಯಲ್ಲಿ ರಾಜಕೀಯ ಒಳಗೊಳಗೆ ನಡೆಯೋದು ಕಾಮನ್. ಯಾವುದೂ ಎದುರಿಗೆ ಬರೋದಿಲ್ಲ. ಆದರೆ, ಈಗ ಹಾಗಿಲ್ಲ. ಓಪನ್ ಆಗಿ ರಾಜಕೀಯ ಆರಂಭ ಆಗಿದೆ. ಇದಕ್ಕೆ ಕಾರಣ ಆಗಿರೋದು ‘ಬಿಗ್ ಬಾಸ್’ ಮನೆಯಲ್ಲಿ ನೀಡಿರೋ ಟಾಸ್ಕ್. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸೌಧವಾಗಿ ಮಾರ್ಪಾಡಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ. ಆ ಪ್ರೋಮೋವನ್ನು ಕಲರ್ಸ್‌ ಕನ್ನಡ ಪೇಜ್‌ನಲ್ಲಿ ಹಾಕಿದ್ದಾರೆ.

    Continue Reading

    LATEST NEWS

    Trending