Thursday, September 29, 2022

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹಿಟ್‌ ಆ್ಯಂಡ್‌ ರನ್‌: ಓರ್ವ ಸ್ಪಾಟ್‌ ಡೆತ್‌, ಮತ್ತೋರ್ವನಿಗೆ ಗಾಯ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿ ಹುಲ್ಲು ಕಟಾವು ಮಾಡುತ್ತಿದ್ದ ಕಾರ್ಮಿಕರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಘಟನೆ ಮಂಗಳೂರು ನಗರದ ಜೆಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ಗಾಯಗೊಂಡಿದ್ದಾನೆ.


ಬಿಹಾರ ಜಾಮೂಲ್ ನಿವಾಸಿ ವಿಕ್ಕಿ ಖಾನ್ (23) ಮೃತ ಕಾರ್ಮಿಕ, ಗಾಯಗೊಂಡವನನ್ನು ಗೋಪಾಲ್ ಪೂಜಾರಿ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 7.15 ರ ಸುಮಾರಿಗೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಹಣ್ಣು ತುಂಬಿದ್ದ ಪಿಕಪ್‌ ವಾಹನ ವೇಗವಾಗಿ ಬಂದು ಹೆದ್ದಾರಿ ಬದಿಯಲ್ಲಿ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದವರ ಮೇಲೆ ಹರಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಢಿಕ್ಕಿ ಹೊಡೆದ ಬೆನ್ನಲ್ಲೇ ವಾಹನವು ಪರಾರಿಯಾಗಿದೆ. ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: PFI ಬ್ಯಾನ್ ಬಗ್ಗೆ M.K ಪೈಝಿ ರಿಯಾಕ್ಷನ್

ಮಂಗಳೂರು: ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿರುವ ಒಕ್ಕೂಟ ಸರ್ಕಾರದ ನಿರ್ಧಾರ ದೇಶದ ಸಂವಿಧಾನ ಪ್ರಜೆಗಳಿಗೆ ಖಾತರಿಪಡಿಸಿರುವ ಹಕ್ಕುಗಳಿಗೆ ನೀಡಿರುವ ಬಲವಾದ ಪೆಟ್ಟು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ...

ಉಳ್ಳಾಲ: ಫ್ಲೆಕ್ಸ್‌ನಲ್ಲಿ ಅನುಮತಿಯಿಲ್ಲದೆ ಗರ್ಭಿಣಿ ಭಾವಚಿತ್ರ ಅಳವಡಿಕೆ: ಕೆರಳಿದ ಭಜರಂಗದಳ

ಉಳ್ಳಾಲ: ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಫೊಟೋ ಅಳವಡಿಸಿದ ಕುರಿತಾಗಿ ಕೆರಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಉಳ್ಳಾಲದ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ನಡೆಯಿತು.ದಕ್ಷಿಣ...