Friday, August 19, 2022

ಒಂಭತ್ತು ತಿಂಗಳ ಹಸುಗೂಸು ಯುವಕನ ಕೈಗೆ ನೀಡಿ ಮಹಿಳೆ ನಾಪತ್ತೆ: ಹೆತ್ತಬ್ಬೆಗಾಗಿ ಶೋಧ

ಮೈಸೂರು: ಒಂಭತ್ತು ತಿಂಗಳ ಹಸುಗೂಸನ್ನು ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆಯಾದ ಘಟನೆ ರಾಯಚೂರು ಬಸ್ ನಿಲ್ದಾಣದಲ್ಲಿ ನಡೆದಿದೆ.


ಮೈಸೂರಿನ ಹೆಚ್.ಡಿ ಕೋಟೆಯ ನಿವಾಸಿ ರಘು ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆಯಾಗಿದ್ದಾರೆ.

ಸದ್ಯ 9 ತಿಂಗಳ ಹಸುಗೂಸನ್ನು ರಘು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಹೆಚ್.ಡಿ.ಕೋಟೆಯ ನಿವಾಸಿ ರಘು ರಾಯಚೂರಿಗೆ ತೆರಳಿದ್ದರು.

ಮೈಸೂರಿಗೆ ಹಿಂತಿರುಗಲು ರಾಯಚೂರು ಬಸ್ ಸ್ಟ್ಯಾಂಡ್ನಲ್ಲಿ ಮೈಸೂರು ಬಸ್ಸಿಗಾಗಿ ಕಾದು ಕುಳಿತಿದ್ದ ವೇಳೆ ಅಪರಿಚಿತ ಮಹಿಳೆ ಮಗುವನ್ನು ರಘು ಕೈಗೆ ನೀಡಿ ನಾಪತ್ತೆಯಾಗಿದ್ದಾರೆ.

ಮಗು ಕೊಟ್ಟು 3 ಗಂಟೆಯಾದರೂ ಮಹಿಳೆ ವಾಪಸ್ಸು ಬಂದಿಲ್ಲ. ಈ ಹಿನ್ನೆಲೆ ರಘು ಮಗು ಜೊತೆ ಮೈಸೂರಿಗೆ ಬಂದಿದ್ದಾರೆ.
ಬಳಿಕ ರಘು ಮಗುವನ್ನು ರಕ್ಷಿಸಿ ಲಷ್ಕರ್ ಪೊಲೀಸ್ ಠಾಣೆಗೆ ನೀಡಿದ್ದಾರೆ.

ಮಗುವಿನ ಆರೈಕೆ ಮಾಡಿದ ಸಿಬ್ಬಂದಿ ಮಗುವನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಮಗುವಿನ ತಾಯಿ ಪತ್ತೆಗೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

ದೇರಳಕಟ್ಟೆಯಲ್ಲೂ ಕಾಣಿಸಿಕೊಂಡ ಸಾವರ್ಕರ್‌ ಫ್ಲೆಕ್ಸ್

ಮಂಗಳೂರು: ಶಿವಮೊಗ್ಗದಲ್ಲಿ ಸಾರ್ವಕರ್‌ ಫ್ಲೆಕ್ಸ್‌ನಿಂದ ಗಲಭೆ ಉಂಟಾದ ಬೆನ್ನಲ್ಲೇ ಮಂಗಳೂರು ನಗರದ ಹೊರವಲಯದ ದೇರಳಕಟ್ಟೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡರೊಬ್ಬರು ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿದ್ದಾರೆ. ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ...

ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿಯ ಬಂಧನ

ಕುಶಾಲನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಘಟನೆ ಕುರಿತು ವಶಕ್ಕೆ ತೆಗೆದುಕೊಳ್ಳಲಾದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು...