Connect with us

    LATEST NEWS

    ಕಡಿಮೆಯಾಗದ ಡ್ರಗ್ಸ್ ಕೇಸ್; 3 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ

    Published

    on

    ಮಂಗಳೂರು/ಬೆಂಗಳೂರು: ​ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್​ಸ್ಟಾನ್ಸ್ ಆಕ್ಟ್​ ಅಡಿಯಲ್ಲಿ ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ 49 ಪ್ರಕರಣಗಳು ದಾಖಲಾಗಿದ್ದು, 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರು ವಿದೇಶಿ ಪ್ರಜೆಗಳು ಸೇರಿ 67 ಮಂದಿ ಡ್ರಗ್​ ಪೆಡ್ಲರ್​​ಗಳನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳಿಂದ ಒಟ್ಟು 171 ಕೆಜಿ 985 ಗ್ರಾಂ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ಎಂಡಿಎಂಎ, 998 ಎಕ್ಸ್ಟೆಸಿ ಮಾತ್ರೆಗಳು ಮತ್ತು 1089 ಎಲ್​ಎಸ್​ಡಿ ಸ್ಟ್ರಿಪ್ಸ್​ಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ.

    ಡ್ರಗ್ಸ್​ ಕೇಸ್​ನಲ್ಲಿ​ ಸ್ನೇಹಿತರ ಬಂಧನ:

    ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಸ್ನೇಹಿತರನ್ನು ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯರಪ್ಪನಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದರು. ಆಫ್ರಿಕಾ ಮೂಲದ ಮೈಕಲ್ ಓಕೆಲಿ ಮತ್ತು ಬೆಂಗಳೂರಿನ ಸಹನಾ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿತ್ತು.

    ಆರೋಪಿ ಮೈಕೆಲ್​ 2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ಕೆ.ಆರ್​​.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದನು. ಸಹನಾ ಮತ್ತು ಮೈಕಲ್​ ಸ್ನೇಹಿತರಾಗಿದ್ದು, ಒಟ್ಟಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ​​ಮೈಕಲ್ ಮತ್ತು ಸಹನಾ ಒಟ್ಟಿಗೆ ಕೆಆರ್​ಪುರಂನಿಂದ ಯರಪ್ಪನಹಳ್ಳಿ ಗ್ರಾಮಕ್ಕೆ ಶಿಫ್ಟ್​​ ಆಗಿದ್ದರು. ಇಲ್ಲಿ, ಒಂದೇ ಮನೆಯಲ್ಲಿ ವಾಸವಾಗಿದ್ದ ಮೈಕಲ್ ಮತ್ತು ಸಹನಾ, ಇಲ್ಲಿಂದಲೇ ಡ್ರಗ್ಸ್​ ಸರಬರಾಜು ಮಾಡಲು ಆರಂಭಿಸಿದ್ದರು.

    ಸಿಸಿಬಿ ಪೊಲೀಸರು ಜುಲೈನಲ್ಲಿ ಓರ್ವ ಡ್ರಗ್ಸ್​ ಪೆಡ್ಲರ್​ನನ್ನು​ ಬಂಧಿಸಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಮೈಕಲ್​ನ ಬಂಧನಕ್ಕೆ ಬಲೆಬೀಸಿದ್ದರು. ಆರೋಪಿ ಮೈಕಲ್ ಯರಪ್ಪನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ನಂತರ ಆತನ ಮನೆ ಮೇಲೆ ದಾಳಿ ಮಾಡಿ, ಬಂಧಿಸಿದ್ದರು. ಬಂಧಿತರಿಂದ ಒಂದು ಕೆಜಿಗೂ ಅಧಿಕ ಎಂಡಿಎಂಎ, ಮೂರು ಮೊಬೈಲ್​​​​​, ಎರಡು ಎಲೆಕ್ಟ್ರಾನಿಕ್​ ತೂಕದ ಯಂತ್ರವನ್ನು ಸಿಸಿಬಿ ಪೊಲೀಸರುಸ ವಶಕ್ಕೆ ಪಡೆದಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ವರದಕ್ಷಿಣೆಗಾಗಿ ಗೃಹಣಿಯ ಕತ್ತು ಹಿಸುಕಿ ಕೊ*ಲೆ

    Published

    on

    ಮಂಗಳೂರು/ಹುಬ್ಬಳ್ಳಿ: ತವರು ಮನೆಯಿಂದ ವರದಕ್ಷಿಣೆ ತರದ್ದಕ್ಕೆ ಗಂಡನ ಮನೆಯವರು ಗೃಹಿಣಿಯ ಕತ್ತು ಹಿಸುಕಿ ಕೊ*ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿಶಾಲ ನಗರದಲ್ಲಿ ನಡೆದಿದೆ.

    ಹೀನಾ ಕೌಸರ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಎರಡೂ ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿತ್ತು. ಮದುವೆಯ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ನಂತರ ಮಹಮ್ಮದ್ ಕುಟುಂಬಸ್ಥರು ಹೀನಾಗೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
    ಈ ಹಿಂದೆ ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೂ ಹೀನಾಳಿಗೆ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು.
    ಭಾನುವಾರವೂ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಆಕೆಯನ್ನು ಕ*ತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

     

    Continue Reading

    LATEST NEWS

    ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮ*ಹತ್ಯೆ

    Published

    on

    ಮಂಗಳೂರು/ಕೊಲಾರ: ಪತಿ ಮತ್ತು ಆತನ ಕುಟುಂಬಸ್ಥರಿ0ದ ನಿರಂತರ ವರದಕ್ಷಿಣಿ ಕಿರುಕುಳದಿಂದಾಗಿ ಬೇಸತ್ತು ಮಹಿಳೆ ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.

    ಆತ್ಮ*ಹತ್ಯೆಗೆ ಶರಣಾದ ಮಹಿಳೆಯನ್ನು ಕೊಲಾರದ ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ.
    ಅ. 6ರ ಭಾನುವಾರ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದ ಸೌಮ್ಯ, ರಾತ್ರಿ ಮನೆಯಿಂದ ಹೊರ ಬಂದು ಕೆರೆಗೆ ಹಾರಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದರು.
    ಮೃ*ತ ಮಹಿಳೆಯ ಪೋಷಕರು ಆಕೆಯ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Continue Reading

    LATEST NEWS

    ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಹಿತ ಎರಡು ಕರಡಿ ಮೃ*ತ್ಯು

    Published

    on

    ಮಂಗಳೂರು/ಹಾಸನ: ವಿದ್ಯುತ್ ತಂತಿ ಸ್ಪರ್ಶಿಸಿ 3 ಕರಡಿಗಳು ಮೃ*ತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾಗರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಡವಾಗಿ ಸ್ಥಳೀಯರ ಗುರುತಿಸಿದ್ದಾರೆ.


    ಹಾಸನದ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಹೆಚ್ಚಾಗಿದ್ದು, ಕಳೆದ 6 ತಿಂಗಳಲ್ಲಿ ಸುಮಾರು ಐದಾರು ಮಂದಿ ದಾಳಿ ಮಾಡಿ ಗಾಯ**ಗೊಳಿಸಿದ್ದವು.


    ಅರಣ್ಯ ಪ್ರದೇಶದ ಬಳಿ ವಿದ್ಯುತ್ ಕಂಬದಿಂದ ತಂಡಾಗಿ ಬಿದ್ದಿದ್ದ ತಂತಿ ತುಳಿದ ಹಿನ್ನಲೆ ತಾಯಿ ಮತ್ತು ಮರಿ ಕರಡಿಯ ಜೊತೆ ಗಂಡು ಕರಡಿ ಸಾವಿಗೀಡಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    LATEST NEWS

    Trending