Wednesday, February 8, 2023

ಉಳ್ಳಾಲ: ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಭಾರೀ ಗಾತ್ರದ ಕಡವೆಯ ರಕ್ಷಣೆ

ಉಳ್ಳಾಲ: ಮಸೀದಿಯ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾಡಿನಿಂದ ಬಂದ ಭಾರೀ ಗಾತ್ರದ ಕಡವೆಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಬಳಿಕ ಅರಣ್ಯ ಇಲಾಖಾಧಿಕಾರಿಗಳು ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ಘಟನೆ ಕಿನ್ಯ ಗ್ರಾಮದ ಉಕ್ಕುಡದಲ್ಲಿ ನಡೆದಿದೆ.


ಕಿನ್ಯ ಗ್ರಾಮದ ಉಕ್ಕುಡ ಮಸೀದಿಯ ಬಾವಿಗೆ ನಿನ್ನೆ ಭಾರೀ ಗಾತ್ರದ ಕಡವೆಯೊಂದು ಬಿದ್ದು ಜೀವರಕ್ಷಣೆಗಾಗಿ ಚಡಪಡಿಸುತ್ತಿತ್ತು. ಮಸೀದಿಗೆ ಬಂದಿದ್ದ ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಡವೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳು ಕಡವೆಗೆ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ.


ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮಾರ್ಗದರ್ಶನದಲ್ಲಿ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Hot Topics