Thursday, August 11, 2022

ಇಂದೂ ಪೆಟ್ರೋಲ್‌ ಬೆಲೆ ಏರಿಕೆ: ಐದು ದಿನಗಳಲ್ಲಿ 3.20ರೂ ಹೆಚ್ಚಳ

ನವದೆಹಲಿ: ಐದು ರಾಜ್ಯಗಳ ಎಲೆಕ್ಷನ್​ ಮುಗಿದ ತಕ್ಷಣವೇ ಪ್ರತಿದಿನ ಪೆಟ್ರೋಲ್​ – ಡೀಸೆಲ್​ ಬೆಲೆ ಏರಿಕೆಯಾಗುತ್ತಿದೆ. ಸತತ ನಾಲ್ಕು ದಿನಗಳಿಂದ ಈ ಏರಿಕೆ ಸಾಗಿದೆ. ಇಂದೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.


ತೈಲ ಸಂಸ್ಥೆಗಳು ತಮ್ಮ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಐದು ದಿನಗಳಲ್ಲಿ ಇದು ನಾಲ್ಕನೇ ಬಾರಿ ಹೆಚ್ಚಳವಾಗಿದೆ.

ನಾಲ್ಕೂವರೆ ತಿಂಗಳ ಬಳಿಕ ಅಂದರೆ ಮಾರ್ಚ್ 22 ರಂದು ಇಂಧನ ಕಂಪನಿಗಳು ಮೊದಲ ಬಾರಿಗೆ 80 ಪೈಸೆ ಏರಿಸುವ ಮೂಲಕ ದರ ಪರಿಷ್ಕರಣೆ ಮಾಡಿದ್ದವು. ಜೂನ್ 2017ರಿಂದ ದೈನಂದಿನ ಬೆಲೆ ಪರಿಷ್ಕರಣೆ ಪ್ರಾರಂಭವಾಗಿದೆ.

ಒಟ್ಟಾರೆ ಐದು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 3.20 ರೂ. ಏರಿಕೆಯಾಗಿದೆ. ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

LEAVE A REPLY

Please enter your comment!
Please enter your name here

Hot Topics

ಪಿ.ಯು.ಸಿ ಪೂರಕ ಪರೀಕ್ಷೆ: ಆ.12ರಿಂದ ಆ.25ರವರೆಗೆ ನಿಷೇಧಾಜ್ಞೆ

ಮಂಗಳೂರು: ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಹಿನ್ನೆಲೆ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯ 4 ಪರೀಕ್ಷಾ ಕೇಂದ್ರಗಳಲ್ಲಿ ಆ.12ರಿಂದ ಆ.25ರ ವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.ಪರೀಕ್ಷೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ...

ತೊಕ್ಕೊಟ್ಟುವಿನಲ್ಲಿ ಬೈಕ್‌-ಕಾರು ಢಿಕ್ಕಿ: ಸವಾರ ಗಂಭೀರ

ಉಳ್ಳಾಲ: ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ನಡೆದಿದ್ದು, ಕಾರು ಮತ್ತು ಬೈಕ್ ಎರಡೂ...

ಸ್ಥಳೀಯರೇ ಪ್ರವೀಣ್‌ನನ್ನು ಹತ್ಯೆಗೈದಿದ್ದು, ಆರೋಪಿಗಳಿಗೆ ಎಸ್‌ಡಿಪಿಐ ಲಿಂಕ್‌ ಎಂದ ಎಡಿಜಿಪಿ

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯರೇ ಆಗಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.ಈ ಬಗ್ಗೆ ಮಂಗಳೂರಿನ ಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...