Connect with us

    DAKSHINA KANNADA

    ಅಲ್ಪಕಾಲದ ಅಸೌಖ್ಯದಿಂದ ಉಳ್ಳಾಲ ಖಾಝಿ ಸ್ವರ್ಗಸ್ಥ

    Published

    on

    ಮಂಗಳೂರು : ಉಳ್ಳಾಲದ ಖಾಝಿ ಸಯ್ಯದ ಫಝಲ್ ಕೋಯಮ್ಮ ತಂಙಳ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕಣ್ಣೂರಿನ ತಮ್ಮ ನಿವಾಸದಲ್ಲಿ ಇಂದು(ಜು.8) ಮುಂಜಾನೆ ಖಾಝಿ ಅವರು ಸ್ವರ್ಗಸ್ಥರಾಗಿದ್ದಾರೆ ಎಂದು ಕುಟುಂಬ ವಲಯ ಮಾಹಿತಿ ನೀಡಿದೆ.

    ಮೂಲತಃ ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿದ್ದ ಖಾಝಿಯವರು ಕೂರ ತಂಙಳ್‌ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಬಹಳಷ್ಟು ವರ್ಷಗಳ ಹಿಂದೆ ಕಾಣಿಯೂರು ಸಮೀಪದ ಕೂರ ಎಂಬಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ‘ಕೂರ ತಂಙಳ್‌’ ಎಂದು ಹೆಸರು ಪಡೆದುಕೊಂಡಿದ್ದರು. ಬಳಿಕ ಉಳ್ಳಾಲ ಖಾಝಿಯಾಗಿ ನೇಮಕವಾದ ಬಳಿಕ ಉಳ್ಳಾಲದಲ್ಲಿ ನೆಲೆಸಲು ಆರಂಭಿಸಿದ ಅವರು ಕೆಲ ಸಮಯದ ಹಿಂದೆ ಅಸ್ವ*ಸ್ಥರಾಗಿದ್ದರು.

    ಇದನ್ನು ಓದಿ : ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ; ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ!?

    ಸ್ವರ್ಗಸ್ಥರಾದ ಖಾಝಿ ಅವರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕೂರ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಲಿದ್ದು, ಸಂಜೆ 5 ಗಂಟೆಗೆ ಮಸೀದಿಯಲ್ಲಿ ಸ್ವರ್ಗಸ್ಥರ ಸದ್ಗತಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈ ಪ್ರಾರ್ಥನೆಯಲ್ಲಿ ಸುಲ್ತಾನುಲ್ ಉಲೇಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾಗವಹಿಸುವ ನಿರೀಕ್ಷೆ ಇದೆ.

     

     

     

    DAKSHINA KANNADA

    ಉಪನ್ಯಾಸಕನಿಂದ ದ್ವೇಷದ ಉಪನ್ಯಾಸ.!? ಅರುಣ್ ಉಳ್ಳಾಲ ವಿರುದ್ದ ಕೇಸ್.!

    Published

    on

    ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿಯುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ ವಿರುದ್ದ ಮಂಗಳೂರು ಸೆನ್‌ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮಾಡಿದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಈ ದೂರು ದಾಖಲಾಗಿದೆ.

    ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದ ಅರುಣ್ ಉಳ್ಳಾಲ ಅವರು ಕ್ರೈಸ್ತರು ಹಾಗೂ ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಹಿಂದೂಗಳು ಹಿಂದೂಗಳಿಗೆ ಸೇರಿದ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಹಿಂದೂಗಳಿಗೆ ಸೇರಿದ ಹಾಲ್‌ಗಳಲ್ಲೇ ಮದುವೆ ಆಗಬೇಕು ಎಂಬಿತ್ಯಾದಿ ರೀತಿಯ ಮಾತುಗಳನ್ನು ಆಡಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕ್ರಿಶ್ಚಿಯನ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿ, ಕ್ರಿಶ್ಚಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅರುಣ್ ಉಳ್ಳಾಲ ಅವರ ಈ ಹೇಳಿಕೆ ಎಷ್ಟು ಸರಿ? ಎಂದು ಜನರು ಪ್ರಶ್ನೆ ಮಾಡಿದ್ದರು.  ಅರುಣ್ ಉಳ್ಳಾಲ ಅವರು ಕೆಲಸ ಮಾಡುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂಬ ಒತ್ತಾಯ ಕೂಡ ಮಾಡಲಾಗಿದೆ.  ಇದೀಗ ಅರುಣ್ ಉಳ್ಳಾಲರ ಭಾಷಣ ವಿವಾದವಾಗುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದನ್ನೂ ಓದಿ : ಸಂಸದ ಕೋಟ ಹೆಸರಿನಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ ಇಟ್ಟ ಕಿಡಿಗೇಡಿಗಳು

    ಅರುಣ್ ಉಳ್ಳಾಲ ಅವರ ವಿರುದ್ಧ ಸೆನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ ಅರುಣ್ ಗೆ  ಬೆಂಬಲ ಸೂಚಿಸಿದ್ದಾರೆ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    Continue Reading

    DAKSHINA KANNADA

    ಪುತ್ತೂರು: ಪಿಕಪ್ ಗುದ್ದಿ ರಿಕ್ಷಾ ಪಲ್ಟಿ – ಹಲವರಿಗೆ ಗಾಯ

    Published

    on

    ಪುತ್ತೂರು: ನಿಧಾನವಾಗಿ ಚಲಿಸುತ್ತಿದ್ದ ರಿಕ್ಷಾಕ್ಕೆ ಹಿಂದಿನಿಂದ ಪಿಕಪ್ ಡಿಕ್ಕಿಯಾಗಿ ಹಲವರಿಗೆ ಗಾಯವಾದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ಜಂಕ್ಷನ್‌ನಲ್ಲಿ ನಡೆದಿರುವುದು ತಿಳಿದು ಬಂದಿದೆ.

     

    ಇದನ್ನೂ ಓದಿ; ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ಎದುರಿನ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಉಳ್ಳಾಲ: ನಾಪತ್ತೆಯಾದ ವ್ಯಕ್ತಿ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆ…!

    Published

    on

    ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಇಂದು (ಅ.6) ಪಾಳು ಬಿದ್ದ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಕೊಲ್ಯ, ಕುಜುಮಗದ್ದೆಯಲ್ಲಿ ನಡೆದಿದೆ.


    ಪ್ರಸಾದ್ (44) ಮೃತ ದುರ್ದೈವಿ. ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ. ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ ಮಧ್ಯಾಹ್ನ ನಾಪತ್ತೆಯಾಗಿದ್ದರು.
    ಇಂದು ಬೆಳಿಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪಾದರಕ್ಷೆ ದೊರೆತಿದ್ದು ಈ ಹಿನ್ನೆಲೆಯಲ್ಲಿ ಇಣುಕಿ ನೋಡಿದಾಗ ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್, ತಾಯಿ, ತಂದೆ, ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.
    ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು, ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending