Connect with us

    LATEST NEWS

    ಚಿಕ್ಕಪ್ಪನ ಮೇಲೆ ಪ್ರೀತಿ..! ಅಪ್ರಾಪ್ತೆಯಿಂದ 2 ತಿಂಗಳ ಮಗುವಿನ ಹ*ತ್ಯೆ..!

    Published

    on

    ಯಾದಗಿರಿ/ಮಂಗಳೂರು: ಪ್ರೀತಿ ನಿರಾಕರಿಸಿದ ಸಿಟ್ಟಿನಿಂದ ಅಪ್ರಾಪ್ತ ಬಾಲಕಿಯೊಬ್ಬಳು ಚಿಕ್ಕಪ್ಪನ ಎರಡು ತಿಂಗಳ ಮಗುವನ್ನು ಹತ್ಯೆಗೈದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಅಂಬೇಡ್ಕರ್ ಬಡಾವಣೆಯ ನಾಗೇಶ್ ಮತ್ತು ಚಟ್ಟೆಮ್ಮ ದಂಪತಿಯ ಮಗು ಹತ್ಯೆಯಾದ ದುರ್ದೈವಿ. ಇವರ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಅಪ್ರಾಪ್ತ ಬಾಲಕಿಗೆ ನಾಗೇಶ್‌ ಅವರ ಮೇಲೆ ಪ್ರೇಮಾಂಕುರವಾಗಿತ್ತು. ಈ ವಿಚಾರವನ್ನು ಆಕೆ ನಾಗೇಶ್ ಅವರಿಗೆ ತಿಳಿಸಿದಾಗ ಅವರು ಅದನ್ನು ನಿರಾಕರಿಸಿದ್ದಾರೆ. ಇದೇ ಸಿಟ್ಟಿನಿಂದ ಅಪ್ರಾಪ್ತ ಬಾಲಕಿ ಈ ಕೃತ್ಯ ಎಸಗಿದ್ದಾಳೆ.

    ಮಗುವಿಗಾಗಿ ಹುಟುಕಾಟ… ಮಗುವಿನ ತಂದೆ ಮೇಲೆ ಆರೋಪ
    ಮನೆಯಲ್ಲಿ ಮಗು ಕಾಣದೆ ಇದ್ದಾಗ ಎಲ್ಲರೂ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಎರಡು ತಿಂಗಳ ಮಗುವನ್ನು ಯಾರೋ ಹೊತ್ತೊಯ್ದಿರುವ ಅನುಮಾನ ಕೂಡಾ ವ್ಯಕ್ತವಾಗಿತ್ತು. ಹುಡುಕಾಟ ನಡೆಸಿದ್ರೂ ಮಗು ಸಿಗದೇ ಇದ್ದಾಗ ಅಪ್ರಾಪ್ತ ಬಾಲಕಿ ನಾಗೇಶ್ ಮಗುವನ್ನು ಕೊಂದಿರಬೇಕು ಎಂದು ಆರೋಪ ಮಾಡಿದ್ದಾಳೆ. ಬಳಿಕ ಬಾವಿಯ ಬಳಿ ಹುಡುಕೋಣ ಎಂದು ಮನೆಯ ಸಮೀಪದ ಬಾವಿಯಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

    ಕಡಬ: ಕುಮಾರಧಾರ ನದಿ ಮಧ್ಯೆ ಸಿಲುಕಿದ್ದ ಯುವಕನ ರಕ್ಷಣೆ

    ಪೊಲೀಸರ ವಿಚಾರಣೆಯಲ್ಲಿ ಬಯಲಾದ ರಹಸ್ಯ..!
    ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾಗುತ್ತಿದ್ದಂತೆ ಈ ವಿಚಾರ ಯಾದಗಿರಿ ಪೊಲೀಸರಿಗೆ ತಲುಪಿದೆ. ವಿಚಾರಣೆಯ ವೇಳೆ ನಡೆದ ಘಟನೆಯನ್ನು ತಿಳಿಸಿದಾಗ ಪೊಲೀಸರ ಅನುಮಾನ ಅಪ್ರಾಪ್ತ ಬಾಲಕಿಯ ಮೇಲೆ ಹೋಗಿದೆ. ಹೀಗಾಗಿ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಪ್ಪನ ಮೇಲಿನ ಕೋಪದಿಂದ ಮಗುವನ್ನು ಬಾವಿಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾಳೆ . ಮಗುವಿನ ಕೊಲೆಯನ್ನು ಚಿಕ್ಕಪ್ಪನ ಮೇಲೆ ಹಾಕಿ ಆತನನ್ನು ಜೈಲಿಗೆ ಕಳುಹಿಸಲು ಯೋಚಿಸಿದ್ದೆ ಎಂದು ಹೇಳಿದ್ದಾಳೆ. ಇದೆಲ್ಲದಕ್ಕೂ ಆತ ತನ್ನ ಪ್ರೀತಿಯನ್ನು ನಿರಾಕರಿಸಿದ್ದೇ ಕಾರಣ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಅಪ್ರಾಪ್ತ ಬಾಲಕಿಯನ್ನು ಮಕ್ಕಳ ನ್ಯಾಯ ಮಂಡಳಿ ವಶಕ್ಕೆ ಒಪ್ಪಿಸಿದ್ದಾರೆ. ಇತ್ತ ಬಾಲಕಿಯ ಕುರುಡು ಪ್ರೀತಿಗೆ ಎರಡು ತಿಂಗಳ ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮಟ್ಟಿದೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!

    Published

    on

    ಮಂಗಳೂರು ( ಉಳ್ಳಾಲ ) : ವಿದ್ಯುತ್ ಕಂಬ ಏರಿದ ಹೆಬ್ಬಾವೊಂದು ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಈ ಘಟನೆ ನಡೆದಿದ್ದು, ಮುಂಜಾನೆ ವಿದ್ಯುತ್ ಶಾರ್ಟ್ ಆದ ಸದ್ದು ಕೇಳಿ ಹೊರ ಬಂದ ಮನೆಯವರಿಗೆ ಈ ದೃಶ್ಯ ಕಂಡು ಬಂದಿದೆ.

     

    ಬೃಹತ್ ಗಾತ್ರದ ಈ ಹೆಬ್ಬಾವು ವಿದ್ಯುತ್ ಕಂಬ ಏರಿದ್ದು ಯಾರೂ ಗಮನಿಸಿರಲಿಲ್ಲ. ಮಳೆಯ ಕಾರಣದಿಂದ ಮನೆಯೊಳಗೆ ಇದ್ದ ಜನರಿಗೆ ಶಾರ್ಟ್ ಸರ್ಕ್ಯೂಟ್ ಸದ್ದಿನಿಂದ ವಿಚಾರ ಗೊತ್ತಾಗಿದೆ. ಮಾಹಿತಿ ಪಡೆದು ಆಗಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಬ್ಬಾವಿನ ಕಳೇಬರವನ್ನು ಕಂಬದಿಂದ ತೆರವು ಮಾಡಿದ್ದಾರೆ.

    Continue Reading

    DAKSHINA KANNADA

    ಕಳ್ಳರನ್ನು ಹಿಡಿದ 60 ರ ವೃದ್ಧೆ..!

    Published

    on

    ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

    ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

    ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

    ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

    ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
    ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

    Continue Reading

    LATEST NEWS

    Trending