ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಿದಕ್ಕೆ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ: ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.

ಆದರೆ ಇದನ್ನು ಸ್ವತಃ ಫೇಸ್ಬುಕ್ ಸಂಸ್ಥೆಯೇ ನಿಷ್ಕ್ರೀಯಗೊಳಿಸಿದೆಯೋ ಅಥವಾ ಯಾರದ್ದೋ ದೂರಿನ ಆಧಾರದಲ್ಲಿ ನಿಷ್ಕ್ರೀಯಗೊಳಿಸಲಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ.
ಆದರೆ ಇದು ಹಿಂದೂ ವಿಚಾರಧಾರೆಯ ಪ್ರಚಾರ ಮತ್ತು ಹೋರಾಟ ನಡೆಸುತ್ತಿರುವವರ ಮೇಲೆ ನಡೆದ ವ್ಯವಸ್ಥಿತ ಸೈಬರ್ ದಾಳಿಯಾಗಿದೆ ಎಂದು ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಸ್ವತಃ ಶ್ರೀಕಾಂತ್ ಶೆಟ್ಟಿ ಸಂಘಟನೆಯ ಇತರ ಪ್ರಚಾರಕರಾದ ಪ್ರವೀಣ್ ಯಕ್ಷಮಠ, ಕೆ ಟಿ ಉಲ್ಲಾಸ್, ಸುಕೃತ್ ಭಾರದ್ವಾಜ್, ಅರವಿಂದ ಕೋಟೇಶ್ವರ ಮೊದಲಾದ 20ಕ್ಕೂ ಹೆಚ್ಚು ಮಂದಿಯ ಫೇಸ್ಬುಕ್ ಪೇಜ್‌ಗಳನ್ನು ಡಿಲಿಟ್ ಮಾಡಲಾಗಿದೆ.
ನಾವು ಯಾರೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿಲ್ಲ. ಗಲಭೆ ಸೃಷ್ಟಿಸಿಲ್ಲ. ಕೇವಲ ಹಿಂದೂಪರ ಹೋರಾಟ ಮಾಡುತ್ತಿರುವವರು.
ಆದ್ದರಿಂದ ಹಿಂದೂ ಚಳುವಳಿಯಲ್ಲಿ ಭಾಗವಹಿಸುತ್ತಿರುವವರನ್ನು ಹತ್ತಿಕ್ಕುವ ಹುನ್ನಾರ ಇದು ಎನ್ನುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಕೆಲಸ ಇದು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂವಾದಿ ಸಂಗಟನೆಳು ಮೋದಿ ಪರವಾಗಿ ಯಶಸ್ವಿ ಕೆಲಸ ಮಾಡಿದ್ದೆವು.
2024ರ ಚುನಾವಣೆಯಲ್ಲಿ ಮತ್ತೇ ಅದಾಗಬಾರದು ಎನ್ನುವ ಪೂರ್ವ ತಯಾರಿ ಇದಾಗಿದೆ ಎಂದವರು ಹೇಳಿದ್ದಾರೆ.
ಆದರೆ ಆರ್‌ಎಸ್‌ಎಸ್‌ನ ಭಾಗವಾಗಿರುವ ಹಿಂದು ಜಾಗರಣ ವೇದಿಕೆ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡಿರುವ ಫೇಸ್ಬುಕ್ ಉಳಿಯಲ್ಲ.
ಆನ್ ಗ್ರೌಂಡ್ ಜನರ ಮಧ್ಯೆ ಕೆಲಸ ಮಾಡವ ವೇದಿಕೆ.
ಈ ಫೇಸ್ಬುಕ್ ಖಾತೆಗಳ ನಿಷ್ಕ್ರೀಯ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.