Connect with us

    ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

    Published

    on

    ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್

    ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ ಒಂದೇ ದಿನ ಅತೀ ಹೆಚ್ಚು ಪ್ರದೇಶಗಳನ್ನು ಸೀಲ್ ಡೌನ್ ಉಡುಪಿಯಲ್ಲಿ ಆಗಿದೆ. ಸದ್ಯ ಜಿಲ್ಲೆಯಲ್ಲಿ ಈವರೆಗೆ ಒಟ್ಟು 201 ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ ಕ್ರಮಕೈಗೊಳ್ಳಲಾಗಿದೆ.

    ಇಂದು ದಾಖಲಾದ ಪ್ರಕರಣಗಳಲ್ಲಿ ಬೈಂದೂರು ತಾಲೂಕಿನ ಶಿರೂರು ಗ್ರಾಮದ 11, ಬಡಾಕೆರೆ- 1, ಮುದೂರು-1, ಯಡ್ತರೆ- 2, ಬಿಜೂರು-6, ಮರವಂತೆ-4, ಕಂಬದಕೋಣೆ -10, ತೆಗ್ಗರ್ಸೆ- 5, ಕಿರಿಮಂಜೇಶ್ವರ ಗ್ರಾಮದ 5 ಪ್ರದೇಶಗಳು ಸೇರಿದಂತೆ ಒಂದೇ ದಿನ 45 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಮಧುವನ ಮತ್ತು ನಡೂರು ಗ್ರಾಮದ ಮೂಡಬೆಟ್ಟು ಎಂಬಲ್ಲಿ ಕಂಟೇನ್‌ಮೆಂಟ್ ವಲಯವನ್ನಾಗಿ ಘೋಷಿಸಿ, ಸೋಂಕಿತರ ಮನೆ ಸಹಿತ ತಲಾ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ಎರಡು, ಬೊಮ್ಮರಬೆಟ್ಟು ಗ್ರಾಮದಲ್ಲಿ ಮೂರು, ಮೂಡನಿಡಂಬೂರು ಮತ್ತು ಮಲ್ಪೆಯಲ್ಲಿ ತಲಾ ಒಂದು ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

    ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು, ಸೊಂಪು, ಹಟ್ಟಿಂಜೆ, ಎಡ್ಮೇರ್, ನಾಯ್ಡಟ್ಟು ಒಟ್ಟು 5 ಕಡೆಗಳಲ್ಲಿ ಹಾಗೂ ಮುದರಂಗಡಿ ಮತ್ತು ಉಚ್ಚಿಲ ಗ್ರಾಮದಲ್ಲಿ ತಲಾ ಒಂದು ಪ್ರದೇಶದಲ್ಲಿ ಕಂಟೇನ್‌ಮೆಂಟ್ ವಲಯ ವನ್ನಾಗಿ ಮಾಡಿ ಸೀಲ್‌ಡೌನ್ ಮಾಡಲಾಗಿದೆ.
    ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎರಡು ಪ್ರತ್ಯೇಕ ಪ್ರದೇಶ ಮತ್ತು ಹೆಬ್ರಿ ಗ್ರಾಮದ ತೇಲಂಜೆ ಎಂಬಲ್ಲಿ ಒಂದು ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಹೆಬ್ರಿ ತಾಲೂಕಿನಲ್ಲಿ ಈವರೆಗೆ ಒಟ್ಟು ನಾಲ್ಕು ಕಡೆಗಳಲ್ಲಿ ಕಂಟೇನ್ ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ.

    ಕಾರ್ಕಳ ತಾಲೂಕಿನ ಎರ್ಲಪಾಡಿ ಮತ್ತು ಮಿಯ್ಯರು ಗ್ರಾಮಗಳಲ್ಲಿ ತಲಾ ಎರಡು, ಹಿರ್ಗಾನ, ಮಾಳ, ಪಳ್ಳಿ, ಬೈಲೂರು, ಕಣಜಾರು, ರೆಂಜಾಳ, ಇರ್ವತ್ತೂರು ಗ್ರಾಮದ ತಲಾ ಒಂದು ಸೇರಿದಂತೆ ಇಂದು ಒಟ್ಟು 11 ಪ್ರದೇಶ ಗಳಲ್ಲಿ ಕಂಟೈನ್‌ಮೆಂಟ್ ವಲಯವನ್ನು ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ.

    ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ಎರಡು, ತ್ರಾಸಿ, ವಂಡ್ಸೆ, ಚಿತ್ತೂರು, ಕೆಂಚನೂರು, ಕಾವ್ರಾಡಿ, ಹೊಸಂಗಡಿ ಗ್ರಾಮಗಳ ತಲಾ ಒಂದರಂತೆ ಒಟ್ಟು ಎಂಟು ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಈವರೆಗೆ ಒಟ್ಟು 41 ಪ್ರದೇಶಗಳನ್ನು ಕಂಟೇನ್‌ಮೆಂಟ್ ವಲಯ ವನ್ನಾಗಿ ಘೋಷಿಸಲಾಗಿದೆ ಎಂದು ಆಯಾ ತಾಲೂಕಿನ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ನಟ ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ್ದ ವ್ಯಕ್ತಿಯಿಂದ ಡಬಲ್ ಮರ್ಡರ್!

    Published

    on

    ಮಂಗಳೂರು/ಬೆಂಗಳೂರು :  ಆತನ  ಬದುಕು ಇನ್ನು ಮುಂದಾದರೂ ಸರಿಯಾಗಲಿ, ಆತ ಸನ್ನಡತೆಯಿಂದ ಬಾಳಲಿ ಎಂದು ನಟ ದುನಿಯಾ ವಿಜಯ್ ಜೈಲಿನಿಂದ ಬಿಡುಗಡೆ ಭಾಗ್ಯ ಕರುಣಿಸಿದ್ದರು. ಆದರೆ, ಆತ ಮಾತ್ರ ತನ್ನ ಹಳೇ ಚಾಳಿ ಬಿಟ್ಟಿಲ್ಲ, ಡಬಲ್ ಮರ್ಡ*ರ್ ಮಾಡಿ ಮತ್ತೆ ಕಂಬಿ  ಎಣಿಸಲು ಆರಂಭಿಸಿದ್ದಾನೆ.

    ಏನಿದು ಪ್ರಕರಣ?

    ಬೆಂಗಳೂರು ಹೊರವಲಯದ ಬಾಗಲೂರಿನಲ್ಲಿ ನವೆಂಬರ್ 8 ರ ರಾತ್ರಿ ಜೋಡಿ ಕೊ*ಲೆ ನಡೆದಿತ್ತು. ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್(51) ಮತ್ತು ಮಂಜುನಾಥ್(50) ಎಂಬವರನ್ನು ಭೀ*ಕರವಾಗಿ ಕೊ*ಲ್ಲಲಾಗಿತ್ತು. ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಸುರೇಶ್ ಹಿನ್ನೆಲೆ ಬಹಿರಂಗವಾಗಿದೆ.

    ಈ ಹಿಂದೆ ಅತ್ಯಾ*ಚಾರ ಪ್ರಕರಣ ಸಂಬಂದ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸುರೇಶ್ ಗೆ ಜೈಲಿನಿಂದ ಹೊರಬರಲು ಶ್ಯೂರಿಟಿ ಕೊಡಲು ಯಾರೂ ಮುಂದೆ ಬಂದಿರಲಿಲ್ಲ. ಇದೇ ಸಮಯದಲ್ಲಿ ನಟ ದುನಿಯಾ ವಿಜಯ್ ಒಂದಷ್ಟು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಬಿಡುಗಡೆ ಮಾಡಿಸಿದ್ದರು.

    ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಕ್ರೌರ್ಯಮೆರೆದ ಕಾ*ಮುಕ; ಬೀದಿನಾಯಿಗಳ ಜೊತೆ ಸೆ*ಕ್ಸ್

    ಹೀಗಾಗಿ ಜೈಲಿನಿಂದ ಹೊರಬಂದ ಸುರೇಶ್ , ಮಾರ್ಕೇಟ್ ವೊಂದರಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಮಾರ್ಕೇಟ್ ಪಕ್ಕದಲ್ಲಿದ್ದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊ*ಲೆಗಾರ’ ಎಂದು ಆತನನ್ನು ಹೀಯಾಳಿಸುತ್ತಿದ್ದರಂತೆ. ಇದರಿಂದ ಸಿಟ್ಟಾದ ಸುರೇಶ್ ಇಬ್ಬರನ್ನೂ ಕೊ*ಲೆಗೈದಿದ್ದಾನೆ. ಸದ್ಯ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.

    Continue Reading

    FILM

    ಅಬ್ಬಬ್ಬಾ! ಒಂದು ಹಾಡಿಗೆ ಎ.ಆರ್.ರೆಹಮಾನ್ ಇಷ್ಟೊಂದು ಡಿಮ್ಯಾಂಡ್ ಮಾಡ್ತಾರಾ?

    Published

    on

    ತಮ್ಮ ಸಂಗೀತದ ಮೂಲಕವೇ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದ ಆಸ್ಕರ್​ ಪ್ರಶಸ್ತಿ ಎ.ಆರ್.ರೆಹಮಾನ್ ಗೆ ಇರುವ ಬೇಡಿಕೆ ದೊಡ್ಡದು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಸಾವಿರಾರು ಸೂಪರ್​ ಹಿಟ್ ಗೀತೆಗಳನ್ನು ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ ಎ.ಆರ್​. ರೆಹಮಾನ್ ದುಬಾರಿ ಸಂಭಾವನೆ ಪಡೆಯುತ್ತಾರೆ. ಒಂದು ಹಾಡಿಗೆ ಧ್ವನಿ ನೀಡಲು ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ! ಸ್ಟಾರ್​ ಸಿಂಗರ್ಸ್​ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಮುಂತಾದವರ ಸಂಭಾವನೆಗಿಂತಲೂ ಇದು 15 ಪಟ್ಟು ಅಧಿಕ ಮೊತ್ತವಾಗಿದೆ.

    ಎ.ಆರ್​. ರೆಹಮಾನ್ ಪೂರ್ಣಾವಧಿ ಸಿಂಗರ್ ಅಲ್ಲ. ಅಂದರೆ, ಅವರ ಮುಖ್ಯ ಕಸುಬು ಹಾಡುಗಾರಿಕೆ ಅಲ್ಲ. ಸಂಗೀತ ನಿರ್ದೇಶಕನಾಗಿ ಬ್ಯುಸಿ ಆಗಿದ್ದು, ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂಪಾಯಿ ನೀಡಬೇಕು.

    3 ಕೋಟಿ ಸಂಭಾವನೆಯ ಗುಟ್ಟು :

    ತಮ್ಮ ಬಳಿ ಯಾರೂ ಕೂಡ ಬಂದು ಹಾಡಲು ಒತ್ತಾಯ ಮಾಡಬಾರದು ಎಂಬುದು ಎ.ಆರ್​. ರೆಹಮಾನ್ ಅವರ ಉದ್ದೇಶ. ಯಾಕೆಂದರೆ, ಅವರು ಗಾಯನಕ್ಕಿಂತಲೂ ಸಂಗೀತ ನಿರ್ದೇಶನಕ್ಕೆ ಹೆಚ್ಚು ಸಮಯ ನೀಡಬೇಕು. ಆದ್ದರಿಂದ ಗಾಯನಕ್ಕಾಗಿ ತಮ್ಮನ್ನು ಯಾರೂ ಕರೆಯಬಾರದು ಎಂದು 3 ಕೋಟಿ ರೂಪಾಯಿ ಸಂಭಾವನೆಯನ್ನು ಎ.ಆರ್​. ರೆಹಮಾನ್ ನಿಗದಿ ಮಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಕೆಲವು ನಿರ್ಮಾಪಕರು ಈ ದುಬಾರಿ ಸಂಬಳ ನೀಡಿ ಎ.ಆರ್​. ರೆಹಮಾನ್ ಅವರಿಂದಲೇ ಹಾಡಿಸುತ್ತಾರೆ.

    ಭಾರತೀಯ ಚಿತ್ರರಂಗದಲ್ಲಿ ಸ್ಟಾರ್​ ಗಾಯಕರಾಗಿ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂಪಾಯಿಗಳನ್ನು ಚಾರ್ಜ್​ ಮಾಡುತ್ತಾರೆ. ಪ್ರತಿ ಹಾಡಿಗೆ ಶ್ರೇಯಾ ಘೋಷಾಲ್ ಅವರು 25 ಲಕ್ಷ ರೂಪಾಯಿ ಪಡೆಯುತ್ತಾರೆ. ಸುನಿಧಿ ಚೌಹಾಣ್ ಅವರು 18ರಿಂದ 20 ಲಕ್ಷ ರೂಪಾಯಿ ಪಡೆಯುತ್ತಾರೆ. ಅರಿಜಿತ್ ಸಿಂಗ್​ ಕೂಡ ಇಷ್ಟೇ ಪ್ರಮಾಣದ ಸಂಬಳ ಡಿಮ್ಯಾಂಡ್ ಮಾಡುತ್ತಾರೆ. ಸೋನು ನಿಗಮ್ ಅವರು ಒಂದು ಹಾಡಿಗೆ 15ರಿಂದ 18 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಈಗ ಅವರೆಲ್ಲರನ್ನೂ ಮೀರಿಸಿದ ಎ.ಆರ್​. ರೆಹಮಾನ್ ಬಹಳ ಸುದ್ಧಿಯಲ್ಲಿದ್ದಾರೆ.

    Continue Reading

    LATEST NEWS

    ಚಿಕ್ಕಮಗಳೂರಿನಲ್ಲಿ ಕ್ರೌರ್ಯಮೆರೆದ ಕಾ*ಮುಕ; ಬೀದಿನಾಯಿಗಳ ಜೊತೆ ಸೆ*ಕ್ಸ್

    Published

    on

    ಮಂಗಳೂರು/ಚಿಕ್ಕಮಗಳೂರು: ಬೀದಿ ನಾಯಿ ಜೊತೆ ವ್ಯಕ್ತಿಯೊಬ್ಬ ಸೆ*ಕ್ಸ್‌ ನಡೆಸಿ ಅಸಭ್ಯ ವರ್ತನೆ ತೋರಿದ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಲ್ಲಿ ನಡೆದಿದೆ.

    ಕಳೆದ ತಿಂಗಳು 18ರಂದು ಜಯಪುರ ಬಸ್ ನಿಲ್ದಾಣದಲ್ಲೇ ನಡೆದಿರುವ ಘಟನೆ ಇದಾಗಿದೆ.

    ಎಫ್‌ಐಆರ್‌ ಮಾಹಿತಿ ಪ್ರಕಾರ, ಜಯಪುರ ಬಸ್‌ ನಿಲ್ದಾಣದಲ್ಲಿರು ಅಂಗಡಿಯೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿಯೇ ಬೀದಿ ನಾಯಿಯನ್ನು ಹಿಡಿದುಕೊಂಡು ಅದರೊಂದಿಗೆ ಅ*ಸಭ್ಯವಾಗಿ ವರ್ತಿಸಿದ್ದಾನೆ. ಬೀದಿ ನಾಯಿಗೆ ತೊಂದರೆ ನೀಡುತ್ತಿರುವ ಹಾಗೂ ಪ್ರಾಣಿ ಹಿಂಸೆ ಮಾಡುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜಯಪುರ ಎಂಟರ್‌ ಪ್ರೈಸಸ್‌ ಅಂಗಡಿಯಲ್ಲಿ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಕ್ಟೋಬರ್‌ 10 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಜಯಪುರ ಪಟ್ಟಣದ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಕುಳಿತು ಹೀ*ನಾಯ ಕೃ*ತ್ಯ ಎಸಗಿದ್ದಾನೆ. ಸಿಸಿ ಟಿವಿ ದೃಶ್ಯ ತೋರಿಸಿ ಇದರಲ್ಲಿರುವ ವ್ಯಕ್ತಿ ಯಾರು ಎಂದು ಅಂಗಡಿಯ ಮಾಲೀಕನನ್ನೇ ಪ್ರಶ್ನೆ ಮಾಡಿದಾಗ ಆತ ‘ಇದು ಕಟ್ಟೆ ಮನೆ ಶಿವರಾಜ ಎಂದು ಹೇಳಿದ್ದ’ ಎಂದು ಎಫ್‌ಐಆರ್‌ನಲ್ಲಿ ಬರೆಯಲಾಗಿದೆ. ಬೀದಿ ನಾಯಿಗಳ ಜೊತೆ ದು*ರ್ನಡತೆ ತೋರಿದಲ್ಲದೆ, ಸಾರ್ವಜನಿಕರಿಗೂ ಸಮಸ್ಯೆ ಮಾಡುತ್ತಿದ್ದ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯರು ಮನವಿ ಮಾಡಲಾಗಿದೆ.

    ನವೆಂಬರ್ 9ರಂದು ಜಯಪುರ ಠಾಣೆಯಲ್ಲಿಶಿವರಾಜ್ ಮೇಲೆ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending